• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕನ್ನಡದ ‘ಎವರ್ಗ್ರೀನ್ ಹೀರೋ’ ಹಿರಿಯ ನಟ ಅನಂತ್‌ನಾಗ್‌ ಅವರ ಅದ್ಭುತ ಲೈಫ್‌ ಜರ್ನಿ

ಕನ್ನಡದ ‘ಎವರ್ಗ್ರೀನ್ ಹೀರೋ’ ಹಿರಿಯ ನಟ ಅನಂತ್‌ನಾಗ್‌ ಅವರ ಅದ್ಭುತ ಲೈಫ್‌ ಜರ್ನಿ

Ananth nag life journey: ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಹಿರಿಯ ನಟ ಅನಂತ್‌ನಾಗ್‌ ಧಕ್ಕಿಸಿಕೊಂಡಿದ್ದಾರೆ..ಈ ಎವರ್‌ಗ್ರೀನ್‌ ಹೀರೋ ಅನಂತ್‌ನಾಗ್‌ ಅವರ ಜೀವನ ಪಯಣ ಹೇಗಿತ್ತು ಗೊತ್ತಾ?

Written ByRamya. R. Gowda
Published: Sep 17, 2026, 11:15 AM IST|Updated: Sep 17, 2026, 02:06 PM IST
joinshare
ಕನ್ನಡದ ‘ಎವರ್ಗ್ರೀನ್ ಹೀರೋ’ ಹಿರಿಯ ನಟ ಅನಂತ್‌ನಾಗ್‌ ಅವರ ಅದ್ಭುತ ಲೈಫ್‌ ಜರ್ನಿ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ananth nag life journey: ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಹಿರಿಯ ನಟ ಅನಂತ್‌ನಾಗ್‌( Ananth nag)  ಧಕ್ಕಿಸಿಕೊಂಡಿದ್ದಾರೆ..ಈ ಎವರ್‌ಗ್ರೀನ್‌̈
( evergreen hero) ಹೀರೋ ಅನಂತ್‌ನಾಗ್‌ ಅವರ ಜೀವನ ಪಯಣ ಹೇಗಿತ್ತು ಗೊತ್ತಾ?

ಬೆಂಗಳೂರು: ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಹಿರಿಯ ನಟ ಅನಂತ್‌ ನಾಗ್‌ ಪ್ರತಿಕ್ರಿಯೆಸಿದ್ದಾರೆ.. ಫಾಲ್ಕೆ ಪ್ರಶಸ್ತಿಯನ್ನು ನಾಡಿನ ಜನತೆ ಮತ್ತು ಕರ್ನಾಟಕಕಕ್ಕೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಸದ್ಯ  ಈ ಪ್ರತಿಷ್ಠಿತ ಪ್ರಶಸ್ತಿ ಸಂದ ಹಿನ್ನಕೆ ಕನ್ನಡ ಸುದ್ದಿವಾಹಿನಿಗಳೊಂದಿಗೆ ಅನಂತ್‌ನಾಗ್‌ ಪ್ರಶಸ್ತಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿರೋದು ಬಹಳ ಖುಷಿ ಎನಿಸಿತು ಎಂದು ಹೇಳಿಕೊಂಡಿದ್ದಾರೆ.

ನಾನು ಬಹಳ ವರ್ಷಗಳಿಂದ ಪ್ರಧಾನಿ ಮೋದಿ ಅವರನ್ನು ಫಾಲೋ ಮಾಡುತ್ತಲೇ ಬಂದಿದ್ದೇನೆ. ಪ್ರಶಸ್ತಿ ವಿಚಾರವನ್ನು ಪ್ರಧಾನಿಗಳೇ ಟ್ವೀಟ್‌ ಮಾಡಿದ್ದು, ಬಹಳ ವಿಶೇಷ ಎನ್ನತ್ತಾರೆ. ಕನ್ನಡ ಚಿತ್ರರಂಗದ ಸಹಜ ಅಭಿನಯದ ಪ್ರತೀಕ, ಬಹುಮುಖ ಪ್ರತಿಭೆಯ ಹಿರಿಯ ನಟ ಅನಂತ್‌ನಾಗ್ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 1948ರ ಸೆಪ್ಟೆಂಬರ್ 4ರಂದು ಜನಿಸಿದ ಅವರು ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದವರು. 2025ರಲ್ಲಿ ಅವರಿಗೆ ಪದ್ಮಭೂಷಣ ಗೌರವವೂ ಲಭಿಸಿದೆ. ಈ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬಾಲ್ಯ ಮತ್ತು ರಂಗಭೂಮಿ
ಅನಂತ್‌ನಾಗ್ ಅವರ ಬಾಲ್ಯದ ಮೊದಲ 12 ವರ್ಷಗಳು ಕಾಸರಗೋಡು ಜಿಲ್ಲೆಯ ಆನಂದಾಶ್ರಮ ಹಾಗೂ ಶಿರಾಳಿಯ ಚಿತ್ರಾಪುರ ಮಠದ ಪರಿಸರದಲ್ಲಿ ಕಳೆದವು. ಬಳಿಕ ಉಡುಪಿ, ಚಿತ್ರಾಪುರ, ಶಿರಾಳಿ ಮತ್ತು ಹೊನ್ನಾವರದಲ್ಲಿ ಶಿಕ್ಷಣ ಪಡೆದ ಅವರು ಮುಂಬೈಗೆ ತೆರಳಿ ವಿದ್ಯಾಭ್ಯಾಸ ಮುಂದುವರಿಸಿದರು. 18ನೇ ವಯಸ್ಸಿನಲ್ಲೇ ರಂಗಭೂಮಿಯಲ್ಲಿ ಅಭಿನಯಿಸುವ ಅವಕಾಶ ಪಡೆದ ಅವರು ನಂತರ ರಂಗಭೂಮಿಯಲ್ಲೇ ತಮ್ಮ ಪ್ರತಿಭೆಯನ್ನು ಗಟ್ಟಿಗೊಳಿಸಿದರು.

ಬೆಳ್ಳಿತೆರೆಗೆ ಎಂಟ್ರಿ
1970ರ ದಶಕದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅನಂತ್‌ನಾಗ್, ‘ಸಂಕಲ್ಪ’ ಚಿತ್ರದ ಮೂಲಕ ಸಿನಿಮಾ ಪಯಣ ಆರಂಭಿಸಿದರು. ನಂತರ ಶ್ಯಾಮ್ ಬೆನಗಲ್ ಅವರ ‘ಅಂಕುರ್’ ಮೂಲಕ ಹಿಂದಿ ಸಮಾನಾಂತರ ಚಿತ್ರರಂಗದಲ್ಲೂ ಗಮನ ಸೆಳೆದರು. ‘ನಿಶಾಂತ್’, ‘ಮಂಥನ್’, ‘ಭೂಮಿಕಾ’ ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದರು.

ಕನ್ನಡದ ‘ಎವರ್ಗ್ರೀನ್ ಹೀರೋ’
‘ಬಯಲು ದಾರಿ’, ‘ಕನ್ನೇಶ್ವರ ರಾಮ’, ‘ನಾ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಗಣೇಶನ ಮದುವೆ’, ‘ಗೌರಿ ಗಣೇಶ’ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನದಲ್ಲಿ ವಿಶೇಷ ಸ್ಥಾನ ಪಡೆದರು. ನಂತರದ ವರ್ಷಗಳಲ್ಲೂ ‘ಮುಂಗಾರು ಮಳೆ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ರಾಜಕುಮಾರ’, ‘ಸರ್ಕಾರಿ ಹಿ.ಪ್ರಾ. ಶಾಲೆ’, ‘ಕೆಜಿಎಫ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರಾಜಕೀಯದಲ್ಲೂ ಹೆಜ್ಜೆ
ಅನಂತ್‌ನಾಗ್ ಅವರು ಕೇವಲ ನಟನೆಯಲ್ಲೇ ಸೀಮಿತರಾಗಿರಲಿಲ್ಲ. ಜನತಾ ಪಕ್ಷದ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿ, 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. 1994ರಿಂದ 1999ರವರೆಗೆ ವಿಧಾನಸಭಾ ಸದಸ್ಯರಾಗಿದ್ದು, 1996ರಿಂದ 1999ರವರೆಗೆ ಸಚಿವರಾಗಿ ಕಾರ್ಯನಿರ್ವಹಿಸಿದರು.

ಪ್ರಶಸ್ತಿ-ಗೌರವಗಳ ಸರಮಾಲೆ
ಅನಂತ್‌ನಾಗ್ ಅವರ ಅಭಿನಯಕ್ಕೆ ಹಲವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಗೌರವಗಳು ಸಂದಿವೆ. ಅವರಿಗೆ ಪದ್ಮಭೂಷಣ (2025) ಸೇರಿದಂತೆ ಕರ್ನಾಟಕ ರಾಜ್ಯದ ಅತ್ಯುತ್ತಮ ನಟ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ದೊರೆತಿವೆ.

50 ವರ್ಷಗಳ ಸಿನಿ ಪಯಣ
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತ್‌ನಾಗ್, ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಹಜ ಅಭಿನಯ, ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುವ ಗುಣ ಮತ್ತು ರಂಗಭೂಮಿಯ ಗಟ್ಟಿಯಾದ ಹಿನ್ನೆಲೆ ಅವರ ದೀರ್ಘ ಸಿನಿ ಪಯಣದ ಪ್ರಮುಖ ಅಂಶಗಳಾಗಿವೆ.

ಯಾವಾಗ ಪ್ರಶಸ್ತಿ ಪ್ರಧಾನ
2026ರ ಸೆಪ್ಟೆಂಬರ್ 22ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅನಂತ್‌ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನವಾಗಲಿದೆ ಎಂದು ವರದಿಯಾಗಿದೆ.

ಅನಂತ್‌ನಾಗ್‌ ನಟಿಸಿರುವ ಸಿನಿಮಾಗಳು

1. ಆರಂಭಿಕ ಮತ್ತು ರೋಮ್ಯಾಂಟಿಕ್ ಸಿನಿಮಾಗಳು (1970 - 1980ರ ದಶಕ)

*ಸಂಕಲ್ಪ  (1973):  ಅನಂತ್ ನಾಗ್ ಅವರ ಚೊಚ್ಚಲ ಕನ್ನಡ ಸಿನಿಮಾ.
*ಹಂಸಗೀತೆ (1975):  ಇವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟ ಶಾಸ್ತ್ರೀಯ ಸಂಗೀತ ಆಧಾರಿತ ಚಿತ್ರ.
*ಬಯಲು ದಾರಿ (1976):  ನಟಿ ಲಕ್ಷ್ಮಿ ಜೊತೆಗಿನ ಇವರ ಸೂಪರ್ ಹಿಟ್ ರೋಮ್ಯಾಂಟಿಕ್ ಸಿನಿಮಾ.
*ನಾ ನಿನ್ನ ಬಿಡಲಾರೆ (1979):  ಕನ್ನಡದ ಅತ್ಯುತ್ತಮ ಹಾರರ್-ಥ್ರಿಲ್ಲರ್ ಚಿತ್ರಗಳಲ್ಲೊಂದು.
*ಚಂದನದ ಗೊಂಬೆ (1979):  ಭಾವನಾತ್ಮಕ ಕಥೆಯುಳ್ಳ ಬ್ಲಾಕ್‌ಬಸ್ಟರ್ ಸಿನಿಮಾ.
*ಮಿಂಚಿನ ಓಟ (1980):  ಸಹೋದರ ಶಂಕರ್ ನಾಗ್ ಜೊತೆ ನಟಿಸಿದ ಆಕ್ಷನ್ ಕ್ರೈಮ್-ಥ್ರಿಲ್ಲರ್


2. ಹಾಸ್ಯ ಪ್ರಧಾನ ಸಿನಿಮಾಗಳು (1990ರ ದಶಕ)90ರ ದಶಕದಲ್ಲಿ ಅನಂತ್ ನಾಗ್ ಅವರು ಕಾಮಿಡಿ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾದರು

*ಗಣೇಶನ ಮದುವೆ (1990): ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಹಾಸ್ಯ ಚಿತ್ರ.
*ಗೋಲ್ಮಾಲ್ ರಾಧಾಕೃಷ್ಣ (1990) : ಭರಪೂರ ಮನರಂಜನೆ ನೀಡಿದ ಚಿತ್ರ.
*ಗೌರಿ ಗಣೇಶ (1991) : ಲಂಬೋದರ ಎಂಬ ಚತುರ ಯುವಕನ ಪಾತ್ರದಲ್ಲಿ ಅದ್ಭುತ ನಟನೆ.
*ಉಂಡೂ ಹೋದ ಕೊಂಡೂ ಹೋದ (1992) : ವಿಭಿನ್ನ ಕಥಾಹಂದರ ಹೊಂದಿದ ಹಾಸ್ಯ ಚಿತ್ರ.
*ಯಾರಿಗೂ ಹೇಳ್ಬೇಡಿ (1994) : ಬಾಡಿಗೆ ಮನೆಯ ಸುತ್ತ ನಡೆಯುವ ಮಜಾವಾದ ಸಿನಿಮಾ.


3. ಕಲಾತ್ಮಕ ಮತ್ತು ಗಂಭೀರ ಸಿನಿಮಾಗಳು 
*ಬರ (1982): ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಪಾತ್ರದಲ್ಲಿ ಅದ್ಭುತ ಅಭಿನಯ.
*ಆಕ್ಸಿಡೆಂಟ್ (1985): ಹಿಟ್ ಅಂಡ್ ರನ್ ಪ್ರಕರಣದ ಸುತ್ತ ಸಾಗುವ ಗಂಭೀರ ಚಿತ್ರ.
*ನಿಷ್ಕರ್ಷ (1993): ಬ್ಯಾಂಕ್ ದರೋಡೆ ಕಥೆಯುಳ್ಳ ಕಮಾಂಡೋ ಆಪರೇಷನ್ ಸಿನಿಮಾ.
*ಬೆಳದಿಂಗಳ ಬಾಲೆ (1995): ಫೋನ್‌ನಲ್ಲಿ ಮಾತನಾಡುವ ಅಪರಿಚಿತ ಹುಡುಗಿಯನ್ನು ಹುಡುಕುವ ಚೆಸ್ ಗ್ರಾಂಡ್‌ಮಾಸ್ಟರ್ ಪಾತ್ರ.


4. ಪೋಷಕ ಪಾತ್ರ

 ಪೋಷಕ ಪಾತ್ರದಲ್ಲಿ ಇತ್ತೀಚೆಗೆ ಸೂಪರ್ ಹಿಟ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಅನಂತ್ ನಾಗ್ ಅವರು ಪೋಷಕ ಪಾತ್ರಗಳ ಮೂಲಕ ಸಿನಿಮಾಗಳಿಗೆ ಹೊಸ ಮೆರುಗು ನೀಡಿದ್ದಾರೆ
*ಮುಂಗಾರು ಮಳೆ (2006): ಗಣೇಶ್ ತಂದೆಯಾಗಿ ಇವರ ಜವಾಬ್ದಾರಿಯುತ ಪಾತ್ರ.
*ಗಾಳಿಪಟ (2008) ಮತ್ತು ಗಾಳಿಪಟ 2 (2022): ಕನ್ನಡ ಮೇಷ್ಟ್ರು ಪಾತ್ರದಲ್ಲಿ ಹೃದಯಸ್ಪರ್ಶಿ ನಟನೆ. 
*ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016): ಆಲ್ಝೈಮರ್ಸ್ (ಮರೆವಿನ ಕಾಯಿಲೆ) ಪೀಡಿತ ವೃದ್ಧನ ಪಾತ್ರದಲ್ಲಿ ಇವರ ನಟನೆಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
*ರಾಜಕುಮಾರ (2017): ಪುನೀತ್ ರಾಜ್‌ಕುಮಾರ್ ಜೊತೆಗಿನ ತಂದೆ-ಮಗನ ಸೆಂಟಿಮೆಂಟ್ ಚಿತ್ರ.
*ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು (2018): ಅನಂತಪದ್ಮನಾಭ ರಾವ್ ಎಂಬ ವಕೀಲನ ಪಾತ್ರದಲ್ಲಿ ಅದ್ಭುತ ಅಭಿನಯ.
*ಕೆ.ಜಿ.ಎಫ್: ಚಾಪ್ಟರ್ 1 (2018): ಆನಂದ್ ಇಂಗಳಗಿ ಎಂಬ ಪತ್ರಕರ್ತನಾಗಿ ಕಥೆ ಹೇಳುವ ಇವರ ಗಂಭೀರ ಧ್ವನಿ ಮತ್ತು ನಟನೆ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿತ್ತು

 

 

Add Zee News as a Preferred Source
TAGS:
Cinema