SOCIAL MEDIA

Newsletter

PARTNER SITES
Select Language Select State

ನಿಮ್ಗೆ ನಂಬುವುದಕ್ಕೂ ಆಗಲ್ಲ.. ಬೆಂಗಳೂರಲ್ಲಿ ಆನೆ ದಾಳಿಗೆ ವೃದ್ಧ ಸಾ*ವು, ಎಲ್ಲಿ, ಹೇಗಾಯಿತು?

ವೃದ್ಧರೊಬ್ಬರು ಬೆಳಗಿನ ಜಾವ ಮಾಡಿಕೊಂಡು ಹೋಗುತ್ತಿದ್ದರೆ ಒಂಟಿ ಸಲಗವೊಂದು ಯಾವ ರೀತಿ ಹೋಗುತ್ತಿದೆ ಅಂತಾ. ಇದೇ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

Written By Bhimappa
Published: Sep 28, 2026, 02:15 PM IST | Updated: Sep 28, 2026, 02:31 PM IST
Image Credit: Bangalore_Elephant_attack
Join

Bangalore Elephant attack: ಆತ ಎಂದಿನಂತೆ ಬೆಳಗಿನ ಜಾವ ವಾಕಿಂಗ್‌ಗೆ ತೆರಳಿದ್ರು. ಆದರೆ ಸ್ವಲ್ಪ ಹೊತ್ತಿನಲ್ಲಿ ಆ ವೃದ್ಧರೊಬ್ಬರು ಶವ ಆಗ್ತಾರೆ ಅಂತಾ ಯಾರು ಅಂದುಕೊಂಡಿರಲಿಲ್ಲ. ಯಾರು ಊಹಿಸಿದ ರೀತಿ ಆ ವೃದ್ಧ ಮೃತಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಒಂಟಿ ಸಲಗ ಎಂದ್ರೆ ನೀವು ನಂಬಲೇಬೇಕು. ಹಾಗಾದರೆ, ಈ ಸಾವಿಗೂ ಕಾಡಾನೆಗೂ ಏನೂ ಸಂಬಂಧ ಎನ್ನುವುದು ಇಲ್ಲಿ ವಿವರಿಸಲಾಗಿದೆ.

ಹುಲಿ, ಚಿರತೆ ಆಯ್ತು ಸಿಲಿಕಾನ್ ಸಿಟಿಯಲ್ಲಿ ಒಂಟಿಸಲಗ ಪ್ರತ್ಯಕ್ಷ
ಕಾಡಾನೆ ದಾಳಿಗೆ ವಾಕಿಂಗ್ ಮಾಡ್ತಿದ್ದ ವೃದ್ಧ ಸಾವು

ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಹುಲಿ, ಚಿರತೆ ಬಂದು ಸಾರ್ವಜನಿಕರು ಭಯಬೀತರಾಗಿದ್ದರು. ಆದರೆ ಈಗ ಒಂಟಿ ಸಲಗ ಎಂಟ್ರಿ‌ ಕೊಟ್ಟು ವ್ಯಕ್ತಿಯನ್ನು ಬಲಿ ಪಡೆದಿದೆ‌. ಅರೇ ಬೆಂಗಳೂರಲ್ಲಿ ಕಾಡಾನೆ ದಾಳಿನಾ ಎಂದು ನಿಮಗೆ ಆಶ್ಚರ್ಯ ಆಗಬಹುದು. ಇದು ನಿಜಕ್ಕೂ ಸತ್ಯ‌. ಬೇಕಾದರೆ ಸಿಸಿಟಿವಿ ದೃಶ್ಯಗಳಲ್ಲೂ ಇದು ಸೆರೆಯಾಗಿದೆ.

ವೃದ್ಧರೊಬ್ಬರು ಬೆಳಗಿನ ಜಾವ ಮಾಡಿಕೊಂಡು ಹೋಗುತ್ತಿದ್ದರೆ ಒಂಟಿ ಸಲಗವೊಂದು ಯಾವ ರೀತಿ ಹೋಗುತ್ತಿದೆ ಅಂತಾ. ಇದೇ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಅಂಚೆಪಾಳ್ಯದಲ್ಲಿರುವ AECS ಎಂಜಿನಿಯರಿಂಗ್ ಕಾಲೇಜು ಕಾಂಪೌಂಡ್ ಬಳಿ ನಾಗರಾಜು ಎಂಬ 60 ವರ್ಷದ ವ್ಯಕ್ತಿ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದರು. ಇದೇ ವೇಳೆ ಸುಮಾರು 5.30ರ ವೇಳೆಗೆ ಆನೆ ದಾಳಿ ನಡೆಸಿದೆ ಎನ್ನಲಾಗಿದೆ‌.

ದಾಳಿಯಿಂದ ಗಂಭೀರವಾಗಿ ಗಾಯಗೊಂಡ ವೃದ್ಧ ನಾಗರಾಜು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ವೈದ್ಯರ ನಿರಂತರ ಚಿಕಿತ್ಸೆಯ ನಡುವೆಯೂ ನಾಗರಾಜು ಅವರ ಸ್ಥಿತಿ ಚಿಂತಾಜನಕವಾಗಿತ್ತು. ಕೊನೆಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಘಟನೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಬೇಕು ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲೇ ಆನೆ ದಾಳಿಗೆ ವೃದ್ಧರೊಬ್ಬರು ಬಲಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅದೇನೇ ಹೇಳಿ ಬೆಂಗಳೂರಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟಬೇಕಿದೆ. 

ಬೆಂಗಳೂರಿನಲ್ಲಿ ಆನೆ ದಾಳಿ ಎಂದರೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಏಕೆಂದರೆ ಸಿಲಿಕಾನ್‌ ಸಿಟಿಯಲ್ಲಿ ಎಲ್ಲಿ ನೋಡಿದರೂ ಜನಗಳೆ ಹೆಚ್ಚಾಗಿ ಕಾಣಿಸುತ್ತಾರೆ. ಅದರಲ್ಲಿ ಪ್ರಾಣಿಗಳು ಎಲ್ಲಿಂದ ಬರುತ್ತವೆ ಎನ್ನುವುದು ಪ್ರಶ್ನೆ ಆಗಿದೆ. ಅದರಲ್ಲಿ ಬೆಂಗಳೂರು ಅಂತಹ ಮಹಾನಗರ ಪಾಲಿಕೆ ನಗರದಲ್ಲಿ ಆನೆ ಅಂತಹ ದೊಡ್ಡ ಪ್ರಾಣಿ ಕಂಡುಬರುವುದು ಯಾರು ನಂಬಲು ಆಗುವುದೇ ಇಲ್ಲ. ನಗರಕ್ಕೆ ಬಂದರೂ ಅವುಗಳಿಗೆ ಸರಿಯಾದ ಆಹಾರ ಸಿಗುವುದಿಲ್ಲ. ಅಂತದ್ರಲ್ಲಿ ನಗರದಲ್ಲಿ ಬಂದು ಆನೆಯೊಂದು ದಾಳಿ ಮಾಡಿದೆ ಎಂದರೆ ಎಷ್ಟೋ ಜನರಿಗೆ ಅಚ್ಚರಿ ಮೂಡಿಸಿದೆ. 

ಈ ಹಿಂದೆ ಬೆಂಗಳೂರು ಸುತ್ತಮುತ್ತ ಚಿರತೆ ಪ್ರತ್ಯೇಕ್ಷವಾಗಿರುವ ಸಂಗತಿಗಳು ಎಷ್ಟೋ ನಡೆದಿವೆ. ಅವುಗಳನ್ನು ಸುರಕ್ಷಿತವಾಗಿ ಹಿಡಿದು ಮತ್ತೆ ಕಾಡಿಗೆ ಹೋಗಿ ಬಿಡಲಾಗಿದೆ. ಅದರಂತೆ ಈ ಆನೆಯ ಬಗ್ಗೆ ಅರಣ್ಯ ಇಲಾಖೆಯವರು ಹೆಚ್ಚಿನ ಗಮನ ಹರಿಸಿ ಸೆರೆ ಹಿಡಿದು ಅದನ್ನು ಮತ್ತೆ ದೂರ ಅರಣ್ಯ ಪ್ರದೇಶಕ್ಕೆ ಬಿಡುವುದು ಸೂಕ್ತ. ಏಕೆಂದರೆ ಮತ್ತೆ ಆ ಆನೆ ನಗರದತ್ತ ಧಾವಿಸಿದರೆ ದಾಳಿ ಮಾಡುವುದು ಪಕ್ಕಾ. ಏಕೆಂದರೆ ಒಮ್ಮೆ ದಾಳಿ ಮಾಡಿದೆ ಎಂದರೆ ಇನ್ನೊಮ್ಮೆ ಯಾವುದೇ ಭಯವಿಲ್ಲದೇ ನುಗ್ಗಿ ಬಿಡುತ್ತದೆ. ಅರಣ್ಯ ಇಲಾಖೆ ಶೀಘ್ರವೇ ಆನೆ ಶೋಧಕಾರ್ಯ ನಡೆಸಿ ಬೇರೆ ಕಾಡಿಗೆ ಅದನ್ನು ಬಿಟ್ಟರೇ ಉತ್ತಮ ಕೆಲಸವಾದಂತೆ.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES