SOCIAL MEDIA

Newsletter

PARTNER SITES
Select Language Select State

ಕಾಂಗ್ರೆಸ್‌ನ ಹುಟ್ಟುಗುಣ ಸುಟ್ಟರೂ ಹೋಗಲ್ಲ ಆರ್. ಅಶೋಕ್ ವಾಗ್ದಾಳಿ

ಮನೆಯ ಮುಂದೆ ಮಚ್ಚು-ಲಾಂಗ್ ಹಿಡಿದು ಗೂಂಡಾಗಿರಿ, ದಲಿತ ನಾಯಕರ ಮೇಲೆ ನಿರಂತರ ಬೆದರಿಕೆ, ಸರ್ಕಾರದ ಶೂನ್ಯ ಅಭಿವೃದ್ಧಿ ಹಾಗೂ ಗ್ಯಾರಂಟಿ ಹಣದ ಗೋಲ್‌ಮಾಲ್. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಿಜವಾದ ಮುಖ ಬಯಲಾಗಿದೆ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ನಿಮ್ಮ ಗೂಂಡಾಗಿರಿಗೆ ನಾವು ಜಗ್ಗೋದು ಇಲ್ಲ, ಬಗ್ಗೋದಿಲ್ಲ‌ ಎಂದು ತಿರುಗೇಟು ನೀಡಿದ್ದಾರೆ.

Written By Ramya. R. Gowda
Published: Nov 08, 2026, 17:39 IST | Updated: Nov 08, 2026, 17:41 IST
Join

ಮನೆಯ ಮುಂದೆ ಮಚ್ಚು-ಲಾಂಗ್ ಹಿಡಿದು ಗೂಂಡಾಗಿರಿ, ದಲಿತ ನಾಯಕರ ಮೇಲೆ ನಿರಂತರ ಬೆದರಿಕೆ, ಸರ್ಕಾರದ ಶೂನ್ಯ ಅಭಿವೃದ್ಧಿ ಹಾಗೂ ಗ್ಯಾರಂಟಿ ಹಣದ ಗೋಲ್‌ಮಾಲ್.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಿಜವಾದ ಮುಖ ಬಯಲಾಗಿದೆ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ನಿಮ್ಮ ಗೂಂಡಾಗಿರಿಗೆ ನಾವು ಜಗ್ಗೋದು ಇಲ್ಲ, ಬಗ್ಗೋದಿಲ್ಲ‌ ಎಂದು ತಿರುಗೇಟು ನೀಡಿದ್ದಾರೆ.


ಸೆವೆನ್​ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿರುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಹುಟ್ಟುಗುಣ ಸತ್ತರೂ ಹೋಗಲ್ಲ ಎಂದ ಅವರು, ರಾಜ್ಯದಲ್ಲಿ ಮತ್ತೆ ಮಚ್ಚು-ಲಾಂಗ್ ಹಿಡಿದು ಓಡಾಡುವ ಚಾಕು-ಚೂರಿ ಸಂಸ್ಕೃತಿ ತಲೆಎತ್ತಿದೆ ಎಂದು ಕಿಡಿಕಾರಿದರು.

ಬರ ಪರಿಹಾರ, ನೀರಾವರಿ ಯೋಜನೆಗಳಿಗೆ ಹಣವಿಲ್ಲದೆ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಗೃಹಲಕ್ಷ್ಮಿ ಯೋಜನೆಯ ಬಾಕಿ 5,000 ಕೋಟಿ ರೂ. ನೀಡದೆ ಜನರಿಗೆ ಮೋಸ ಮಾಡಲಾಗುತ್ತಿದೆ. ಸರ್ಕಾರದ ಈ ಎಲ್ಲಾ ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಲು ಪ್ರತಿಪಕ್ಷ ನಾಯಕರ ಮನೆಗೆ ಗೂಂಡಾಗಳನ್ನು ಕಳುಹಿಸಿ ಬೆದರಿಸುವ ತಂತ್ರ ಹೆಣೆಯಲಾಗಿದೆ ಎಂದು ಆರೋಪಿಸಿದರು. ಈ ಕೃತ್ಯವೆಸಗಿದವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.


ಮೇಲ್ಮನೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕಿಡಿಕಾರಿದರು. ನಿಮ್ಮ ಕಾಲದಲ್ಲಿ ದಲಿತರು ಸರ್ವನಾಶವಾಗಿದ್ದಾರೆ. ಸ್ವಂತ ದಲಿತ ಸಮುದಾಯವನ್ನು ತುಳಿದು ನೀವೊಬ್ಬರೇ ಬಲಿತಿದ್ದೀರಿ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆ ಅವರ ದುರಹಂಕಾರದ ರಾಜಕಾರಣದಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಸೋಲಬೇಕಾಯಿತು ಎಂದು ಆರೋಪಿಸಿದರು.
​ತಮ್ಮ ನಿವಾಸದ ಮುಂದೆ ಪ್ರತಿಭಟನೆ ನೆಪದಲ್ಲಿ ಗೂಂಡಾಗಳನ್ನು ಕಳುಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು 40 ವರ್ಷ ಕಾಂಗ್ರೆಸ್‌ನಲ್ಲೇ ಇದ್ದವನು, ನಿಮ್ಮ ಗೂಂಡಾಗಿರಿ ನೋಡಿ ಬಂದಿದ್ದೇನೆ. ಅಂಬೇಡ್ಕರ್ ಅವರ ಸಂವಿಧಾನದ ಬಲದಿಂದ ಶಕ್ತಿ ಮತ್ತು ಯುಕ್ತಿಯಿಂದ ಹೋರಾಟ ಮಾಡುತ್ತೇನೆ, ನಿಮ್ಮ ಬೆದರಿಕೆಗೆ ನಾನು ಹೆದರಲ್ಲ ಎಂದು ಗುಡುಗಿದರು.

ಕಾಂಗ್ರೆಸ್ ಪಕ್ಷದ ಒಳ ಜಗಳ, ಸಚಿವರುಗಳ ರಾಜೀನಾಮೆ ಹೇಳಿಕೆಗಳು ಹಾಗೂ ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಈಗಾಗಲೇ ತುಂಡು-ತುಂಡಾಗಿದೆ. ರಾಜ್ಯ ಸರ್ಕಾರವನ್ನು ಮುಳುಗಿಸಲು ಸಿದ್ದರಾಮಯ್ಯ ಅವರೇ ಗುತ್ತಿಗೆ ತಗೆದುಕೊಂಡಂತಿದೆ ಎಂದು ಅಶೋಕ್ ವ್ಯಂಗ್ಯವಾಡಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ 20 ಸೀಟು ಕೂಡ ಗೆಲ್ಲುವುದಿಲ್ಲ, ಈ ಘಟನೆಯಿಂದ ಕಾಂಗ್ರೆಸ್‌ನ ಅಂತಿಮ ಪತನ ಆರಂಭವಾಗಿದೆ ಎಂದರು.​ಮುಂದಿನ ಚುನಾವಣೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 150ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದ್ದು, ಈ ಗೂಂಡಾ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES