• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /'ಹಿಂದೂ ಮಹಾ ಗಣಪತಿ' ವಿಸರ್ಜನಾ ಮೆರವಣಿಗೆ : ಪೊಲೀಸ್‌-ರೇಣುಕಾಚಾರ್ಯ ನಡುವೆ ವಾಗ್ವಾದ

'ಹಿಂದೂ ಮಹಾ ಗಣಪತಿ' ವಿಸರ್ಜನಾ ಮೆರವಣಿಗೆ : ಪೊಲೀಸ್‌-ರೇಣುಕಾಚಾರ್ಯ ನಡುವೆ ವಾಗ್ವಾದ

'ಹಿಂದೂ ಮಹಾ ಗಣಪತಿ' ವಿಸರ್ಜನಾ ಮೆರವಣಿಗೆ ವೇಳೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಸಲಿಗೆ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆ ವೇಳೆ ಆಗಿದ್ದೇನು..? ಈ ಕುರಿತ ವರದಿ ಇಲ್ಲಿದೆ..

Reported ByKrishna NKEdited ByKrishna NK
Published: Oct 05, 2026, 19:05 IST|Updated: Oct 05, 2026, 19:09 IST
joinshare
'ಹಿಂದೂ ಮಹಾ ಗಣಪತಿ' ವಿಸರ್ಜನಾ ಮೆರವಣಿಗೆ : ಪೊಲೀಸ್‌-ರೇಣುಕಾಚಾರ್ಯ ನಡುವೆ ವಾಗ್ವಾದ
Image Credit: Honnali Ganesh news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಬಲವಂತವಾಗಿ ಕಾಡು ಆನೆ ಸ್ಥಳಾಂತರ ವಿರೋಧಿಸಿ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕಿ ನಯನ ಮೋಟಮ್ಮ

ಬಲವಂತವಾಗಿ ಕಾಡು ಆನೆ ಸ್ಥಳಾಂತರ ವಿರೋಧಿಸಿ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕಿ ನಯನ ಮೋಟಮ್ಮ

2

RCB ಪರ ಮೊದಲ ಸೆಂಚುರಿ ಸಿಡಿಸಿದ್ದು ಯಾರು ಗೊತ್ತಾ? ಈ ಕನ್ನಡಿಗನೇ ಆ ದಾಖಲೆ ವೀರ!

3

ದರ್ಶನ್ ಯಾರು ಅಂತಲೆ ಗೊತ್ತಿಲ್ಲ ಎಂದು ಕೋರ್ಟ್‌ನಲ್ಲೇ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ..

4

ಡಾಲರ್ ಎದುರು ಭರ್ಜರಿ ಚೇತರಿಕೆ ಕಂಡ ರೂಪಾಯಿ; 8 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ಭಾರತೀಯ ಕರೆನ್ಸಿ!

5

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ತಾಯಿ-ಮಕ್ಕಳ ಆಸ್ಪತ್ರೆಗಿಲ್ಲ ಉದ್ಘಾಟನಾ ಭಾಗ್ಯ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಹೊನ್ನಾಳಿ: ತಾಲೂಕು ಕೇಂದ್ರ ಹೊನ್ನಾಳಿಯಲ್ಲಿ ನಡೆದ 'ಹಿಂದೂ ಮಹಾ ಗಣಪತಿ' ವಿಸರ್ಜನಾ ಮೆರವಣಿಗೆ ಸಂಭ್ರಮದ ನಡುವೆಯೇ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

ಘಟನೆಯ ವಿವರ
ಸಂಪಿಗೆ ಮುಖ್ಯ ರಸ್ತೆಯಿಂದ ತಿಮ್ಮನಕಟ್ಟೆ ರಸ್ತೆಯ ಮಾರ್ಗವಾಗಿ ಶ್ರೀ ಗಣೇಶನ ಮೂರ್ತಿಯ ವಿಸರ್ಜನಾ ಮೆರವಣಿಗೆ ಅತ್ಯಂತ ವೈಭವದಿಂದ ಸಾಗುತ್ತಿತ್ತು. ಮೆರವಣಿಗೆಯು ದುರ್ಗಮ್ಮ ದೇವಸ್ಥಾನದ ಮುಂಭಾಗಕ್ಕೆ ತಲುಪುತ್ತಿದ್ದಂತೆ, ಭದ್ರತಾ ಹಿತದೃಷ್ಟಿಯಿಂದ ಪೊಲೀಸರು ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು.

ದೇವಸ್ಥಾನದ ಮುಂಭಾಗದಲ್ಲೇ ಪೊಲೀಸ್ ವಾಹನಗಳನ್ನು ನಿಲ್ಲಿಸಿರುವುದನ್ನು ಗಮನಿಸಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, "ಹಿಂದೂ ದೇವಾಲಯದ ಮುಂಭಾಗದಲ್ಲೇ ಪೊಲೀಸ್ ವಾಹನಗಳನ್ನು ಏತಕ್ಕಾಗಿ ನಿಲ್ಲಿಸಿದ್ದೀರಿ?" ಎಂದು ಪೊಲೀಸರನ್ನು ತೀವ್ರವಾಗಿ ಪ್ರಶ್ನಿಸಿದರು. ಈ ವೇಳೆ ರೇಣುಕಾಚಾರ್ಯ ಹಾಗೂ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ದಾಳಿ ನಡೆಯಿತು.

ಸರ್ಕಾರ ಬರುತ್ತದೆ ಎಂದು ಎಚ್ಚರಿಕೆ
ಪೊಲೀಸರು ಸುರಕ್ಷತೆಯ ಕಾರಣ ನೀಡಿ, ಒಂದು ವಾಹನವನ್ನು ಮಾತ್ರ ತೆರವುಗೊಳಿಸುವುದಾಗಿ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ರೇಣುಕಾಚಾರ್ಯ ಮತ್ತು ಸಾರ್ವಜನಿಕರು, ದೇವಾಲಯದ ಮುಂಭಾಗದಲ್ಲಿರುವ ಎರಡೂ ಪೊಲೀಸ್ ವಾಹನಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಪಟ್ಟು ಹಿಡಿದರು. "ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸರು ನಿರಂತರವಾಗಿ ತೊಂದರೆ ನೀಡುತ್ತಿದ್ದಾರೆ, ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ," ಎಂದು ರೇಣುಕಾಚಾರ್ಯ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮೆರವಣಿಗೆ ಮುಂದುವರಿಕೆ
ಮಾಜಿ ಸಚಿವರು ಹಾಗೂ ಸಾರ್ವಜನಿಕರ ತೀವ್ರ ಒತ್ತಡಕ್ಕೆ ಮಣಿದ ಪೊಲೀಸರು, ತಕ್ಷಣವೇ ದೇವಸ್ಥಾನದ ಮುಂಭಾಗದಲ್ಲಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿದರು. ವಾಹನ ತೆರವಾದ ನಂತರ ಗಣೇಶ ವಿಸರ್ಜನಾ ಮೆರವಣಿಗೆಯು ಶಾಂತಿಯುತವಾಗಿ ಮುಂದೆ ಸಾಗಿತು.

Add Zee News as a Preferred Source
TAGS:
Kannada News