ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆ: ಬೆಂಗಳೂರಿನಲ್ಲಿ ಬೃಹತ್ ಹೋರಾಟ 8 ಬೇಡಿಕೆಗಳೇನು?
Asha workers protest: ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಮತ್ತೆ ಸಮರ ಸಾರಿದ್ದಾರೆ. ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಸೂಕ್ತ ಗೌರವಧನ ಸಿಗುತ್ತಿಲ್ಲ ಎಂಬುದು ಆಶಾ ಕಾರ್ಯಕರ್ತೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Asha workers protest: ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಮತ್ತೆ ಸಮರ ಸಾರಿದ್ದಾರೆ. ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಸೂಕ್ತ ಗೌರವಧನ ಸಿಗುತ್ತಿಲ್ಲ ಎಂಬುದು ಆಶಾ ಕಾರ್ಯಕರ್ತೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಮತ್ತೆ ಸಮರ ಸಾರಿದ್ದಾರೆ. ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಸೂಕ್ತ ಗೌರವಧನ ಸಿಗುತ್ತಿಲ್ಲ ಎಂಬುದು ಆಶಾ ಕಾರ್ಯಕರ್ತೆಯರ ಆಕ್ರೋಶ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ತಿಂಗಳಿಗೆ 15 ಸಾವಿರ ರೂಪಾಯಿ ನಿಶ್ಚಿತ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹಾಗಾದ್ರೆ ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳೇನು? ಸರ್ಕಾರದ ಮುಂದೆ ಇಟ್ಟಿರುವ ಆಗ್ರಹಗಳೇನು? ನೋಡೋಣ ಈ ವರದಿ.
ಕಳೆದ 18 ವರ್ಷಗಳಿಂದ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಳ್ಳಿಹಳ್ಳಿಗೂ ತೆರಳಿ ಆರೋಗ್ಯ ಸೇವೆ ನೀಡುವ ಇವರು, ಪ್ರತಿದಿನ 6ರಿಂದ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ 24 ಗಂಟೆಯೂ ಸೇವೆಗೆ ಸಿದ್ಧರಾಗಿರುತ್ತಾರೆ. ಆದ್ರೆ ಇಷ್ಟೆಲ್ಲಾ ದುಡಿದರೂ ಇವರಿಗೆ ಸಿಗುತ್ತಿರುವುದು ಪ್ರೋತ್ಸಾಹಧನ ಆಧಾರಿತ ವೇತನ. ಇದರಿಂದ ಆರ್ಥಿಕ ಭದ್ರತೆಯೇ ಇಲ್ಲದಂತಾಗಿದೆ ಎಂಬುದು ಕಾರ್ಯಕರ್ತೆಯರ ಅಳಲು.
ಆಶಾ ಕಾರ್ಯಕರ್ತೆಯರ 7 ಪ್ರಮುಖ ಬೇಡಿಕೆಗಳು
1. ₹15 ಸಾವಿರ ನಿಶ್ಚಿತ ಗೌರವಧನ:: ಪ್ರೋತ್ಸಾಹಧನ ಪದ್ಧತಿ ಬದಲು ಮಾಸಿಕ 15 ಸಾವಿರ ರೂ. ನಿಗದಿತ ಗೌರವಧನ ನೀಡಬೇಕು.
2. ಮೊಬೈಲ್ ಮತ್ತು ರೀಚಾರ್ಜ್ ಭತ್ಯೆ: ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ಹಾಗೂ ಮಾಸಿಕ ರೀಚಾರ್ಜ್ ಭತ್ಯೆ ನೀಡಬೇಕು.
3. ಹೆರಿಗೆ ರಜೆ: 6 ತಿಂಗಳ ವೇತನ ಸಹಿತ ಹೆರಿಗೆ ರಜೆ ಸೌಲಭ್ಯ ಕಲ್ಪಿಸಬೇಕು.
4. ಹೆಚ್ಚುವರಿ ಕೆಲಸಕ್ಕೆ ಬ್ರೇಕ್: ಆರೋಗ್ಯ ಇಲಾಖೆಗೆ ಸಂಬಂಧಪಡದ ಇತರೆ ಇಲಾಖೆಗಳ ಕೆಲಸಗಳನ್ನು ವಹಿಸುವುದನ್ನು ನಿಲ್ಲಿಸಬೇಕು.
5. ಸುಗಮಕಾರರ ಮರುನೇಮಕ: ಸೇವೆಯಿಂದ ಹಿಂಪಡೆದಿರುವ ಆಶಾ ಸುಗಮಕಾರರನ್ನು ಮರುನೇಮಕ ಮಾಡಬೇಕು.
6. ಬಾಕಿ ಪ್ರೋತ್ಸಾಹಧನ ಬಿಡುಗಡೆ: 2024-25ನೇ ಸಾಲಿನ ಹೆಚ್ಚುವರಿ ಮಾಸಿಕ 1,500 ರೂ. ಪ್ರೋತ್ಸಾಹಧನ ಸೇರಿದಂತೆ ಬಾಕಿ ಹಣ ಬಿಡುಗಡೆ ಮಾಡಬೇಕು.
7. ಆರ್ಥಿಕ ಭದ್ರತೆ ಮತ್ತು ಸೌಲಭ್ಯ: ಆಶಾ ಕಾರ್ಯಕರ್ತೆಯರ ಸೇವೆಗೆ ತಕ್ಕಂತೆ ಸೂಕ್ತ ಗೌರವಧನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.̇
8. ನಿವೃತ್ತಿ ಸೌಲಭ್ಯ
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಂಘಟನೆಯ ಆರೋಪ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ 15 ಸಾವಿರ ರೂ. ನಿಶ್ಚಿತ ಗೌರವಧನದ ಬೇಡಿಕೆ ಈಡೇರಿಸುತ್ತಾ ಇಲ್ಲವಾ ಅನ್ನೋದನ್ನ ಕಾದು ನೋಡಬೇಕಿದೆ.