SOCIAL MEDIA

Newsletter

PARTNER SITES
Select Language Select State

ಸ್ಟಿಂಗ್ ಕಹಾನಿಯ ತನಿಖೆ ತೀವ್ರ.. ಆರೋಪಿ ಸೈಬರ್ ಪೊಲೀಸ್ ವಶಕ್ಕೆ

sting operation investigation : ರಾಜ್ಯವನ್ನೇ ಬೆಚ್ಚಿಬೀಳಿಸಿದ ಸ್ಟಿಂಗ್ ಕಹಾನಿಯ ತನಿಖೆ ತೀವ್ರಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ನಡೆದ ಸಂಚಿನ ಜಾಲಭೇದಿಸಲು ಸಿಸಿಬಿ ಸೈಬರ್ ಟೀಮ್ ಹರಸಾಹಸ ಪಡ್ತಿದೆ..

Written By Ramya. R. Gowda
Published: Oct 24, 2026, 03:19 PM IST | Updated: Oct 24, 2026, 03:21 PM IST
Join

sting: ರಾಜ್ಯವನ್ನೇ ಬೆಚ್ಚಿಬೀಳಿಸಿದ ಸ್ಟಿಂಗ್ ಕಹಾನಿಯ ತನಿಖೆ ತೀವ್ರಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ನಡೆದ ಸಂಚಿನ ಜಾಲಭೇದಿಸಲು ಸಿಸಿಬಿ ಸೈಬರ್ ಟೀಮ್ ಹರಸಾಹಸ ಪಡ್ತಿದೆ.. ಈ ನಡುವೆ ದೆಹಲಿಯಿಂದ ಆರೋಪಿಯೊಬ್ಬನನ್ನು ಕರೆತರಲಾಗಿದೆ.. ಅಷ್ಟಕ್ಕೂ ಅವನ್ಯಾರು ಸ್ಟಿಂಗ್ ಗೂ ಆತನಿಗೂ ಇರೋ ಸಂಬಂಧದ ಕುರಿತ ಡಿಟೈಲ್ಸ್ ಇಲ್ಲಿದೆ..

ಸ್ಟಿಂಗ್.. ಸ್ಟಿಂಗ್.. ಅರೇ ಈ ರಹಸ್ಯ ಕಾರ್ಯಾಚರಣೆಯ ಸುದ್ದಿ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗ್ತಿದೆ. ಮಾಜಿ ಸಿಎಂಗೆ ಖೆಡ್ಡಾ ತೋಡಲಾಗಿದೆ ಎನ್ನುವ ವಿಚಾರದಲ್ಲಿ ರಾಜ್ಯದ ಸಿಸಿಬಿ ಸೈಬರ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ‌

ಮಾಜಿ ಸಿಎಂ ಸಿದ್ದರಾಮಯ್ಯ ದೂರಿನ ಅನ್ವಯ ಸಿಸಿಬಿ ಸೈಬರ್ ಟೀಮ್ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ತನಿಖೆಯನ್ನು ನಡೆಸುತ್ತಿದೆ. ರಿತೇಶ್  ಸ್ಟಿಂಗ್ ವಿಡಿಯೋವನ್ನು ಅಪ್ ಲೋಡ್ ಮಾಡಲು ಮೊಬೈಲ್ ಖರೀದಿ‌ ಮಾಡಿದ್ದ ಎನ್ನಲಾಗಿದ್ದು ಈ ಸಂಬಂಧ ರಿತೇಶ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ದೆಹಲಿ ಮೂಲದ ರಿತೇಶ್ ಪಾಂಡೆ ಸ್ಟಿಂಗ್ ವಿಚಾರದ ಸಣ್ಣ ಸಣ್ಣ ಹುಳುಗಳಾಗಿವೆ.. ಆದರೆ ಇಂಥ ಹುಳುಗಳು ನೀಡುವ ಮಾಹಿತಿಯನ್ನೇ ಆಧರಿಸಿ ಸ್ಟಿಂಗ್ ಮಾಡಿಸಿದ ಮಾಡಲು ಹೇಳಿದ ಸ್ಟಿಂಗ್ ತಿಮಿಂಗಿಲವನ್ನು ಸಿಸಿಬಿ ಸೈಬರ್ ಪೊಲೀಸರು ಬಲೆಗೆ ಬೀಳಿಸಬೇಕಿದೆ..ಅದೇನಾದ್ರು‌ ಮಾಜಿ ಸಿಎಂ ಸಿದ್ದರಾಮಯ್ಯರನ್ನೇ ಸ್ಟಿಂಗ್ ಬಲೆಗೆ ಕೆಡವಲು ಮಾಡಿದ ರಣತಂತ್ರದ ಬೇರುಗಳು ಸಿಕ್ಕಿಬೀಳಬೇಕಿದೆ. ಸಿಸಿಬಿ ಪೊಲೀಸರು ಸ್ಟಿಂಗ್ ವಿಚಾರದಲ್ಲಿ ಆಟವಾಡಿದ ಸೂತ್ರದಾರನ ಬಂಧನ ಮಾಡಬೇಕಿದೆ.. ಅಷ್ಟಕ್ಕೂ ಅ ಸೂತ್ರದಾರ ಯಾರು ಅನ್ನೋದು ಯಕ್ಷ ಪ್ರಶ್ನೆಯಾಗಿದ್ದು ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ. 
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES