SOCIAL MEDIA

Newsletter

PARTNER SITES
Select Language Select State

ವಿವಾಹಿತ ಧರ್ಮಗುರುವಿನ ಜೊತೆ 22 ವರ್ಷದ ಯುವತಿ ಲವ್‌! ಪೋಷಕರ ಕಣ್ಣೀರಿಗೂ ಕರಗಲಿಲ್ಲ ಮನಸು

ಪೋಷಕರ ಕಣ್ಣೀರು, ಎಷ್ಟೇ ಮೊರೆ ಇಟ್ಟರೂ ಮನಸ್ಸು ಬದಲಿಸದ ಯುವತಿ.. ಮಂಗಳೂರಿನ ಅಸೈಗೋಳಿಯಲ್ಲಿ ನಡೆದ ಇತ್ತೀಚಿನ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿವಾಹವಾಗಿ ಮಕ್ಕಳಿರುವ ಧರ್ಮಗುರುವೊಬ್ಬರಿಗಾಗಿ 22 ವರ್ಷದ ಯುವತಿ ಪೋಷಕರನ್ನೇ ದೂರ ಮಾಡಿಕೊಳ್ಳಲು ರೆಡಿಯಾಗಿದ್ದಾಳೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 30, 2026, 07:22 PM IST | Updated: Oct 30, 2026, 07:26 PM IST
Image Credit: Mangaluru News
Join

ಮಂಗಳೂರು: ವಿವಾಹವಾಗಿ ಮಕ್ಕಳಿರುವ ಧರ್ಮಗುರುವೊಬ್ಬರ ಜೊತೆ ಕುಮಟಾದ 22 ವರ್ಷದ ಯುವತಿ ಉಳ್ಳಾಲ ತಾಲೂಕಿನ ಅಸೈಗೋಳಿಗೆ ಬಂದು, ಪೋಷಕರ ಜೊತೆ ಹೋಗಲು ನಿರಾಕರಿಸಿ ಪ್ರಿಯಕರನೊಂದಿಗೆ ತೆರಳಿರುವ ಘಟನೆ ನಡೆದಿದೆ. ಮಗಳನ್ನು ಹುಡುಕಿಕೊಂಡು ಬಂದ ಪೋಷಕರು ಕೊಣಾಜೆ ಪೊಲೀಸ್ ಠಾಣೆ ಮುಂದೆ ಕಣ್ಣೀರಿಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ಮಗದುಮ್ಮ, ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸಅದಿ ಜೊತೆ ತೆರಳಿದ ಯುವತಿ. ಈ ಹಿಂದೆ ಕುಮಟಾದ ಮದ್ರಸಾವೊಂದರಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ ವೇಳೆ ಇವರಿಗೆ ಅಶ್ರಫ್ ಸಅದಿ ಪರಿಚಯವಾಗಿದ್ದ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಇಬ್ಬರ ನಡುವೆ ಸಂಪರ್ಕವಿತ್ತು. ಅಶ್ರಫ್ ಸಅದಿ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಕುಮಟಾದ ಮದ್ರಸಾ ತೊರೆದು ಮುಂಬೈಗೆ ತೆರಳಿದ್ದ ಅಶ್ರಫ್, ಇತ್ತೀಚೆಗೆ ಮತ್ತೆ ವಾಪಸ್ ಬಂದು ಅಕ್ಟೋಬರ್ 22ರಂದು ಯುವತಿಯನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರೂ ನಿಖಾ ಮಾಡಿಕೊಂಡು ವಿವಾಹ ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಗಳು ಮಂಗಳೂರಿಗೆ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಆತಂಕಗೊಂಡ ಕುಟುಂಬಸ್ಥರು, ಹುಡುಕಿಕೊಂಡು ಬಂದು ಕೊಣಾಜೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಠಾಣೆಗೆ ಆಗಮಿಸಿದ ಪೋಷಕರು ಮಗಳು ತಮ್ಮೊಂದಿಗೆ ವಾಪಸ್ ಬರುವಂತೆ ಕೈಮುಗಿದು ಕಣ್ಣೀರಿನಿಂದ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಯುವತಿ ವಯಸ್ಕಳಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಯುವತಿ ಹಾಗೂ ಆಕೆಯೊಂದಿಗೆ ಬಂದಿದ್ದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಯುವತಿ ಮಾತ್ರ ಮನೆಯವರೊಂದಿಗೆ ವಾಪಸ್ ಹೋಗಲು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ. ತಾನು ಪ್ರಿಯಕರನೊಂದಿಗೆಯೆ ತೆರಳುವುದಾಗಿ ಹೇಳಿದ್ದಾಳೆ.

ಬಳಿಕ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿದ ಯುವತಿ, ಅಶ್ರಫ್ ಸಅದಿ ಜೊತೆ ತೆರಳಿದ್ದಾಳೆ. ಕಣ್ಣೆದುರೇ ಮಗಳು ತಮ್ಮಿಂದ ದೂರವಾಗುತ್ತಿರುವುದನ್ನು ಕಂಡು ಪೋಷಕರು ಹಾಗೂ ಸಂಬಂಧಿಕರು ಠಾಣೆಯ ಆವರಣದಲ್ಲೇ ಕಣ್ಣೀರಿಟ್ಟ ದೃಶ್ಯ ಎಲ್ಲರಲ್ಲೂ ನೋವುಂಟು ಮಾಡಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES