• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಚುನಾವಣಾ ಆಯೋಗದ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ-ಬಿ.ಕೆ.ಹರಿಪ್ರಸಾದ್

ಚುನಾವಣಾ ಆಯೋಗದ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ-ಬಿ.ಕೆ.ಹರಿಪ್ರಸಾದ್

ಮತದಾರರನ್ನು ಕ್ಷುಲ್ಲಕ ಕಾರಣಕ್ಕಾಗಿ ಮತದಾರದ ಪಟ್ಟಿಯಿಂದಲೇ ರದ್ದು ಮಾಡುವುದು ಕೇವಲ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಶ್ನೆಯಲ್ಲ ಇದೊಂದು ದೇಶದ್ರೋಹಿ ಕೃತ್ಯವೇ ಸರಿ.

Reported ByManjunath NaragundEdited ByManjunath Naragund
Published: Sep 24, 2026, 05:12 PM IST|Updated: Sep 24, 2026, 05:20 PM IST
joinshare
ಚುನಾವಣಾ ಆಯೋಗದ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ-ಬಿ.ಕೆ.ಹರಿಪ್ರಸಾದ್
Image Credit: B K Hariprasad

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಭಾರತದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪಕ್ಷಾತೀತ ಪರಂಪರೆಯ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವಧಿಯಲ್ಲಿ ಈ ಸಾಂವಿಧಾನಿಕ ಸಂಸ್ಥೆಯ ಕಾರ್ಯವೈಖರಿಯೇ ಅದಃಪತನಕ್ಕೆ ಕುಸಿದಿರುವುದು ಮಾತ್ರವಲ್ಲ, ಸ್ವತಃ ಮುಖ್ಯ ಚುನಾವಣಾ ಆಯುಕ್ತರ ಸರ್ವಾಧಿಕಾರಿ ಹಾಗೂ ಪಕ್ಷಪಾತಿತನದ ಕುರಿತು ದಾಖಲೆ ಸಮೇತ ಸಾಬೀತಾಗಿರುವಾಗ ಕೂಡಲೇ ಮುಖ್ಯ ಚುನಾವಣಾ ಆಯುಕ್ತರಿಂದ ಪದಚ್ಯುತಿಗೊಳಿಸಿ, ಅವರನ್ನು ಕಾನೂನಿನಡಿಯಲ್ಲಿ ಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ದೇಶದ ಪ್ರತಿಷ್ಠಿತ ಪತ್ರಿಕೆಯ ತನಿಖಾ ವರದಿಯ ಪ್ರಕಾರ, ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿರುವ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೇ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ, ಗ್ಯಾನೇಶ್ ಕುಮಾರ್ ನಿರ್ಧಾರಗಳ ಹಾಗೂ ಆದೇಶಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ. ಮತದಾರರ ಸೇರ್ಪಡೆ–ತೆಗೆದುಹಾಕುವಿಕೆ, Form-6, ಚುನಾವಣಾ ಪಟ್ಟಿಯ ಡಿಜಿಟಲ್ ವ್ಯವಸ್ಥೆ ಸೇರಿದಂತೆ ಪ್ರಜಾಪ್ರಭುತ್ವದ ಮೂಲವನ್ನೇ ಮುಟ್ಟುವ ವಿಷಯಗಳಲ್ಲಿ ಈ ಆಕ್ಷೇಪಗಳು ದಾಖಲಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಭಾರತದ @ECISVEEP ಚುನಾವಣಾ ಆಯೋಗದ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪಕ್ಷಾತೀತ ಪರಂಪರೆಯ ಮೇಲೆ ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವಧಿಯಲ್ಲಿ ಈ ಸಾಂವಿಧಾನಿಕ ಸಂಸ್ಥೆಯ ಕಾರ್ಯವೈಖರಿಯೇ ಅದಃಪತನಕ್ಕೆ ಕುಸಿದಿರುವುದು ಮಾತ್ರವಲ್ಲ, ಸ್ವತಃ ಮುಖ್ಯ ಚುನಾವಣಾ ಆಯುಕ್ತರ ಸರ್ವಾಧಿಕಾರಿ ಹಾಗೂ ಪಕ್ಷಪಾತಿತನದ ಕುರಿತು ದಾಖಲೆ ಸಮೇತ ಸಾಬೀತಾಗಿರುವಾಗ ಕೂಡಲೇ ಮುಖ್ಯ ಚುನಾವಣಾ ಆಯುಕ್ತರಿಂದ ಪದಚ್ಯುತಿಗೊಳಿಸಿ, ಅವರನ್ನು ಕಾನೂನಿನಡಿಯಲ್ಲಿ ಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತೇನೆ. ದೇಶದ ಪ್ರತಿಷ್ಠಿತ ಪತ್ರಿಕೆಯ ತನಿಖಾ ವರದಿಯ ಪ್ರಕಾರ, ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿರುವ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೇ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ, ಗ್ಯಾನೇಶ್ ಕುಮಾರ್ ನಿರ್ಧಾರಗಳ ಹಾಗೂ ಆದೇಶಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ. ಮತದಾರರ ಸೇರ್ಪಡೆ–ತೆಗೆದುಹಾಕುವಿಕೆ, Form-6, ಚುನಾವಣಾ ಪಟ್ಟಿಯ ಡಿಜಿಟಲ್ ವ್ಯವಸ್ಥೆ ಸೇರಿದಂತೆ ಪ್ರಜಾಪ್ರಭುತ್ವದ ಮೂಲವನ್ನೇ ಮುಟ್ಟುವ ವಿಷಯಗಳಲ್ಲಿ ಈ ಆಕ್ಷೇಪಗಳು ದಾಖಲಾಗಿವೆ. ಎಸ್ ಐ ಆರ್ ಪ್ರಕ್ರಿಯೆಯ Form-6ನಲ್ಲಿ ಮಾಡಲಾದ ಬದಲಾವಣೆಯನ್ನು ಆಯುಕ್ತರೇ “unauthorised and illegal” ಎಂದು ಆಕ್ಷೇಪಿಸಿರುವುದಾಗಿ ವರದಿಯಾಗಿದೆ. ಚುನಾವಣಾ ಆಯೋಗವೆಂದರೆ ಒಬ್ಬ ವ್ಯಕ್ತಿಯ ಕಚೇರಿಯಲ್ಲ; ಅದು ಮೂವರು ಸದಸ್ಯರ ಸಾಂವಿಧಾನಿಕ ಸಂಸ್ಥೆ. ಇಬ್ಬರು ಆಯುಕ್ತರಿಗೇ ಕೆಲವು ನಿರ್ಧಾರಗಳ ಬಗ್ಗೆ ಮಾಹಿತಿ ಇರಲಿಲ್ಲವೆಂದಾದರೆ ಸಂವಿಧಾನ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡವರು ಯಾರು? ಯಾರ ಅನುಮೋದನೆ ಇತ್ತು? ಯಾರ ಸೂಚನೆಯ ಮೇರೆಗೆ ಆಯೋಗದ ಹೆಸರಿನಲ್ಲಿ ಕ್ರಮಗಳು ನಡೆದವು? ಎಂಬುದನ್ನ ದೇಶದ ಜನರ ಎದುರು ಬಹಿರಂಗಪಡಿಸಬೇಕಿದೆ. ಚುನಾವಣಾ ಆಯೋಗ ಯಾವುದೇ ಸರ್ಕಾರದ ಅಧೀನ ಸಂಸ್ಥೆಯೂ ಅಲ್ಲ, ಯಾವುದೇ ರಾಜಕೀಯ ಪಕ್ಷದ ಚುನಾವಣಾ ಏಜೆನ್ಸಿಯೂ ಅಲ್ಲ. ಅದು ಭಾರತದ ಪ್ರತಿಯೊಬ್ಬ ಮತದಾರನ ಮತದ ಹಕ್ಕನ್ನು ರಕ್ಷಿಸಬೇಕಾದ ಸಾಂವಿಧಾನಿಕ ಕಾವಲುಗಾರ. ಮತದಾರರನ್ನು ಕ್ಷುಲ್ಲಕ ಕಾರಣಕ್ಕಾಗಿ ಮತದಾರದ ಪಟ್ಟಿಯಿಂದಲೇ ರದ್ದು ಮಾಡುವುದು ಕೇವಲ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಶ್ನೆಯಲ್ಲ ಇದೊಂದು ದೇಶದ್ರೋಹಿ ಕೃತ್ಯವೇ ಸರಿ. ‘ವೋಟ್ ಚೋರಿ’ ಮೂಲಕ ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದೆಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ದಾಖಲೆಗಳನ್ನು ಮುಂದಿಟ್ಟು ಗಂಭೀರ ಆರೋಪ ಮಾಡಿದ್ದರು. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಚುನಾವಣೆಗಳ ಕುರಿತು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ತಳ್ಳಿಹಾಕಿದ್ದ ಚುನಾವಣಾ ಆಯೋಗ, ಈಗ ತನ್ನದೇ ಇಬ್ಬರು ಆಯುಕ್ತರು ದಾಖಲಿಸಿರುವ ಗಂಭೀರ ಆಕ್ಷೇಪಗಳಿಗೆ ಏನು ಉತ್ತರ ಕೊಡುತ್ತದೆ? ಚುನಾವಣಾ ಆಯೋಗದ ಸ್ವತಂತ್ರತೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರಲ್ಲಿ ಅನುಮಾನ ಮೂಡುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಹಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಗ್ಯಾನೇಶ್ ಕುಮಾರ್ ತೆಗೆದುಕೊಂಡಿರುವ ವಿವಾದಿತ ನಿರ್ಧಾರಗಳ ಬಗ್ಗೆ ಸ್ವತಂತ್ರ ತನಿಖೆಯಾಗಬೇಕಿದೆ. ಸಾಂವಿಧಾನಿಕ ಸಂಸ್ಥೆಯನ್ನು ರಕ್ಷಿಸಲು ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಗ್ಯಾನೇಶ್ ಕುಮಾರ್ ಅವರನ್ನು ಪದಚ್ಯತಿಗೊಳಿಸಿ, ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಮೂಲಕ, ಚುನಾವಣಾ ಆಯೋಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನರ ವಿಶ್ವಾಸವನ್ನು ಮತ್ತೊಮ್ಮೆ ಮರುಸ್ಥಾಪಿಸಬೇಕಿದೆ.

— Hariprasad.B.K. (@HariprasadBK2) September 24, 2026

ಎಸ್ ಐ ಆರ್ ಪ್ರಕ್ರಿಯೆಯ Form-6ನಲ್ಲಿ ಮಾಡಲಾದ ಬದಲಾವಣೆಯನ್ನು ಆಯುಕ್ತರೇ “unauthorised and illegal” ಎಂದು ಆಕ್ಷೇಪಿಸಿರುವುದಾಗಿ ವರದಿಯಾಗಿದೆ. ಚುನಾವಣಾ ಆಯೋಗವೆಂದರೆ ಒಬ್ಬ ವ್ಯಕ್ತಿಯ ಕಚೇರಿಯಲ್ಲ; ಅದು ಮೂವರು ಸದಸ್ಯರ ಸಾಂವಿಧಾನಿಕ ಸಂಸ್ಥೆ. ಇಬ್ಬರು ಆಯುಕ್ತರಿಗೇ ಕೆಲವು ನಿರ್ಧಾರಗಳ ಬಗ್ಗೆ ಮಾಹಿತಿ ಇರಲಿಲ್ಲವೆಂದಾದರೆ ಸಂವಿಧಾನ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡವರು ಯಾರು? ಯಾರ ಅನುಮೋದನೆ ಇತ್ತು? ಯಾರ ಸೂಚನೆಯ ಮೇರೆಗೆ ಆಯೋಗದ ಹೆಸರಿನಲ್ಲಿ ಕ್ರಮಗಳು ನಡೆದವು? ಎಂಬುದನ್ನ ದೇಶದ ಜನರ ಎದುರು ಬಹಿರಂಗಪಡಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಚುನಾವಣಾ ಆಯೋಗ ಯಾವುದೇ ಸರ್ಕಾರದ ಅಧೀನ ಸಂಸ್ಥೆಯೂ ಅಲ್ಲ, ಯಾವುದೇ ರಾಜಕೀಯ ಪಕ್ಷದ ಚುನಾವಣಾ ಏಜೆನ್ಸಿಯೂ ಅಲ್ಲ. ಅದು ಭಾರತದ ಪ್ರತಿಯೊಬ್ಬ ಮತದಾರನ ಮತದ ಹಕ್ಕನ್ನು ರಕ್ಷಿಸಬೇಕಾದ ಸಾಂವಿಧಾನಿಕ ಕಾವಲುಗಾರ. ಮತದಾರರನ್ನು ಕ್ಷುಲ್ಲಕ ಕಾರಣಕ್ಕಾಗಿ ಮತದಾರದ ಪಟ್ಟಿಯಿಂದಲೇ ರದ್ದು ಮಾಡುವುದು ಕೇವಲ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಪ್ರಶ್ನೆಯಲ್ಲ ಇದೊಂದು ದೇಶದ್ರೋಹಿ ಕೃತ್ಯವೇ ಸರಿ.

‘ವೋಟ್ ಚೋರಿ’ ಮೂಲಕ ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದೆಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ದಾಖಲೆಗಳನ್ನು ಮುಂದಿಟ್ಟು ಗಂಭೀರ ಆರೋಪ ಮಾಡಿದ್ದರು.ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಚುನಾವಣೆಗಳ ಕುರಿತು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ತಳ್ಳಿಹಾಕಿದ್ದ ಚುನಾವಣಾ ಆಯೋಗ, ಈಗ ತನ್ನದೇ ಇಬ್ಬರು ಆಯುಕ್ತರು ದಾಖಲಿಸಿರುವ ಗಂಭೀರ ಆಕ್ಷೇಪಗಳಿಗೆ ಏನು ಉತ್ತರ ಕೊಡುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗದ ಸ್ವತಂತ್ರತೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರಲ್ಲಿ ಅನುಮಾನ  ಮೂಡುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಹಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಗ್ಯಾನೇಶ್ ಕುಮಾರ್ ತೆಗೆದುಕೊಂಡಿರುವ ವಿವಾದಿತ ನಿರ್ಧಾರಗಳ ಬಗ್ಗೆ ಸ್ವತಂತ್ರ ತನಿಖೆಯಾಗಬೇಕಿದೆ. ಸಾಂವಿಧಾನಿಕ ಸಂಸ್ಥೆಯನ್ನು ರಕ್ಷಿಸಲು ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಗ್ಯಾನೇಶ್ ಕುಮಾರ್ ಅವರನ್ನು ಪದಚ್ಯತಿಗೊಳಿಸಿ, ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಮೂಲಕ, ಚುನಾವಣಾ ಆಯೋಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನರ ವಿಶ್ವಾಸವನ್ನು ಮತ್ತೊಮ್ಮೆ ಮರುಸ್ಥಾಪಿಸಬೇಕಿದೆ ಎಂದು ಅವರು ಮನವಿ ಆಗ್ರಹಿಸಿದ್ದಾರೆ.

 

Add Zee News as a Preferred Source
TAGS:
Kannada News