• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಖಾಲಿ ಚೊಂಬು, ಹಣೆಗೆ ನಾಮ: ಕಾಂಗ್ರೆಸ್ ಸರ್ಕಾರಕ್ಕೆ 'ಭಿಕ್ಷೆಯ ಹಣ' ಕಳುಹಿಸಿ ರೈತರ ವಿನೂತನ ಪ್ರತಿಭಟನೆ

ಖಾಲಿ ಚೊಂಬು, ಹಣೆಗೆ ನಾಮ: ಕಾಂಗ್ರೆಸ್ ಸರ್ಕಾರಕ್ಕೆ 'ಭಿಕ್ಷೆಯ ಹಣ' ಕಳುಹಿಸಿ ರೈತರ ವಿನೂತನ ಪ್ರತಿಭಟನೆ

ಬರ ಪರಿಹಾರವಾಗಿ ರಾಜ್ಯ ಸರ್ಕಾರ ರೈತರಿಗೆ 2,500 ರೂಪಾಯಿ ಘೋಷಣೆ ಮಾಡಿದೆ.. ಸರ್ಕಾರದ ಬಿಡಿಗಾಸಿನ ಪರಹಾರದ ವಿರುದ್ಧ ಸಿಡಿದೆದ್ದಿರುವ ಅನ್ನದಾತರು, ವಿನೂತನ ಪ್ರತಿಭಟನೆ ಮಾಡಿದ್ದಾರೆ.. ಇತ್ತ ರೈತರ ಹೋರಾಟಕ್ಕೆ ವಿಪಕ್ಷಗಳು ಕೂಡ ಸಾಥ್‌ ನೀಡ್ತಿದ್ದು, ಕಾಂಗ್ರೆಸ್‌ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ...

Reported ByKrishna NKEdited ByKrishna NK
Published: Sep 27, 2026, 06:39 PM IST|Updated: Sep 27, 2026, 06:42 PM IST
joinshare
ಖಾಲಿ ಚೊಂಬು, ಹಣೆಗೆ ನಾಮ: ಕಾಂಗ್ರೆಸ್ ಸರ್ಕಾರಕ್ಕೆ 'ಭಿಕ್ಷೆಯ ಹಣ' ಕಳುಹಿಸಿ ರೈತರ ವಿನೂತನ ಪ್ರತಿಭಟನೆ
Image Credit: Farmers protest news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಧಿಕ್ಕಾರ.. ಧಿಕ್ಕಾರ.. ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ... ಹೀಗೆ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರದ ಬರ ಪರಿಹಾರ ಘೋಷಣೆ.. ಅಧಿವೇಶನದಲ್ಲಿ ಡಿಸಿಎಂ ಪರಮೇಶ್ವರ್‌ ಅವರು ರಾಜ್ಯದ ರೈತರಿಗೆ ಬರ ಪರಿಹಾರವಾಗಿ, ಸರ್ಕಾರದಿಂದ 2,500 ನೀಡಲಾಗುತ್ತೆ ಅಂತ ಘೋಷಣೆ ಮಾಡಿದ್ರು.. ಆದ್ರೆ ಕಾಂಗ್ರೆಸ್‌ ಸರ್ಕಾರ ಘೋಷಿಸಿದ ಬರ ಪರಿಹಾರದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ.. ಅಧಿವೇಶನ ನಡೆಸಿ ಭಿಕ್ಷೆ ರೀತಿಯಲ್ಲಿ ಬರ ಪರಿಹಾರ ಘೋಷಣೆ ಮಾಡ್ಲಾಗಿದೆ ಅಂತ, ರೈತರು ಪ್ರತಿಭಟನೆ ಮಾಡಿದ್ದಾರೆ..

ಹಣೆಗೆ ನಾಮ... ಕೈಯಲ್ಲಿ ಖಾಲಿ ಚೊಂಬು... ಹೀಗೆ ಮಂಡ್ಯದಲ್ಲಿ ಸರ್ಕಾರದ 2,500 ರೂಪಾಯಿ ಬರ ಪರಿಹಾರದ ವಿರುದ್ಧ ರೈತರು ಸಿಡಿದೆದ್ದರು.. ಬಿಡಿಗಾಸಿನ ಪರಿಹಾರಕ್ಕೆ ಆಕ್ರೋಶಗೊಂಡ ರೈತರು, ಮದ್ದೂರಿನ ಕೊಪ್ಪ ವೃತ್ತದಲ್ಲಿ ಭಿಕ್ಷೆ ಬೇಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.. ರೈತರೇ ಭಿಕ್ಷೆ ಬೇಡಿ ಕಾಂಗ್ರೆಸ್‌ ಸರ್ಕಾರಕ್ಕೆ ಹಣ ಕಳುಹಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ್ರು...

ಇತ್ತ ಚಾಮರಾಜನಗರದಲ್ಲೂ 2,500 ರೂಪಾಯಿ ಬರ ಪರಿಹಾರ ಘೋಷಣೆ ಖಂಡಿಸಿ ಪ್ರತಿಭಟನೆ ಮಾಡಲಾಯ್ತು... ಕಬ್ಬು ಬೆಳೆಗಾರರ ಸಂಘದಿಂದ ರಾಷ್ಟ್ರೀಯ  ಹೆದ್ದಾರಿ ತಡೆದು, ರಾಜ್ಯ ಸರ್ಕಾರ ಪರಿಹಾರ ರೈತನ ಮೂಗಿಗೆ ತುಪ್ಪ ಸವರಿದಂತಿದೆ..ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು...ಬೆಳೆ ಸಾಲಮನ್ನಾ ಮಾಡಬೇಕು ಅಂತ ರೈತರು ಆಗ್ರಹಿಸಿದ್ರು...

ಇನ್ನು ನಾನು ಎರಡು ಸಲ ಸಿಎಂ ಆದಾಗಲೂ ಕೇಂದ್ರದ ಬಳಿ ಕೈ ಚಾಚಲಿಲ್ಲ. ಆದ್ರೆ ಕಾಂಗ್ರೆಸ್‌ ಸರ್ಕಾರ ರೈತರಿಗೆ ಎರಡೂವರೆ ಸಾವಿರ ಸಬ್ಸಿಡಿ ಕೊಟ್ಟು, ಈಗ ಕೇಂದ್ರದ ಮುಂದೆ ಕೇಳುತ್ತಿದೆ ಅಂತ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.. ಒಟ್ಟಾರೆ, ಸರ್ಕಾರದ ವಿರುದ್ಧ ರೈತರ ಹೋರಾಟ ತಾರಕಕ್ಕೇರಿದೆ.. ಕೇವಲ 2,500 ರೂಪಾಯಿ ಬರ ಪರಿಹಾರದ ವಿರುದ್ಧ ಸಿಡಿದೆದ್ದಿರುವ ರೈತರು, ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ...

Add Zee News as a Preferred Source
TAGS:
Kannada News