SOCIAL MEDIA

Newsletter

PARTNER SITES
Select Language Select State

SIR ಪರಿಶೋಧನೆ- ಪ್ರತಿರೋಧ ಪ್ರವಾಸ.. ಭಾಗಿ ಆಗಲಿರುವ ಪ್ರಕಾಶ್ ರಾಜ್, ಸಾಹಿತಿಗಳು, ಚಿಂತಕರು, ಹೋರಾಟಗಾರರು

ಮತದಾರರ ಪಟ್ಟಿಯಿಂದ ಒಂದು 1.08 ಕೋಟಿ ಮತದಾರರನ್ನು ತೆಗೆದು ಹಾಕಿರುವುದಲ್ಲದೆ, 43.81 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ವಿಚಾರಣೆ ನಡೆಸುತ್ತಿದೆ.

Written By Bhimappa
Published: Sep 20, 2026, 09:25 AM IST | Updated: Sep 20, 2026, 09:44 AM IST
Image Credit: File Photo
Join

Prakash Raj, JM Veerasangaiah, BT Lalitha Nayak, KL Ashok: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಡಕವಾಗಿರುವ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರ ಭೇಟಿಯಾಗಿ ವಸ್ತುಸ್ಥಿತಿಯನ್ನು ಹತ್ತಿರದಿಂದ ಅರಿಯಲು ಮತ್ತು ಎಸ್‌ಐಆರ್ ಎಸಗಿರುವ ಅಕ್ರಮಗಳ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದೊಂದಿಗೆ ಸೆಪ್ಟೆಂಬರ್‌ 22 ರಿಂದ ಸೆಪ್ಟೆಂಬರ್‌ 30ರ ವರೆಗೂ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ವತಿಯಿಂದ ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಒಕ್ಕೂಟದ ಪದಾಧಿಕಾರಿಗಳಾದ ಜೆ.ಎಂ ವೀರಸಂಗಯ್ಯ, ಬಿ.ಟಿ. ಲಲಿತಾ ನಾಯಕ್, ಕೆ.ಎಲ್. ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ಕೆ.ಮಹಂತೇಶ್, ತಾಹೇರ್ ಹುಸೇನ್, ಸೀತಾರಾಂಗುಂಡಪ್ಪ, ಕೆ.ಹೆಚ್. ಅಬ್ದುಲ್ ಮಜೀದ್ ಜಂಟಿಯಾಗಿ ಮಾಧ್ಯಮ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಪ್ರವಾಸದಲ್ಲಿ ಚಿತ್ರನಟ ಪ್ರಕಾಶ್ ರಾಜ್ ಸೇರಿದಂತೆ ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಎಸ್‌ಐಆರ್ ಪ್ರಕ್ರಿಯೆ ನಿರೀಕ್ಷಿಗೂ ಮೀರಿದ ಅನಾಹುತವನ್ನು ಕರ್ನಾಟಕದಲ್ಲಿ ಈಗಾಗಲೇ ಮಾಡಿದೆ. ಮತದಾರರ ಪಟ್ಟಿಯಿಂದ ಒಂದು 1.08 ಕೋಟಿ ಮತದಾರರನ್ನು ತೆಗೆದು ಹಾಕಿರುವುದಲ್ಲದೆ, 43.81 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ವಿಚಾರಣೆ ನಡೆಸುತ್ತಿದೆ. ನಾಗರಿಕ ಸಂಘಟನೆಗಳ ಒತ್ತಡಕ್ಕೆ ಮಣಿದು ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದರೂ, ಇಡೀ ಪ್ರಕ್ರಿಯೆ ಅವೈಜ್ಞಾನಿಕ ಮತ್ತು ಅಸಂವಿಧಾನಿಕ ಆಗಿರುವುದರಿಂದ ದೊಡ್ಡಮಟ್ಟದಲ್ಲಿ ಅರ್ಹ ಮತದಾರರ ಪ್ರಜಾತಾಂತ್ರಿಕ ಹಕ್ಕನ್ನು ಕಸಿಯುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅನಾಹುತದ ಆಳ ಮತ್ತು ಅಗಲವನ್ನು ಖಚಿತವಾಗಿ ತುಲನೆ ಮಾಡುವ ಉದ್ದೇಶದಿಂದ ರಾಜ್ಯವ್ಯಾಪಿಯಾಗಿ ಆಯ್ದ 100 ಬೂತುಗಳಲ್ಲಿ ಮತಪರಿಶೋಧನಾ ಕಾರ್ಯವನ್ನು ‘ನಾಗರಿಕ ಮತಕಾವಲು ಸಮಿತಿ’ಗಳ ಹೆಸರಿನಲ್ಲಿ ನಡೆಸಲಾಗುತ್ತಿದೆ. ಈ ಕೆಲಸಕ್ಕೆ ಪುಷ್ಟಿ ನೀಡಲು, ಸಂತ್ರಸ್ತರನ್ನು ನೇರ ಭೇಟಿಯಾಗಿ ವಸ್ತುಸ್ಥಿತಿಯನ್ನು ಹತ್ತಿರದಿಂದ ಅರಿಯಲು ಸೆಪ್ಟೆಂಬರ್‌ 22 ರಿಂದ ರಾಜ್ಯವ್ಯಾಪಿಯಾಗಿ ‘ಅಧ್ಯಯನ ಹಾಗೂ ಪ್ರತಿರೋಧ ಪ್ರವಾಸ’ವನ್ನು ನಾಗರಿಕ ಸಂಘಟನೆಗಳು ಹಮ್ಮಿಕೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ‘ಪ್ರತಿರೋಧ ಪ್ರವಾಸ’ ಸೆಪ್ಟೆಂಬರ್‌ 22 ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಿಂದ ಪ್ರಾರಂಭವಾಗಿ ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡಲಿದೆ. ಈ ಪ್ರವಾಸದಲ್ಲಿ ಗಮನಿಸಿದ ಮತ್ತು ನೂರು ಮತಗಟ್ಟೆಗಳಲ್ಲಿ ನಡೆಸಿದ ಪರಿಶೋಧನೆಯನ್ನು ಆಧರಿಸಿ ಸೆಪ್ಟೆಂಬರ್‌ 30 ರಂದು ಸಮಾಜದ ಮುಂದೆ ‘ನಾಗರಿಕ ವರದಿ’ಯನ್ನು ಮುಂದಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಅದೇ ದಿನ ಸರ್ಕಾರಕ್ಕೂ ನಾಗರಿಕ ವರದಿಯನ್ನು ಸಲ್ಲಿಸಲಾಗುತ್ತದೆ. ರಾಜ್ಯದ ಮತದಾರರ ಮೂಲಭೂತ ಹಕ್ಕನ್ನು ರಕ್ಷಿಸಲು ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ‘ನಾಗರೀಕ ಒತ್ತಾಯ’ವನ್ನು ಮುಂದಿಡಲಾಗುತ್ತದೆ. ಈ ಅಭಿಯಾನದಲ್ಲಿ ಎಲ್ಲ ಪ್ರಜ್ಞಾವಂತ ನಾಗರಿಕರು ತೊಡಗಿಸಿಕೊಳ್ಳಬೇಕು. ಜೊತೆಗೂಡಲು ಬಯಸುವವರು ಮೊಬೈಲ್ ಸಂಖ್ಯೆ 96060 87560ಗೆ ಕರೆಮಾಡಬಹುದು ಎಂದು ಹೋರಾಟಗಾರರು ಹೇಳಿದ್ದಾರೆ. 

ಎಸ್‌ಐಆರ್‌ ಅಥವಾ ಕರಡು ಪತದಾರರ ಪಟ್ಟಿ ಬಿಡುಗಡೆ ಆದ ಮೇಲೆ ರಾಜ್ಯದಲ್ಲಿ ಲಕ್ಷಾಂತರ ಮತದಾರರಿಗೆ ನೋಟಿಸ್‌ ಜಾರಿ ಮಾಡಲಾಗಿ ವಿಚಾರಣೆಗಳು ನಡೆದ ಬಳಿಕ ಅಂತಿಮವಾಗಿ ಎಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಬಿಡಲಾಗಿದೆ. ಕರ್ನಾಟಕ ಮುಖ್ಯ ಚುನಾವಣ ಅಧಿಕಾರಿಗಳ ಕಚೇರಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ. ಎಸ್‌ಐಆರ್‌ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸಲಾಗಿದೆ. ಸದ್ಯ ಎಸ್‌ಐಆರ್ ಪ್ರಕ್ರಿಯೆ ನಿರೀಕ್ಷಿಗೂ ಮೀರಿದ ಅನಾಹುತವನ್ನು ಕರ್ನಾಟಕದಲ್ಲಿ ಈಗಾಗಲೇ ಮಾಡಿದೆ. ಮತದಾರರ ಪಟ್ಟಿಯಿಂದ ಒಂದು 1.08 ಕೋಟಿ ಮತದಾರರನ್ನು ತೆಗೆದು ಹಾಕಿರುವುದಲ್ಲದೆ, 43.81 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ವಿಚಾರಣೆ ನಡೆಸುತ್ತಿದೆ. 

ಎಸ್‌ಐಆರ್‌ ಅಥವಾ ಕರಡು ಪತದಾರರ ಪಟ್ಟಿ ಬಿಡುಗಡೆ ಆದ ಮೇಲೆ ರಾಜ್ಯದಲ್ಲಿ ಲಕ್ಷಾಂತರ ಮತದಾರರಿಗೆ ನೋಟಿಸ್‌ ಜಾರಿ ಮಾಡಲಾಗಿ ವಿಚಾರಣೆಗಳು ನಡೆದ ಬಳಿಕ ಅಂತಿಮವಾಗಿ ಎಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಬಿಡಲಾಗಿದೆ. ಕರ್ನಾಟಕ ಮುಖ್ಯ ಚುನಾವಣ ಅಧಿಕಾರಿಗಳ ಕಚೇರಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಅಂಕಿಅಂಶಗಳನ್ನು ಉಲ್ಲೇಖಿಸಲಾಗಿದೆ. ಎಸ್‌ಐಆರ್‌ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸಲಾಗಿದೆ. ಸದ್ಯ ಎಸ್‌ಐಆರ್ ಪ್ರಕ್ರಿಯೆ ನಿರೀಕ್ಷಿಗೂ ಮೀರಿದ ಅನಾಹುತವನ್ನು ಕರ್ನಾಟಕದಲ್ಲಿ ಈಗಾಗಲೇ ಮಾಡಿದೆ. ಮತದಾರರ ಪಟ್ಟಿಯಿಂದ ಒಂದು 1.08 ಕೋಟಿ ಮತದಾರರನ್ನು ತೆಗೆದು ಹಾಕಿರುವುದಲ್ಲದೆ, 43.81 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ವಿಚಾರಣೆ ನಡೆಸುತ್ತಿದೆ.

ಕರ್ನಾಟಕ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಕರ್ನಾಟಕ ಸರ್ಕಾರದ ಅಧಿಕೃತ ಪೋರ್ಟಲ್‌ ಮತ್ತು ಭಾರತೀಯ ಚಿನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ್ಯಾಂತ ಚಾಲ್ತಿಯಲ್ಲಿದೆ. ಎಸ್‌ಐಆರ್‌ ಎಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಆಗಿದೆ. ಇದು ನಕಲಿ ಮತದಾರರನ್ನು ಗುರುತಿಸಿ ರದ್ದು ಪಡಿಸಲು ಮತ್ತು ಪಟ್ಟಿಯನ್ನು ನವೀಕರಿಸಲು ಕೈಗೊಂಡಿರುವ ಪ್ರಕ್ರಿಯೆ ಆಗಿದೆ.

 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES