ನಕಲಿ ಪತ್ರಕರ್ತ, ಕಳ್ಳ.. ನಂಬಿದವರನ್ನೇ ಭೀಕರವಾಗಿ ಕೊಂ*ದ ಕ್ಯಾಬ್ ಡ್ರೈವರ್..! ನರ ರೂಪದ ರಾಕ್ಷಸನ ಹಿನ್ನೆಲೆ ಇಲ್ಲಿದೆ
ಅವನು ಕ್ಯಾಬ್ ಚಾಲಕ. 20 ವರ್ಷದ ಹಿಂದೆ ಅವನಿಗೆ ಮದುವೆಯಾಗಿತ್ತು. ಮೊದನಿಂದಲೂ ಮುಂಗೋಪಿಯಾಗಿದ್ದ ಅವನಿಗೆ ಹೆಂಡತಿ ಹಾಗೂ ಆಕೆಯ ಮನೆಯವರ ಜೊತೆ ಕಿರಿಕ್ ಇತ್ತು. ಇದೇ ಕಾರಣಕ್ಕೆ ಅವನು ಯಾರು ಊಹಿಸಿದ ಕೆಲಸ ಮಾಡಿಬಿಟ್ಟಿದ್ದಾನೆ. ಇದಕ್ಕೆ ಅಪ್ರಾಪ್ತ ಮಗಳು ಸಾಥ್ ಕೊಟ್ಟಿದ್ದಾಳೆ. ಹಾಗಾದ್ರೆ ಭಾರತವೇ ಬೆಚ್ಚಿಬೀಳಿಸುವಂತಹ ಘಟನೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.
ಅವನು ಕ್ಯಾಬ್ ಚಾಲಕ. 20 ವರ್ಷದ ಹಿಂದೆ ಅವನಿಗೆ ಮದುವೆಯಾಗಿತ್ತು. ಮೊದನಿಂದಲೂ ಮುಂಗೋಪಿಯಾಗಿದ್ದ ಅವನಿಗೆ ಹೆಂಡತಿ ಹಾಗೂ ಆಕೆಯ ಮನೆಯವರ ಜೊತೆ ಕಿರಿಕ್ ಇತ್ತು. ಇದೇ ಕಾರಣಕ್ಕೆ ಅವನು ಯಾರು ಊಹಿಸಿದ ಕೆಲಸ ಮಾಡಿಬಿಟ್ಟಿದ್ದಾನೆ. ಇದಕ್ಕೆ ಅಪ್ರಾಪ್ತ ಮಗಳು ಸಾಥ್ ಕೊಟ್ಟಿದ್ದಾಳೆ. ಹಾಗಾದ್ರೆ ಭಾರತವೇ ಬೆಚ್ಚಿಬೀಳಿಸುವಂತಹ ಘಟನೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಾಷ್ಯಂ ಸರ್ಕಲ್ ಸಮೀಪದ ಮನೆಯಲ್ಲಿ ನಡೆದಿರುವ ಈ ಹತ್ಯಾಕಾಂಡ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಆರೋಪಿ ಇಂದುಶೇಖರ್ ಅಲಿಯಾಸ್ ಅರ್ಜುನ್ ಎಂಬಾತ ತನ್ನ ಪತ್ನಿ ಸುನೀತಾ ಹಾಗೂ ಆಕೆಯ ಕುಟುಂಬದವರ ಮೇಲಿನ ದ್ವೇಷಕ್ಕೆ ಏಳು ಮಂದಿಯ ಜೀವವನ್ನೇ ತೆಗೆದುಬಿಟ್ಟಿದ್ದಾನೆ. ಪತ್ನಿ ಸುನೀತಾ, ಅತ್ತೆ ರೂಪವತಿ, ನಳಿನಿ, ಶಂಕರ್, ಶಿವಕುಮಾರ್, ದಿವ್ಯಾ ಹಾಗೂ ಏಳು ವರ್ಷದ ಬಾಲಕ ಪುನೀತ್ ನನ್ನು ರುಬ್ಬುವ ಕಲ್ಲಿನಿಂದ ಹತ್ಯೆಗೈದಿದ್ದಾನೆ. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್‌ಗೆ ಪತ್ನಿಯ ತವರು ಮನೆಯವರ ಜೊತೆ ಪದೇ ಪದೇ ಜಗಳವಾಗುತ್ತಿತ್ತು.ಪತ್ನಿ ಪದೇ ಪದೇ ತವರು ಮನೆಗೆ ಹೋಗುವುದು, ಕುಟುಂಬಸ್ಥರು ಆಕೆಗೆ ಆರ್ಥಿಕ ನೆರವು ನೀಡುವುದು, ಆಸ್ತಿ ವಿಚಾರ ಸೇರಿದಂತೆ ಹಲವು ಕಾರಣಗಳಿಗೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು.ಇದೇ ದ್ವೇಷ ದಿನದಿಂದ ದಿನಕ್ಕೆ ಹೆಚ್ಚಾಗಿ ಕೊನೆಗೆ ಇಡೀ ಕುಟುಂಬವನ್ನೇ ಮುಗಿಸುವ ನಿರ್ಧಾರಕ್ಕೆ ಆರೋಪಿ ಬಂದುಬಟ್ಟಿದ್ದ.
ಇನ್ನು ಈ ಹತ್ಯಾಕಾಂಡದ ಭೀಕರತೆ ಕೇಳಿದ್ರೆ ಎಂಥವರೂ ಬೆಚ್ಚಿಬೀಳುತ್ತಾರೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಅಕ್ಟೋಬರ್ 14 ರಿಂದ ನವೆಂಬರ್ 1ರವರೆಗೆ ಹಂತ ಹಂತವಾಗಿ ಕೊಲೆ ಮಾಡಿದ್ದಾನೆ.ಮೊದಲು ಪತ್ನಿ ಸುನೀತಾಳನ್ನ ಮನೆಯಲ್ಲೇ ಹತ್ಯೆ ಮಾಡಿ, ಆಕೆ ಸ್ನೇಹಿತೆಯ ಜೊತೆ ಟ್ರಿಪ್‌ಗೆ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ. ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೂ ಇದೇ ವಿಚಾರ ಹೇಳಿ ನಂಬಿಸಿದ್ದಾನೆ. ಆಕೆಯ ಮೊಬೈಲ್‌ನ್ನೂ ಸ್ವಿಚ್ ಆಫ್ ಮಾಡಿದ್ದಾನೆ. ನಂತರ ಅತ್ತೆ ರೂಪವತಿಯನ್ನು ಕೊಲೆ ಮಾಡಿ ಇಬ್ಬರ ಮೃತದೇಹಗಳನ್ನು ಬೇರೆಡೆ ಬಿಸಾಡಿ ಬಂದಿದ್ದಾನೆ. ಇದಾದ ಬಳಿಕ ಆರೋಪಿ ಸಂಚು ಇನ್ನೂ ಭಯಾನಕವಾಗಿತ್ತು. ಬಾಮೈದ ಶಿವಕುಮಾರ್, ಆತನ ಪತ್ನಿ ದಿವ್ಯಾ ಹಾಗೂ ಮಗ ಪುನೀತ್‌ನನ್ನು ಊಟಕ್ಕೆಂದು ಮನೆಗೆ ಕರೆಸಿಕೊಂಡಿದ್ದಾನೆ.
ಮಾಂಸಾಹಾರದ ಊಟದ ನೆಪದಲ್ಲಿ ಕರೆಸಿ, ಊಟದಲ್ಲಿ ಮತ್ತಿನ ಔಷಧಿ ಬೆರೆಸಿದ್ದಾನೆ.ಬಳಿಕ ನಿದ್ದೆಯ ಮಂಪರಿನಲ್ಲಿದ್ದ ಶಿವಕುಮಾರ್ ಮತ್ತು ದಿವ್ಯಾಳನ್ನು ರುಬ್ಬುಗಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ ನಂತರ ಮೃತದೇಹಗಳನ್ನು ತನ್ನ ಇಟಿಯೋಸ್ ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ಸಾಗಿಸಿದ್ದಾನೆ. ತಂದೆ-ತಾಯಿಯ ಮೃತದೇಹಗಳನ್ನು ಸಾಗಿಸುವಾಗ ಬಾಲಕ ಪುನೀತ್ ಹಾಗೂ ಆರೋಪಿಯ ಅಪ್ರಾಪ್ತ ಮಗಳು ಕೂಡ ಕಾರಿನಲ್ಲಿದ್ದರು ಎನ್ನುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.ಬಳಿಕ ಬಾಲಕ ಪುನೀತ್ ನನ್ನು ಮನೆಯಲ್ಲಿ ಹತ್ಯೆ ಮಾಡಿ ಮೃತದೇಹವನ್ನು ನಂದಿಬೆಟ್ಟದ ಬಳಿ ಎಸೆದಿದ್ದಾನೆ. ಇದೇ ರೀತಿ ನಳಿನಿ ಮತ್ತು ಶಂಕರ್ ದಂಪತಿಯನ್ನೂ ಮನೆಗೆ ಕರೆಸಿ ಹತ್ಯೆ ಮಾಡಿದ್ದಾನೆ. ಅವರ ಮಗ ಯತೀನ್ ನನ್ನು ಕೊಲ್ಲು ಪ್ಲಾನ್ ಮಾಡಿದ್ದ. ಆದರೆ ಅಷ್ಟರಲ್ಲಾಗಲೇ ಮಿಸ್ಸಿಂಗ್ ಕಂಪ್ಲೈಂಟ್ ದಾಖಲಾದ ಕಾರಣ ಆರೋಪಿ ಲಾಕ್ ಆಗಿದ್ದರಿಂದ ಬಾಲಕ ಯತೀನ್ ಬಚಾವ್ ಆಗಿದ್ದಾನೆ. ಈ ಎಲ್ಲಾ ಕೃತ್ಯಗಳಿಗೂ ಅಪ್ರಾಪ್ತ ಮಗಳು ಸಾಥ್ ನೀಡಿದ್ದಾಳೆ ಎಂಬುದು ಸಹ ಗೊತ್ತಾಗಿದೆ.
ಅಪ್ರಾಪ್ತ ಮಗಳ ಬ್ರೈನ್‌ವಾಶ್ ಮಾಡಿದ್ದ ಪಾಪಿ..?
ಇನ್ನು ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಆರೋಪಿ ತನ್ನ ಅಪ್ರಾಪ್ತ ಮಗಳನ್ನೂ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ತಾಯಿ ಸುನೀತಾ ಬಗ್ಗೆ ಹಾಗೂ ತಾಯಿಯ ಕುಟುಂಬದವರ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹೇಳಿ ಮಗಳ ಮನಸ್ಸಿನಲ್ಲಿ ದ್ವೇಷ ಮೂಡಿಸಿದ್ದ. ಹೀಗಾಗಿ ತಂದೆಯ ಜೊತೆಗೇ ಇದ್ದ ಮಗಳು ಹತ್ಯೆ ಮತ್ತು ಮೃತದೇಹ ಸಾಗಿಸುವಾಗ ಸಹಕರಿಸಿದ್ದಾಳೆ.
ಇನ್ನು ಪ್ರಕರಣ ಬೆಳಕಿಗೆ ಬಂದಿದ್ದು ನಳಿನಿ ನಿಗೂಢವಾಗಿ ಕಾಣೆಯಾಗಿದ್ದರಿಂದ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಕಾಣೆಯಾದವರ ಮೊಬೈಲ್‌ಗಳ ಲೊಕೇಷನ್ ಒಂದೇ ಕಡೆ ಪತ್ತೆಯಾಗಿರುವುದು ಅನುಮಾನ ಮೂಡಿಸಿತ್ತು. ಬಳಿಕ ಇಂದುಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಂದೊಂದೇ ಭಯಾನಕ ಸಂಗತಿಗಳು ಹೊರಬಂದಿವೆ.ಆರಂಭದಲ್ಲಿ ತನಗೇನೂ ಗೊತ್ತಿಲ್ಲ ಎಂದು ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ ಆರೋಪಿ, ಬಳಿಕ ಏಳು ಜನರ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಎರ್ಕಾಡ್ ಘಾಟ್, ಚಾಮುಂಡಿ ಬೆಟ್ಟ, ಶಿರಾಡಿ ಘಾಟ್ ಹಾಗೂ ನಂದಿಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮೃತದೇಹಗಳನ್ನು ಎಸೆದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇನ್ನು ಆರೋಪಿ ಇಂದುಶೇಖರ್‌ಗೆ 52 ವರ್ಷ ವಯಸ್ಸಾಗಿದ್ದು, ಪತ್ನಿ ಸುನೀತಾಗೆ 39 ವರ್ಷ. ಇಬ್ಬರ ನಡುವಿನ ವಯಸ್ಸಿನ ಅಂತರ, ಅನುಮಾನ, ಆಸ್ತಿ ವಿವಾದ, ಆರ್ಥಿಕ ವಿಚಾರ ಹಾಗೂ ಕೌಟುಂಬಿಕ ಕಲಹಗಳೂ ಈ ಹತ್ಯಾಕಾಂಡಕ್ಕೆ ಕಾರಣವಾಗಿವೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಸದ್ಯ ಆರೋಪಿ ಇಂದುಶೇಖರ್ ಹಾಗೂ ಅಪ್ರಾಪ್ತ ಮಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಈ ಭೀಕರ ಸರಣಿ ಹತ್ಯೆಯ ಹಿಂದೆ ಇನ್ನೂ ಏನೇನು ರಹಸ್ಯಗಳು ಅಡಗಿವೆ ಅನ್ನೋದು ಮುಂದಿನ ತನಿಖೆಯಲ್ಲಿ ಹೊರಬರಬೇಕಿದೆ. ಅದೆನೇ ಹೇಳಿಹೆಂಡತಿ ಮೇಲಿನ ಕೋಪಕ್ಕೆ ಆಕೆಯ ಇಡೀ ಕುಟುಂಬವನ್ನೇ ಹತ್ಯೆ ಮಾಡಿರುವ ಪಾಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದೇ ಎಲ್ಲರ ಆಗ್ರಹವಾಗಿದೆ.