SOCIAL MEDIA

Newsletter

PARTNER SITES
Select Language Select State

ಹಸಮಣೆ ಏರಬೇಕಿದ್ದ ಯುವತಿ ಮಸಣಕ್ಕೆ.. ಲಗ್ನ ಪತ್ರಿಕೆ ಕೊಡಲು ಹೋಗ್ತಿದ್ದ ವಧುಗೆ ಡಿಕ್ಕಿ ಹೊಡೆದು ಜೀವ ಕಸಿದ ಟ್ರಕ್..!

Bangalore Truck hits and kills bride on her way to deliver wedding invitations: ಆಕೆಗೆ 27 ವರ್ಷ.. ಮನೇಲಿ ಮದುವೆ ಫಿಕ್ಸ್ ಮಾಡಿದ್ರು. ಊರಲ್ಲಿ ಚಪ್ಪರ ಹಾಕಿ. ಅರಶಿನ ಶಾಸ್ತ್ರ, ಬಳೆ ಶಾಸ್ತ್ರಕ್ಕೆ ಕುಟುಂಬಸ್ಥರು ರೆಡಿ ಮಾಡಿಕೊಳ್ತಿದ್ರು. ಪದೇ ಪದೇ ವಧುಗೆ ಕರೆ ಮಾಡ್ತಿದ್ದ ಮಧುಮಗ ಎಲ್ಲಾ ಅಪ್ಡೇಟ್ ತಿಳಿದುಕೊಳ್ತಿದ್ದ. ಬೆಂಗಳೂರಿನಿಂದ ಊರಿಗೆ ಹೋಗಬೇಕಿದ್ದ ವಧು ಫ್ರೆಂಡ್ ಒಬ್ರಿಗೆ ಕಾರ್ಡ್ ಕೊಡೋದು ಮಿಸ್ ಮಾಡಿದ್ದೀನಿ ಅಂತಾ ಲಗ್ನ ಪತ್ರಿಕೆ ಕೊಡೋಕೆ ಹೋಗಿದ್ಲು.. ಆದ್ರೆ ಆಕೆ ಪಾಲಿಗೆ ಟ್ರಕ್ ಒಂದು ಯಮನಾಗಿ ಬಂದು ಜೀವವನ್ನೇ ಕಸಿದಿದೆ.

Written By Ramya. R. Gowda
Published: Nov 12, 2026, 16:01 IST | Updated: Nov 12, 2026, 16:17 IST
Join

Truck addident bride Death: ಆಕೆಗೆ 27 ವರ್ಷ.. ಮನೇಲಿ ಮದುವೆ ಫಿಕ್ಸ್ ಮಾಡಿದ್ರು. ಊರಲ್ಲಿ ಚಪ್ಪರ ಹಾಕಿ. ಅರಶಿನ ಶಾಸ್ತ್ರ, ಬಳೆ ಶಾಸ್ತ್ರಕ್ಕೆ ಕುಟುಂಬಸ್ಥರು ರೆಡಿ ಮಾಡಿಕೊಳ್ತಿದ್ರು. ಪದೇ ಪದೇ ವಧುಗೆ ಕರೆ ಮಾಡ್ತಿದ್ದ ಮಧುಮಗ ಎಲ್ಲಾ ಅಪ್ಡೇಟ್ ತಿಳಿದುಕೊಳ್ತಿದ್ದ. ಬೆಂಗಳೂರಿನಿಂದ ಊರಿಗೆ ಹೋಗಬೇಕಿದ್ದ ವಧು ಫ್ರೆಂಡ್ ಒಬ್ರಿಗೆ ಕಾರ್ಡ್ ಕೊಡೋದು ಮಿಸ್ ಮಾಡಿದ್ದೀನಿ ಅಂತಾ ಲಗ್ನ ಪತ್ರಿಕೆ ಕೊಡೋಕೆ ಹೋಗಿದ್ಲು.. ಆದ್ರೆ ಆಕೆ ಪಾಲಿಗೆ ಟ್ರಕ್ ಒಂದು ಯಮನಾಗಿ ಬಂದು ಜೀವವನ್ನೇ ಕಸಿದಿದೆ.

ಹೀಗೆ ರೀಲ್ಸ್ ಮಾಡಿಕೊಂಡು ಜಾಲಿಯಾಗಿ ಮದುವೆ ಡ್ರೆಸ್ ನಲ್ಲಿ ಮಿಂಚುತ್ತಿರೋ ಈಕೆ ಹೆಸ್ರು ಸಿಂದೂಶ್ರೀ ಅಂತಾ.. ವಯಸ್ಸು 27.. ಮನೇಲಿ ಮದುವೆ ಫಿಕ್ಸ್ ಮಾಡಿದ್ರು. ಎಂಗೇಜ್ಮೆಂಟ್ ಆಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಆಗಿ.. ಭಾನುವಾರ ರಿಸಪ್ಷನ್, ಸೋಮವಾರ ಮೂಹೂರ್ತ ಫಿಕ್ಸ್ ಆಗಿತ್ತು. ಪ್ರೀ ವೆಡ್ಡಿಂಗ್ ಗೆ ಅಷ್ಟು ಡಿಸೈನಾಗಿ ಫೋಟೋ ತೆಗಿಸಿದ್ದ ಸಿಂದೂಶ್ರೀ ಅರಶಿನ ಶಾಸ್ತ್ರ, ರಿಸಪ್ಷನ್, ಮದುವೆ ಎಲ್ಲವೂ ಸಿನಿಮಾ ಸ್ಟೈಲ್ ನಲ್ಲಿ ವಿಡಿಯೋ ಮಾಡಿಸೋ ಕನಸು ಹೊಂದಿದ್ಲು. ನಾನು ಭರ್ಜರಿಯಾಗಿ ಮದುವೆ ಆಗ್ತಿದ್ದೀನಿ ಕುಟುಂಬ ಸಮೇತ ಬನ್ನಿ ಅಂತಾ ಕರೆಯೋಲೆ ಕೊಡ್ತಿದ್ಲು. ಹೀಗೆ ಫ್ರೆಂಡ್ ಒಬ್ಬರಿಗೆ ನಿನ್ನೆ ಲಗ್ನಪತ್ರಿಕೆ ಕೊಡೋಕೆ ಅಂತಾ ಕತ್ರಿಗುಪ್ಪೆಗೆ ಹೋಗ್ತಿದ್ದ ವಧು ಸಿಂದೂಶ್ರೀ ಬೈಕ್ ಗೆ ಟ್ರಕ್ ಒಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.. ತೀವ್ರ ಗಾಯಗೊಂಡಿದ್ದ ಸಿಂದೂಶ್ರೀ ಸ್ಥಳದಲ್ಲೇ ಜೀವ ಬಿಟ್ಟಿದ್ದಾಳೆ.

ಅಂದ್ಹಾಗೆ ಈ ಘಟನೆ ನಡೆದಿರೋದು ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ. ನಿನ್ನೆ ಮಧ್ಯಾಹ್ನ  3.30ರ ವೇಳೆಗೆ ಸಿಂದುಶ್ರೀ ತನ್ನ  ಸಂಬಂಧಿ ವಿದ್ಯಾ ಜೊತೆ ಫ್ರೆಂಡ್ ಒಬ್ಬರಿಗೆ ಕಾರ್ಡ್ ಕೊಡೋಕೆ ಅಂತಾ ಕತ್ರಿಗುಪ್ಪೆ ಕಡೆ ಹೋಗ್ತಿದ್ಲು..ಈ ವೇಳೆ  ಹಿಂಬದಿಯಿಂದ ಬಂದ ಟ್ರಕ್ ಸ್ಕೂಟಿಗೆ ಗುದ್ದಿತ್ತು. ಟ್ರಕ್ ಗುದ್ದಿದ ಪರಿಣಾಮ ಸಿಂದು ಮತ್ತು ವಿದ್ಯಾ ಇಬ್ಬರೂ ರಸ್ತೆಗೆ ಬಿದ್ದಿದ್ರು.. ಈ ವೇಳೆ ತಲೆ ಮೇಲೆ ಟ್ರಕ್ ಚಕ್ರ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ..

ಅಂದ್ಹಾಗೆ ಸಿಂದುಶ್ರೀ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಐತನಹಳ್ಳಿ ಗ್ರಾಮದವರು.. ಸೋಮವಾರ ಮದುವೆ ಮತ್ತು ಭಾನುವಾರ ರಿಸೆಪ್ಶನ್ ಕೂಡ ನಿಗದಿಯಾಗಿತ್ತು. ಮದುವೆಯ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.. ಜೊತೆಗೆ ಮೃತ ವಿದ್ಯಾ ಕಾಲೇಜು ವಿಧ್ಯಾಭ್ಯಾಸ ನಡೆಸುತ್ತಿದ್ದು,ರಸ್ತೆಯಲ್ಲೆ ಆಕೆಯ ಕನಸುಗಳು ಕಮರಿಹೋಗಿದೆ.. ಮದುವೆ ಸಂಭ್ರಮಕ್ಕೆ ಬರಬೇಕಿದ್ದ ಸಂಬಂಧಿಕರು ಮಾರ್ಚರಿ ಬಳಿ ಬಂದು ವಧುವಿನ ತಂದೆಯನ್ನ ಸಮಾಧಾನಪಡಿಸುವ ಸ್ಥಿತಿ ನಿರ್ಮಾಣ ಆಗಿತ್ತು.

ಇಂದು ಇಬ್ಬರ ಮರಣೋತ್ತರ ಪರೀಕ್ಷೆ ಮುಗಿದ ನಂತರ ಎರಡೂ ಮೃತದೇಹಗಳನ್ನ ಕುಟುಂಬಸ್ಥರಿಗೆ ಪೊಲೀಸ್ರು ಹಸ್ತಾಂತರಿಸಿದ್ದಾರೆ..ಇನ್ನು ಅಪಘಾತವೆಸಗಿ ಟ್ರಕ್ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.ಘಟನೆ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸ್ತಿರೋ ಬ್ಯಾಟರಾಯನಪುರ ಸಂಚಾರಿ ಪೊಲೀಸ್ರು ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ.ಏನೇ ಹೇಳಿ ಹೊಸ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದ ಯುವತಿಯ ಜೀವವನ್ನು ಏಕಾಏಕಿ ಬಂದಿದ್ದ ಟ್ರಕ್ ಕಸಿದಿದ್ದು ದುರಂತವೇ ಸರಿ.. 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES