• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಗದಗ ಜಿಲ್ಲೆಯಲ್ಲಿ ಕಡಲೆ ಮಾರಾಟದ ಹಣಕ್ಕಾಗಿ ಸ್ನೇಹಿತನಿಂದಲೇ ಭೀಕರ ಕೊಲೆ: ಕಿರಾತಕ ಅರೆಸ್ಟ್

ಗದಗ ಜಿಲ್ಲೆಯಲ್ಲಿ ಕಡಲೆ ಮಾರಾಟದ ಹಣಕ್ಕಾಗಿ ಸ್ನೇಹಿತನಿಂದಲೇ ಭೀಕರ ಕೊಲೆ: ಕಿರಾತಕ ಅರೆಸ್ಟ್

ಒಂದು ವೇಳೆ ತಾನು ಕಡಲೆ ಮಾರಾಟ ಮಾಡಿರುವ ವಿಚಾರ ದ್ಯಾಮಪ್ಪನಿಗೆ ತಿಳಿದರೆ ಹಣ ಕೇಳುತ್ತಾನೆ ಮತ್ತು ತನು ಸಿಕ್ಕಿಬೀಳುತ್ತೇನೆ ಎಂಬ ಭೀತಿಯಿಂದ ಶರಣಪ್ಪ ಕ್ರಿಮಿನಲ್ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ.

Reported ByManjunath NaragundEdited ByManjunath Naragund
Published: Oct 22, 2026, 12:01 PM IST|Updated: Oct 22, 2026, 12:14 PM IST
joinshare
ಗದಗ ಜಿಲ್ಲೆಯಲ್ಲಿ ಕಡಲೆ ಮಾರಾಟದ ಹಣಕ್ಕಾಗಿ ಸ್ನೇಹಿತನಿಂದಲೇ ಭೀಕರ ಕೊಲೆ: ಕಿರಾತಕ ಅರೆಸ್ಟ್
Image Credit: Gadag

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಟೈಗರ್ ಶ್ರಾಫ್ ಬಳಿಕ ಈಗ ರಣಬೀರ್ ಕಪೂರ್ ಮೇಲೂ ದಾಳಿಗೆ ಸಂಚು!

ಟೈಗರ್ ಶ್ರಾಫ್ ಬಳಿಕ ಈಗ ರಣಬೀರ್ ಕಪೂರ್ ಮೇಲೂ ದಾಳಿಗೆ ಸಂಚು!

2

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನೈರುತ್ಯ ರೈಲು ನಿಲ್ದಾಣಗಳಲ್ಲಿ ರೈಲ್ ಜನ ಸಂವಾದ ಯಶಸ್ವಿ

3

ಮೈಸೂರು ದಸರಾದಲ್ಲಿ ಸುದೀಪ್‌ ಎದುರು ಬಂದರೂ ಮಾತನಾಡದೇ ನಿರ್ಲಕ್ಷಿಸಿದ್ರಾ ಸಿಎಂ ಡಿಕೆ ಶಿವಕುಮಾರ್‌?

4

ಫ್ಯಾಷನ್‌ಗಾಗಿ ಹೈ ಹೀಲ್ಸ್ ಧರಿಸುತ್ತಿದ್ದೀರಾ? ಎಚ್ಚರ, ನಿಮ್ಮ ಆರೋಗ್ಯಕ್ಕೆ ಕಾದಿವೆ ಈ 5 ಅಪಾಯಗಳು!

5

ಈ ದೀಪಾವಳಿಗೆ ಸುಂದರವಾಗಿ ಕಾಣಬೇಕೆ? ನಿಮ್ಮ ಕೂದಲು ಮತ್ತು ಚರ್ಮದ ಆರೈಕೆಯನ್ನು ಈಗಲೇ ಪ್ರಾರಂಭಿಸಿ! ತಜ್ಞರ ಸಲಹೆಯನ್ನು ತಿಳಿಯಿರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗದಗ: ಕಡಲೆ ಮಾರಾಟದ ವಿಚಾರವಾಗಿ ಸ್ನೇಹಿತನಿಗೆ ವಂಚಿಸಿ, ಆತನನ್ನೇ ಭೀಕರವಾಗಿ ಕೊಲೆ ಮಾಡಿದ್ದ ಕರಾಳ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. 62 ವರ್ಷದ ದ್ಯಾಮಪ್ಪ ಗೊಜನೂರು ಕೊಲೆಯಾದ ದುರ್ದೈವಿ. ಶರಣಪ್ಪ ನರಗುಂದ ಎಂಬಾತನೇ ಈ ಕೃತ್ಯ ಎಸಗಿದ ಕಿರಾತಕನಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಕೊಲೆಯಾದ ದ್ಯಾಮಪ್ಪ ಅವರು ತಮ್ಮ ಬಳಿಯಿದ್ದ 45 ಕ್ವಿಂಟಾಲ್ ಕಡಲೆಯನ್ನು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ಉದ್ದೇಶದಿಂದ ಸ್ನೇಹಿತ ಶರಣಪ್ಪನ ಹೆಸರಿನಲ್ಲಿ ಗೋಡೌನ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದರು. ಆದರೆ, ದ್ಯಾಮಪ್ಪನಿಗೆ ಯಾವುದೇ ಸುಳಿವಿಲ್ಲದೆ ಶರಣಪ್ಪ ಆ ಕಡಲೆಯನ್ನು ಬೇರೆಡೆ ಮಾರಾಟ ಮಾಡಿದ್ದನು. ಅಲ್ಲದೆ, ಬಂದಿದ್ದ 2 ಲಕ್ಷ 80 ಸಾವಿರ ರೂಪಾಯಿ ಹಣವನ್ನು ತನ್ನ ಸ್ವಂತ ಖರ್ಚಿಗಾಗಿ ಬಳಸಿಕೊಂಡಿದ್ದನು.

ಒಂದು ವೇಳೆ ತಾನು ಕಡಲೆ ಮಾರಾಟ ಮಾಡಿರುವ ವಿಚಾರ ದ್ಯಾಮಪ್ಪನಿಗೆ ತಿಳಿದರೆ ಹಣ ಕೇಳುತ್ತಾನೆ ಮತ್ತು ತನು ಸಿಕ್ಕಿಬೀಳುತ್ತೇನೆ ಎಂಬ ಭೀತಿಯಿಂದ ಶರಣಪ್ಪ ಕ್ರಿಮಿನಲ್ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ.

11 ದಿನಗಳ ನಂತರ ಬಯಲಾದ ರಹಸ್ಯ:

ಅಕ್ಟೋಬರ್ 8ರಂದು ನರಗುಂದಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ದ್ಯಾಮಪ್ಪ, ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಅಕ್ಟೋಬರ್ 10ರಂದು ನರಗುಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ, ಕೊನೆಯದಾಗಿ ದ್ಯಾಮಪ್ಪ ಅವರು ಶರಣಪ್ಪನ ಜೊತೆ ಬೈಕ್‌ನಲ್ಲಿ ತೆರಳಿರುವ ಮಾಹಿತಿ ಲಭ್ಯವಾಯಿತು.

ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿ ಶರಣಪ್ಪ ಸತ್ಯ ಬಾಯಿಗೆ ಬಿಟ್ಟಿದ್ದಾನೆ. ಅಕ್ಟೋಬರ್ 8ರಂದು ಹೊಲಕ್ಕೆ ಹೋಗಿ ಬರೋಣ ಎಂದು ದ್ಯಾಮಪ್ಪನನ್ನು ಕರೆದುಕೊಂಡು ಹೋಗಿದ್ದ ಶರಣಪ್ಪ, ಭೈರನಹಟ್ಟಿ ಗ್ರಾಮದ ಬಳಿ ಕೊಡಲಿಯಿಂದ ತಲೆ ಹಾಗೂ ಕುತ್ತಿಗೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅದೇ ದಿನ ರಾತ್ರಿ ಸೋಮಾಪುರದ ಸಬ್ ಕೆನಾಲ್ ಪೈಪ್ ಬಳಿ ಶವವನ್ನು ತೆಗೆದುಕೊಂಡು ಹೋಗಿ ಮುಚ್ಚಿಹಾಕಿ ಪರಾರಿಯಾಗಿದ್ದನು. ಕೊನೆಗೆ ಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಗದಗ ಎಸ್ಪಿ ಮಿಥುನ್ ಎಚ್.ಎನ್. ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
 

Add Zee News as a Preferred Source
TAGS:
Kannada News