KPSC ಹಗರಣದ ಹಣದಿಂದ ಗ್ಯಾನೇಂದ್ರ. ತನ್ನ ಪ್ರೇಯಸಿಗೆ ಗಿಫ್ಟ್ !. ತಾನು ಸಿಕ್ಕಿ ಬಿದ್ರು ಯಾವುದೇ ಸಾಕ್ಷ ಸಿಗಬಾರದು ಅಂತ ಟ್ಯಾಬ್ ಅನ್ನೇ ಒಡೆದು ಚಿಂದಿ
ಕೆಪಿಎಸ್ ಸಿ ಅಕ್ರಮದಲ್ಲಿ ನಡೆದಿದ್ದು ಕೋಟಿ-ಕೋಟಿ ವ್ಯವಹಾರ. ಐಎಎಸ್ ಅಧಿಕಾರಿ ಗ್ಯಾನೇಂದ್ರ ಕನ್ನಾಳೆಯ ಕಳ್ಳಾಟ ಇ.ಡಿ ತನಿಖೆಯಲ್ಲಿ ಬಹಿರಂಗವಾಗಿದೆ.
ಕೆಪಿಎಸ್ ಸಿ ಅಕ್ರಮದಲ್ಲಿ ನಡೆದಿದ್ದು ಕೋಟಿ-ಕೋಟಿ ವ್ಯವಹಾರ. ಐಎಎಸ್ ಅಧಿಕಾರಿ ಗ್ಯಾನೇಂದ್ರ ಕನ್ನಾಳೆಯ ಕಳ್ಳಾಟ ಇ.ಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಟ್ಯಾಬ್ ನಾಶ, ಕೋಟಿ ಕೋಟಿ ವ್ಯವಹಾರ.. ಕೆಪಿಎಸ್‌ಸಿ ಅಕ್ರಮದ ಇಡೀ ಜಾಲದ ಹಣಕಾಸಿನ ಲೆಕ್ಕ ಈಗ ಇಡಿ ತನಿಖೆಯಲ್ಲಿ ಬಯಲಾಗಿದೆ.
ಕೆಪಿಎಸ್‌ಸಿ ಅಕ್ರಮದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಹೊರಬರ್ತಿವೆ..ಕನ್ನಾಳೆ ಹಾಗೂ ಗ್ಯಾನೇಂದ್ರ ನಡುವೆ ನಡೆದ ಅಕ್ರಮ ಹಣಕಾಸಿನ ಲೆಕ್ಕ ಈಗ ಇಡಿ ತನಿಖೆಯಲ್ಲಿ ಬಯಲಾಗಿದೆ..ಅಲ್ಲದೆ ಇ.ಡಿ ತನಿಖೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಹೇಗೆ ಅನ್ನೋದು ಗೊತ್ತಾಗಿದೆ..ಐಎಎಸ್ ಅಧಿಕಾರಿ ಗ್ಯಾನೇಂದ್ರ ಮೊದಲು ಕೆಪಿಎಸ್‌ಸಿ ಕಚೇರಿಯಿಂದ ಪ್ರಶ್ನೆಪತ್ರಿಕೆ ಮತ್ತು ಕೀ ಆನ್ಸರ್ ಪಡೆದುಕೊಂಡಿದ್ದ.. ಅದನ್ನ ತನ್ನ ಬಳಿಯಿದ್ದ ಟ್ಯಾಬ್‌ನಲ್ಲಿ ಇಟ್ಟುಕೊಂಡಿದ್ದ. ಬಳಿಕ ಜನವರಿ 7, 2026ರಂದು ಅಂದರೆ ಪರೀಕ್ಷೆಯ ಎರಡು ದಿನ ಮುಂಚೆ ಹೆಚ್‌ಪಿ ಪೆನ್‌ಡ್ರೈವ್‌ಗೆ ಕಾಪಿ ಮಾಡಿಕೊಂಡಿದ್ದ. ಅದನ್ನ ಕನ್ನಾಳೆಗೆ ನೀಡಿರೋರು ತನಿಖೆ ವೇಳೆ ಗೊತ್ತಾಗಿದೆ. ಇನ್ನೂ ಬಸವರಾಜ್ ಕನ್ನಾಳೆಗೆ ಪೆನ್ ಡ್ರೈವ್ ಕೊಟ್ಟ ಬಳಿಕ ಗ್ಯಾನೇಂದ್ರ ಮತ್ತೊಂದು ಪ್ಲಾನ್ ಮಾಡಿದ್ದ. ತಾನು ಸಿಕ್ಕಿ ಬಿದ್ರು ಯಾವುದೇ ಸಾಕ್ಷ ಸಿಗಬಾರದು ಅಂತ ಟ್ಯಾಬ್ ಅನ್ನೇ ಒಡೆದು ಚಿಂದಿ ಮಾಡಿದ್ದ. ಇ.ಡಿ ಅಧಿಕಾರಿಗಳು ಟ್ಯಾಬ್ ಗಾಗಿ ಹುಡುಕಾಡಿದ್ರು ಇದುವರೆಗೂ ಏನೂ ಚಿಕ್ಕ ಅವಷೇಶವು ಸಿಕ್ಕಿಲ್ಲ.
ಇನ್ನು ಗ್ಯಾನೇಂದ್ರ ಬಳಿ 2-3 ಜನರಿಗೆ ಮಾತ್ರ ಈ ಪ್ರಶ್ನೆ ಪ್ರತಿಕೆ ನೀಡ್ತೀನಿ ಅಂತ ಕನ್ನಾಳೆ ಹೇಳಿದ್ದನಂತೆ. ಆದ್ರೆ ಬಸವರಾಜ್ ಕನ್ನಾಳೆಹತ್ತಕ್ಕೂ ಹೆಚ್ಚು ಜನರಿಗೆ ಮಾರಾಟ ಮಾಡಿ, ಕೋಟಿ-ಕೋಟಿ ಹಣ ಗಳಿಸಿದ್ದ. ಇನ್ನೂ ಈ ವ್ಯವಹಾರದಿಂದ ಬಂದ ಹಣದಲ್ಲಿ 1.3 ಕೋಟಿ ರೂಪಾಯಿ ನಗದನ್ನ ಗ್ಯಾನೇಂದ್ರಗೆ ನೀಡಿದ್ದ.. ಇಷ್ಟೇ ಅಲ್ಲದೆ ಬಸವರಾಜ ಕನ್ನಾಳೆ ಬಳಿ ಹಣ ಹಾಕಿಸಿಕೊಂಡು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ದ ಗ್ಯಾನೇಂದ್ರ. ಅದನ್ನ ತನ್ನ ಪ್ರೇಯಸಿಗೆ ಗಿಫ್ಟ್ ಕೊಡಿಸಿದ್ದನಂತೆ.
ನಗದು, ಚಿನ್ನ ಮಾತ್ರವಲ್ಲದೆ ಗ್ಯಾನೇಂದ್ರ ಸುತ್ತಾಟಕ್ಕೆ ಫ್ಲೈಟ್ ಟಿಕೆಟ್ ಸೇರಿದಂತೆ ಇತರ ವೆಚ್ಚಗಳನ್ನೂ ಕನ್ನಾಳೆಯೇ ಭರಿಸಿದ್ದ.. ಆದರೆ ಇ.ಡಿ ವಿಚಾರಣೆ ವೇಳೆ 23 ಲಕ್ಷ ರೂಪಾಯಿ ಮೌಲ್ಯದ ಜ್ಯುವೆಲ್ಲರಿಗೆ ಸಂಬಂಧಿಸಿದ ಹಣವನ್ನ ಚೆಕ್ ಮೂಲಕ ವಾಪಸ್ ಕನ್ನಾಳೆಗೆ ನೀಡಿರುವುದಾಗಿ ಗ್ಯಾನೇಂದ್ರ ಹೇಳಿದ್ದಾನೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರು ಗ್ಯಾನೇಂದ್ರ ಬಿಡುಗಡೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಬಸವರಾಜ್ ಕನ್ನಾಳೆ ಮಗಳು ಹುಟ್ಟಿದ ಹಿನ್ನೆಲೆ ಮಧ್ಯಂತರ ಜಾಮೀನು ಪಡೆದು ಬೀದರ್‌ನಲ್ಲಿದ್ದು, ನಾಳೆ ವಾಪಸ್ ಪರಪ್ಪನ ಅಗ್ರಹಾರ ಸೇರಲಿದ್ದಾನೆ. ಒಟ್ಟಾರೆ ಕೆಪಿಎಸ್ ಸಿ ಹಗರಣದಲ್ಲಿ ಇನ್ನೇಷ್ಟು ಸ್ಫೋಟಕ ವಿಚಾರ ಬಯಲಾಗುತ್ತೋ ಕಾದು ನೋಡಬೇಕಿದೆ.