SOCIAL MEDIA

Newsletter

PARTNER SITES
Select Language Select State

ರೈತ ಸ್ವಾಭಿಮಾನ ಯಾತ್ರೆ: ನಾಳೆಯಿಂದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಂತ ಪ್ರವಾಸ!

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ, ಬೆಳೆ ನಷ್ಟ ಹಾಗೂ ಕಾವೇರಿ ನೀರಿನ ಸಂಕಷ್ಟದಿಂದ ತತ್ತರಿಸಿರುವ ರೈತರ ಬೆಂಬಲಕ್ಕೆ ನಿಲ್ಲಲು ಜಾತ್ಯತೀತ ಜನತಾದಳ (ಜೆಡಿಎಸ್) ಮುಂದಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಕರೆ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 'ರೈತ ಸ್ವಾಭಿಮಾನ ಯಾತ್ರೆ' ಕೈಗೊಳ್ಳಲಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Sep 27, 2026, 07:29 PM IST | Updated: Sep 27, 2026, 07:31 PM IST
Image Credit: Nikhil Kumaraswamy
Join

ಬೆಂಗಳೂರು : ಬಿಡದಿ ಬಳಿಕ ಮತ್ತೊಮ್ಮೆ ರಾಜ್ಯಾದ್ಯಂತ ಪ್ರವಾಸಕ್ಕೆ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ಮುಂದಾಗಿದ್ದಾರೆ.  ರೈತರು ಭೀಕರ ಬರಗಾಲ, ಬೆಳೆ ನಷ್ಟದಂತಹ ಹಲವು ಸಮಸ್ಯೆಗಳ ಎದುರಿಸುತ್ತಿದ್ದಾರೆ.. ಹೀಗಾಗಿ ರೈತರ ಸಮಸ್ಯೆ ಆಲಿಸಲು ಮುಂದಾಗಿರುವ ನಿಖಿಲ್‌, ನಾಳೆಯಿಂದ ರೈತ ಸ್ವಾಭಿಮಾನ ಯಾತ್ರೆಗೆ ಕರೆ ಕೊಟ್ಟಿದ್ದಾರೆ.. ಈ ಕುರಿತ ವರದಿ ಇಲ್ಲಿದೆ ನೋಡಿ..

ಮಳೆಯ ಕೊರತೆಯಿಂದ ಬೆಳೆಯಿಲ್ಲದೇ ರಾಜ್ಯದ ರೈತರು ಕಂಗಾಲಾಗಿದ್ದಾರೆ.. ಇದರ ಮಧ್ಯೆ ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗ್ತಿದೆ.. ಈ ಎಲ್ಲಾ ಬೆಳವಣಿಗೆ ವಿರುದ್ಧ ಸಿಡಿದೆದ್ದಿರುವ ರೈತರು ರಾಜ್ಯ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಮಾಡ್ತಿದ್ದಾರೆ.. ಇದೀಗ ರೈತರ ಹೋರಾಟಕ್ಕೆ ಜೆಡಿಎಸ್‌ ಕೈ ಜೋಡಿಸಿದೆ.. ರೈತರ ಸಮಸ್ಯೆ ಆಲಿಸಲು ಮುಂದಾಗಿರುವ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ,  ರೈತ ಸ್ವಾಭಿಮಾನ ಯಾತ್ರೆಗೆ ಕರೆ ಕೊಟ್ಟಿದ್ದಾರೆ..

ಸೆಪ್ಟೆಂಬರ್‌ 28ರಿಂದ ನಿಖಿಲ್‌ ನೇತೃತ್ವದಲ್ಲಿ  ರೈತ ಸ್ವಾಭಿಮಾನ ಯಾತ್ರೆ ಪ್ರಾರಂಭವಾಗಲಿದೆ.. ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಭೀಕರ ಬರಗಾಲ, ಬೆಳೆ ನಷ್ಟ, ಸಾಲಬಾಧೆ ಮತ್ತು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಲು ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆಯನ್ನು ಹಮ್ಮಿಕೊಂಡಿದೆ.. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡು, ರೈತರ ಸಮಸ್ಯೆಗಳನ್ನ ಆಲಿಸಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.. ಪ್ರಾಮಾಣಿಕ ಪ್ರಯತ್ನದೊಂದಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಅಂತ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ..

ನಿಖಿಲ್ ರೈತರಿಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೈತ ಸ್ವಾಭಿಮಾನ ಯಾತ್ರೆ ಮಾಡ್ತಿದಾರೆ.. ಈಗಲೂ ರೈತರ ಪರ ಹೋರಾಟ ಮಾಡಲು ನಾವು ಮುಂದಾಗಿದ್ದೇವೆ ಅಂತ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ... ಒಟ್ಟಾರೆ, ಸರ್ಕಾರದ ವಿರುದ್ಧ ಸಮರ ಸಾರಲು ಜೆಡಿಎಸ್‌ ಮತ್ತೆ ಮುಂದಾಗಿದೆ.. ಸ್ವಾಭಿಮಾನ ಯಾತ್ರೆ ಹೆಸರಲ್ಲಿ ನಿಖಿಲ್‌ ಕುಮಾರಸ್ವಾಮಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದು, ಇದರ ಫಲಶ್ರುತಿ ಏನು..? ಜೆಡಿಎಸ್‌ಗೆ ಇದರಿಂದ ಆಗೋ ಲಾಭ ಏನು ಅನ್ನೋದೇ ಕುತೂಹಲ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES