• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ವಿಜಯಪುರದಲ್ಲಿ ಪತಿಯ ಬಲಿ ಪಡೆದ ಅನೈತಿಕ ಸಂಬಂಧ: ಹೆಂಡತಿ, ಆಕೆಯ ತಮ್ಮ ಸೇರಿ ಮೂವರ ಬಂಧನ!

ವಿಜಯಪುರದಲ್ಲಿ ಪತಿಯ ಬಲಿ ಪಡೆದ ಅನೈತಿಕ ಸಂಬಂಧ: ಹೆಂಡತಿ, ಆಕೆಯ ತಮ್ಮ ಸೇರಿ ಮೂವರ ಬಂಧನ!

ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿ: ತಮ್ಮ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲ್ಲಿಸಿದ ಹೆಂಡತಿ!

Reported ByManjunath NaragundEdited ByManjunath Naragund
Published: Sep 26, 2026, 02:24 PM IST|Updated: Sep 26, 2026, 02:44 PM IST
joinshare
ವಿಜಯಪುರದಲ್ಲಿ ಪತಿಯ ಬಲಿ ಪಡೆದ ಅನೈತಿಕ ಸಂಬಂಧ: ಹೆಂಡತಿ, ಆಕೆಯ ತಮ್ಮ ಸೇರಿ ಮೂವರ ಬಂಧನ!
Image Credit: Vijayapura

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ವಿಜಯಪುರ: ಅಕ್ರಮ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಹೆಂಡತಿಯೊಬ್ಬಳು ತನ್ನ ತಾಯಿ ನೀಡಿದ ತಾಳಿಯ ಬೆಲೆಯನ್ನೇ ಮರೆತು, ಸ್ವಂತ ತಮ್ಮ ಹಾಗೂ ಪ್ರಿಯಕರನ ಜೊತೆಗೂಡಿ ತಾಳಿ ಕಟ್ಟಿದ ಗಂಡನನ್ನೇ ಬರ್ಭರವಾಗಿ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ವಿಜಯಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕಳೆದ ಸೆಪ್ಟೆಂಬರ್ 11 ರಂದು ನಡೆದಿದ್ದ ಈ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿರುವ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಮೃತನ ಹೆಂಡತಿ ಸೇರಿದಂತೆ ಮೂವರು ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ನಿವಾಸಿ ಸಿದ್ದಪ್ಪ ಇಂಡಿ (42) ಬಲಿಪಶುವಾದ ದುರ್ದೈವಿ. ಸೆಪ್ಟೆಂಬರ್ 11 ರಂದು ಸಿದ್ದಪ್ಪ ತನ್ನ ತಾಯಿಯ ಬಳಿ "ಹೆಂಡತಿಯ ತಮ್ಮ ಈರಪ್ಪನ ಜೊತೆ ಟ್ರ್ಯಾಕ್ಟರ್ ನೋಡಲು ವಿಜಯಪುರ ತಾಲೂಕಿನ ಮುಧಭಾವಿಗೆ ಹೋಗಿ ಬರುತ್ತೇನೆ" ಎಂದು ಹೇಳಿ ಮನೆಯಿಂದ ಹೊರಟಿದ್ದ. ಆದರೆ, ಮರುದಿನ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ನಿರ್ಜನ ಪ್ರದೇಶದ ಬಳಿ ಸಿದ್ದಪ್ಪ ಅವರ ರಕ್ತಸಿಕ್ರ ಶವ ಪತ್ತೆಯಾಗಿತ್ತು. ಅಪರಿಚಿತ ದುಷ್ಕರ್ಮಿಗಳು ಕತ್ತು ಕೊಯ್ದು ಆತನನ್ನು ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಈ ಆಘಾತಕಾರಿ ಘಟನೆ ಸಂಬಂಧ ಮೃತನ ಸಹೋದರ ಸೋಮನಿಂಗ ಇಂಡಿ ಎಂಬುವವರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದಾಗ ಅತ್ಯಂತ ಆಘಾತಕಾರಿ ಸತ್ಯಗಳು ಒಂದೊಂದಾಗಿ ಹೊರಬಿದ್ದವು. ಸಿದ್ದಪ್ಪನ ಹೆಂಡತಿ ರೇಣುಕಾ ಇಂಡಿ, ಆಕೆಯ ತಮ್ಮ ಈರಪ್ಪ ಹಾಗೂ ಈರಪ್ಪನ ಗೆಳೆಯ ವಿಠಲ ಕೆರೂರ ಸೇರಿಕೊಂಡು ಈ ಹತ್ಯೆ ನಡೆಸಿರುವುದು ತನಿಖೆಯಲ್ಲಿ ಸ್ಪಷ್ಟವಾಯಿತು.

ಅನೈತಿಕ ಸಂಬಂಧವೇ ಕೊಲೆಗೆ ಮೂಲ ಕಾರಣ?

ಪೋಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಸಿದ್ದಪ್ಪನ ಹೆಂಡತಿ ರೇಣುಕಾಳಿಗೆ ವಿಠಲ ಕೆರೂರ ಎಂಬುವವನ ಜೊತೆ ಅನೈತಿಕ ಸಂಬಂಧವಿತ್ತು ಎಂಬ ಬಲವಾದ ಅನುಮಾನ ಮೂಡಿದೆ. ಈ ಅಕ್ರಮ ಸಂಬಂಧದ ವಿಷಯ ಗಂಡ ಸಿದ್ದಪ್ಪನಿಗೆ ತಿಳಿದು ಸಂಸಾರದಲ್ಲಿ ಗಲಾಟೆಯಾಗುತ್ತಿತ್ತು. ತಮ್ಮ ಅನೈತಿಕ ಸಂಬಂಧಕ್ಕೆ ಗಂಡ ಸಿದ್ದಪ್ಪ ಅಡ್ಡಯಾಗುತ್ತಿದ್ದಾನೆ ಎಂಬ ಕಾರಣಕ್ಕೆ, ಆತನನ್ನು ಸಂಪೂರ್ಣವಾಗಿ ಹಾದಿಯಿಂದ ತೆಗೆದುಹಾಕಲು ರೇಣುಕಾ ಸಂಚು ರೂಪಿಸಿದ್ದಳು.

ಸ್ಕೀಮ್ ಪ್ರಕಾರ, ರೇಣುಕಾ ತನ್ನ ತಮ್ಮ ಈರಪ್ಪನಿಗೆ ವಿಷಯ ತಿಳಿಸಿ ಕೊಲೆಗೆ ನೆರವು ಪಡೆದಿದ್ದಳು. ಈರಪ್ಪ ಟ್ರ್ಯಾಕ್ಟರ್ ಕೊಡುಸುವ ನೆಪದಲ್ಲಿ ಭಾವ ಸಿದ್ದಪ್ಪನ ನಂಬಿಸಿ ಮುಧಭಾವಿಗೆ ಕರೆದುಕೊಂಡು ಬಂದಿದ್ದ. ಬಳಿಕ ಕವಲಗಿ ಗ್ರಾಮದ ಬಳಿ ಸಂಚಿನಂತೆ ಪ್ರಿಯಕರ ವಿಠಲ ಕೆರೂರನ ಜೊತೆಗೂಡಿ ಸಿದ್ದಪ್ಪನ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿ, ಏನೂ ತಿಳಿಯದವರಂತೆ ಪರಾರಿಯಾಗಿದ್ದರು.

ಪ್ರಸ್ತುತ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ರೇಣುಕಾ ಇಂಡಿ, ಆಕೆಯ ತಮ್ಮ ಈರಪ್ಪ ಹಾಗೂ ಪ್ರಿಯಕರ ವಿಠಲ ಕೆರೂರ ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಣ, ಕಾಮದ ವ್ಯಾಮೋಹಕ್ಕೆ ಬಿದ್ದು ಪತಿಯನ್ನೇ ಬಲಿ ಪಡೆದ ಹೆಂಡತಿಯ ಕೃತ್ಯಕ್ಕೆ ಸ್ಥಳೀಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Add Zee News as a Preferred Source
TAGS:
Kannada News