• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಅಕ್ರಮಗಳ ಆರೋಪದ ನಡುವೆ ಯಶಸ್ವಿಯಾಗಿ ನಡೆದ KAS ಪೂರ್ವಭಾವಿ ಪರೀಕ್ಷೆ.!

ಅಕ್ರಮಗಳ ಆರೋಪದ ನಡುವೆ ಯಶಸ್ವಿಯಾಗಿ ನಡೆದ KAS ಪೂರ್ವಭಾವಿ ಪರೀಕ್ಷೆ.!

ಕರ್ನಾಟಕ ಲೋಕಸೇವಾ ಆಯೋಗವು (KPSC) ಇಂದು ರಾಜ್ಯಾದ್ಯಂತ ಕಟ್ಟುನಿಟ್ಟಿನ ಭದ್ರತೆ ಹಾಗೂ ನೂತನ ನಿಯಮಗಳೊಂದಿಗೆ ಕೆಎಎಸ್ (KAS) ಗೆಜೆಟೆಡ್ ಪ್ರೊಬೆಷನರಿ ಪ್ರಿಲಿಮ್ಸ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಅಭ್ಯರ್ಥಿಗಳಿಗೆ ಕಠಿಣ ವಸ್ತ್ರಸಂಹಿತೆ ಮತ್ತು ಹೊಸ ಮಾದರಿಯ ಒಎಂಆರ್ (OMR) ಶೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 15, 2026, 17:29 IST|Updated: Nov 15, 2026, 17:30 IST
joinshare
ಅಕ್ರಮಗಳ ಆರೋಪದ ನಡುವೆ ಯಶಸ್ವಿಯಾಗಿ ನಡೆದ KAS ಪೂರ್ವಭಾವಿ ಪರೀಕ್ಷೆ.!
Image Credit: KAS Exams

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಅಕ್ರಮಗಳ ಆರೋಪ ಹೊತ್ತ ಕೆಪಿಎಸ್‌ಸಿ ಇಂದು ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯನ್ನ ನಡೆಸಿದೆ.. ಈ ಹಿಂದೆ ಆದ ಎಡವಟ್ಟು ಮತ್ತೆ ಆಗಬಾರದು ಅಂತ ಬಹಳಷ್ಟು ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿದೆ.. ಹಾಗಾದ್ರೆ ಇವತ್ತಿನ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಏನೆಲ್ಲಾ ಆಯ್ತು ಅನ್ನೋದರ ವರದಿ ಇಲ್ಲಿದೆ..

ಕೆಪಿಎಸ್‌ಸಿ ಯಾವುದೇ ಪರೀಕ್ಷೆ ಮಾಡಿದ್ರೂ ಸರಿಯಾಗಲ್ಲ.. ಸಾಕಷ್ಟು ಅಕ್ರಮಗಳಾಗುತ್ತೆ ಅಂತ ಆರೋಪ ಹೊತ್ತುಕೊಂಡಿದೆ.. ಮತ್ತೊಂದು ಕಡೆ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಆಗಿದೆ ಅನ್ನೋ ವಿಚಾರ ಕೂಡ ತೀವ್ರವಾಗಿ ತನಿಖೆ ಆಗ್ತಾ ಇದೆ.. ಈ ನಡುವೆ ಇಂದು ಕೆಪಿಎಸ್‌ಸಿ ಕೆಎಎಸ್ ಗೆಜೆಟೆಡ್ ಪ್ರೊಬೆಷನರಿ ಪ್ರಿಲಿಮ್ಸ್ ಪರೀಕ್ಷೆಯನ್ನ ರಾಜ್ಯದಾದ್ಯಂತ ನಡೆಸಿದೆ.. 319 ಹುದ್ದೆಗೆ 1 ಲಕ್ಷದ 47 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ರಾಜ್ಯದ 15 ಜಿಲ್ಲೆಗಳ 345 ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಯ್ತು..

ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಭದ್ರತೆ ವಹಿಸಲಾಗಿತ್ತು.. ಅಡಿ ಅಡಿಗೂ ಪೊಲೀಸರು ಕಣ್ಗಾವಲನ್ನ ಇರಿಸಿದ್ರು.. ಪರೀಕ್ಷಾ ಕೊಠಡಿಗಳ ಹೊರ ಹಾಗೂ ಒಳ ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು.. ಪರೀಕ್ಷೆ ಬರೆಯುವ ಅಭ್ಯರ್ಥಿ ಯಾವುದೇ ರೀತಿ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನ ಕೊಂಡೊಯ್ಯುವಂತಿರಲಿಲ್ಲ.. ಜೊತೆಗೆ ವಸ್ತ್ರಸಂಹಿತೆ ಕೂಡ ಜಾರಿ ಮಾಡಲಾಗಿತ್ತು.. ಹೀಗಾಗಿ ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲೇ ಅಭ್ಯರ್ಥಿಗಳನ್ನ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯ್ತು.. ಅಭ್ಯರ್ಥಿಗಳು ಧರಿಸಿದ ಅಂಗಿ, ಪ್ಯಾಂಟ್, ಕಿವಿ, ಬಾಯಿ ಸೇರಿದಂತೆ ಸಂಪೂರ್ಣವಾಗಿ ತಪಾಸಣೆ ನಡೆಸಲಾಯ್ತು..

ಪ್ರಮುಖವಾಗಿ ಅನೇಕರು ತುಂಬುತೋಳಿನ ಶರ್ಟ್ ಧರಿಸಿ ಬಂದಿದ್ರು.. ಬೇರೆ ವಿಧಿ ಇಲ್ಲದೇ ಅಭ್ಯರ್ಥಿಗಳು ತಮ್ಮ ಫುಲ್ ಸ್ಲೀವ್ ಅನ್ನ ಕಟ್ ಮಾಡಿ ಒಳಗೆ ತೆರಳಿದ್ರು.. ಅದರಲ್ಲೂ ಒಬ್ಬ ವಿಶೇಷ ಚೇತನ ಅಭ್ಯರ್ಥಿಯೂ ತನ್ನ ಶರ್ಟ್ ಅನ್ನ ಕತ್ತರಿಸಲು ಇಷ್ಟಪಡದೇ ಕೇವಲ ಬನಿಯನ್ ಧರಿಸಿ ಪರೀಕ್ಷೆ ಬರೆದ್ರು.. ಕಾರಣ ಅಂಗಿ ತೆಗೆದುಕೊಳ್ಳಲು ಸಹ ಕೆಲವರ ಬಳಿ ಹಣ ಇರಲ್ಲ.. ಅಂತಹ ಕಡು ಬಡತನ ಕುಟುಂಬದಲ್ಲಿ ಹುಟ್ಟಿದ ಅದೆಷ್ಟೋ ಅಭ್ಯರ್ಥಿಗಳು ಇಂದು ಪರೀಕ್ಷೆಗೆ ಬಂದಿದ್ರು.. ಕಷ್ಟಪಟ್ಟು ಪರೀಕ್ಷೆ ಬರೆದಿದ್ದೇವೆ, ಯಾವುದೇ ರೀತಿ ಅಕ್ರಮ ಆಗಬಾರದು, ನಮ್ಮಂತ ಅರ್ಹ ಅಭ್ಯರ್ಥಿಗಳಿಗೆ ಕೆಲಸ ಸಿಗಬೇಕು ಅಂದ್ರು..

ಈ ಬಾರಿ ಪರೀಕ್ಷೆಯ ಒಎಂಆರ್ ಶೀಟ್‌ನಲ್ಲೂ ಕೂಡ ಬದಲಾವಣೆ ತರಲಾಗಿತ್ತು.. ಸಾಮಾನ್ಯವಾಗಿ ಒಎಂಆರ್ ಶೀಟ್‌ನಲ್ಲಿ ನಾಲ್ಕು ಕಾಲಂಗಳಲ್ಲಿ ಉತ್ತರಿಸಲು ಅವಕಾಶ ಇರ್ತಾ ಇತ್ತು.. ಆದ್ರೆ ಈ ಬಾರಿ ಹೆಚ್ಚುವರಿಯಾಗಿ ಐದನೇ ಕಾಲಂ ಕೂಡ ಸೇರಿಸಲಾಗಿದ್ದು, ಇದರಲ್ಲಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕು.. ಅಭ್ಯರ್ಥಿಗಳು ಯಾವುದೇ ರೀತಿ ಕಾಲಂ ಖಾಲಿ ಬಿಡುವಂತೆ ಇರಲಿಲ್ಲ.. ಕಾರಣ ಒಂದು ವೇಳೆ ಉತ್ತರ ಬರೆಯದೇ ಖಾಲಿ ಬಿಟ್ಟರೆ, ಅಕ್ರಮದ ಸಂದರ್ಭದಲ್ಲಿ ಉತ್ತರ ತುಂಬುವ ಸಾಧ್ಯತೆ ಹೆಚ್ಚಿರುತ್ತದೆ.. ಹೀಗಾಗಿ ಕಡ್ಡಾಯವಾಗಿ ಎಲ್ಲಾ ಪ್ರಶ್ನೆಗೂ ಉತ್ತರ ಬರೆಯಲೇಬೇಕಿತ್ತು.. ಇನ್ನೂ ಈ ಬಾರಿ ಮೂರು ಒಎಂಆರ್ ನೀಡಲಾಗಿದೆ.. ಒಂದು ಅಭ್ಯರ್ಥಿಗೆ, ಮತ್ತೊಂದು ಕೆಪಿಎಸ್‌ಸಿಗೆ ಹಾಗೂ ಇನ್ನೊಂದು ಜಿಲ್ಲಾಧಿಕಾರಿಗಳ ಸ್ಟ್ರಾಂಗ್ ಕೊಠಡಿಯಲ್ಲಿ ಇರಲಿದೆ.. ಹೀಗಾಗಿ ಅಕ್ರಮವಾಗಿದೆ ಎಂದು ತಿಳಿದ್ರೆ ಅದನ್ನ ಕ್ರಾಸ್ ಚೆಕ್ ಮಾಡಲು ಸಹಕಾರಿಯಾಗಲಿ ಅನ್ನೋ ಕಾರಣದಿಂದ ಮೂರು ಒಎಂಆರ್ ಶೀಟ್ ನೀಡಲಾಗಿದೆ..

ಒಟ್ನಲ್ಲಿ.. ಅಕ್ರಮದ ಆರೋಪ ಕೇಳಿ ಬಂದ ಬಳಿಕ ಕೆಪಿಎಸ್‌ಸಿ ಇಂದು ಮೊದಲ ಪರೀಕ್ಷೆ ನಡೆಸಿದೆ.. ಆದ್ರೆ ಕಾದು ನೋಡಬೇಕಿದೆ, ಇಂದು ನಡೆದ ಪರೀಕ್ಷೆಯಲ್ಲಿ ನಿಜಕ್ಕೂ ಯಾವುದಾದರೂ ಅಕ್ರಮ ನಡೆದಿದ್ಯೋ ಇಲ್ವೋ ಅನ್ನೋದು..

Add Zee News as a Preferred Source
TAGS:
Kannada News