• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸ್ನೇಹಕ್ಕೆ ಮುಳ್ಳಾದ ಮನಸ್ತಾಪ : ಗಣೇಶ ಪೆಂಡಾಲ್ ಬಳಿ ಮಲಗಿದ್ದ ಯುವಕನ ಕೊ*ಲೆ

ಸ್ನೇಹಕ್ಕೆ ಮುಳ್ಳಾದ ಮನಸ್ತಾಪ : ಗಣೇಶ ಪೆಂಡಾಲ್ ಬಳಿ ಮಲಗಿದ್ದ ಯುವಕನ ಕೊ*ಲೆ

ಸ್ನೇಹಿತರ ನಡುವೆ ಇದ್ದ ಸಣ್ಣ ಮನಸ್ತಾಪ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಕಲಬುರಗಿಯ ರಾಮನಗರದಲ್ಲಿ ನಡೆದಿದೆ. 26 ವರ್ಷದ ವಾಟರ್ ಪ್ಲಾಂಟ್ ಉದ್ಯೋಗಿ ವಿಜಯಕುಮಾರ್ ಎಂಬುವವರನ್ನು ಆತನ ಮಾಜಿ ಆಪ್ತ ಸ್ನೇಹಿತ ರವಿ ಹಾಗೂ ಆತನ ಸಹಚರರು ಹಾಡುಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 19, 2026, 05:59 PM IST|Updated: Sep 19, 2026, 06:01 PM IST
joinshare
ಸ್ನೇಹಕ್ಕೆ ಮುಳ್ಳಾದ ಮನಸ್ತಾಪ : ಗಣೇಶ ಪೆಂಡಾಲ್ ಬಳಿ ಮಲಗಿದ್ದ ಯುವಕನ ಕೊ*ಲೆ
Image Credit: Today Kalaburagi news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕಲಬುರಗಿ: ಒಟ್ಟೊಟ್ಟಿಗೆ ಓಡಾಡಿಕೊಂಡು, ಒಂದೇ ಏರಿಯಾದಲ್ಲಿ ಆಟ-ಪಾಠ ಕಲಿತು ಬೆಳೆದ ಆತ್ಮೀಯ ಸ್ನೇಹಿತರ ನಡುವೆ ಮೂಡಿದ ಸಣ್ಣ ವೈಮನಸ್ಸು, ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಕಲಬುರಗಿ ನಗರದ ರಾಮನಗರ ಬಡಾವಣೆಯಲ್ಲಿ ನಡೆದಿದೆ. ಮಲಗಿದ್ದ ಸ್ನೇಹಿತನನ್ನೇ ಕರೆದುಕೊಂಡು ಹೋಗಿ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

26 ವರ್ಷದ ವಿಜಯಕುಮಾರ್ ಕೊಲೆಯಾದ ನಿರ್ಭಾಗ್ಯ ಯುವಕ. ಈತ ಕಲಬುರಗಿಯ ರಾಮನಗರ ನಿವಾಸಿಯಾಗಿದ್ದು, ತಮ್ಮ ಬಡಾವಣೆಯ ಪಕ್ಕದಲ್ಲೇ ಇರುವ ಮುಖ್ಯ ರಸ್ತೆಯ ವಾಟರ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಯಾರ ತಂಟೆಗೂ ಹೋಗದೆ, ಎಲ್ಲರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ಮಾತನಾಡುತ್ತಿದ್ದ ವಿಜಯಕುಮಾರ್, ಸ್ಥಳೀಯವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು.

ಆತ್ಮೀಯ ಗೆಳೆಯರ ನಡುವೆ ಬೆಳೆದ ವೈಮನಸ್ಸು
ಅದೇ ಬಡಾವಣೆಯ ನಿವಾಸಿಯಾಗಿದ್ದ ರವಿ ಹಾಗೂ ವಿಜಯಕುಮಾರ್ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು. ಎಲ್ಲೇ ಹೋದರೂ ಇಬ್ಬರೂ ಜೊತೆಯಾಗಿಯೇ ಓಡಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಸಣ್ಣ ಮಟ್ಟದ ವೈಮನಸ್ಸು ಹಾಗೂ ಮನಸ್ತಾಪ ಶುರುವಾಗಿತ್ತು. ದಿನಗಳು ಕಳೆದಂತೆ ಈ ಭಿನ್ನಾಭಿಪ್ರಾಯ ಹೆಚ್ಚಾಗುತ್ತಲೇ ಹೋಯಿತು. ಸ್ಥಳೀಯರು ಹಾಗೂ ಇತರ ಸ್ನೇಹಿತರು ಇಬ್ಬರ ನಡುವಿನ ಜಗಳವನ್ನು ಶಮನಗೊಳಿಸಿ, ಮತ್ತೆ ಒಂದಾಗಿಸಲು ಹಲವು ಬಾರಿ ಸಂಧಾನ ಪ್ರಯತ್ನ ನಡೆಸಿದ್ದರೂ ಸಹ ಫಲ ನೀಡಿರಲಿಲ್ಲ. ಇಬ್ಬರೂ ಮಾತನಾಡದೆ ಬೇರೆ ಬೇರೆಯಾಗಿಯೇ ಉಳಿದುಕೊಂಡಿದ್ದರು.

ಗಣೇಶ ಪೆಂಡಾಲ್ ಬಳಿಯಿಂದ ಕರೆದೊಯ್ದು ಕೃತ್ಯ
ಸಂಜೆ ಸುಮಾರು ೪ ಗಂಟೆಯ ವೇಳೆಗೆ ವಿಜಯಕುಮಾರ್ ತಮ್ಮ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಪೆಂಡಾಲ್ ಬಳಿ ವಿಶ್ರಾಂತಿ ಪಡೆಯುತ್ತ ಮಲಗಿದ್ದನು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆರೋಪಿ ರವಿ ಹಾಗೂ ಆತನ ಮೂರ್ನಾಲ್ಕು ಜನ ಗೆಳೆಯರು, "ನಿನ್ನ ಜೊತೆ ಮಾತನಾಡೋದು ಇದೆ, ಬಾ" ಎಂದು ಹೇಳಿ ವಿಜಯಕುಮಾರ್‌ನನ್ನು ಪಕ್ಕದ ರಸ್ತೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿಗೆ ತಲುಪುತ್ತಿದ್ದಂತೆಯೇ, ರವಿ ಮತ್ತು ಆತನ ಸಹಚರರು ಇದ್ದಕ್ಕಿದ್ದಂತೆ ವಿಜಯಕುಮಾರ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಚಾಕುವಿನಿಂದ ಎದೆ ಹಾಗೂ ದೇಹದ ಇತರ ಭಾಗಗಳಿಗೆ ಮನಸ್ಸೋ ಇಚ್ಛೆ ಇರಿದು ರಕ್ತದ ಕೋಡಿ ಹರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ವಿಜಯಕುಮಾರ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾನೆ. ಕೃತ್ಯ ಎಸಗಿದ ತಕ್ಷಣವೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತರ ಭೇಟಿ
ಹಾಡುಹಗಲೇ ನಡೆದ ಈ ಭೀಕರ ಕೊಲೆಯಿಂದಾಗಿ ರಾಮನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ ದೇಹವನ್ನು ನೋಡಿ ಸಾರ್ವಜನಿಕರು ಆತಂಕದಿಂದ ಓಡೋಡಿ ಬಂದಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಪ್ರಸ್ತುತ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಮುಖ್ಯ ಆರೋಪಿ ರವಿ ಮತ್ತು ಆತನ ಸಹಚರರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸ್ನೇಹಿತರ ನಡುವಿನ ಸಣ್ಣ ದ್ವೇಷವು ಇಷ್ಟೊಂದು ಭೀಕರ ಸ್ವರೂಪ ಪಡೆಯಲು ಅಸಲಿ ಕಾರಣವೇನು? ಕೇವಲ ವೈಮನಸ್ಸಿನಿಂದ ಈ ಕೊಲೆ ನಡೆದಿದೆಯೇ ಅಥವಾ ಇದರ ಹಿಂದೆ ಬೇರೇನಾದರೂ ರಹಸ್ಯಗಳಿವೆಯೇ ಎಂಬ ಕೋನದಲ್ಲಿಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Add Zee News as a Preferred Source
TAGS:
Kannada News