SOCIAL MEDIA

Newsletter

PARTNER SITES
Select Language Select State

ಮಹಿಳೆ ಖಾಸಗಿ ಫೋಟೋ ವೈರಲ್‌ ಮಾಡೋದಾಗಿ ಬ್ಯ್ಲಾಕ್‌ಮೇಲ್‌.. 9 ಲಕ್ಷ ಹಣ ಪೀಕಿದ ಟ್ಯಾಟೂ ಅರ್ಜುನ್‌

ಸಂತ್ರಸ್ತೆಯ ಗಂಡ ಮರಣ ಹೊಂದಿರುವ ವಿಚಾರ ತಿಳಿದು ಬಾಳು ಕೊಡುತ್ತೇನೆ ಅಂತ ಟ್ಯಾಟೋ‌ ಗೋಸ್ಟ್ ಅರ್ಜುನ್ ಹೇಳಿದ್ದನು. ಅಲ್ಲದೇ ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಿಳೆ ಜೊತೆ ಸಲುಗೆಯಿಂದ

Written By Bhimappa
Published: Sep 25, 2026, 12:11 PM IST | Updated: Sep 25, 2026, 12:16 PM IST
Image Credit: tattoo_artist_arjun
Join

Another woman files complaint against tattoo artist Arjun: ಟ್ಯಾಟೋ ಅರ್ಟಿಸ್ಟ್ ಅರ್ಜುನ್ ಅಲಿಯಾಸ್ ಟ್ಯಾಟೋ ಗೋಸ್ಟ್ ವಿರುದ್ಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಮಹಿಳೆಯೊಬ್ಬರ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಯ್ಲಾಕ್‌ಮೇಲ್‌ ಮಾಡಿ 9 ಲಕ್ಷ ಸುಲಿಗೆ ಮಾಡಿರುವ ಆರೋಪದ ಮೇಲೆ ಈ ದೂರು ದಾಖಲು ಮಾಡಲಾಗಿದೆ. ಹಣ ಕೇಳಿದಾಗ ಕೊಡದಿದ್ದಕ್ಕೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡೋದಾಗಿ ಬ್ಯ್ಲಾಕ್‌ಮೇಲ್‌ ಮಾಡಿರುವ ಆರೋಪ ಇದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಅನ್ವಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಟ್ಯಾಟೋ ಅರ್ಟಿಸ್ಟ್ ಅರ್ಜುನ್ ವಿರುದ್ಧ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿದೆ. 

ಮಹಿಳೆಯೊಬ್ಬರ ಖಾಸಗಿ ಫೋಟೋ ಇಟ್ಟುಕೊಂಡು ಬ್ಯ್ಲಾಕ್‌ಮೇಲ್‌ ಮಾಡಿ ಲಕ್ಷ ಲಕ್ಷ ಸುಲಿಗೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಟ್ಯಾಟೋ ಅರ್ಟಿಸ್ಟ್ ಅರ್ಜುನ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಟ್ಯಾಟೋ ಹಾಕಿಸಲು ಬಂದ ಮಹಿಳೆ ಜೊತೆ ಸ್ನೇಹ ಬೆಳಸಿ ಬ್ಯ್ಲಾಕ್‌ಮೇಲ್‌ ಮಾಡಲಾಗಿದೆ. ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲೆ 9 ಲಕ್ಷ ಸುಲಿಗೆ ಮಾಡಿದ್ದಾಗಿ ದೂರು ಇದೆ. ಸಂತ್ರಸ್ತ ಮಹಿಳೆ ಇದೀಗ ದೂರು ಕೊಟ್ಟಿದ್ದಾರೆ.

2 ವರ್ಷಗಳ ಹಿಂದೆ ಟ್ಯಾಟೋ ಹಾಕಿಸಿಕೊಳ್ಳಲು ಹೋದಾಗ ಟ್ಯಾಟೂ ಅರ್ಜುನ್ ಪರಿಚಯ ಆಗಿದ್ದಾನೆ. ನಂತರ ದಿನ ಕಳೆದಂತೆ ಮಹಿಳೆ ಮತ್ತು ಅರ್ಜುನ್‌ ನಡುವೆ ಪರಿಚಯ ಸ್ನೇಹವಾಗುತ್ತದೆ. ಸಂತ್ರಸ್ತೆಯ ಗಂಡ ಮರಣ ಹೊಂದಿರುವ ವಿಚಾರ ತಿಳಿದು ಬಾಳು ಕೊಡುತ್ತೇನೆ ಅಂತ ಟ್ಯಾಟೋ‌ ಗೋಸ್ಟ್ ಅರ್ಜುನ್ ಹೇಳಿದ್ದನು. ಅಲ್ಲದೇ ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಿಳೆ ಜೊತೆ ಸಲುಗೆಯಿಂದ ಇರುತ್ತಿದ್ದನು. ಇಬ್ಬರು ಜೊತೆಗಿರುವಂತಹ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಯ್ಲಾಕ್‌ಮೇಲ್‌ ಮಾಡಲು ಶುರು ಮಾಡಿದ್ದನು.

2024ರ ನವೆಂಬರ್ ತಿಂಗಳಿನಿಂದ ಹಣ ನೀಡವಂತೆ ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಹಣ ಇಲ್ಲ ಎಂದಾಗ ಸಂತ್ರಸ್ತೆ ಫೋಟೋ ಜಾಲತಾಣದಲ್ಲಿ ಹರಿ ಬಿಡೋದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಹಂತ-ಹಂತವಾಗಿ ಮಹಿಳೆಯಿಂದ 9 ಲಕ್ಷ ಹಣ ಪಡೆದುಕೊಂಡಿದ್ದನು. ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಹಣವನ್ನು ಕೊಡಲು ಮಹಿಳೆ ನಿರಾಕರಣೆ ಮಾಡಿದ್ದಾರೆ. ಮಹಿಳೆ ಕರೆ ಸ್ವೀಕಾರ ಮಾಡದೇ ಇದ್ದಾಗ ಸೆಪ್ಟೆಂಬರ್‌ 2 ರಂದು ಆಕೆಯ ಮನೆಯನ್ನು ಹುಡುಕಿಕೊಂಡು ಟ್ಯಾಟೂ ಅರ್ಜುನ್ ಬಂದಿದ್ದನು. ಯಾಕೆ ನನ್ನ ಕರೆ ಸ್ವೀಕರಿಸುತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರು ಆರೋಪ ಕೂಡ ಮಾಡಲಾಗಿದೆ. ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಅರ್ಜುನ್ ಅಲಿಯಾಸ್‌ ಟ್ಯಾಟೋ ಗೊಸ್ಟ್ ವಿರುದ್ಧ ಎಫ್‌ಐ‌ಆರ್ ದಾಖಲು ಮಾಡಿದ್ದಾರೆ.

ಮೊನ್ನೆ ಮಹಿಳೆಯೊಬ್ಬರು ದೂರು ದಾಖಲು ಮಾಡಿದ್ದರು

ಕಳೆದ ವಾರ ಇದೇ ಟ್ಯಾಟೂ ಅರ್ಜುನ್‌ ವಿರುದ್ಧ ಮಹಿಳೆಯೊಬ್ಬರು ಪ್ರಕರಣ ದಾಖಲು ಮಾಡಿದ್ದರು. ಮಹಿಳೆಯ ಮನೆಗೆ ಹೋಗಿ ಹಲ್ಲೆ ಮಾಡಿರುವ ಸಂಬಂಧ ಮಹಿಳೆ ಕೂಡ ತಿರುಗಿ ಹಲ್ಲೆ ಮಾಡಿದ್ದರು. ಇಬ್ಬರ ನಡುವೆ ಸಾಕಷ್ಟು ಮಾತುಕತೆಗಳು ನಡೆದು ಜಗಳ ಹತೋಟಿಗೆ ಹೋದಾಗ ಗಲಾಟೆ ಆಗಿತ್ತು. ನನ್ನ ಗಂಡ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದನ್ನು ವಿರೋಧಿಸಿ ಅರ್ಜುನ್‌ ಮನೆಗೆ ಬಂದಿದ್ದನು. ಆಗ ನನ್ನ ಮೇಲೆ ದಬ್ಬಾಳಿಕೆ ಮಾಡಿ ಹಲ್ಲೆ ನಡೆಸಿದ್ದನು. ನನ್ನ ಪ್ರಾಣ ಉಳಿಸಿಕೊಳ್ಳಲು ಆತನ ವಿರುದ್ಧ ತಿರುಗಿ ಬಿದ್ದು ಹಲ್ಲೆ ಮಾಡಬೇಕಾಯಿತು ಎಂದು ಮಹಿಳೆ ಹೇಳಿದ್ದರು.  

ಟ್ಯಾಟೂ ಅರ್ಜುನ್‌ ಪರಿಚಯ ಆದಗಿನಿಂದಲೂ ಆತನ ಜೊತೆ ಹಣದ ವ್ಯವಹಾರ ಮಾಡಿದ್ದೆ. ಸಾಲ ಪಡೆದು ಆತನಿಗೆ ಹಣ ನೀಡಿದ್ದೆ. ಆದರೆ ಇದುವರೆಗೂ ಆತ ಆ ಹಣವನ್ನು ವಾಪಸ್‌ ಕೊಟ್ಟಿಲ್ಲ. ಹಣ ಕೊಟ್ಟಿಲ್ಲ ಎನ್ನುವುದು ಒಂದು ಕಡೆಯಾದರೆ ಇನ್ನೊಂದು ಕಡೆಗೆ ನಿರಂತರ ನಮಗೆ ಟಾರ್ಚರ್‌ ಮತ್ತು ಬ್ಯ್ಲಾಕ್‌ಮೇಲ್‌ ಮಾಡುತ್ತಿದ್ದನು. ಅರ್ಜುನ್‌ ಹೇಳಿದಾಗೆ ನಾವಿರಬೇಕು ಅಂತೆ. ಅವನು ಹೇಳಿದ ರೀತಿ ಕೇಳಬೇಕು ಎಂದು ಬೆದರಿಕೆ ಹಾಕುತ್ತಿದ್ದನು. ಸಮಾಜ ನೋಡುವಂತೆ ಟ್ಯಾಟೂ ಅರ್ಜುನ್‌ ಇಲ್ಲ. ಅರ್ಜುನ್‌ ನಿಜವಾದ ಮುಖ ನಿಮಗೆ ಗೊತ್ತಿಲ್ಲ ಎಂದು ಮಹಿಳೆ ಆರೋಪಗಳನ್ನು ಮಾಡಿದ್ದರು. ಅಲ್ಲದೇ ಪೊಲೀಸರಿಗೆ ದೂರು ನೀಡಿರುವ ಕುರಿತು ಮಾಹಿತಿಗಳನ್ನು ವಿಡಿಯೋದಲ್ಲಿ ಮಹಿಳೆ ತೋರಿಸಿದ್ದರು. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES