• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /"ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭ"- ಡಿ.ನಾಗಲಕ್ಷ್ಮಿ ರಾಜ್ಯ ಕಾರ್ಯದರ್ಶಿ

"ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭ"- ಡಿ.ನಾಗಲಕ್ಷ್ಮಿ ರಾಜ್ಯ ಕಾರ್ಯದರ್ಶಿ

Karnataka :ಮಾಸಿಕ ₹15,000 ಗೌರವಧನ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭ:ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭ-ಡಿ.ನಾಗಲಕ್ಷ್ಮಿ ರಾಜ್ಯ ಕಾರ್ಯದರ್ಶಿ"ಕಳೆದವರ್ಷ ಜನವರಿಯಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ನೆನಪಿಸಲು ನಾವು ಬಂದಿದ್ದೇವೆ."

Written ByRamya. R. Gowda
Published: Nov 17, 2026, 12:29 IST|Updated: Nov 17, 2026, 13:23 IST
joinshare
"ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭ"- ಡಿ.ನಾಗಲಕ್ಷ್ಮಿ ರಾಜ್ಯ ಕಾರ್ಯದರ್ಶಿ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಾಸಿಕ ₹15,000 ಗೌರವಧನ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭ:ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭ-ಡಿ.ನಾಗಲಕ್ಷ್ಮಿ ರಾಜ್ಯ ಕಾರ್ಯದರ್ಶಿ"ಕಳೆದವರ್ಷ ಜನವರಿಯಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ನೆನಪಿಸಲು ನಾವು ಬಂದಿದ್ದೇವೆ." ಇಂದು ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಅಹೋರಾತ್ರಿ ಪ್ರತಿಭಟನೆ ಉದ್ದೇಶಿಸಿ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಈ ಮಾತನಾಡಿದರು.

ಅವರು ಮುಂದುವರಿದು ಮಾತನಾಡುತ್ತಾ "ಗ್ಯಾರಂಟಿ ಹೆಸರಿನಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ನೀಡದೆ ಜಾರಿಕೊಳ್ಳುತ್ತಿರುವುದರ ವಿರುದ್ದ ನಮ್ಮ ಹೋರಾಟ ಆರಂಭವಾಗಿದೆ. ನಮ್ಮ ಬೇಡಿಕೆ ಈಡೇರುವವರೆಗೆ ನಾವು ಜಾಗ ಬಿಟ್ಟು ಕದಲುವುದಿಲ್ಲ.". ಎಂದು ಘೋಷಿಸಿದರು.

ರಾಜ್ಯ ಸರ್ಕಾರದಿಂದ ಮಾಸಿಕ ₹15,000 ನಿಶ್ಚಿತ ಗೌರವಧನ ನಿಗದಿಪಡಿಸುವುದು ಸೇರಿದಂತೆ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ, ಇಂದಿನಿಂದ ಆಶಾ ಕಾರ್ಯಕರ್ತೆಯರ ಬೃಹತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭವಾಗಿದೆ. AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿಯ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಸಂಘಟಿತವಾಗುತ್ತಿರುವ ಈ ಪ್ರತಿಭಟನೆಯಲ್ಲಿ, ಬಡಜನರ ಆರೋಗ್ಯ ಸೇವೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರು ಬಹುದಿನಗಳಿಂದ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಗಾದ ತಮ್ಮ ನ್ಯಾಯೋಚಿತ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
 

ಪ್ರತಿಭಟನೆಯ ಮೊದಲ ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 20,000 ಆಶಾ ಕಾರ್ಯಕರ್ತೆಯರು ಭಾಗವಹಿಸುತ್ತಿದ್ದು, ನಂತರದ ದಿನಗಳಲ್ಲಿ ಜಿಲ್ಲೆಗಳಿಂದ ಉಳಿದ ಎಲ್ಲಾ ಆಶಾ ಕಾರ್ಯಕರ್ತೆಯರು ಸರದಿಯಂತೆ ಹೋರಾಟದಲ್ಲಿ ಬಂದು ಸೇರಲಿದ್ದಾರೆ. ಕಳೆದ 17 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ, ಗ್ರಾಮೀಣ ಮತ್ತು ನಗರದ ಕೊಳಗೇರಿ ಜನರ ಮಧ್ಯೆ ಮನೆಯಿಂದ ಮನೆಗೆ ತೆರಳಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಆಶಾ ಕಾರ್ಯಕರ್ತೆಯರು ಕೇವಲ ಪುಡಿಗಾಸಿನ ಪ್ರೋತ್ಸಾಹಧನದಲ್ಲಿ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕಾರ್ಮಿಕರ ಸ್ಥಾನಮಾನ ಮತ್ತು ಘನತೆಯಿಂದ ಬದುಕಲು ಅಗತ್ಯವಾದ ಕನಿಷ್ಠ ವೇತನ ನೀಡದೆ ದುಡಿಸಿಕೊಳ್ಳುತ್ತಿರುವುದರ ವಿರುದ್ಧ ನಿರಂತರವಾಗಿ ಧ್ವನಿಯೆತ್ತಲಾಗಿದೆ.
 

ಕಳೆದ ವರ್ಷ ಜನವರಿ ತಿಂಗಳಲ್ಲಿ ಜರುಗಿದ ಹೋರಾಟದ ಸಂದರ್ಭದಲ್ಲಿ, ಅಂದಿನ ಮುಖ್ಯಮಂತ್ರಿಗಳು ಮತ್ತು ಸರ್ಕಾರ ಕನಿಷ್ಠ ₹10,000 ಖಾತ್ರಿ ಮಾಡುವುದಾಗಿ ಮಾತು ಕೊಟ್ಟು, ಅದರಂತೆ ನಡೆಯದೆ ಕೇವಲ ಆಶಾ ಕಾರ್ಯಕರ್ತೆಯರಿಗೆ ಮಾತ್ರವಲ್ಲದೆ ರಾಜ್ಯದ ಜನತೆಗೂ ದ್ರೋಹ ಎಸಗಿದೆ. ಆದ್ದರಿಂದ, ಮತ್ತೊಮ್ಮೆ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರ ಆರಂಭವಾಗಿದೆ. ಇಂದಿನ ಪ್ರತಿಭಟನೆ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಯಾದಗಿರಿ ವಹಿಸಿದ್ದರು.. ವೇದಿಕೆಗೆ AIUTUC ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ , SUCI ಕಮ್ಯುನಿಸ್ಟ್ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಖ್ಯಾತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಂಪಿ ವಿವಿ ವಿಶ್ರಾಂತ ಕುಲಪತಿ ಶ್ರೀ ಮುರಿಗೆಪ್ಪ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಶ್ರೀಮತಿ ಲತಾ, ಸಾಮಾಜಿಕ ಹೋರಟಗಾರರಾದ ಉಗ್ರ ನರಸಿಂಹೆಗೌಡರು ಬೆಂಬಲಿಸಿ ಭಾಗವಹಿಸಿದ್ದರು.

ಸಂಘದ ಪ್ರಮುಖ ಬೇಡಿಕೆಗಳು:
1. ₹15,000 ನಿಶ್ಚಿತ ಮಾಸಿಕ ಗೌರವಧನ: ವಿವಿಧ ರಾಜ್ಯಗಳಲ್ಲಿ ಹೆಚ್ಚಿಸಿರುವಂತೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15,000 ಗೌರವಧನ ನಿಗದಿಯಾಗಬೇಕು.
2. ಒತ್ತಾಯದ ಮೊಬೈಲ್ ಕೆಲಸ ಕೈಬಿಡಿ: ಎಲ್ಲಾ ಆ್ಯಪ್‌ಗಳ ಮೂಲಕ ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುವುದನ್ನು ಕೈಬಿಡಬೇಕು, ಅಥವಾ ಮೊಬೈಲ್ ಕೆಲಸಗಳಿಗೆ ಮೊಬೈಲ್ ಒದಗಿಸಿ ಪ್ರೋತ್ಸಾಹಧನ ನಿಗದಿ ಮಾಡಬೇಕು. ಮೊಬೈಲ್ ಕೆಲಸ ಮಾಡಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
3. ನಿವೃತ್ತರಿಗೆ ಇಡಿಗಂಟು: ಕಳೆದ ಹಲವಾರು ವರ್ಷಗಳಿಂದ ನಿವೃತ್ತಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬಾಕಿ ಇರುವ ಇಡಿಗಂಟನ್ನು ನೀಡಬೇಕು.
4. ಬಾಕಿ ಪ್ರೋತ್ಸಾಹಧನ ಬಿಡುಗಡೆ: ರಾಜ್ಯದಾದ್ಯಂತ ಆಶಾ ನಿಧಿ ಮೂಲಕ ಕೇಂದ್ರದ ಪ್ರೋತ್ಸಾಹಧನವು ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ತಕ್ಕಷ್ಟು ಬರುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು.
5. ಆಶಾ ಸುಗಮಕಾರರ ಮುಂದುವರಿಕೆ ಮತ್ತು ₹1,500 ಬಾಕಿ: ಮಾರ್ಗಸೂಚಿಗೆ ವಿರುದ್ಧವಾಗಿ ಸುಗಮಕಾರರ ಸೇವೆಯನ್ನು 25-02-2025 ರಂದು ಹಿಂಪಡೆಯಲಾಗಿದ್ದು, ನಿಯಮಾನುಸಾರ ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಆರ್‌ಒಪಿಯಲ್ಲಿ (ROP) ಅನುಮೋದನೆಯಾದಂತೆ 2024-25ನೇ ಸಾಲಿನಲ್ಲಿ ಹೆಚ್ಚಳವಾದ ಮಾಸಿಕ ₹1,500 ರಂತೆ ಒಂದು ವರ್ಷದ ಬಾಕಿ ಹಣ ನೀಡಬೇಕು.
6. ಎನ್‌ಐಒಎಸ್ (NIOS) ತರಬೇತಿಗೆ ವಿಶೇಷ ಪ್ರೋತ್ಸಾಹಧನ: ಕೇಂದ್ರದ ನಿರ್ದೇಶನದಂತೆ, ರಾಜ್ಯದಲ್ಲಿ ಬಾಕಿ ಇರುವ ಎನ್‌ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಮತ್ತು ಆಶಾ ಸುಗಮಕಾರರಿಗೆ ಒಂದು ತರಬೇತಿಗೆ ₹5,000 ರಂತೆ ವಿಶೇಷ ಪ್ರೋತ್ಸಾಹಧನವನ್ನು ಕೂಡಲೇ ನೀಡಬೇಕು.
7. ತೀವ್ರ ಅನಾರೋಗ್ಯದ ಅವಧಿಯಲ್ಲಿ ಭದ್ರತೆ: ತೀವ್ರ ರೋಗದ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ದೈನಂದಿನ (ರುಟೀನ್) ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.
8. ನಿವೃತ್ತಿ ಸೌಲಭ್ಯ ₹5 ಲಕ್ಷ: ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ನಿವೃತ್ತಿ ಸೌಲಭ್ಯವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು.
ಈ ಹೋರಾಟಕ್ಕೆ ರಾಜ್ಯದ ನೂರಾರು ಗಣ್ಯರು ಬೆಂಬಲ ಸೂಚಿಸಿದ್ದಾರೆ. ಅನೇಕ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಸ್ವತಃ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಬೆಂಬಲ ಸೂಚಿಸಿರುವ ಪ್ರಮುಖರಲ್ಲಿ ಕೆಲವರು:
ಶ್ರೀ ಅಲ್ಲಮಪ್ರಭು ಬೆಟ್ಟದೂರು – ಹಿರಿಯ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಕೊಪ್ಪಳ
ಶ್ರೀ ಎಸ್.ಆರ್. ಹಿರೇಮಠ – ಹಿರಿಯ ಸಾಮಾಜಿಕ ಹೋರಾಟಗಾರರು, ಧಾರವಾಡ
ಶ್ರೀ ಗಿರೀಶ್ ಕಾಸರವಳ್ಳಿ – ಖ್ಯಾತ ಸಿನಿಮಾ ನಿರ್ದೇಶಕರು, ಬೆಂಗಳೂರು
ಡಾ. ಮುರಿಗೆಪ್ಪ – ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು
ಡಾ. ಎಸ್.ಜಿ. ಸಿದ್ದರಾಮಯ್ಯ – ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು
ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿ – ಹಿರಿಯ ಸಾಹಿತಿಗಳು, ಧಾರವಾಡ
ಪ್ರೊ. ರಾಮೇಶ್ವರಿ ವರ್ಮಾ – ರಂಗ ಕಲಾವಿದೆ, ಮಹಿಳಾ ಹೋರಾಟಗಾರ್ತಿ, ಮೈಸೂರು
ಡಾ. ಟಿ.ಆರ್. ಚಂದ್ರಶೇಖರ್ – ಆರ್ಥಿಕ ತಜ್ಞರು, ಬೆಂಗಳೂರು
ಶ್ರೀಮತಿ ವೈದೇಹಿ – ಖ್ಯಾತ ಸಾಹಿತಿಗಳು, ಉಡುಪಿ
ಶ್ರೀ ರಾಘವೇಂದ್ರ ಕುಷ್ಟಗಿ – ಹಿರಿಯ ಸಾಮಾಜಿಕ ಹೋರಾಟಗಾರರು, ರಾಯಚೂರು
ಪ್ರೊ. ಎ.ಎಚ್. ರಾಜಾ ಸಾಬ್ – ತುಮಕೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು
ಶ್ರೀಮತಿ ಸಬಿಹಾ ಭೂಮಿಗೌಡ – ವಿಶ್ರಾಂತ ಕುಲಪತಿಗಳು, ಅಕ್ಕಮಹಾದೇವಿ ವಿವಿ, ವಿಜಯಪುರ
ಶ್ರೀ ಇಂದೂಧರ ಹೊನ್ನಾಪುರ – ಹಿರಿಯ ಪತ್ರಕರ್ತರು, ದಲಿತ ಹೋರಾಟಗಾರರು
ಶ್ರೀ ಕೇಶವ ಮಳಗಿ – ಖ್ಯಾತ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಬೆಂಗಳೂರು
ಶ್ರೀಮತಿ ರೂಪ ಹಾಸನ – ಖ್ಯಾತ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಹಾಸನ
ಶ್ರೀ ಬಿ. ಸುರೇಶ್ – ಖ್ಯಾತ ಚಲನಚಿತ್ರ ನಿರ್ದೇಶಕರು, ಬೆಂಗಳೂರು
ಶ್ರೀಮತಿ ವಿಜಯಮ್ಮ – ಪ್ರಸಿದ್ಧ ಪತ್ರಕರ್ತೆ, ಹಿರಿಯ ನಾಟಕಗಾರ್ತಿ, ಬೆಂಗಳೂರು
ಶ್ರೀ ಬಿ.ಎಂ. ಹನೀಫ್ – ಬರಹಗಾರರು, ಹಿರಿಯ ಪತ್ರಕರ್ತರು
(ಪಟ್ಟಿ ಅಪೂರ್ಣ; ಇವರೇ ಅಲ್ಲದೆ ಇನ್ನೂ ಅನೇಕ ಗಣ್ಯರು ಬೆಂಬಲಿಸಿದ್ದಾರೆ.)
 

ಕೋವಿಡ್ ಕಾಲದಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ತಕ್ಷಣ ಸ್ಪಂದಿಸಿ, ಅವರ ಬೇಡಿಕೆಗಳನ್ನು ಈಡೇರಿಸುವುದು ಜನಪರ ಸರ್ಕಾರದ ಕನಿಷ್ಠ ನೈತಿಕ ಹೊಣೆಯಾಗಿದೆ.
 

Add Zee News as a Preferred Source
TAGS:
Kannada News