• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರಾಜಧಾನಿಯಲ್ಲಿ ಮಳೆ ಬಂದರೆ ಸಾಕು ಕೆರೆಯಂತಾಗುವ ರಸ್ತೆಗಳು : ಆನೇಕಲ್ ಜನತೆಗೆ ತಪ್ಪದ ಸಂಕಷ್ಟ

ರಾಜಧಾನಿಯಲ್ಲಿ ಮಳೆ ಬಂದರೆ ಸಾಕು ಕೆರೆಯಂತಾಗುವ ರಸ್ತೆಗಳು : ಆನೇಕಲ್ ಜನತೆಗೆ ತಪ್ಪದ ಸಂಕಷ್ಟ

ಆನೇಕಲ್ ತಾಲ್ಲೂಕಿನಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಲಲಿಗೆ ರೈಲ್ವೆ ಅಂಡರ್‌ಪಾಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 20, 2026, 04:48 PM IST|Updated: Sep 20, 2026, 04:59 PM IST
joinshare
ರಾಜಧಾನಿಯಲ್ಲಿ ಮಳೆ ಬಂದರೆ ಸಾಕು ಕೆರೆಯಂತಾಗುವ ರಸ್ತೆಗಳು : ಆನೇಕಲ್ ಜನತೆಗೆ ತಪ್ಪದ ಸಂಕಷ್ಟ
Image Credit: Bengaluru Rains

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಮಳೆ ಬಂದ್ರೆ ಸಾಕು ಇಲ್ಲಿನ ಹಲವು ರಸ್ತೆಗಳು ಕೆರೆಯಂತಾಗ್ತವೆ. ಅಂಡರ್‌ಪಾಸ್‌ಗಳು ಜಲಾವೃತಗೊಂಡು ಹೆದ್ದಾರಿಗಳು ಕೆಸರುಗದ್ದೆಯಂತಾಗುತ್ತವೆ. ಇದರಿಂದ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಆನೇಕಲ್‌ ತಾಲ್ಲೂಕಿನ ಹಲವು ಭಾಗಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಲಲಿಗೆ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದ್ರೆ, ಇದೇ ಜಲಾವೃತ ರಸ್ತೆಯಲ್ಲಿ ಆನೇಕಲ್ ಶಾಸಕರೂ ನಡೆದು ಪರಿಸ್ಥಿತಿ ಪರಿಶೀಲಿಸಬೇಕಾಯಿತು. ಇತ್ತ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲೂ ಮಳೆ ನೀರು ಹಾಗೂ ಕೆಸರಿನಿಂದ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಮಳೆ ಬಂದ್ರೆ ಆನೇಕಲ್‌ನ ರಸ್ತೆಗಳ ಪರಿಸ್ಥಿತಿ ಹೇಗಾಗುತ್ತೆ.

ಮಳೆ ಬಂತು ಅಂದ್ರೆ ಸಾಕು ರಸ್ತೆ ಎಲ್ಲಿ ನೀರು ಎಲ್ಲಿ ಅನ್ನೋದೇ ಗೊತ್ತಾಗಲ್ಲ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಆನೇಕಲ್‌ ತಾಲ್ಲೂಕಿನ ಹೀಲಲಿಗೆ ರೈಲ್ವೆ ಅಂಡರ್‌ಪಾಸ್ ಸಂಪೂರ್ಣ ಜಲಾವೃತವಾಗಿದೆ. ರಸ್ತೆ ಮೇಲೆ ನಿಂತ ನೀರು, ನೀರಿನ ಮಧ್ಯೆ ಸಿಲುಕಿದ ವಾಹನಗಳು, ಕೆಲವೆಡೆ ಕೆಟ್ಟು ನಿಂತ ವಾಹನಗಳು, ಅಂಡರ್‌ಪಾಸ್‌ ದಾಟಲು ಸಾಧ್ಯವಾಗದೆ ವಾಹನ ಸವಾರರು ಪರದಾಡಿದ್ರೆ, ಪಾದಚಾರಿಗಳಿಗೂ ಇದೇ ನೀರಿನಲ್ಲೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ಮಳೆ ನಿಂತು ಗಂಟೆಗಳು ಕಳೆದ್ರೂ ಅಂಡರ್‌ಪಾಸ್‌ನಲ್ಲಿನ ನೀರು ಮಾತ್ರ ಇಳಿಯಲೇ ಇಲ್ಲ. ನೀರು ತುಂಬಿದ ರಸ್ತೆಯಲ್ಲೇ ಶಾಸಕರು ಹೊಗಬೇಕಾದ ಪರಿಸ್ಥಿತಿ ಎದುರಾಗಿದ್ದು ಇದೇ ಜಲಾವೃತ ರಸ್ತೆಯಲ್ಲಿ ಆನೇಕಲ್ ಶಾಸಕ ಬಿ.ಶಿವಣ್ಣ ಕೂಡ ನಡೆದು ಪರಿಸ್ಥಿತಿ ಪರಿಶೀಲಿಸಿದರು. ಹೀಲಲಿಗೆ ಅಂಡರ್‌ಪಾಸ್‌ನ ಸಮಸ್ಯೆ ಇಂದಿನದ್ದಲ್ಲ, ಮಳೆ ಬಂದಾಗಲೆಲ್ಲ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ. ರೈಲ್ವೆ ಇಲಾಖೆಯ ಗಮನಕ್ಕೆ ಹಲವು ಬಾರಿ ಸಮಸ್ಯೆ ತಂದಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ರೈಲ್ವೆ ಇಲಾಖೆಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಹೀಲಲಿಗೆಯಲ್ಲಿ ಅಂಡರ್‌ಪಾಸ್ ಜಲಾವೃತವಾದ್ರೆ, ಇತ್ತ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲೂ ಮಳೆ ಅವಾಂತರವೇ ಸೃಷ್ಠಿಯಾಗಿದೆ. ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆಯುದ್ದಕ್ಕೂ ಮಳೆ ನೀರು ನಿಂತು, ಹೆದ್ದಾರಿಯೇ ಕೆಸರುಗದ್ದೆಯಾಗಿ ಮಾರ್ಪಟ್ಟಿತ್ತು. ಇದರ ನಡುವೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ, ಒಂದೆಡೆ ನೀರು,ಮತ್ತೊಂದೆಡೆ ಕೆಸರು, ಪರಿಣಾಮ ವಾಹನಗಳ ಸಂಚಾರ ನಿಧಾನವಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

ಟ್ರಾಫಿಕ್ ನಿಯಂತ್ರಿಸಲು ಸೂರ್ಯನಗರ ಪೊಲೀಸರು ಹರಸಾಹಸ ಪಡಬೇಕಾಯಿತು. ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಮಳೆ ಬಂದರೆ ಮತ್ತಷ್ಟು ಕಿರಿಕಿರಿ ಉಂಟಾಗಿ ವಾಹನ ಸವಾರರಿಗೆ ಸಂಕಷ್ಟ ತಪ್ಪಿದ್ದಲ್ಲ. ಬೆಂಗಳೂರು-ಹೊಸೂರು ಹೆದ್ದಾರಿ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ, ಮಳೆ ಬಂದಾಗಲೆಲ್ಲಾ ವಾಹನ ಸವಾರರಿಗೆ ಸಂಕಷ್ಟ ಎದುರಾಗುತ್ತಿದೆ. ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯಿಂದ ಹೈರಾಣಾಗಿದ್ದಾರೆ. ಕಾಮಗಾರಿ ಆರಂಭಿಸುವಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಟ್ರಾಫಿಕ್ ಸಮಸ್ಯೆ ತಾತ್ಕಾಲಿಕವಾಗಿ ಪೊಲೀಸರ ಮೂಲಕ ನಿಯಂತ್ರಿಸಲಾಗುತ್ತಿದೆ.

ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದ್ದಾರೆ. ಇನ್ನು ಹೀಲಲಿಗೆ ಮಾತ್ರವಲ್ಲ, ಜಿಗಣಿ ಬನ್ನೇರುಘಟ್ಟ ರಸ್ತೆಯಲ್ಲೂ ಮಳೆಯ ಎಫೆಕ್ಟ್ ಮುಂದುವರಿದಿತ್ತು. ರಾಗಿಹಳ್ಳಿ ಗೇಟ್ ಬಳಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ನಿಂತಿತ್ತು. ರಸ್ತೆ ಜಲಾವೃತವಾಗಿದ್ದರಿಂದ ವಾಹನ ಸವಾರರು ನೀರಿನಲ್ಲೇ ವಾಹನ ಚಲಾಯಿಸಿಕೊಂಡು ಸಾಗಬೇಕಾಯಿತು.

ಒಟ್ಟಾರೆ.. ಆನೇಕಲ್‌ನ ಹಲವು ರಸ್ತೆಗಳಲ್ಲೂ ಮಳೆ ಅವಾಂತರ ಜನರನ್ನ ಕಾಡಿದೆ. ಒಂದೆಡೆ ಅಂಡರ್‌ಪಾಸ್‌ನಲ್ಲಿ ಜಲ ದಿಗ್ಬಂಧನ.. ಮತ್ತೊಂದೆಡೆ ಹೆದ್ದಾರಿ ಕೆಸರುಗದ್ದೆ, ಇದರ ನಡುವೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್, ಮಳೆ ನಿಲ್ಲುತ್ತೆ, ನೀರು ಇಳಿಯುತ್ತೆ, ಆದ್ರೆ ಆನೇಕಲ್‌ನ ರಸ್ತೆ ಸಮಸ್ಯೆ ಮಾತ್ರ ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ, ಪ್ರತಿ ಬಾರಿಯೂ ಜನರ ಪರದಾಟ, ಹೀಲಲಿಗೆ ಅಂಡರ್‌ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ, ಬೆಂಗಳೂರು ಹೊಸೂರು ಹೆದ್ದಾರಿ ಕಾಮಗಾರಿ ಯಾವಾಗ ಪೂರ್ಣ ಆಗುತ್ತೆ, ಈ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಉತ್ತರ ನೀಡಬೇಕಿದೆ.

Add Zee News as a Preferred Source
TAGS:
Kannada News