• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮುದ್ರಣ ಕ್ರಾಂತಿಯ ಅಪ್ರತಿಮ ನಾಯಕಿ ಗದುಗಿನ ತಾರಾಬಾಯಿ ವಾಜಪೇಯಿ

ಮುದ್ರಣ ಕ್ರಾಂತಿಯ ಅಪ್ರತಿಮ ನಾಯಕಿ ಗದುಗಿನ ತಾರಾಬಾಯಿ ವಾಜಪೇಯಿ

ಅದು 1920 ರ ಕಾಲಘಟ್ಟ… ಗದಗ ನಗರವು ಆಗ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು. ನಾಗಪುರ ಕಾಂಗ್ರೆಸ್ ಅಧಿವೇಶನದ ಮೂಲಕ ಭಾಷಾ ಆಧಾರದ ಮೇಲೆ ಪ್ರದೇಶದ ಕಾಂಗ್ರೆಸ್ ಸಮಿತಿಯನ್ನು ರಚನೆ ಮಾಡಬೇಕು ಎನ್ನುವ ಬೇಡಿಕೆಯ ಪ್ರತಿಫಲವಾಗಿ ಆಗ ಗದಗ ನಗರ ಅಂದು ಕೆಪಿಸಿಸಿಯ ರಾಜ್ಯ ಘಟಕದ ಮುಖ್ಯ ಕೇಂದ್ರ ಕಚೇರಿಯಾಗಿತ್ತು.ಈಗಿನ ಗದಗ-ಬೆಟಗೇರಿ ನಗರಸಭೆ ಎದುರುಗಡೆ ಅಂದಿನ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಆರ್.ಎ.ಜಾಗಿರ್ದಾರ್ ಅವರಿಗೆ ಸೇರಿದ (ಇಂದಿನ ಫತೇಪೂರ್ ಅವರ ಮನೆ) ಮನೆಯೇ ಇದರ ಕೇಂದ್ರವಾಗಿತ್ತು.ಇದರ ಭಾಗವಾಗಿ ಗದುಗಿಗೆ ಆಗಾಗ ರಾಷ್ಟ್ರೀಯ ನಾಯಕರುಗಳು ಭೇಟಿ ನೀಡುತ್ತಿದ್ದರು. ಮಹಾತ್ಮಾ ಗಾಂಧಿ, ಬಾಲ್ ಗಂಗಾಧರ್ ತಿಲಕ್, ಶೌಕತ್ ಅಲಿ, ವಿಠಲ್ ಬಾಯಿ ಪಟೇಲ್, ಸಿ.ರಾಜಗೋಪಾಲಚಾರಿ, ಜವಾಹರ್ ಲಾಲ್ ನೆಹರೂರಂತಹ ಘಟಾನುಘಟಿ ನಾಯಕರುಗಳು ಪಂಚರ ಹೊಂಡ (ಈಗಿನ ಟಿಳಕ್ ಪಾರ್ಕ್ ಪ್ರದೇಶ) ಬಯಲು ಪ್ರದೇಶದಲ್ಲಿ ಸ್ವಾತಂತ್ರ ಹೋರಾಟದ ಕಹಳೆಯನ್ನು ಊದುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಗಲೇ ಗದುಗಿನಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಮುದ್ರಣ ಉದ್ಯಮವು ಕೂಡ ಸ್ವಾತಂತ್ರ್ಯ ಹೋರಾಟದಿಂದ ಪ್ರೇರಣೆಯನ್ನು ಪಡೆದಿತ್ತು.ಹೊಂಬಾಳಿ ಮುದ್ರಣದ ಪ್ರವರ್ತಕರಾದ ಶ್ರೀನಿವಾಸಾಚಾರ್ಯ ಹೊಂಬಾಳಿ, ಕರ್ನಾಟಕ ಬಂಧು ಪ್ರಿಂಟಿಂಗ್ ಪ್ರೆಸ್ ನ ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ರಸಿಕ ರಂಜನಿ ಪ್ರಿಂಟಿಂಗ್ ಪ್ರೆಸ್ ನ ತಾರಾಬಾಯಿ ವಾಜಪೇಯಿ ಅವರು ಮುದ್ರಣ ಉದ್ಯಮವನ್ನು ಸ್ವಾತಂತ್ರ್ಯ ಚಳುವಳಿಯ ಆಯುಧವಾಗಿ ಬಳಸಿಕೊಂಡಿದ್ದರು.ಇಂತಹ ಮಹಾನ್ ವ್ಯಕ್ತಿಗಳ ನಡುವೆ ತಾರಾಬಾಯಿ ವಾಜಪೇಯಿ ಅವರ ಸಾರ್ವಜನಿಕ ಬದುಕು ಎಲ್ಲರಿಗಿಂತ ವಿಶಿಷ್ಟವಾಗಿ ಕಾಣುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಹೋರಾಟಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ವಿರಳವಾಗಿದ್ದ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧೀಜಿಯವರಿಂದ ಪ್ರೇರಿತರಾಗಿದ್ದ ತಾರಾಬಾಯಿ ವಾಜಪೇಯಿ ಅವರು ತಮ್ಮ ಮುದ್ರಣ ಉದ್ಯಮದ ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ನಂತರ ಅವರು ಗದಗ-ಬೆಟಗೇರಿ ನಗರಗಳಲ್ಲಿ ಮಹಿಳೆಯರಿಗೂ ಕೂಡ ಚಳವಳಿಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದರು. ಅದರಲ್ಲೂ ಪ್ರಮುಖವಾಗಿ ಸ್ವದೇಶಿ ಉತ್ಪನ್ನಗಳಿಗೆ ಪ್ರಾಶಸ್ತ್ಯ ನೀಡುವುದು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು, ಸಾರಾಯಿ-ಸೇಂದಿಯನ್ನು ನಿಷೇಧಿಸುವುದು, ಹರಿಜನರ ಕಾಲೋನಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಖಾದಿ ನೂಲುವುದು ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಅವರು ಪಾಲ್ಗೊಳ್ಳುತ್ತಿದ್ದರು. ಅಷ್ಟಕ್ಕೂ ತಾರಾಬಾಯಿ ಅವರು ಕರ್ನಾಟಕದವರಲ್ಲ, ಅವರು ದೂರದ ವಾರಣಾಸಿಯಿಂದ ಗದುಗಿಗೆ ವಲಸೆ ಬಂದಂತವರು. ಇವರ ಮಾವನವರಾದ ಗೌರಿಶಂಕರ್ ಮಿಶ್ರಾ ಅವರು ಉತ್ತರಪ್ರದೇಶದ ಕಾನ್ಪುರ ಮೂಲದವರು. ಒಂದರ್ಥದಲ್ಲಿ ಗದುಗಿನಲ್ಲಿ ಮುದ್ರಣ ಮತ್ತು ಪತ್ರಿಕಾ ಉದ್ಯಮದ ಆರಂಭಕ್ಕೆ ಆಡಿಪಾಯ ಹಾಕಿದವರೇ ಗೌರಿಶಂಕರ್ ಮಿಶ್ರಾರವರು ಎನ್ನಬಹುದು. ಇವರ ದತ್ತು ಮೊಮ್ಮಗನಾಗಿದ್ದ ಗುರುಪ್ರಸಾದ್ ಎನ್ನುವವರ ಜೊತೆ ಆರೇಳು ವರ್ಷದ ಬಾಲಕಿಯಾಗಿದ್ದ ತಾರಾಬಾಯಿ ಅವರ ವಿವಾಹವಾಗುತ್ತದೆ. ಆಗ ಅವರು ಗದುಗಿಗೆ ವಲಸೆ ಬರುತ್ತಾರೆ. ಆದರೆ ದುರ್ದೈವ ಎನ್ನುವಂತೆ ಗುರುಪ್ರಸಾದ್ ಅವರು ಸಿಡುಬು ರೋಗಕ್ಕೆ ಬಲಿಯಾಗುತ್ತಾರೆ. ಇದರಿಂದ ಇನ್ನೂ ಪುಟ್ಟ ಬಾಲಕಿಯಾಗಿದ್ದಾಗಲೇ ತಾರಾಬಾಯಿ ಅವರು ವಿಧವೆಯಾಗುತ್ತಾರೆ.ಗದುಗಿನಲ್ಲಿ ಆಗಿನ್ನೂ ರೈಲು ಸಂಪರ್ಕವಿರಲಿಲ್ಲ. ದಕ್ಷಿಣ ಮರಾಠ ರೈಲ್ವೆ ವಿಭಾಗ ಮೂಲಕ ಇಲ್ಲಿ ಮೀಟರ್ ಗೇಜ್ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ರೈಲ್ವೆ ಗುತ್ತಿಗೆದಾರರಾಗಿ ದೂರದ ಕಾನ್ಪುರದಿಂದ ಗದುಗಿಗೆ ಆಗಮಿಸಿದ್ದ ಗೌರಿಶಂಕರ್ ಮಿಶ್ರಾ (ಮೈಸೂರಿನ ಟೌನ್ ಪ್ರೆಸ್ ನ ಹರಿರಾಮ ಮಿಶ್ರಾ, ಧಾರವಾಡದ ದುರ್ಗಾಪ್ರಸಾದ್ ಮಿಶ್ರಾ ಒಂದೇ ಮನೆತನದವರು ಎನ್ನುವುದರ ಬಗ್ಗೆ ಡಾ.ಶ್ರೀನಿವಾಸ್ ಹಾವನೂರು ಉಲ್ಲೇಖಿಸಿದ್ದಾರೆ) ಅವರು ಸ್ಥಳೀಯವಾಗಿ ನಗರಸಭೆಯಲ್ಲಿನ ಭ್ರಷ್ಟಾಚಾರವನ್ನು ಹೊರಗೆಳೆಯಲು 1884ರಲ್ಲಿ ಸ್ಥಳೀಯರಾಗಿದ್ದ ಉಮಚಗಿ ಶೀನಪ್ಪನವರ ಜೊತೆ ಸೇರಿ ರಸಿಕ ರಂಜನಿ ಕಲ್ಲಚು (Printing Through Lithographic process) ಮುದ್ರಣವನ್ನು ಮತ್ತು ಅದೇ ಹೆಸರಿನಲ್ಲಿ ವಾರಪತ್ರಿಕೆಯನ್ನು ಸಹ ಆರಂಭಿಸುತ್ತಾರೆ. ಮುಂದೆ ತಾರಾಬಾಯಿ ವಾಜಪೇಯಿ ಅವರು ಇದೆ ಮುದ್ರಣವನ್ನು ಮತ್ತು ವಾರಪತ್ರಿಕೆಯನ್ನು 22 ವರ್ಷಗಳ ಕಾಲ ನಡೆಸುತ್ತಾರೆ.ಸಣ್ಣ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡಿದ್ದರಿಂದ ತಾರಾಬಾಯಿ ಅವರು ಜೀವನದ ಕೊನೆಗಾಲದವರೆಗೂ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ. ವಿಧವೆಯಾಗಿ ಏಕಾಂಗಿ ಜೀವನ ಕಳೆಯುತ್ತಿದ್ದ ಅವರಿಗೆ ಕುಟುಂಬದಿಂದಲೂ ಅಷ್ಟೊಂದು ಬೆಂಬಲವಿರಲಿಲ್ಲ. ಆಗ ತಮ್ಮ ಮನೆಯ ಹತ್ತಿರದಲ್ಲೇ ಇದ್ದ ಪಂಚರ ಹೊಂಡದ ವೇದಿಕೆಗಳಲ್ಲಿ ಕೇಳಿ ಬರುತ್ತಿದ್ದ ರಾಷ್ಟ್ರೀಯ ನಾಯಕರ ಭಾಷಣಗಳು ತಾರಾಬಾಯಿ ಅವರನ್ನು ಸಾರ್ವಜನಿಕ ಬದುಕಿಗೆ ಸಮರ್ಪಿಸಿಕೊಳ್ಳುವಲ್ಲಿ ಪ್ರೇರೇಪಿಸಿದವು ಎನ್ನಬಹುದು. ಮುಂದೆ ಖಾಸಗಿ ಶಿಕ್ಷಕರ ಬಳಿ ಕನ್ನಡ ಅಕ್ಷರ ಜ್ಞಾನವನ್ನು ಪಡೆದುಕೊಂಡ ನಂತರ ಅವರು 1922-47ರವರೆಗೆ ಮುದ್ರಣವನ್ನು ಮತ್ತು ಪತ್ರಿಕೆಯನ್ನು ನಡೆಸಿದರು. ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಸಕ್ರೀಯರಾಗಿದ್ದರಿಂದ ಅವರ ರಸಿಕ ರಂಜನಿ ಮುದ್ರಣವನ್ನು ಜಪ್ತಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಅವರು 1 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇದ್ಯಾವುದಕ್ಕೂ ತಾರಾಬಾಯಿ ಮಾತ್ರ ಜಗ್ಗಲಿಲ್ಲ. ಕೊನೆಗೆ ಪ್ರಿಂಟಿಂಗ್ ಪ್ರೆಸ್ ಮತ್ತು ವಾರಪತ್ರಿಕೆಯನ್ನು ಒಬ್ಬರೇ ನಡೆಸುವುದು ಕಷ್ಟವಾದಾಗ ಅವರು ಪ್ರಿಂಟಿಂಗ್ ಪ್ರೆಸ್ ನ್ನು ಮಾರುತ್ತಾರೆ. ಸಾರ್ವಜನಿಕ ಸೇವೆಯಲ್ಲಿ ಸಕ್ರೀಯರಾಗಿದ್ದರಿಂದ ತಾರಾಬಾಯಿ ಅವರು ಗದಗ-ಬೆಟಗೇರಿ ನಗರಸಭೆಯಲ್ಲಿ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಅಪ್ಪಟ ಗಾಂಧಿವಾದಿಯಾಗಿದ್ದ ತಾರಾಬಾಯಿ ಅವರು ಜೀವನದ ಕೊನೆಯುದ್ದಕ್ಕೂ ಹೋರಾಟದ ಜೀವನವನ್ನೇ ಸವೆಸಿದರು ಎನ್ನಬಹುದು.ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರು ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ದುರ್ಲಭವಾಗಿದ್ದ ಕಾಲಘಟ್ಟದಲ್ಲಿ ರಸಿಕ ರಂಜಿನಿ ಪ್ರಿಂಟಿಂಗ್ ಪ್ರೆಸ್ ಮತ್ತು ವಾರಪತ್ರಿಕೆಯನ್ನು ಸತತ 22 ವರ್ಷಗಳ ಕಾಲ ಯಶಸ್ವಿಯಾಗಿ ತಾರಾಬಾಯಿಯವರು ನಡೆಸಿದರು. ವಿಶೇಷವೆಂದರೆ ಆಗ ಮುದ್ರಣ ಮತ್ತು ಪ್ರಕಾಶನ ಉದ್ಯಮದಲ್ಲಿ ತೊಡಗಿಸಿಕೊಂಡ ರಾಜ್ಯದ ಕೆಲವೇ ಮಹಿಳೆಯರಲ್ಲಿ ತಾರಾಬಾಯಿ ವಾಜಪೇಯಿ ಅವರು ಅಗ್ರಮಾನ್ಯರು ಎಂದು ಹೇಳಬಹುದು. ಆದರೆ ದುರಾದೃಷ್ಟವಶಾತ್ ಇಂತಹ ಮಹಿಳೆಯ ಇತಿಹಾಸದ ದಾಖಲೀಕರಣವನ್ನು ಮುದ್ರಣ ಮತ್ತು ಪತ್ರಿಕಾ ಮಾಧ್ಯಮದ ಇತಿಹಾಸದಲ್ಲಿ ಅಷ್ಟಾಗಿ ದಾಖಲಿಸದಿರುವುದು ನಿಜಕ್ಕೂ ದುರಂತದ ಸಂಗತಿ.ಗದುಗಿನ ಮುದ್ರಣದ ಇತಿಹಾಸದ ಜಾಡನ್ನು ಹಿಡಿದು ಹೊರಟರೆ 'ಹೆಕ್ಕಿದಷ್ಟು ಹರವು' ಎನ್ನುವಂತೆ ತಾರಾಬಾಯಿ ವಾಜಪೇಯಿ ಅವರಂತಹ ಹಲವು ಅಚ್ಚರಿಯ ಕಥನಗಳು ರಾಜ್ಯದ ಮುದ್ರಣ ಕಾಶಿಯಲ್ಲಿ ಸಿಗಲಿವೆ. -ಮಂಜುನಾಥ ನರಗುಂದ

Reported ByManjunath NaragundEdited ByManjunath Naragund
Published: Sep 12, 2026, 02:50 PM IST|Updated: Sep 17, 2026, 04:07 PM IST
joinshare
ಮುದ್ರಣ ಕ್ರಾಂತಿಯ ಅಪ್ರತಿಮ ನಾಯಕಿ ಗದುಗಿನ ತಾರಾಬಾಯಿ ವಾಜಪೇಯಿ
Image Credit: Tarabai Vajpayee

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಅದು 1920 ರ ಕಾಲಘಟ್ಟ… ಗದಗ ನಗರವು ಆಗ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು. ನಾಗಪುರ ಕಾಂಗ್ರೆಸ್ ಅಧಿವೇಶನದ ಮೂಲಕ ಭಾಷಾ ಆಧಾರದ ಮೇಲೆ ಪ್ರದೇಶದ ಕಾಂಗ್ರೆಸ್ ಸಮಿತಿಯನ್ನು ರಚನೆ ಮಾಡಬೇಕು ಎನ್ನುವ ಬೇಡಿಕೆಯ ಪ್ರತಿಫಲವಾಗಿ ಆಗ ಗದಗ ನಗರ ಅಂದು ಕೆಪಿಸಿಸಿಯ ರಾಜ್ಯ ಘಟಕದ ಮುಖ್ಯ ಕೇಂದ್ರ ಕಚೇರಿಯಾಗಿತ್ತು.

ಈಗಿನ ಗದಗ-ಬೆಟಗೇರಿ ನಗರಸಭೆ ಎದುರುಗಡೆ ಅಂದಿನ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಆರ್.ಎ.ಜಾಗಿರ್ದಾರ್ ಅವರಿಗೆ ಸೇರಿದ (ಇಂದಿನ ಫತೇಪೂರ್ ಅವರ ಮನೆ) ಮನೆಯೇ ಇದರ ಕೇಂದ್ರವಾಗಿತ್ತು.ಇದರ ಭಾಗವಾಗಿ ಗದುಗಿಗೆ ಆಗಾಗ ರಾಷ್ಟ್ರೀಯ ನಾಯಕರುಗಳು ಭೇಟಿ ನೀಡುತ್ತಿದ್ದರು. ಮಹಾತ್ಮಾ ಗಾಂಧಿ, ಬಾಲ್ ಗಂಗಾಧರ್ ತಿಲಕ್, ಶೌಕತ್ ಅಲಿ, ವಿಠಲ್ ಬಾಯಿ ಪಟೇಲ್, ಸಿ.ರಾಜಗೋಪಾಲಚಾರಿ, ಜವಾಹರ್ ಲಾಲ್ ನೆಹರೂರಂತಹ ಘಟಾನುಘಟಿ ನಾಯಕರುಗಳು ಪಂಚರ ಹೊಂಡ (ಈಗಿನ ಟಿಳಕ್ ಪಾರ್ಕ್ ಪ್ರದೇಶ) ಬಯಲು ಪ್ರದೇಶದಲ್ಲಿ ಸ್ವಾತಂತ್ರ ಹೋರಾಟದ ಕಹಳೆಯನ್ನು ಊದುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಗಲೇ ಗದುಗಿನಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಮುದ್ರಣ ಉದ್ಯಮವು ಕೂಡ ಸ್ವಾತಂತ್ರ್ಯ ಹೋರಾಟದಿಂದ ಪ್ರೇರಣೆಯನ್ನು ಪಡೆದಿತ್ತು.ಹೊಂಬಾಳಿ ಮುದ್ರಣದ ಪ್ರವರ್ತಕರಾದ ಶ್ರೀನಿವಾಸಾಚಾರ್ಯ ಹೊಂಬಾಳಿ, ಕರ್ನಾಟಕ ಬಂಧು ಪ್ರಿಂಟಿಂಗ್ ಪ್ರೆಸ್ ನ ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ರಸಿಕ ರಂಜನಿ ಪ್ರಿಂಟಿಂಗ್ ಪ್ರೆಸ್ ನ ತಾರಾಬಾಯಿ ವಾಜಪೇಯಿ ಅವರು ಮುದ್ರಣ ಉದ್ಯಮವನ್ನು ಸ್ವಾತಂತ್ರ್ಯ ಚಳುವಳಿಯ ಆಯುಧವಾಗಿ ಬಳಸಿಕೊಂಡಿದ್ದರು.

ಇಂತಹ ಮಹಾನ್ ವ್ಯಕ್ತಿಗಳ ನಡುವೆ ತಾರಾಬಾಯಿ ವಾಜಪೇಯಿ ಅವರ ಸಾರ್ವಜನಿಕ ಬದುಕು ಎಲ್ಲರಿಗಿಂತ ವಿಶಿಷ್ಟವಾಗಿ ಕಾಣುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಹೋರಾಟಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ವಿರಳವಾಗಿದ್ದ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧೀಜಿಯವರಿಂದ ಪ್ರೇರಿತರಾಗಿದ್ದ ತಾರಾಬಾಯಿ ವಾಜಪೇಯಿ ಅವರು ತಮ್ಮ ಮುದ್ರಣ ಉದ್ಯಮದ ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ನಂತರ ಅವರು ಗದಗ-ಬೆಟಗೇರಿ ನಗರಗಳಲ್ಲಿ ಮಹಿಳೆಯರಿಗೂ ಕೂಡ ಚಳವಳಿಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದರು. ಅದರಲ್ಲೂ ಪ್ರಮುಖವಾಗಿ ಸ್ವದೇಶಿ ಉತ್ಪನ್ನಗಳಿಗೆ ಪ್ರಾಶಸ್ತ್ಯ ನೀಡುವುದು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು, ಸಾರಾಯಿ-ಸೇಂದಿಯನ್ನು ನಿಷೇಧಿಸುವುದು, ಹರಿಜನರ ಕಾಲೋನಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಖಾದಿ ನೂಲುವುದು ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಅವರು ಪಾಲ್ಗೊಳ್ಳುತ್ತಿದ್ದರು. ಅಷ್ಟಕ್ಕೂ ತಾರಾಬಾಯಿ ಅವರು ಕರ್ನಾಟಕದವರಲ್ಲ, ಅವರು ದೂರದ ವಾರಣಾಸಿಯಿಂದ ಗದುಗಿಗೆ ವಲಸೆ ಬಂದಂತವರು. ಇವರ ಮಾವನವರಾದ ಗೌರಿಶಂಕರ್ ಮಿಶ್ರಾ ಅವರು ಉತ್ತರಪ್ರದೇಶದ ಕಾನ್ಪುರ ಮೂಲದವರು. ಒಂದರ್ಥದಲ್ಲಿ ಗದುಗಿನಲ್ಲಿ ಮುದ್ರಣ ಮತ್ತು ಪತ್ರಿಕಾ ಉದ್ಯಮದ ಆರಂಭಕ್ಕೆ ಆಡಿಪಾಯ ಹಾಕಿದವರೇ ಗೌರಿಶಂಕರ್ ಮಿಶ್ರಾರವರು ಎನ್ನಬಹುದು. ಇವರ ದತ್ತು ಮೊಮ್ಮಗನಾಗಿದ್ದ ಗುರುಪ್ರಸಾದ್ ಎನ್ನುವವರ ಜೊತೆ ಆರೇಳು ವರ್ಷದ ಬಾಲಕಿಯಾಗಿದ್ದ ತಾರಾಬಾಯಿ ಅವರ ವಿವಾಹವಾಗುತ್ತದೆ. ಆಗ ಅವರು ಗದುಗಿಗೆ ವಲಸೆ ಬರುತ್ತಾರೆ. ಆದರೆ ದುರ್ದೈವ ಎನ್ನುವಂತೆ ಗುರುಪ್ರಸಾದ್ ಅವರು ಸಿಡುಬು ರೋಗಕ್ಕೆ ಬಲಿಯಾಗುತ್ತಾರೆ. ಇದರಿಂದ ಇನ್ನೂ ಪುಟ್ಟ ಬಾಲಕಿಯಾಗಿದ್ದಾಗಲೇ ತಾರಾಬಾಯಿ ಅವರು ವಿಧವೆಯಾಗುತ್ತಾರೆ.

ಗದುಗಿನಲ್ಲಿ ಆಗಿನ್ನೂ ರೈಲು ಸಂಪರ್ಕವಿರಲಿಲ್ಲ. ದಕ್ಷಿಣ ಮರಾಠ ರೈಲ್ವೆ ವಿಭಾಗ ಮೂಲಕ ಇಲ್ಲಿ ಮೀಟರ್ ಗೇಜ್ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ರೈಲ್ವೆ ಗುತ್ತಿಗೆದಾರರಾಗಿ ದೂರದ ಕಾನ್ಪುರದಿಂದ ಗದುಗಿಗೆ ಆಗಮಿಸಿದ್ದ ಗೌರಿಶಂಕರ್ ಮಿಶ್ರಾ (ಮೈಸೂರಿನ ಟೌನ್ ಪ್ರೆಸ್ ನ ಹರಿರಾಮ ಮಿಶ್ರಾ, ಧಾರವಾಡದ ದುರ್ಗಾಪ್ರಸಾದ್ ಮಿಶ್ರಾ ಒಂದೇ ಮನೆತನದವರು ಎನ್ನುವುದರ ಬಗ್ಗೆ ಡಾ.ಶ್ರೀನಿವಾಸ್ ಹಾವನೂರು ಉಲ್ಲೇಖಿಸಿದ್ದಾರೆ) ಅವರು ಸ್ಥಳೀಯವಾಗಿ ನಗರಸಭೆಯಲ್ಲಿನ ಭ್ರಷ್ಟಾಚಾರವನ್ನು ಹೊರಗೆಳೆಯಲು 1884ರಲ್ಲಿ ಸ್ಥಳೀಯರಾಗಿದ್ದ ಉಮಚಗಿ ಶೀನಪ್ಪನವರ ಜೊತೆ ಸೇರಿ ರಸಿಕ ರಂಜನಿ ಕಲ್ಲಚು (Printing Through Lithographic process) ಮುದ್ರಣವನ್ನು ಮತ್ತು ಅದೇ ಹೆಸರಿನಲ್ಲಿ ವಾರಪತ್ರಿಕೆಯನ್ನು ಸಹ ಆರಂಭಿಸುತ್ತಾರೆ. ಮುಂದೆ ತಾರಾಬಾಯಿ ವಾಜಪೇಯಿ ಅವರು ಇದೆ ಮುದ್ರಣವನ್ನು ಮತ್ತು ವಾರಪತ್ರಿಕೆಯನ್ನು 22 ವರ್ಷಗಳ ಕಾಲ ನಡೆಸುತ್ತಾರೆ.

ಸಣ್ಣ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡಿದ್ದರಿಂದ ತಾರಾಬಾಯಿ ಅವರು ಜೀವನದ ಕೊನೆಗಾಲದವರೆಗೂ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ. ವಿಧವೆಯಾಗಿ ಏಕಾಂಗಿ ಜೀವನ ಕಳೆಯುತ್ತಿದ್ದ ಅವರಿಗೆ ಕುಟುಂಬದಿಂದಲೂ ಅಷ್ಟೊಂದು ಬೆಂಬಲವಿರಲಿಲ್ಲ. ಆಗ ತಮ್ಮ ಮನೆಯ ಹತ್ತಿರದಲ್ಲೇ ಇದ್ದ ಪಂಚರ ಹೊಂಡದ ವೇದಿಕೆಗಳಲ್ಲಿ ಕೇಳಿ ಬರುತ್ತಿದ್ದ ರಾಷ್ಟ್ರೀಯ ನಾಯಕರ ಭಾಷಣಗಳು ತಾರಾಬಾಯಿ ಅವರನ್ನು ಸಾರ್ವಜನಿಕ ಬದುಕಿಗೆ ಸಮರ್ಪಿಸಿಕೊಳ್ಳುವಲ್ಲಿ ಪ್ರೇರೇಪಿಸಿದವು ಎನ್ನಬಹುದು. ಮುಂದೆ ಖಾಸಗಿ ಶಿಕ್ಷಕರ ಬಳಿ ಕನ್ನಡ ಅಕ್ಷರ ಜ್ಞಾನವನ್ನು ಪಡೆದುಕೊಂಡ ನಂತರ ಅವರು 1922-47ರವರೆಗೆ ಮುದ್ರಣವನ್ನು ಮತ್ತು ಪತ್ರಿಕೆಯನ್ನು ನಡೆಸಿದರು. ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಸಕ್ರೀಯರಾಗಿದ್ದರಿಂದ ಅವರ ರಸಿಕ ರಂಜನಿ ಮುದ್ರಣವನ್ನು ಜಪ್ತಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಅವರು 1 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇದ್ಯಾವುದಕ್ಕೂ ತಾರಾಬಾಯಿ ಮಾತ್ರ ಜಗ್ಗಲಿಲ್ಲ. ಕೊನೆಗೆ ಪ್ರಿಂಟಿಂಗ್ ಪ್ರೆಸ್ ಮತ್ತು ವಾರಪತ್ರಿಕೆಯನ್ನು ಒಬ್ಬರೇ ನಡೆಸುವುದು ಕಷ್ಟವಾದಾಗ ಅವರು ಪ್ರಿಂಟಿಂಗ್ ಪ್ರೆಸ್ ನ್ನು ಮಾರುತ್ತಾರೆ. ಸಾರ್ವಜನಿಕ ಸೇವೆಯಲ್ಲಿ ಸಕ್ರೀಯರಾಗಿದ್ದರಿಂದ ತಾರಾಬಾಯಿ ಅವರು ಗದಗ-ಬೆಟಗೇರಿ ನಗರಸಭೆಯಲ್ಲಿ ಸದಸ್ಯರಾಗಿ ಆಯ್ಕೆಯಾಗುತ್ತಾರೆ.

ಅಪ್ಪಟ ಗಾಂಧಿವಾದಿಯಾಗಿದ್ದ ತಾರಾಬಾಯಿ ಅವರು ಜೀವನದ ಕೊನೆಯುದ್ದಕ್ಕೂ ಹೋರಾಟದ ಜೀವನವನ್ನೇ ಸವೆಸಿದರು ಎನ್ನಬಹುದು.ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರು ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ದುರ್ಲಭವಾಗಿದ್ದ ಕಾಲಘಟ್ಟದಲ್ಲಿ ರಸಿಕ ರಂಜಿನಿ ಪ್ರಿಂಟಿಂಗ್ ಪ್ರೆಸ್ ಮತ್ತು ವಾರಪತ್ರಿಕೆಯನ್ನು ಸತತ 22 ವರ್ಷಗಳ ಕಾಲ ಯಶಸ್ವಿಯಾಗಿ ತಾರಾಬಾಯಿಯವರು ನಡೆಸಿದರು. ವಿಶೇಷವೆಂದರೆ ಆಗ ಮುದ್ರಣ ಮತ್ತು ಪ್ರಕಾಶನ ಉದ್ಯಮದಲ್ಲಿ ತೊಡಗಿಸಿಕೊಂಡ ರಾಜ್ಯದ ಕೆಲವೇ ಮಹಿಳೆಯರಲ್ಲಿ ತಾರಾಬಾಯಿ ವಾಜಪೇಯಿ ಅವರು ಅಗ್ರಮಾನ್ಯರು ಎಂದು ಹೇಳಬಹುದು. ಆದರೆ ದುರಾದೃಷ್ಟವಶಾತ್ ಇಂತಹ ಮಹಿಳೆಯ ಇತಿಹಾಸದ ದಾಖಲೀಕರಣವನ್ನು ಮುದ್ರಣ ಮತ್ತು ಪತ್ರಿಕಾ ಮಾಧ್ಯಮದ ಇತಿಹಾಸದಲ್ಲಿ ಅಷ್ಟಾಗಿ ದಾಖಲಿಸದಿರುವುದು ನಿಜಕ್ಕೂ ದುರಂತದ ಸಂಗತಿ.

ಗದುಗಿನ ಮುದ್ರಣದ ಇತಿಹಾಸದ ಜಾಡನ್ನು ಹಿಡಿದು ಹೊರಟರೆ 'ಹೆಕ್ಕಿದಷ್ಟು ಹರವು' ಎನ್ನುವಂತೆ ತಾರಾಬಾಯಿ ವಾಜಪೇಯಿ ಅವರಂತಹ ಹಲವು ಅಚ್ಚರಿಯ ಕಥನಗಳು ರಾಜ್ಯದ ಮುದ್ರಣ ಕಾಶಿಯಲ್ಲಿ ಸಿಗಲಿವೆ.

-ಮಂಜುನಾಥ ನರಗುಂದ

Add Zee News as a Preferred Source
TAGS:
Education