SOCIAL MEDIA

Newsletter

PARTNER SITES
Select Language Select State

ನಕಲಿ ಔಷಧಿ ತಯಾರಿಕೆ ಜಾಲದ ಕಿಂಗ್ ಪಿನ್ ಅರೆಸ್ಟ್

ಆತ ನಕಲಿ ಔಷಧಿ ತಯಾರಿಕೆ ಜಾಲದ ಕಿಂಗ್ ಪಿನ್.ಒಂದೂವರೆ ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆತನ ಪತ್ತೆಗೆ ಎಸ್ಐಟಿ ಹರಸಾಹಸಪಟ್ಟಿತ್ತು.

Written By Chetana Devarmani
Published: Sep 28, 2026, 06:23 PM IST | Updated: Sep 28, 2026, 06:25 PM IST
Join

ಆತ ನಕಲಿ ಔಷಧಿ ತಯಾರಿಕೆ ಜಾಲದ ಕಿಂಗ್ ಪಿನ್.ಒಂದೂವರೆ ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆತನ ಪತ್ತೆಗೆ ಎಸ್ಐಟಿ ಹರಸಾಹಸಪಟ್ಟಿತ್ತು.ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.ಅಜರ್ ಬೈಜಾನ್ ಗೆ ಹಾರಿದ್ದ ಆತನ ಪತ್ತೆಗೆ ಕಾನೂನು ತೊಡಕು ಉಂಟಾಗಿತ್ತು.ಆದ್ರೆ ಕೊನೆಗೂ ಎಸ್ಐಟಿ ಬಲೆಗೆ ಆಸಾಮಿ ಬಿದ್ದಿದ್ದಾನೆ.

ಬಿಡದಿಯಲ್ಲಿ ಪತ್ತೆಯಾದ ನಕಲಿ ಔಷಧಿ ತಯಾರಿಕೆ ಜಾಲ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.ಬೆಂಗಳೂರು ದಕ್ಷಿಣ ಜಿಲ್ಲೆ ಪೊಲೀಸರು ಜಾಲವನ್ನು ಬಯಲಿಗೆ ಎಳೆದಿತ್ತು.ಇದಾದ ಬಳಿಕ ಕೇಸ್ ಎಸ್ಐಟಿಗೆ ವರ್ಗಾವಣೆ ಆಗಿತ್ತು.ವೀರೇಶ್ ಎಂಬಾತ ಸೇರಿ ಹಲವರನ್ನು ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ಮುಖ್ಯ ಆರೋಪಿ ಪ್ರಶಾಂತ್ ಪತ್ತೆಗೆ ಹರಸಾಹಸ ಪಟ್ಟಿದ್ರು. ಕೊನೆಗೂ ಆತನ‌ ಬಂಧನವಾಗಿದ್ದು,ಕೇಸ್ ಮತ್ತೊಂದು ತಿರುವ ಪಡೆದುಕೊಳ್ಳಲಿದೆ

ನಕಲಿ ಔಷಧಿ ತಯಾರಿಕೆ ಯಿಂದ ಹಿಡಿದು ಡಿಸ್ಟ್ರಿಬ್ಯೂಷನ್ ಕೂಡ ಪ್ರಶಾಂತ್ ಸಮ್ಮುಖದಲ್ಲೇ ನಡಿತಾ ಇತ್ತು.ಈ‌ ಜಾಲ ಬಯಲಿಗೆ ಬರ್ತಾ ಇದ್ದಂತೆ ಆರೋಪಿಯು ಒಂದೂವರೆ ತಿಂಗಳ ಹಿಂದೆ ಅಜರ್ ಬೈಜಾನ್ ಗೆ ಎಸ್ಕೇಪ್ ಆಗಿದ್ದ.ಆತನ ಇರುವಿಕೆಯನ್ನ ಎಸ್ಐಟಿ ಪತ್ತೆ ಹಚ್ಚಿದ್ರು,ಆದ್ರೆ ಭಾರತಕ್ಕೆ ಕರೆತರೋದು ಸಾಕಷ್ಟು ಸವಾಲಿನ ಕೆಲಸವಾಗಿತ್ತು.ಯಾಕಂದ್ರೆ,ಭಾರತ ಹಾಗೂ ಅಜರ್ ಬೈಜಾನ್ ನಡುವೆ ಟ್ರೀಟಿ ಅಂದರೆ ಎರಡು ದೇಶದ ನಡುವೆ ಯಾವುದೆ ರಾಜತಾಂತ್ರಿಕ‌ ಒಪ್ಪಂದ ಇಲ್ಲದ ಹಿನ್ನೆಲೆ ನೇರವಾಗಿ ಕರೆತರಲು ಅಸಾಧ್ಯವಾಗಿತ್ತು.ಹಾಗಾಗಿ ಆತನ ಬರುವಿಕೆಗಾಗಿ ಎಸ್ಐಟಿ ಎದುರು ನೋಡ್ತಿತ್ತು.ಅಲ್ಲಿ ದಂಡ ಪಾವತಿಸಿದ ಬಳಿಕ ಆತನನ್ನ ಅಲ್ಲಿಂದ ಹೊರ ಹಾಕಲಾಗಿತ್ತು..

ಶಾರ್ಜಾ ಮೂಲಕವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಶಾಂತ್ ಬರುವಾಗ ಲುಕ್ ಔಟ್ ನೋಟಿಸ್ ಜಾರಿಯಾಗಿದ್ದ ಹಿನ್ನಲೆ ಕಸ್ಟಮ್ಸ್ ಅಧಿಕಾರಿಗಳು ಆತನನ್ನ ವಶಕ್ಕೆ ಪಡೆದಿದ್ರು. ಅರೈವಲ್ ಗೇಟ್ ನಲ್ಲಿ ವಶಕ್ಕೆ ಪಡೆದ ಏರ್ಪೋರ್ಟ್ ಅಧಿಕಾರಿಗಳು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ರು.ಮುಂಜಾನೆ 5:40ರ ಸುಮಾರಿಗೆ ಎಸ್ಐಟಿ ತಂಡ ವಿಮಾನ ನಿಲ್ದಾಣಕ್ಕೆ ತೆರಳಿ ಕರೆತಂದಿದ್ದಾರೆ. ಬಳಿಕ ರಾಮನಗರ ಜೆಎಂಎಫ್ ಸಿ‌ ಕೋರ್ಟ್‌ ಗೆ ಹಾಜರು ಪಡಿಸಿ ಅಕ್ಟೋಬರ್ 7 ರ ತನಕ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES