• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರಿಗರಿಗೆ ಮುಗಿಯದ ಮಳೆ ಕಂಟಕ: ಇನ್ನೂ ಕೆಲವು ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!

ಬೆಂಗಳೂರಿಗರಿಗೆ ಮುಗಿಯದ ಮಳೆ ಕಂಟಕ: ಇನ್ನೂ ಕೆಲವು ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ವರುಣ ದೇವ ತನ್ನ ಅಬ್ಬರ ತೋರಿಸಿದ್ದಾನೆ. ನಿನ್ನೆ ರಾತ್ರಿಯಿಂದ ಶುರುವಾದ ಜಡಿಮಳೆ ಹಾಗೂ ಗುಡುಗು ಸಹಿತ ಮಳೆಯ ಆರ್ಭಟ ಮಾರ್ನಿಂಗ್ ವರೆಗೂ ಕಂಟಿನ್ಯೂ ಆಗಿದೆ

Reported ByManjunath NaragundEdited ByManjunath Naragund
Published: Sep 20, 2026, 07:40 PM IST|Updated: Sep 20, 2026, 07:48 PM IST
joinshare
ಬೆಂಗಳೂರಿಗರಿಗೆ ಮುಗಿಯದ ಮಳೆ ಕಂಟಕ: ಇನ್ನೂ ಕೆಲವು ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!
Image Credit: File Photo

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

2

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

3

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

4

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

5

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಎಫೆಕ್ಟ್‌ಗೆ ನಮ್ಮ ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡೀ ಮಳೆರಾಯ ಸಕ್ಕತ್ ಸೌಂಡ್‌ ಮಾಡಿದ್ದಾನೆ..ನಿನ್ನೆ ರಾತ್ರಿಯಿಂದ ಶುರುವಾದ ಗುಡುಗು ಸಹಿತ ಭಾರಿ ಮಳೆ, ಬೆಳಗಿನವರೆಗೂ ನಿಲ್ಲದೇ ನಮ್ಮ ಬೆಂಗಳೂರು ಜನರನ್ನು ಅಕ್ಷರಶಃ ನಡುಗಿಸಿಬಿಟ್ಟಿದೆ. ಯಾವೆಲ್ಲಾ ಏರಿಯಾದಲ್ಲಿ ಹೇಗಿದೆ ಪರಿಸ್ಥಿತಿ? ಈ ವರದಿ ನೋಡಿ....

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ವರುಣ ದೇವ ತನ್ನ ಅಬ್ಬರ ತೋರಿಸಿದ್ದಾನೆ. ನಿನ್ನೆ ರಾತ್ರಿಯಿಂದ ಶುರುವಾದ ಜಡಿಮಳೆ ಹಾಗೂ ಗುಡುಗು ಸಹಿತ ಮಳೆಯ ಆರ್ಭಟ  ಮಾರ್ನಿಂಗ್ ವರೆಗೂ ಕಂಟಿನ್ಯೂ ಆಗಿದೆ. ರಾಜಧಾನಿಯಾದ್ಯಂತ ಮೋಡಕವಿದ ವಾತಾವರಣವಿದ್ದು, ನವಿಲು ಕತ್ತಲಲ್ಲಿ ಸಿಟಿ ಮೈಮರೆತು ಮಲಗಿದ್ದಾಗ ಮಳೆರಾಯ ಸಕ್ಕತ್ ಸೌಂಡ್‌ ಬಾಕ್ಸ್ ಬಜಾಯಿಸಿದ್ದಾನೆ..

ಸಿಟಿಯ ಹೈಫೈ ಏರಿಯಾಗಳಿಂದ ಹಿಡಿದು ಲೋಕಲ್ ಕಡೆಗಳವರೆಗೂ ಮಳೆರಾಯ ಸಖತ್ ಬ್ಯಾಟಿಂಗ್ ಮಾಡಿದ್ದಾನೆ. ನಿರ್ದಿಷ್ಟವಾಗಿ ಶಾಂತಿನಗರ, ವಸಂತನಗರ, ಕಾರ್ಪೊರೇಷನ್ ಸರ್ಕಲ್, ಮೆಜೆಸ್ಟಿಕ್, ಕೋರಮಂಗಲ, ಸಿಟಿ ಮಾರ್ಕೆಟ್, ಮಲ್ಲೇಶ್ವರಂ, ಯಶವಂತಪುರ, ಜಯನಗರ, ವಿಜಯನಗರ, ಜೆ.ಪಿ. ನಗರ, ರಾಜಾಜಿನಗರ, ಚಂದ್ರಾಲೇಔಟ್, ನಾಗರಬಾವಿ, ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಹಾಗೂ ಹೆಬ್ಬಾಳ ಸೇರಿದಂತೆ ಸಿಟಿಯ ಮೂಲೆ ಮೂಲೆಯಲ್ಲೂ ಮಳೆ ಸುರಿದಿದೆ.ಪಣತ್ತೂರು ಬಳಿ ಅಂಡರ್ ಪಾಸ್ ನಲ್ಲಿ ಜಲ ದಿಂಗ್ಬದನವಾಗಿ ವಾಹನ ಸವಾರರು ಪರದಾಡೊ ಪರಿಸ್ಥಿತಿ ನಿರ್ಮಾಣವಾಗಿತ್ತು...ಇನ್ನೂ ಎಲೆಕ್ಟ್ರಾನಿಕ್ ಸಿಟಿಯ ಡ್ಯಾಡೀಸ್ ಗಾರ್ಡನ್ ಲೇ ಔಟ್ನಲ್ಲಿ ಕಾರು ನಡು ರಸ್ತೆಯಲ್ಲಿ ಕುಸಿದು ರಾಜಧಾನಿಯ ರಸ್ತೆಯ ದುಸ್ಥಿತಿ ಬಗ್ಗೆ ದಿವ್ಯ ದರ್ಶನ ತೋರಿದೆ...HSR ಲೇ ಔಟ್ನ ಅಗರದಲ್ಲಿ ಬೃಹತ್ ಮರ ಧರಶಾಹಿಯಾಗಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿತ್ತು

ಮಳೆಯೆಂದರೆ ನಮಗೆ ಖುಷಿನೇ, ಆದ್ರೆ ಈ ರಸ್ತೆಗಳ ಕಥೆ ನೋಡಿದ್ರೆ ತಲೆ ಮೇಲೆ ಕೈಹೊತ್ಕೊಳ್ಳಬೇಕು ಅಷ್ಟೇ...ರಸ್ತೆಗಳಲ್ಲೆಲ್ಲಾ ಮಳೆ ನೀರು ಕೆರೆಯಂತೆ ನಿಂತುಹೋಗಿದ್ದು, ಬೆಳಿಗ್ಗೆ ಆಫೀಸ್‌ಗೆ, ಕಾಲೇಜಿಗೆ ಹೊರಟ ವಾಹನ ಸವಾರರು ಮತ್ತು ಜನಸಾಮಾನ್ಯರು ಸಕ್ಕತ್ ಪರದಾಡಬೇಕಾಗಿ ಬಂದಿದೆ. ಟ್ರಾಫಿಕ್ ಜಾಮ್ ಬೇರೆ ಕಿರಿಕಿರಿ ಉಂಟುಮಾಡಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ...ಇನ್ನೂ ವಾರಗಳ ಕಾಲ ಮಳೆರಾಯ ಅಬ್ಬರಿಸಲಿದ್ದಾನೆ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಟ್ಟಿನಲ್ಲಿ, ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಈ ಮಳೆ ಬೆಂಗಳೂರಿಗರಿಗೆ ಕೂಲ್ ವೆದರ್ ಕೊಟ್ರೂ, ಮಳೆಗೆ ಟ್ರಾಫಿಕ್ ಹಾಗೂ ನೀರು ನಿಲ್ಲುವ ಸಮಸ್ಯೆಗಳಿಂದ ಮತ್ತೊಮ್ಮೆ ನರಕ ದರ್ಶನ ಮಾಡಿಸಿದೆ.

Add Zee News as a Preferred Source