• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹಾಲಿನ ದರ ₹8 ಹೆಚ್ಚಳ.. ಮತ್ತೆ ಬೆಲೆ ಏರಿಕೆ ಬಿಸಿ... ಜನರ ಜೇಬಿಗೆ ಕತ್ತರಿ!

ಹಾಲಿನ ದರ ₹8 ಹೆಚ್ಚಳ.. ಮತ್ತೆ ಬೆಲೆ ಏರಿಕೆ ಬಿಸಿ... ಜನರ ಜೇಬಿಗೆ ಕತ್ತರಿ!

ಬಮೂಲ್, ಚಮೂಲ್, ಮನ್ಮುಲ್ ಸೇರಿದಂತೆ ರಾಜ್ಯಾದ್ಯಂತ ಹಾಲು ಉತ್ಪಾದಕ ಒಕ್ಕೂಟ ಹಾಲಿನ ದರ ಏರಿಕೆಗೆ ಆಗ್ರಹಿಸಿವೆ. ಪ್ರತಿ ಲೀಟರ್ ಹಾಲಿಗೆ ಎಂಟು ರೂ.ವರೆಗೆ ದರ ಏರಿಕೆ ಮಾಡುವಂತೆ ಹಾಲು ಉತ್ಪಾದಕರ ಸಂಘ ಮನವಿ ಮಾಡಿದೆ.

Written ByYashaswini V
Published: Sep 18, 2026, 04:37 PM IST|Updated: Sep 18, 2026, 04:38 PM IST
joinshare
ಹಾಲಿನ ದರ ₹8 ಹೆಚ್ಚಳ.. ಮತ್ತೆ ಬೆಲೆ ಏರಿಕೆ ಬಿಸಿ... ಜನರ ಜೇಬಿಗೆ ಕತ್ತರಿ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯದಲ್ಲಿ ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಆಕಾಶಕ್ಕೆ ಮುತ್ತಿಡುತ್ತಿದ್ದು, ಬೆಲೆಯೇರಿಕೆಯ ಬಿಸಿಯಿಂದ ಜನ ಕಂಗಲಾಗಿದ್ದಾರೆ. ಏತನ್ಮಧ್ಯೆ, ಜನ ಸಾಮಾನ್ಯರಿಗೆ ಮತ್ತೊಂದು ಬಿಗ ಶಾಕ್‌ ಕೊಡೋದಕ್ಕೆ ಹಾಲು ಉತ್ಪಾದಕ ಸಂಘಗಳು ತಯಾರಾಗಿವೆ. ಬಮೂಲ್, ಚಮೂಲ್, ಮಂಡ್ಯ, ತುಮಕೂರು ಹಾಲು ಉತ್ಪಾದಕ ಒಕ್ಕೂಟಗಳು ಒಕ್ಕೊರಲಿನಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂಪಾಯಿ ಏರಿಕೆ ಮಾಡ್ಲೇಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡ್ಲಿಲ್ಲ ಅಂದ್ರೆ ʼವಿಧಾನಸೌಧ ಚಲೋʼ ಮಾಡ್ತೀವಿ ಅಂತ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ... ಅಸಲಿಗೆ ದರ ಏರಿಕೆಯಾಗೋಕೆ ಕಾರಣವೇನು? ಎಂಬ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹಾಲಿನ ದರ ಏರಿಗೆ ಹಾಲು ಒಕ್ಕೂಟಗಳ ಪ್ರಸ್ತಾವನೆ:
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಹಾಲು ಒಕ್ಕೂಟಗಳು ಸರ್ಕಾರದ ಮುಂದೆ ಹಾಲಿನ ದರ ಏರಿಕೆಯ ಬೃಹತ್ ಪ್ರಸ್ತಾವನೆ ಇಟ್ಟಿವೆ. ರೈತರ ಗೋಳು ಕೇಳೋರಿಲ್ಲ, ಒಕ್ಕೂಟಗಳ ನಿರ್ವಹಣೆ ಕಷ್ಟ ಆಗ್ತಿದೆ ಅನ್ನೋ ಕಾರಣ ಹೇಳಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಅಂದ್ರೂ 8 ರೂಪಾಯಿಗಳಷ್ಟು ದರ ಹೆಚ್ಚಿಸಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಬಳಕೆಯಾಗೊ ಹಾಲಿನ ಮೇಲೆಯೇ ಈ ಮಟ್ಟದಲ್ಲಿ ದರ ಏರಿಕೆಯಾದ್ರೆ ಜನರ ಜೇಬಿಗೆ ಕತ್ತರಿ ಬೀಳೋದಂತು ಪಕ್ಕಾ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.

ದರ ಏರಿಕೆ ಮಾಡೋಕೆ ಒಕ್ಕೂಟಗಳು ಕೊಡ್ತಿರೋ ಕಾರಣಗಳೂ ಕೂಡ ತುಂಬಾ ಗಂಭೀರವಾಗಿವೆ:-
* ಮುಂಗಾರು ಮಳೆ ಕೈಕೊಟ್ಟು ಶೇ. 70ರಷ್ಟು ಮಳೆ ಕೊರತೆಯಾಗಿರೋದ್ರಿಂದ, ರಾಸುಗಳಿಗೆ ತಿನ್ನಿಸೋ ಹಸಿ ಹಾಗೂ ಒಣ ಹುಲ್ಲಿಗೆ ಈಗ ತೀವ್ರ ಬರ ಕಾಡ್ತಿದೆ.
* ಮೆಕ್ಕೆಜೋಳ, ಇಂಡಿ ಬೂಸಾ, ಕಾಕಂಬಿಯಂಥ ಪಶು ಆಹಾರ ಕಚ್ಚಾ ಸಾಮಗ್ರಿಗಳ ಬೆಲೆಯೂ ಕೂಡ ಸುಮಾರು ಶೇ. 25ರಷ್ಟು ಜಿಗಿದು ಹೋಗಿದೆ.
* ಇನ್ನು ಮಧ್ಯ ಪ್ರಾಚ್ಯ ಯುದ್ಧದ ಎಫೆಕ್ಟ್‌ಗೆ ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಗ್ಯಾಸ್ ಹಾಗೂ ಫರ್ನೇಸ್ ಆಯಿಲ್ ರೇಟ್ ಕೂಡ ಶೇ. 30ರಷ್ಟು ಏರಿಕೆಯಾಗಿದೆ.

ಸರ್ಕಾರಕ್ಕೆ ಹಾಲು ಒಕ್ಕೂಟಗಳ ಎಚ್ಚರಿಕೆ:
ಈ ರೀತಿಯಾಗಿ ಕೇವಲ ರಾಸುಗಳ ಮೇವು ಅಷ್ಟೇ ಅಲ್ಲ, ಡೈರಿ ರನ್ನಿಂಗ್ ಕಾಸ್ಟ್ ಕೂಡ ಸಿಕ್ಕಾಪಟ್ಟೆ ದುಬಾರಿ ಆಗೋಗಿದೆ. ಡೈರಿಯಲ್ಲಿ ಪಾತ್ರೆಗಳು ಹಾಗೂ ಕ್ಯಾನ್ ವಾಶ್ ಮಾಡೋಕೆ ಬಳಸುವ ವಾಷಿಂಗ್ ಸೋಡಾ ಹಾಗೂ ಡಿಟರ್ಜೆಂಟ್ ರೇಟ್ ಕೂಡ ಡಬಲ್ ಆಗ್ತಿದೆ.ಇದರ ಜೊತೆಗೆ ಡೈರಿ ನೌಕರರಿಗೆ 7ನೇ ವೇತನ ಆಯೋಗದ ಗಿಫ್ಟ್ ಕೊಟ್ಟಿದ್ದರಿಂದ, ಆಡಳಿತಾತ್ಮಕ ವೆಚ್ಚ ಒಕ್ಕೂಟಗಳ ಬೆನ್ನುಮೂಳೆ ಮುರಿಯುವಂತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ರಾಜ್ಯ ಸರ್ಕಾರ ಮಾತ್ರ ಹಾಲಿನ ದರ ಏರಿಕೆ ಮಾಡುವ ಮನವಿಯನ್ನು ಪುರಸ್ಕರಿಸುತ್ತಿಲ್ಲ. ಈಗಲೂ ಸರ್ಕಾರ ನಮ್ಮ ಮನವಿಗೆ ಕಿವಿಗೊಡದಿದ್ದರೆ  ನಾವೇ ನೇರವಾಗಿ ಬಂದು  ವಿಧಾನಸೌಧ ಚಲೋ ಮಾಡ್ತೀವಿ ಅಂತ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಈಗಾಗ್ಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿ ರೇಟ್ ನೋಡಿ ಸುಸ್ತಾಗಿರೋ ನಮ್ಮ ಜನರಿಗೆ, ಈಗ ಹಾಲಿನ ದರ ಏರಿಕೆಯ ಈ ಹೊಸ ಬರೆ ತಟ್ಟುತ್ತಾ.. ಹಾಲಿನ ದರ ಏರಿಕೆಗೆ ಸರ್ಕಾರ ಒಪ್ಪುತ್ತಾ ಅನ್ನೊದನ್ನ ಕಾದು ನೋಡ್ಬೇಕಿದೆ.
 

Add Zee News as a Preferred Source
TAGS:
Price Hike