• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ : ಇಡಿ ದಾಳಿಯಲ್ಲಿ ಸಿಕ್ಕ 'ಸೀಕ್ರೆಟ್ ಡೈರಿ'ಯಲ್ಲಿ ಏನಿತ್ತು ಗೊತ್ತೆ..!

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ : ಇಡಿ ದಾಳಿಯಲ್ಲಿ ಸಿಕ್ಕ 'ಸೀಕ್ರೆಟ್ ಡೈರಿ'ಯಲ್ಲಿ ಏನಿತ್ತು ಗೊತ್ತೆ..!

ರೆಸಾರ್ಟ್‌ನಲ್ಲಿ ರಹಸ್ಯ ತರಬೇತಿ, ಕೋಟಿ ಕೋಟಿ ಹಣದ ಡೀಲಿಂಗ್... ಯಾರಿಂದ ಎಷ್ಟೆಷ್ಟು ಬಾಕಿ ಬರಬೇಕಿತ್ತು? ಅನ್ನೋ ಕಂಪ್ಲೀಟ್ 'ಮನಿ ಸೀಕ್ರೆಟ್' ಈಗ ಇಡಿ (ED) ಅಧಿಕಾರಿಗಳ ಕೈಸೇರಿದೆ. ಹಾಗಾದ್ರೆ ಆ ಡೈರಿಯಲ್ಲಿರೋ ಆ 8 ಜನರ ಹೆಸರುಗಳ್ಯಾರದ್ದು? ಬಾಕಿ ಉಳಿಸಿಕೊಂಡ ಹಣ ಎಷ್ಟು? ಸಂಪೂರ್ಣ ವರದಿ ಇಲ್ಲಿದೆ..

Reported ByKrishna NKEdited ByKrishna NK
Published: Sep 28, 2026, 06:12 PM IST|Updated: Sep 28, 2026, 06:20 PM IST
joinshare
KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ : ಇಡಿ ದಾಳಿಯಲ್ಲಿ ಸಿಕ್ಕ 'ಸೀಕ್ರೆಟ್ ಡೈರಿ'ಯಲ್ಲಿ ಏನಿತ್ತು ಗೊತ್ತೆ..!
Image Credit: KPSC Scam updates

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

KPSC Scam updates : ಕೆಪಿಎಸ್‌ಸಿ ಕರ್ಮಕಾಂಡ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಐಎಎಸ್ ಅಧಿಕಾರಿ ಸೇರಿದಂತೆ ಮಧ್ಯವರ್ತಿಗಳ ಬಂಧನವೂ ಆಗಿದೆ. ಸದ್ಯ ಅದೇ ಕೇಸ್‌ನ ಮತ್ತೊಂದು ಸ್ಫೋಟಕ ಸಾಕ್ಷ್ಯ ಸಿಐಡಿಗೆ ಸಿಕ್ಕಿದೆ. ಅದುವೇ ಬ್ರೋಕರ್ ಬಸವರಾಜ್ ಕನ್ನಾಳೆ ಡೈರಿ. ಹಾಗಾದ್ರೆ ಆ ಡೈರಿಯ ಸೀಕ್ರೆಟ್ ಏನು..? ಕಂಪ್ಲೀಟ್‌ ಮಾಹಿತಿ ಇಲ್ಲಿದೆ..

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದು ಎಲ್ಲರಿಗೂ ಗೊತ್ತೇ ಇದೆ. ಒಬ್ಬೊಬ್ಬ ಅಭ್ಯರ್ಥಿಗಳಿಂದ ಕೋಟಿ ಕೋಟಿ ಹಣ ಸಂಗ್ರಹಿಸಲಾಗಿತ್ತು. ಅವ್ರಿಗೆ ಖಾಸಗಿ ರೆಸಾರ್ಟ್‌ನಲ್ಲಿ ತರಬೇತಿ ನೀಡಿ ಪರೀಕ್ಷೆ ಬರೆಸಲಾಗ್ತಿತ್ತು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಸೇರಿದಂತೆ ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನ ಬಂಧಿಸಿದ್ದ ಸಿಐಡಿ ಪೊಲೀಸರು ಜೈಲಿಗೆ ಅಟ್ಟದ್ರು. ಅದೇ ಕೇಸ್‌ನ‌ ತನಿಖೆ ನಡೆಸ್ತಿರುವ ಇಡಿ ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ.. ಈ ಮಧ್ಯೆ ಬಸವರಾಜ್ ಕನ್ನಾಳೆ ಡೈರಿಯೊಂದು ಪತ್ತೆಯಾಗಿದ್ದು, ಹಣಕಾಸಿನ ಸೀಕ್ರೆಟ್ ರಿವೀಲ್ ಆಗಿದೆ..

ಹೌದು.. ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ್ ಕನ್ನಾಳೆಯೇ ಮೇನ್ ಕಿಂಗ್ ಪಿನ್. ಮಧ್ಯವರ್ತಿಯಾಗಿದ್ದ ಈತ ಅಭ್ಯರ್ಥಿಗಳು ಮತ್ತು ಅಧಿಕಾರಿಗಳ ಮಧ್ಯೆ ಸೇತುವೆಯಾಗಿದ್ದ. ಅಭ್ಯರ್ಥಿಗಳಿಂದ ಹಣ ಪಡೆದು ಅಧಿಕಾರಿಗಳಿಗೆ ತಲುಪಿಸೊ ಕೆಲಸ ಮಾಡ್ತಿದ್ದ. ಸದ್ಯ ಇಬ್ಬರ ವಿಚಾರಣೆಯನ್ನ ಇಡಿ ನಡೆಸ್ತಿದ್ದು, ಮನೆ ಪರಿಶೀಲನೆ ವೇಳೆ ಇಡಿ ಅಧಿಕಾರಿಗಳಿಗೆ ಡೈರಿಯೊಂದು ಸಿಕ್ಕಿದೆ. ಅದ್ರಲ್ಲಿ ಹಣಕಾಸಿನ ಸೀಕ್ರೆಟ್ ರಿವೀಲ್ ಆಗಿದೆ‌.

ಬಸವರಾಜ್ ಕನ್ನಾಳೆ ಡೈರಿ ಇಡಿ ಅಧಿಕಾರಿಗಳಿಗೆ ಸಿಕ್ಕಿದ್ದು, ಅದ್ರಲ್ಲಿ ಅಕ್ರಮದಲ್ಲಿ ಪರೀಕ್ಷೆ ಬರೆದಿದ್ದವರ ಲಿಸ್ಟ್, ಯಾರ್ಯಾರಿಂದ ಎಷ್ಟೆಷ್ಟು ಹಣ ಬರಬೇಕು ಎಂಬ ಲೆಕ್ಕ ಪತ್ತೆ ಆಗಿದೆ. ಅಲ್ಲದೇ ಬ್ಯಾಂಕ್ ಖಾತೆ ನಂಬರ್ ಕೂಡ ನಮೂದಿಸಲಾಗಿದೆ. ಹಾಗಾದ್ರೆ ಆ ಡೈರಿಯಲ್ಲಿ ಏನೆಲ್ಲ ಉಲ್ಲೇಖ ಆಗಿದೆ ಅನ್ನೋದನ್ನ ನೋಡೋದಾದ್ರೆ, ಸುಮಾರು 20 ಕ್ಕೂ ಹೆಚ್ಚು ಜನರಿಗೆ ರೆಸಾರ್ಟ್‌ನಲ್ಲಿ ತರಬೇತಿ ನೀಡಿರುವ ಕನ್ನಾಳೆ, ಅಭ್ಯರ್ಥಿಗಳಿಂದ ಹಣ ಸ್ವೀಕರಿಸಿರುವುದು ಹಾಗೂ ಬಾಕಿ ಉಳಿದಿರುವುದನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ..

ಅದ್ರಲ್ಲಿ 8 ಜನರ ಹೆಸರು ಬರೆಯಲಾಗಿದ್ದು, ಮಂಜುನಾಥ್ 10 ಲಕ್ಷ, ಪೂಜಾ 10 ಲಕ್ಷ, ಅಶ್ವಿನಿ ಕುಮಾರ್ 10 ಲಕ್ಷ, ಮೋಹನ್ ಕುಮಾರ್ 5 ಲಕ್ಷ, ಸಂಗಮೇಶ್ 10 ಲಕ್ಷ, ಪದ್ಮಾವತಿ 10 ಲಕ್ಷ, ಹರೀಶ್ ಅವರಿಂದ 10 ಲಕ್ಷ ಹಣ ಬರಬೇಕಿದೆ ಎಂದು ಬರೆದಿಟ್ಟುಕೊಂಡಿದ್ದ. ಸದ್ಯ ಡೈರಿಯನ್ನು ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು, ಯಾರ್ಯಾರ ಹೆಸರು ಉಲ್ಲೇಖ ಆಗಿದೆ ಅವರ ವಿಚಾರಣೆ ಕೂಡ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Add Zee News as a Preferred Source
TAGS:
Kannada News