• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣಗಳ MRP ಅಕ್ರಮ ಕಡಿವಾಣಕ್ಕೆ ಕರ್ನಾಟಕ FDA ಕ್ರಮ

ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣಗಳ MRP ಅಕ್ರಮ ಕಡಿವಾಣಕ್ಕೆ ಕರ್ನಾಟಕ FDA ಕ್ರಮ

ಖಾಸಗಿ ಆಸ್ಪತ್ರೆಗಳು ಕಂಪನಿಗಳಿಂದ ತೀರಾ ಕಡಿಮೆ ದರಕ್ಕೆ (ಇನ್‌ಸ್ಟಿಟ್ಯೂಷನಲ್ ಪ್ರೈಸ್) ಔಷಧಿ ಹಾಗೂ ಮೆಡಿಕಲ್ ಉಪಕರಣಗಳನ್ನು ಖರೀದಿಸಿ, ರೋಗಿಗಳಿಗೆ ಮಾತ್ರ ಭಾರಿ ಪ್ರಮಾಣದ MRP ದರದಲ್ಲೇ ಬಿಲ್ ಹಾಕಿ ಜೇಬು ಖಾಲಿ ಮಾಡುತ್ತಿವೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು.

Reported ByManjunath NaragundEdited ByManjunath Naragund
Published: Oct 01, 2026, 12:21 PM IST|Updated: Oct 01, 2026, 12:25 PM IST
joinshare
ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣಗಳ MRP ಅಕ್ರಮ ಕಡಿವಾಣಕ್ಕೆ ಕರ್ನಾಟಕ FDA ಕ್ರಮ
Image Credit: Representation only

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣ ಹಾಗೂ ಸರ್ಜಿಕಲ್ ಸಾಮಗ್ರಿಗಳ ಮೇಲೆ ಮುದ್ರಿತವಾಗುವ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (MRP) ಹೆಸರಿನಲ್ಲಿ ರೋಗಿಗಳಿಂದ ಅತಿಯಾದ ಹಣ ವಸೂಲಿ ಮಾಡುತ್ತಿರುವುದಕ್ಕೆ ಕೊನೆಹಾಡಲು ಕರ್ನಾಟಕ ಔಷಧ ನಿಯಂತ್ರಣ ಇಲಾಖೆ (FDA) ಮಹತ್ವದ ಹೆಜ್ಜೆ ಇಟ್ಟಿದೆ. ಆಸ್ಪತ್ರೆಗಳ ಈ ಮನಸೋ ಇಚ್ಛೆ ಲಾಭಕೋರತನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರಕ್ಕೆ ಸರಣಿ ಮಹತ್ವದ ಶಿಫಾರಸುಗಳನ್ನು ಸಲ್ಲಿಸಿದೆ.

ಖಾಸಗಿ ಆಸ್ಪತ್ರೆಗಳು ಕಂಪನಿಗಳಿಂದ ತೀರಾ ಕಡಿಮೆ ದರಕ್ಕೆ (ಇನ್‌ಸ್ಟಿಟ್ಯೂಷನಲ್ ಪ್ರೈಸ್) ಔಷಧಿ ಹಾಗೂ ಮೆಡಿಕಲ್ ಉಪಕರಣಗಳನ್ನು ಖರೀದಿಸಿ, ರೋಗಿಗಳಿಗೆ ಮಾತ್ರ ಭಾರಿ ಪ್ರಮಾಣದ MRP ದರದಲ್ಲೇ ಬಿಲ್ ಹಾಕಿ ಜೇಬು ಖಾಲಿ ಮಾಡುತ್ತಿವೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಎಫ್‌ಡಿಎ, ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ 'ಔಷಧ ಬೆಲೆ ನಿಯಂತ್ರಣ ಆದೇಶ' (DPCO) ವ್ಯವಸ್ಥೆಯಲ್ಲಿ ತುರ್ತು ಬದಲಾವಣೆ ತರುವಂತೆ ಒತ್ತಾಯಿಸಿದೆ.

ಕೇಂದ್ರ ಸರ್ಕಾರಕ್ಕೆ ರಾಜ್ಯ ಎಫ್‌ಡಿಎ ಸಲ್ಲಿಸಿದ ಪ್ರಮುಖ ಶಿಫಾರಸುಗಳು:

ಲ್ಯಾಂಡಿಂಗ್ ಕಾಸ್ಟ್ ಬಹಿರಂಗ: ಆಸ್ಪತ್ರೆಗಳು ರೋಗಿಗಳಿಗೆ ನೀಡುವ ಅಂತಿಮ ಬಿಲ್‌ನಲ್ಲಿ ಔಷಧ ಅಥವಾ ಉಪಕರಣದ ನಿಜವಾದ ಖರೀದಿ ವೆಚ್ಚ (Landing Cost) ಮತ್ತು MRP ಎರಡನ್ನೂ ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸುವಂತೆ ನಿಯಮ ರೂಪಿಸಲು ಮನವಿ ಮಾಡಲಾಗಿದೆ.

ಬಿಡಿಭಾಗಗಳು ಮತ್ತು ಉಪಕರಣಗಳ ಬೆಲೆ ನಿಯಂತ್ರಣ: 'ಔಷಧ ಬೆಲೆ ನಿಯಂತ್ರಣ ಆದೇಶ-2013' (DPCO) ವ್ಯಾಪ್ತಿಯನ್ನು ತಕ್ಷಣವೇ ವಿಸ್ತರಿಸಿ, ಆಸ್ಪತ್ರೆಗಳಲ್ಲಿ ಬಳಸುವ ಸರ್ಜಿಕಲ್ ಕನ್ಸ್ಯೂಮಬಲ್ಸ್ ಹಾಗೂ ಪ್ರಮುಖ ವೈದ್ಯಕೀಯ ಉಪಕರಣಗಳನ್ನು ಬೆಲೆ ನಿಯಂತ್ರಣ ಚೌಕಟ್ಟಿಗೆ ತರಬೇಕು.

ಟ್ರೇಡ್ ಮಾರ್ಜಿನ್ ಶೇಕಡಾವಾರು ಮಿತಿ: ಔಷಧಿ ಕಂಪನಿಗಳು, ವಿತರಕರು ಹಾಗೂ ಆಸ್ಪತ್ರೆಗಳು ಪಡೆಯುವ ಶೇಕಡಾವಾರು ವ್ಯಾಪಾರ ಲಾಭಕ್ಕೆ (Trade Margin) ನಿರ್ದಿಷ್ಟ ಮಿತಿ ಹೇರಬೇಕು.

ಅಗತ್ಯ ಔಷಧಿಗಳ ಪಟ್ಟಿ ವಿಸ್ತರಣೆ: ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರಸ್ತುತ ಇರುವ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು (NLEM) ವಿಸ್ತರಿಸಬೇಕು.

ಸಂಸ್ಥಾ ದರದ ಪಾರದರ್ಶಕತೆ: ಆಸ್ಪತ್ರೆಗಳಿಗೆ ಕಂಪನಿಗಳು ನೀಡುವ 'ಇನ್‌ಸ್ಟಿಟ್ಯೂಷನಲ್ ಡಿಸ್ಕೌಂಟ್' ಮತ್ತು ಕಡಿತಗೊಳಿಸಿದ ಬೆಲೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಕಡ್ಡಾಯವಾಗಬೇಕು.

ಪ್ರಸ್ತುತ ಇರುವ ಬೆಲೆ ನಿಯಂತ್ರಣದ ಲೋಪಗಳು:

ಸದ್ಯ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ನಿಗದಿಪಡಿಸುವ 'ಶೆಡ್ಯೂಲ್ಡ್' ಔಷಧಿಗಳಿಗೆ ಮಾತ್ರ ಶೇ. 16 ರಷ್ಟು ರಿಟೇಲರ್ ಮಾರ್ಜಿನ್ ಮಿತಿ ಇದೆ. ಆದರೆ, 'ನಾನ್-ಶೆಡ್ಯೂಲ್ಡ್' ಔಷಧಿಗಳಿಗೆ ಯಾವುದೇ ನಿರ್ದಿಷ್ಟ ಲಾಭದ ಮಿತಿ ಇಲ್ಲದಿರುವುದರಿಂದ ತಯಾರಕರು ನಮೂದಿಸುವ ಅಧಿಕ MRP ಯೇ ಅಂತಿಮವಾಗುತ್ತಿದೆ.

ಅದರಲ್ಲೂ ಮುಖ್ಯವಾಗಿ ಸರ್ಜಿಕಲ್ ಗ್ಲೌಸ್, ಸಿರಿಂಜ್, ಕ್ಯಾತಿಟರ್, ಸ್ಟೆಂಟ್ ಹಾಗೂ ರೋಗಿಗಳಿಗೆ ಬಳಸುವ ದಿನನಿತ್ಯದ ಕನ್ಸ್ಯೂಮಬಲ್ಸ್‌ಗಳ ಮೇಲೆ ಯಾವುದೇ ಬೆಲೆ ನಿಯಂತ್ರಣವಿಲ್ಲ. ಆಸ್ಪತ್ರೆಗಳು ತಮಗೆ ಸಿಗುವ ಭಾರಿ ಪ್ರಮಾಣದ ಡಿಸ್ಕೌಂಟ್ ಲಾಭವನ್ನು ರೋಗಿಗಳಿಗೆ ವರ್ಗಾಯಿಸದೆ ತಾವೇ ಜೇಬಿಗಿಳಿಸಿಕೊಳ್ಳುತ್ತಿವೆ.

ಕರ್ನಾಟಕ ಎಫ್‌ಡಿಎ ನೀಡಿರುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿ ಕಾಯ್ದೆಗೆ ತಿದ್ದುಪಡಿ ತಂದರೆ, ಮುಂಬರುವ ದಿನಗಳಲ್ಲಿ ಆಸ್ಪತ್ರೆಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಬರಲಿದ್ದು, ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವೈದ್ಯಕೀಯ ವೆಚ್ಚದಲ್ಲಿ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.
 

Add Zee News as a Preferred Source
TAGS:
Kannada News