• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸ್ವತಃ ಕಾಂಗ್ರೆಸ್‌ಗೆ ಮುಳ್ಳಾದ 'ಕಸ್ತೂರಿ ರಂಗನ್' ವರದಿ: ಮಲೆನಾಡಿಗರ ಭವಿಷ್ಯದ ಮೇಲೆ ತೂಗುಕತ್ತಿ..!

ಸ್ವತಃ ಕಾಂಗ್ರೆಸ್‌ಗೆ ಮುಳ್ಳಾದ 'ಕಸ್ತೂರಿ ರಂಗನ್' ವರದಿ: ಮಲೆನಾಡಿಗರ ಭವಿಷ್ಯದ ಮೇಲೆ ತೂಗುಕತ್ತಿ..!

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಮೂರೂವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.

Reported ByManjunath NaragundEdited ByManjunath Naragund
Published: Sep 20, 2026, 06:10 PM IST|Updated: Sep 20, 2026, 06:25 PM IST
joinshare
ಸ್ವತಃ ಕಾಂಗ್ರೆಸ್‌ಗೆ ಮುಳ್ಳಾದ 'ಕಸ್ತೂರಿ ರಂಗನ್' ವರದಿ: ಮಲೆನಾಡಿಗರ ಭವಿಷ್ಯದ ಮೇಲೆ ತೂಗುಕತ್ತಿ..!
Image Credit: Western Ghats

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನಾಳೆಯಿಂದ ವಿಧಾನಸೌಧದಲ್ಲಿ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗುತ್ತಿದೆ. ಸರ್ಕಾರ ಬರ ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಲು ಈ ಸಭೆ ಕರೆದಿದೆ. ಆದರೆ, ಯಾವುದೇ ಪರಿಹಾರ ನೀಡದೆ ಬರದ ಚರ್ಚೆಗೆ ಮುಂದಾಗಿರೋ ಸರ್ಕಾರದ ನಡೆಯೇನು? ಕಸ್ತೂರಿ ರಂಗನ್ ವರದಿ ಮೂಲತಃ ಯಾರದ್ದು? ಅದರಿಂದ ಮಲೆನಾಡಿಗೆ ಆಗೋ ಪರಿಣಾಮವೇನು? ನಾಳಿನ ಅಧಿವೇಶನದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಲಿದೆ.

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಮೂರೂವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಆದರೆ, ಸರ್ಕಾರ ರೈತರಿಗೆ ನೀಡಬೇಕಾದ ಬರ ಪರಿಹಾರ ಬಿಡುಗಡೆ ಮಾಡದೆ ಕೇವಲ ಘೋಷಣೆಗಳನ್ನು ಮಾಡಲು ಸೀಮಿತವಾಗಿದೆ ಎಂಬುದು ವಿಪಕ್ಷಗಳ ನೇರ ಆರೋಪ. ಬರದ ಬಗ್ಗೆ ಕೇವಲ ಚರ್ಚೆ ಮಾಡಿದರೆ ಸಾಲದು, ತಕ್ಷಣವೇ ಪ್ರತಿ ತಾಲೂಕಿನಲ್ಲೂ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಹಣ ಬಿಡುಗಡೆ ಮಾಡಬೇಕು ಎಂದು ವಿಪಕ್ಷ ನಾಯಕರು ಪಟ್ಟು ಹಿಡಿದಿದ್ದಾರೆ. ಅದರ ಜೊತೆಗೆ, ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರ ಮಾಡಿರುವ ಸಾಲ ಎಷ್ಟು ಮತ್ತು ಆರ್ಥಿಕ ಸ್ಥಿತಿ ಎಲ್ಲಿದೆ ಎಂಬುದರ ಬಗ್ಗೆ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇನ್ನು ಸರ್ಕಾರ ಚರ್ಚೆಗೆ ಎತ್ತಿಕೊಂಡಿರುವ ಕಸ್ತೂರಿ ರಂಗನ್ ವರದಿಯ ಇತಿಹಾಸವನ್ನು ಗಮನಿಸಿದರೆ ಸರ್ಕಾರಕ್ಕೆ ಬಿಸಿ ತುಪ್ಪ ಆಗುವಂತಿದೆ.  2010ರಲ್ಲಿ ಕೇಂದ್ರದಲ್ಲಿದ್ದ ಯುಪಿಎ ಅಂದರೆ ಕಾಂಗ್ರೆಸ್ ಸರ್ಕಾರವೇ ಪಶ್ಚಿಮ ಘಟ್ಟಗಳ ರಕ್ಷಣೆಗೆ ಗಾಡ್ಗಿಲ್ ಸಮಿತಿಯನ್ನು ರಚಿಸಿತ್ತು. ಗಾಡ್ಗಿಲ್ ವರದಿ ತೀವ್ರ ಕಠಿಣವಾಗಿದ್ದ ಕಾರಣ, 2013ರಲ್ಲಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ಮಾಡಿ ವರದಿ ಪಡೆಯಲಾಯಿತು. ಯುಪಿಎ ಸರ್ಕಾರವೇ ಈ ವರದಿಯನ್ನು ಸ್ವೀಕರಿಸಿತ್ತು. ಈ ವರದಿ ಸಂಪೂರ್ಣವಾಗಿ ಜಾರಿಯಾದರೆ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಶೇಕಡಾ 37ರಷ್ಟು ಭಾಗ ಪರಿಸರ ಸೂಕ್ಷ್ಮ ವಲಯವಾಗಲಿದೆ. ಪರಿಣಾಮವಾಗಿ, ಅಲ್ಲಿನ ಜನ ಮನೆ ಕಟ್ಟಿಕೊಳ್ಳಲು, ವ್ಯವಸಾಯ ಮಾಡಲು ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎನ್ನುವುದು ವಿಪಕ್ಷದ ಆರೋಪ

ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಈ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ, ಈಗ ಅದೇ ಕಾಂಗ್ರೆಸ್ ಸರ್ಕಾರ ಈ ವರದಿ ಬಗ್ಗೆ ಚರ್ಚೆ ಮಾಡಲು ಮುಂದಾಗಿದೆ. ತಾವೇ ತಂದ ವರದಿಯನ್ನು ಈಗ ವಿರೋಧಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದಡ. ಕೇಂ ದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಸರ್ವಪಕ್ಷ ನಿಯೋಗದ ತಂತ್ರ ಹೆಣೆದಿದೆ ಎಂಬುದು ವಿಪಕ್ಷಗಳ ಆರೋಪ. ಕೆಪಿಎಸ್‌ಸಿ ಹಗರಣ, ನೈಸ್ ಯೋಜನೆ ಮತ್ತು ಸರ್ಕಾರದ ಹಣಕಾಸಿನ ಬಿಕ್ಕಟ್ಟನ್ನು ಮರೆಮಾಚಲು, ಹಾಗೂ ತಾವು ರೈತರ ಪರ ಎಂದು ತೋರಿಸಿಕೊಳ್ಳಲು ಸರ್ಕಾರ ಈ ವಿಶೇಷ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ ಬಿಜೆಪಿ ಆಕ್ರೋಶಗೊಂಡಿದೆ.

ತಾವೇ ತಂದ ಕಸ್ತೂರಿ ರಂಗನ್ ವರದಿಯನ್ನು ಮುಂದಿಟ್ಟುಕೊಂಡು ಕೇಂದ್ರದ ಕಡೆ ಬೆರಳು ತೋರಿಸಲು ಆಡಳಿತ ಪಕ್ಷ ಯತ್ನಿಸುತ್ತಿದ್ದರೆ,ಬರದ ಪರಿಹಾರ ಬಿಡುಗಡೆ ಮಾಡದೆ ಇರೋ ಸರ್ಕಾರದ ದಿವಾಳಿತನವನ್ನು ಬಯಲು ಮಾಡಲು ವಿಪಕ್ಷಗಳು ಸಜ್ಜಾಗಿವೆ.

 

Add Zee News as a Preferred Source