SOCIAL MEDIA

Newsletter

PARTNER SITES
Select Language Select State

KRS, ಕಬಿನಿ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ರಾಜ್ಯದ ಕೆಲವು ಭಾಗಗಳಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಜಲಾಶಯಗಳ ನೀರಿನ ಮಟ್ಟವೂ ಏರಿಕೆ ಆಗತೊಡಗಿದೆ. ಸೋಮವಾರದ ದಿನ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

Written By Yashaswini V
Published: Sep 21, 2026, 12:09 PM IST | Updated: Sep 21, 2026, 12:28 PM IST
Join

ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟರೂ ಸಹ ಹಿಂಗಾರು ಮಳೆ ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವೂ ಉತ್ತಮಗೊಂಡಿದೆ. ಕೃಷ್ಣ ರಾಜ ಸಾಗರ (ಕೆಆರ್‌ಎಸ್)‌, ಕಬಿನಿ, ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಡ್ಯಾಂಗಳ ಇಂದಿನ ( ಸೆ. 21 ಮಂಗಳವಾರ) ಹರಿವಿನ ಸಂಪೂರ್ಣ ವರದಿ ಇಲ್ಲಿದೆ

ರಾಜ್ಯದಲ್ಲಿ ಈ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಉತ್ತಮ ಪ್ರಮಾಣದಲ್ಲಿ ಆಗಿಲ್ಲ. ಇದರ ಪರಿಣಾಮವಾಗಿ, ರಾಜ್ಯದ ಜಲಾಶಯಗಳ ನೀರಿನ ಸಂಗ್ರಹಣೆಯಲ್ಲೂ ವ್ಯತ್ಯಯ ಕಾಣಬಹುದಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್‌, ಕಬಿನಿ, ಆಲಮಟ್ಟಿ, ನಾರಾಯಣಪುರ ಜಲಾಶಯ, ತುಂಗಭದ್ರಾ, ಹೇಮಾವತಿ, ಬಸವಸಾಗರ ಜಲಾಶಯಗಳಲ್ಲಿ ಇಂದಿನ ಒಳಹರಿವು, ಹೊರಹರಿವು ಎಷ್ಟಿದೆ ಎಂಬ ಪ್ರಮುಖ ಮಾಹಿತಿ ಇಲ್ಲಿದೆ.  

ಕೃಷ್ಣ ರಾಜ ಸಾಗರ - ಕೆಆರ್‌ಎಸ್ (ಮಂಡ್ಯ ಜಿಲ್ಲೆ):
ಕೆ.ಆರ್.ಎಸ್‌ ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 124.8 ಅಡಿಗಳು, ಇಂದಿನ ನೀರಿನ ಮಟ್ಟ 105.66 ಅಡಿಗಳಷ್ಟಿದೆ. ಪ್ರಸ್ತುತ, ಕೆಆರ್‌ಎಸ್‌ ಜಲಾಶಯಕ್ಕೆ ಇಂದಿನ ನೀರಿನ ಒಳಹರಿವು 4,457 ಟಿಎಂಸಿ ಗಳಷ್ಟಿದ್ದು, ಹೊರಹರಿವು 6,634 ಟಿಎಂಸಿ ಆಗಿದೆ.

ಕಬಿನಿ ಜಲಾಶಯ (ಮೈಸೂರು ಜಿಲ್ಲೆ): 
ಕಬಿನಿ ಜಲಾಶಯದ ಸುತ್ತಮುತ್ತಲ ಭಾಗದಲ್ಲಿ 1 ಮಿ.ಮೀ ನಷ್ಟು ಮಳೆ ದಾಖಲಾಗಿದ್ದು ಡ್ಯಾಂಗೆ ಒಳಹರಿವು ಸಾಧಾರಣವಾಗಿದೆ. 
ಕಬಿನಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ: 68.60 ಅಡಿ
ಒಟ್ಟು ಸಾಮರ್ಥ್ಯ: 19.52 ಟಿಎಂಸಿ
ಒಟ್ಟು ಸಂಗ್ರಹ: 11.01 ಟಿಎಂಸಿ
ಒಳಹರಿವು: 991 ಕ್ಯೂಸೆಕ್
ಹೊರಹರಿವು: 900 ಕ್ಯೂಸೆಕ್ ಆಗಿದೆ.

ಆಲಮಟ್ಟಿ ಡ್ಯಾಂ (ವಿಜಯಪುರ ಜಿಲ್ಲೆ):
ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರದ ನಿಡಗುಂದಿ ಬಳಿ ನಿರ್ಮಿಸಲಾಗಿರುವ ಆಲಮಟ್ಟಿ ಡ್ಯಾಂ – ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರವು ಬಹುತೇಕ ಭರ್ತಿ ಆಗಿದೆ.  
* ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ: 519.60 ಮೀಟರ್
* ಇಂದಿನ ನೀರಿನ ಮಟ್ಟ: 519.16 ಮೀಟರ್
* ಒಳಹರಿವು: ಇಲ್ಲ (Nil)
* ಹೊರಹರಿವು: 12,175 ಕ್ಯೂಸೆಕ್

ಹೇಮಾವತಿ ಜಲಾಶಯ (ಹಾಸನ ಜಿಲ್ಲೆ): 
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯವಾಗಿರುವ ಹೇಮಾವತಿ ಡ್ಯಾಂನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಇರುವ ನೀರಿನ ಪ್ರಮಾಣದಲ್ಲಿ ಇಳಿಕೆ ಆಗಿದೆ. 
ಹೇಮಾವತಿ ಜಲಾಶಐವು ಒಟ್ಟು  ಗರಿಷ್ಠ ಮಟ್ಟ: 2922.00 ಅಡಿ ನೀರಿನ ಸಾಮರ್ಥ್ಯವನ್ನು ಹೊಂದಿದ್ದು ಇಲ್ಲಿ ಇಂದಿನ ನೀರಿನ ಮಟ್ಟ: 2893.65 ಅಡಿಗಳಷ್ಟಿದೆ. ಹೇಮಾವತಿ ಡ್ಯಾಂನ ಒಟ್ಟು ಸಾಮರ್ಥ್ಯ: 37.103 ಟಿಎಂಸಿ ಅಷ್ಟಿದ್ದು,  ಪ್ರಸ್ತುತ ನದಿ ಸಂಗ್ರಹ: 16.106 ಟಿಎಂಸಿ  ದಾಖಲಾಗಿದೆ. ಲೈವ್ ಸಾಮರ್ಥ್ಯ: 11.734 ಟಿಎಂಸಿ ಎಂದು ದಾಖಲಿಸಲಾಗಿದೆ.

ತುಂಗಭದ್ರಾ ಜಲಾಶಯ (ವಿಜಯನಗರ / ಹೊಸಪೇಟೆ): 
ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜೀವನಾಡಿ ಎಂತಲೇ ಬಣ್ಣಿಸಲಾಗುವ ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಉತ್ತಮವಾಗಿದೆ.  
* ಗರಿಷ್ಠ ಮಟ್ಟ: 1633.00 ಅಡಿ
* ಇಂದಿನ ನೀರಿನ ಮಟ್ಟ: 1625.889 ಅಡಿ
* ಒಟ್ಟು ಸಾಮರ್ಥ್ಯ: 105.788 TMC
* ಇಂದಿನ ಸಂಗ್ರಹ: 79.430 TMC

ಬಸವಸಾಗರ ಜಲಾಶಯ – ನಾರಾಯಣಪುರ (ಯಾದಗಿರಿ ಜಿಲ್ಲೆ):
ಯಾದಗಿರಿ ಜಿಲ್ಲೆಯ ಜೀವನಾಡಿ ಆಗಿರುವ ಬಸವಸಾಗರ ಡ್ಯಾಂ/ ನಾರಾಯಣಪರ ಜಲಾಶಯಕ್ಕೆ ಕೃಷ್ಣಾ ನದಿಯಿಂದ ಒಳಹರಿವು ಹೆಚ್ಚಾಗಿದೆ.  
* ನಾರಾಯಣಪುರ ಜಲಾಶಯದ ಗರಿಷ್ಠ ಮಟ್ಟ: 492.25 ಮೀಟರ್
* ಇಂದಿನ ನೀರಿನ ಮಟ್ಟ: 490.92 ಮೀಟರ್
* ಒಳಹರಿವು: 12,000 ಕ್ಯೂಸೆಕ್
* ಹೊರಹರಿವು: 13,000 ಕ್ಯೂಸೆಕ್
* ಒಳಹರಿವು: ಇಲ್ಲ (Nil)
* ಸರಾಸರಿ ಹೊರಹರಿವು (ಕಳೆದ 24 ಗಂಟೆ): 12,747 ಕ್ಯೂಸೆಕ್ ಆಗಿದೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES