SOCIAL MEDIA

Newsletter

PARTNER SITES
Select Language Select State

'ಕೊಟ್ಟು ಕುದಿಯಲೇ ಬೇಡ, ಇಟ್ಟು ಹಂಗಿಸಬೇಡ': ವಚನದ ಮೂಲಕವೇ ಜನಾರ್ದನ ರೆಡ್ಡಿಗೆ ಶಿವರಾಜ್ ತಂಗಡಗಿ ಟಾಂಗ್

ಈ ಹಿಂದೆ ನನ್ನ ಜಮೀನನ್ನು ಜನಾರ್ದನ ರೆಡ್ಡಿ ಅವರ ಆಪ್ತರು ಖರೀದಿ ಮಾಡಿದ್ದರು. ಆ ಸಮಯದಲ್ಲಿ ಜಮೀನಿನ ಹಣ ಕೊಡಿಸಲು ಅವರು ಸಹಾಯ ಮಾಡಿದ್ದರು ಎಂಬ ಮಾತನ್ನು ನಾನು ಹೇಳಿದ್ದೆ. ಆದರೆ, ಜನಾರ್ದನ ರೆಡ್ಡಿ ಅವರೇ ನನ್ನ ಇಡೀ ಜೀವನವನ್ನು ರೂಪಿಸಿದ್ದಾರೆ ಎನ್ನುವ ರೀತಿಯಲ್ಲಿ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ.

Reported By Manjunath Naragund Written By Manjunath Naragund
Published: Sep 18, 2026, 04:39 PM IST | Updated: Sep 18, 2026, 04:51 PM IST
Image Credit: Shivaraj Tangadagi
Join

ಕೊಪ್ಪಳ: ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಸವಾಲಿಗೆ ಸಚಿವ ಶಿವರಾಜ್ ತಂಗಡಗಿ ಅತ್ಯಂತ ಖಡಕ್ ಹಾಗೂ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂಬ ನಿರ್ಧಾರ ಜನಾರ್ದನ ರೆಡ್ಡಿ ಅಥವಾ ಬಸವರಾಜ ದಡೇಸೂಗೂರು ಕೈಯಲ್ಲಿಲ್ಲ, ಅದು ಕನಕಗಿರಿ ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.

"ನಾನು ಇಂದಿಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಒಂದು ವೇಳೆ ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧಿಸುವ ಪರಿಸ್ಥಿತಿ ಬಂದರೆ ಖಂಡಿತಾ ಅಲ್ಲೇ ನಿಂತು ಸ್ಪರ್ಧಿಸುತ್ತೇನೆ. ಅಷ್ಟೇ ಅಲ್ಲ, ಜನಾರ್ದನ ರೆಡ್ಡಿ ವಿರುದ್ಧ ನಮ್ಮ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ತಾಕತ್ತು ನಮಗಿದೆ" ಎಂದು ತಂಗಡಗಿ ಗರ್ಜಿಸಿದ್ದಾರೆ.

ವಚನದ ಮೂಲಕವೇ ಮಾರ್ಮಿಕ ತಿರುಗೇಟು: ಇದೇ ವೇಳೆ ಜನಾರ್ದನ ರೆಡ್ಡಿಗೆ ಮಾರ್ಮಿಕವಾಗಿ ಟಾಂಗ್ ನೀಡಲು ತಂಗಡಗಿ ವಚನ ಒಂದನ್ನು ಉಲ್ಲೇಖಿಸಿದರು ಕೊಟ್ಟು ಕುದಿಯಲೇ ಬೇಡ,ಇಟ್ಟು ಹಂಗಿಸಬೇಡ,ಎಷ್ಟು ಉಂಡರೇ ಎನ್ನಬೇಡ..."ತಾವು ನೀಡಿದ ಹಳೆಯ ನೆರವಿನ ನೆನಪನ್ನು ಉಲ್ಲೇಖಿಸಿ, "ಈ ಹಿಂದೆ ನನ್ನ ಜಮೀನನ್ನು ಜನಾರ್ದನ ರೆಡ್ಡಿ ಅವರ ಆಪ್ತರು ಖರೀದಿ ಮಾಡಿದ್ದರು. 

ಆ ಸಮಯದಲ್ಲಿ ಜಮೀನಿನ ಹಣ ಕೊಡಿಸಲು ಅವರು ಸಹಾಯ ಮಾಡಿದ್ದರು ಎಂಬ ಮಾತನ್ನು ನಾನು ಹೇಳಿದ್ದೆ. ಆದರೆ, ಜನಾರ್ದನ ರೆಡ್ಡಿ ಅವರೇ ನನ್ನ ಇಡೀ ಜೀವನವನ್ನು ರೂಪಿಸಿದ್ದಾರೆ ಎನ್ನುವ ರೀತಿಯಲ್ಲಿ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರೋ ಮಾಡಿದ ಸಣ್ಣ ಸಹಾಯವನ್ನು ಹಿಡಿದು ಈ ರೀತಿ ಹಂಗಿಸಬಾರದು ಎಂಬುದನ್ನು ತಿಳಿಸಲೇ ನಾನು ಈ ವಚನ ಹೇಳಿದ್ದೇನೆ" ಎಂದು ಸಚಿವರು ಸ್ಪಷ್ಟಪಡಿಸಿದರು.

 

 

Add Zee News as a Preferred Source

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES