• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸತ್ತಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಜಾಗರೂಕತೆಯಿಂದ ಪಾರಾಯ್ತು ಜೀವಂತ ಮಹಿಳೆಯ ಅಂತ್ಯಕ್ರಿಯೆ!

ಸತ್ತಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಜಾಗರೂಕತೆಯಿಂದ ಪಾರಾಯ್ತು ಜೀವಂತ ಮಹಿಳೆಯ ಅಂತ್ಯಕ್ರಿಯೆ!

ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ಈ ಪವಾಡದಂತಹ ಘಟನೆ ನಡೆದಿದ್ದು, 63 ವರ್ಷದ ರೇಣುಕಮ್ಮ ಸಂಕೊಳ್ಳಿ ಎಂಬುವವರೇ ವೈದ್ಯರ ತುರ್ತು ಚಿಕಿತ್ಸೆಯಿಂದ ಜೀವದಾನ ಪಡೆದ ಮಹಿಳೆ.

Reported ByManjunath NaragundEdited ByManjunath Naragund
Published: Sep 23, 2026, 04:53 PM IST|Updated: Sep 23, 2026, 05:34 PM IST
joinshare
ಸತ್ತಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಜಾಗರೂಕತೆಯಿಂದ ಪಾರಾಯ್ತು ಜೀವಂತ ಮಹಿಳೆಯ ಅಂತ್ಯಕ್ರಿಯೆ!
Image Credit: Haveri

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಹಾವೇರಿ: "ವಿಧಿಯಾಟದ ಮುಂದೆ ಮಾನವನ ಲೆಕ್ಕಾಚಾರ ಶೂನ್ಯ" ಎಂಬ ಮಾತಿಗೆ ಉದಾಹರಣೆಯಂತಹ ರೋಚಕ, ಅಚ್ಚರಿಯ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಆಕೆ ಇನ್ನಿಲ್ಲ, ಲೋಕ ತೊರೆದಿದ್ದಾಳೆ ಎಂದು ಭಾವಿಸಿ ಇಡೀ ಕುಟುಂಬವೇ ಕಣ್ಣೀರಿಡುತ್ತಿತ್ತು. ನಿಕಟ ಸಂಬಂಧಿಕರಿಗೆಲ್ಲಾ ಅಂತ್ಯಸಂಸ್ಕಾರದ ಸುದ್ದಿ ತಲುಪಿ, ಕೆಲವರು ಅಂತಿಮ ದರ್ಶನಕ್ಕೆ ಹೂಮಾಲೆಯನ್ನೂ ಹಿಡಿದು ಮನೆ ಬಾಗಿಲಿಗೆ ಬಂದಾಗಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು! ಕೊನೆಯ ಕ್ಷಣದಲ್ಲಿ ಜಾಗರೂಕರಾಗಿದ್ದಕ್ಕೆ, ಸಾವಿನ ದವಡೆಯಲ್ಲಿದ್ದ ಮಹಿಳೆಯೊಬ್ಬರು ಮತ್ತೆ ಮರುಜೀವ ಪಡೆದು ಎದ್ದು ಕುಳಿತಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ಈ ಪವಾಡದಂತಹ ಘಟನೆ ನಡೆದಿದ್ದು, 63 ವರ್ಷದ ರೇಣುಕಮ್ಮ ಸಂಕೊಳ್ಳಿ ಎಂಬುವವರೇ ವೈದ್ಯರ ತುರ್ತು ಚಿಕಿತ್ಸೆಯಿಂದ ಜೀವದಾನ ಪಡೆದ ಮಹಿಳೆ.

ಆಗಿದ್ದೇನು? - ಪ್ರಜ್ಞೆ ತಪ್ಪಿದ್ದೇ ಸಾವು ಅಂದುಕೊಂಡರು!

ಕಳೆದ ಸೋಮವಾರ ರಾತ್ರಿ ರೇಣುಕಮ್ಮ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ರಕ್ತದೊತ್ತಡ ಹಾಗೂ ಸಕ್ಕರೆ ಪ್ರಮಾಣ ಏಕಾಏಕಿ ಕುಸಿದು ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಗ್ರಾಮದಲ್ಲಿದ್ದ ಸ್ಥಳೀಯ ವೈದ್ಯರನ್ನು ಕರೆಸಿ ತೋರಿಸಿದ್ದಾರೆ. ಪರಿಶೀಲಿಸಿದ ಸ್ಥಳೀಯ ವೈದ್ಯರು, "ಅಜ್ಜಿ ಬದುಕುವ ಸಾಧ್ಯತೆ ತೀರಾ ಕಡಿಮೆ, ಆಸೆ ಕೈಬಿಡಿ" ಎಂದು ಹೇಳಿಬಿಟ್ಟಿದ್ದರು.

ಇದಾದ ಕೆಲವೇ ಹೊತ್ತಿನಲ್ಲಿ ರೇಣುಕಮ್ಮ ಅವರ ಉಸಿರಾಟದ ವೇಗವೂ ತೀರಾ ಕಡಿಮೆಯಾಗಿ, ಸಂಪೂರ್ಣ ಶಮನಗೊಂಡಂತೆ ಭಾಸವಾಗಿತ್ತು. ಇದರಿಂದ ಧೃತಿಗೆಟ್ಟ ಕುಟುಂಬಸ್ಥರು, ರೇಣುಕಮ್ಮ ಇಹಲೋಕ ತ್ಯಜಿಸಿದ್ದಾರೆ ಎಂದೇ ಗಟ್ಟಿಯಾಗಿ ನಂಬಿಬಿಟ್ಟರು.

ಮರುದಿನ ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲು ತೀರ್ಮಾನಿಸಿದ ಮನೆಯವರು, ದೂರದೂರಿನಲ್ಲಿದ್ದ ನೆಂಟರಿಷ್ಟರಿಗೆಲ್ಲಾ ವಿಷಯ ಮುಟ್ಟಿಸಿದರು. ವಿಷಯ ತಿಳಿದು ತರಾತುರಿಯಲ್ಲಿ ಧಾವಿಸಿ ಬಂದ ಕೆಲವು ಸಂಬಂಧಿಕರು ಅಜ್ಜಿಯ ಅಂತಿಮ ದರ್ಶನಕ್ಕಾಗಿ ಹೂಮಾಲೆಗಳನ್ನು ತಂದಿದ್ದರು. ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಗೆ ಬೇಕಾದ ಸಿದ್ಧತೆಗಳೂ ಸಾಗಿದ್ದವು.

ಆದರೆ, ಅಂತ್ಯಸಂಸ್ಕಾರಕ್ಕೆ ಇನ್ನೇನು ಕೊನೆ ಕ್ಷಣದ ಸಿದ್ಧತೆ ನಡೆಯುತ್ತಿರುವಾಗ, ಕುಟುಂಬದ ಕೆಲವರು ಅಜ್ಜಿಯ ಎದೆಯ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಣ್ಣಗೆ ಉಸಿರಾಟದ ಚಲನೆ ಕಂಡುಬಂದಿದೆ. ಎದೆಯುಸಿರು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ ಎಂಬ ಸಣ್ಣ ಆಶಾಭಾವನೆ ಮೂಡಿದ್ದೇ ತಡ, ತಡಮಾಡದೇ ರೇಣುಕಮ್ಮ ಅವರನ್ನು ಹಿರೇಕೇರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದಾರೆ.

ವೈದ್ಯರ ಸಮಯಪ್ರಜ್ಞೆ, ಮರುಜೀವ ಪಡೆದ ಬಡಜೀವ!

ಆಸ್ಪತ್ರೆಗೆ ತರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಖಾಸಗಿ ಆಸ್ಪತ್ರೆಯ ವೈದ್ಯರು, ತಕ್ಷಣವೇ ತೀವ್ರ ನಿಗಾ ಘಟಕದಲ್ಲಿ (ICU) ತುರ್ತು ಚಿಕಿತ್ಸೆ ಪ್ರಾರಂಭಿಸಿದರು. ಕುಸಿದುಬಿದ್ದಿದ್ದ ಬಿಪಿ ಮತ್ತು ಶುಗರ್ ಪ್ರಮಾಣವನ್ನು ಸರಿದೂಗಿಸಿ, ಕೃತಕ ಉಸಿರಾಟ ಮತ್ತು ಸೂಕ್ತ ಔಷಧೋಪಚಾರ ನೀಡಿದರು. ವೈದ್ಯರ ಸಮಯಪ್ರಜ್ಞೆ ಹಾಗೂ ಭರವಸೆಯ ಚಿಕಿತ್ಸೆಗೆ ರೇಣುಕಮ್ಮ ಅವರ ದೇಹ ತಕ್ಷಣವೇ ಸ್ಪಂದಿಸಿತು!

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೇಣುಕಮ್ಮ ಮೆಲ್ಲನೆ ಕಣ್ಣು ಬಿಟ್ಟಾಗ ಕುಟುಂಬಸ್ಥರ ಸಂತಸಕ್ಕೆ ಎಲ್ಲೆಯಿರಲಿಲ್ಲ. ಸಾವಿನ ಮನೆಂತಾಗಿದ್ದ ಮನೆಯಲ್ಲಿ ಒಮ್ಮೆಲೇ ಹರ್ಷದ ವಾತಾವರಣ ಆವರಿಸಿತು. ಸದ್ಯ ರೇಣುಕಮ್ಮ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಒಂದು ವೇಳೆ ಕೊನೆಯ ಕ್ಷಣದಲ್ಲಿ ಉಸಿರಾಟದ ಚಲನೆಯನ್ನು ಗಮನಿಸದೇ ಹೋಗಿದ್ದರೆ, ಜೀವಂತವಾಗಿದ್ದ ಮಹಿಳೆಯನ್ನೇ ಅಂತ್ಯಸಂಸ್ಕಾರ ಮಾಡುವ ಘೋರ ದುರಂತ ನಡೆದುಹೋಗುತ್ತಿತ್ತು. ವೈದ್ಯರ ಚಿಕಿತ್ಸೆ ಹಾಗೂ ಕುಟುಂಬಸ್ಥರ ಜಾಗರೂಕತೆಯಿಂದ ಬಡ ಜೀವವೊಂದು ಮರುಜೀವ ಪಡೆದಿದ್ದು, ಹಿರೇಕೇರೂರು ಭಾಗದಲ್ಲಿ ಈ ಘಟನೆ ದೊಡ್ಡ ಚರ್ಚೆಗೆ ಹಾಗೂ ಪವಾಡಕ್ಕೆ ಕಾರಣವಾಗಿದೆ.

 

Add Zee News as a Preferred Source
TAGS:
Kannada News