ಬೆಂಗಳೂರು : ಮೂರುಗಂಟು ಹಾಕಿ ಕೈ-ಕೈ ಹಿಡಿದು ಸಪ್ತಪದಿ ತುಳಿದಿದ್ದ ಪತ್ನಿಯನ್ನ ಪತಿಯೇ ಭೀಕರವಾಗಿ ಕೊಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಆಕೆ ನರಳಾಡುತ್ತಿದ್ರು ಕಟಕುಕನ ಮನಸ್ಸು ಕರಗಲಿಲ್ಲ. ನೂರಾರು ಜನರ ನಡುವೆ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಮೇಲೆ ಆ್ಯಸಿಡ್ ಎರಚಿ ಅಟ್ಟಹಾಸ ಮೇರೆದಿದ್ದಾನೆ. ಈ ಬೀಕರ ದೃಶ್ಯ ಕಣ್ಣರೇ ಕಂಡ ಜನ ಅಕ್ಷರಶಃ ಬೆಚ್ಚಿಬಿದ್ದಾರೆ.
ಭೀಕರ... ಬೀಭತ್ಸ... ಘನಘೋರ...ಈ ದೃಶ್ಯ ಎಂಥವರ ಎದೆಯಲ್ಲೂ ನಡುಕ ಹುಟ್ಟಿಸುತ್ತೆ. ಹಾಡಹಾಗಲೇ ಪತ್ನಿಯನ್ನ ಮಚ್ಚಿನಿಂದ ಭೀಕರವಾಗಿ ಕೊಚ್ಚಿದ್ದಾನೆ. ಅಷ್ಟು ಸಾಲದ ಅಂತ ಮುಖಕ್ಕೆ ಆಸಿಡ್ ಎರಚಿ ಅಟ್ಟಹಾಸ ಮೆರೆದಿದ್ದಾನೆ. ನೋವಿನಿಂದ ಆ ಮಹಿಳೆ ಚೀರಾಡಿದ್ರು, ಗೋಳಾಡಿದ್ರು ಕಟುಕನ ಮನಸ್ಸು ಕರಗಲಿಲ್ಲ. ಅಂದಹಾಗೆ ಇಂತಹ ಬೆಚ್ಚಿಬಿಳಿಸೋ ಘಟನೆ ನಡೆದಿದ್ದು ಬೆಂಗಳೂರಿನ ಜೆಪಿನಗರದ 3ನೇ ಹಂತದಲ್ಲಿರುವ ಇದೇ ನಾರಾಯಣ ಕ್ಲಿನಿಕ್ ಮುಂದೆ.
ಅಷ್ಟಕ್ಕೂ ಈ ಭೀಕರ ದಾಳಿಗೊಳಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಮಹಿಳೆ ಹೆಸರು ಮಧುಮಿತ. ವಯಸ್ಸು 26, ಮೂಲತಃ ಪಶ್ಚಿಮ ಬಂಗಾಳದ ಕೊಲ್ಕತ್ತಾದಳು ಈ ಮಧುಮಿತ. ಕಳೆದ ಒಂದೂವರೆ ವರ್ಷದಿಂದ ಇದೇ ನಾರಾಯಣ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ನರ್ಸ್ ಮಧುಮಿತ 2024ರಲ್ಲಿ ಈ ವೆಂಕಟೇಶ್ ಜೊತೆ ಮಧುರೈನಲ್ಲಿ ಮದುವೆಯಾಗಿದ್ಲು. ಇಬ್ಬರು ಬೆಂಗಳೂರಿನಲ್ಲಿ ವಾಸವಾಗಿದ್ರು. ಆರಂಭದಲ್ಲಿ ಖುಷಿ-ಖುಷಿಯಾಗಿದ್ದ ದಂಪತಿಗಳು, ಯಾವುದೋ ಮನಸ್ತಾಪದಿಂದ ಕೇವಲ 6 ತಿಂಗಳಿಗೆ ದೂರವಾಗಿದ್ರು. ಕಳೆದ ಒಂದೂವರೆ ವರ್ಷದಿಂದ ಮಧುಮಿತ ಪಿಜಿಯಲ್ಲಿ ಇದ್ದುಕೊಂಡ ನಾರಾಯಣ ಕ್ಲಿನಿಕ್‌ಗೆ ಕೆಲಸ ಹೋಗ್ತಾ ಇದ್ದಾಳು. ಇತ್ತ ಪತ್ನಿಯಿಂದ ದೂರವಾಗಿದ್ದ ವೆಂಕಟೇಶ್ ಇತ್ತೀಚೆಗಷ್ಟೇ ಚೆನ್ನೈ ಗೆ ಶಿಫ್ಟ್ ಆಗಿದ್ದ. ಆದರೆ ಇವತ್ತು ಬೆಳಿಗ್ಗೆ ಇದ್ದಕ್ಕಿದಂತೆ ಮಧುರೈನಿಂದ ಬೈಕ್ ನಲ್ಲಿ ಪತ್ನಿಯವ ಆಸ್ಪತ್ರೆ ಬಳಿ ಬಂದಿದ್ದಾನೆ.
ಇವತ್ತು ಮಾರ್ನಿಂಗ್ ಶಿಫ್ಟ್ ಬಂದಿದ್ದ ಮಧುಮಿತ, ಬೆಳಗ್ಗೆ 9:15ಕ್ಕೆ ತಿಂಡಿಗೆ ಅಂತ ಕ್ಲಿನಿಕ್ ನಿಂದ ಹೊರಗಡೆ ಬಂದಿದ್ದಾಳೆ. ಮಧುಮಿತ ಹೊರಗೆ ಬರೋದನ್ನ ಕಾಯ್ತಿದ್ದ ವೆಂಕಟೇಶ್ ಏಕಾಏಕಿ ಆಕೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಮಧುಮಿತ ಕಿರುಚುಡುತ್ತಾ ಓಡಿದ್ದಾಳೆ. ಕ್ಲಿನಿಕ್ ಪಾರ್ಕಿಂಗ್ ಜಾಗಕ್ಕೆ ಓಡಿಬಂದರು ಅಲ್ಲಿಗೂ ಬಂದ ಆಕೆಯನ್ನ ಮನಸೋ-ಇಚ್ಛೆ ಮಚ್ಚಿನಿಂದ ಕೊಚ್ಚಿದ್ದಾನೆ. ಅಷ್ಟು ಸಾಲದು ಅಂತ ಜೊತೆಯಲ್ಲಿ ತಂದಿದ್ದ ಆಸಿಡ್ ಅನ್ನು ಆಕೆಯ ಮುಖ ಹಾಗೂ ದೇಹದ ಮೇಲೆ ಎರಚಿದ್ದಾನೆ.
ಮಧುಮಿತ ಚೀರಾಟ ಕೇಳಿ ಅಲ್ಲಿದ್ದ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಕಲ್ಲು ತೂರಿ ಆಕೆಯನ್ನು ಕಾಪಾಡಲು ಯತ್ನಿಸಿದವರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅಲ್ಲಿದ್ದ ಜನ ಪ್ರಾಣ ಭಯದಲ್ಲಿ ಅಸಾಹಕರಾಗಿ ನಿಂತ ಈ ಘೋರ ದೃಶ್ಯ ಕಣ್ಣರೇ ನೋಡುವಂತಾಯ್ತು. ಪತ್ನಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಂತೆ ವೆಂಕಟೇಶ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಅದರೆ ಅಲ್ಲಿಂದ ಸ್ಥಳೀಯರು ಹಾಗೂ ಸಿಗ್ನಲ್‌ನಲ್ಲಿದ್ದ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಕ್ಷಣ ಜೆಪಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಗಂಭೀರ ಗಾಯಗೊಂಡಿದ್ದ ಮಧುಮಿತಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಜೆ.ಪಿ. ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಅಲ್ಲದೆ ಆರೋಪಿ ವೆಂಕಟೇಶ್‌ನನ್ನು ಬಂಧಿಸಿ ಕೃತ್ಯಕ್ಕೆ ನಿಖರ ಕಾರಣವೇನು ಅಂತ ವಿಚಾರಣೆ ನಡೆಸುತ್ತಿದ್ದಾರೆ.
ನಿತ್ಯ ನೂರಾರು ರೋಗಿಗಳನ್ನ ತನ್ನ ಕೈಯಾರೆ ಆರೈಕೆ ಮಾಡ್ತಿದ್ದ ನರ್ಸ್ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಂಡ-ಹೆಂಡತಿ ನಡುವೆ ಅದೆಷ್ಟೇ ಮನಸ್ತಾಪ ಇದ್ರು ಪತಿಯಾದವನು ಮಾಡಿದ ಇಂತಹ ಘನಘೋರ ಕೃತ್ಯವನ್ನ ಶತ್ರು ಕೂಡ ಕ್ಷಮಿಸಲಾರ.
ಆ್ಯಂಕರ್:- ಅದು ನಿನ್ನೆ ಸಂಜೆ 7.39 ಟೈಮು.. ಕಳೆದ ಹತ್ತು ತಿಂಗಳ ಹಿಂದಷ್ಟೆ ಪ್ರೀತಿಸಿದ ಹುಡುಗನನ್ನ ಮದುವೆ ಆಗಿದ್ದ ಯುವತಿ ಕೆಲಸ ಮುಗಿಸಿಕೊಂಡು ಸಂಜೆ ಗಂಡ ಬರ್ತಾನೆ ಅಂತಾ ಕಾದು ಕುಳಿತಿದ್ಲು.. ಆದ್ರೆ ಬಾಗಿಲು ಡಭ ಡಭ ಬಡೆದಿದ್ದ ಗ್ಯಾಂಗ್ ಒಂದು ಏಕಾ ಏಕಿ ಎಂಟ್ರಿ ಕೊಟ್ಟಿತ್ತು.. ಮನೆಗೆ ನುಗ್ಗಿದ್ದ ಮೂವರು ಧರ ಧರನೆ ಆಕೆಯನ್ನ ಎಳೆದು ಕಾರಿನಲ್ಲಿ ಕೂರಿಸಿ ಎಸ್ಕೇಪ್ ಆಗ್ತಿದ್ರು.. ನಂತರ ಆಗಿದ್ದು ಥೇಟ್ ತೆಲುಗು ಸಿನಿಮಾದ ಸೀನ್ ಥರ.. ಅಷ್ಟಕ್ಕೂ ಆಗಿದ್ದೇನು..? ಏನಿದು ಕಿಡ್ನಾಪ್ ಕಹಾನಿ ಅಂತೀರಾ ಹೇಳ್ತೀವಿ ನೋಡಿ..
ಸಿನಿಮಾ ಸ್ಟೈಲ್ ನಲ್ಲಿ ಯುವತಿ ಕಿಡ್ನಾಪ್, ಅಡ್ಡಾದಿಡ್ಡಿ ಕಾರು ಚಲಾಯಿಸಿ ಸೀರಿಯಲ್ ಆ್ಯಕ್ಸಿಡೆಂಟ್..!
ಹೌದು.. ನಿನ್ನೆ ಬೆಂಗಳೂರಿನಲ್ಲಿ ನಡೆದ ಅದೊಂದು ಕಿಡ್ನಾಪ್ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.. ರಾಜಸ್ಥಾನದಿಂದ ಸೀದಾ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದ ಗ್ಯಾಂಗ್ ಮನೆಯಲ್ಲಿ ಒಂಟಿಯಿದ್ದ ವೇಳೆ 21 ವರ್ಷದ ಯುವತಿಯನ್ನ ಸಿನಿಮಾ ಸ್ಟೈಲ್ ನಲ್ಲಿಯೇ ಎಳೆದುಕೊಂಡು ಕಾರಿಗೆ ಕೂರಿಸಿದ್ರು.. ಕಿರುಚಾಡುತ್ತಿದ್ರೂ ಆಕೆಯನ್ನ ಬಲವಂತವಾಗಿ ಕಿಡ್ನಾಪ್ ಮಾಡಿದ್ರು.. ಸೀದಾ ರಾಜಸ್ಥಾನಕ್ಕೇ ಕಾರು ಹೋಗಬೇಕು ಅನ್ನೋ ಹುಚ್ಚಿನಲ್ಲಿದ್ರು.. ಒಬ್ಬ ಆರೋಪಿ ಯಾರೇ ಅಡ್ಡ ಬಂದ್ರು ತಲೆ ಕೆಡಿಸಿಕೊಳ್ಬೇಡ.. ಗಾಡಿ ಓಡ್ಸು.. ನುಗ್ಸು ಅಂದಿದ್ದ.. ರೊಚ್ಚಿಗೆದಿದ್ದ ಡ್ರೈವರ್ ಪಾದಚಾರಿಗಳು, ಅಡ್ಡಬಂದ ಬೈಕ್ ಗಳು, ಕಾರುಗಳು ಅಂತಾ ನೋಡದೇನೆ ಕಾರು ನುಗ್ಗಿಸಿದ್ದ.. ಸರಣಿ ಅಪಘಾತದ ನಡುವೆ ಐದಾರು ಜನ್ರಿಗೆ ಗಾಯ ಆಗಿತ್ತು.. ಕಾರಿನಡಿ ಮಹಿಳೆ ಸಿಲುಕಿದ್ಲು.. ಕಾರಿನ ಒಳಗಿದ್ದ ಯುವತಿ ಕಾಪಾಡಿ ಕಾಪಾಡಿ ಅಂತಾ ತನ್ನದೇ ಭಾಷೇಲಿ ಕಿರುಚಾಡುತ್ತಿದ್ಲು.. ಎಲ್ಲವನ್ನೂ ಕಣ್ಣಾರೆ ಕಾಣ್ತಿದ್ದ ಸ್ಥಳೀಯರು ಕಾರು ಬೆನ್ನಟ್ಟಿದ್ರು.. ಸರಿಸುಮಾರು ಎರಡು ಕಿಲೋಮೀಟರ್ ಗೂ ಅಧಿಕ ದೂರ ಫಾಲೋ ಮಾಡಿ ಕಾರು ಅಡ್ಡ ಹಾಕಿ ಕಲ್ಲು ಎತ್ತಿ ಹಾಕಿ ಗ್ಯಾಂಗ್ ನ ಲಾಕ್ ಮಾಡಿದ್ರು..
ಅಂದ್ಹಾಗೆ ಇದೆಲ್ಲಾ ಯಾವದೋ ತೆಲುಗು ಸಿನಿಮಾವೊಂದರ ಸೀನ್ ಅಲ್ಲ.. ನಿನ್ನೆ ನಮ್ಮ ಬೆಂಗಳೂರಿನ ಮಾಗಡಿ ರಸ್ತೆ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿದ್ದ ಪ್ರೀಪ್ಲಾನ್ಡ್ ಕಿಡ್ನಾಪ್ ಕೇಸ್ ನ ಕಥೆ.. ಇಷ್ಟೆಲ್ಲಾ ಹೈಡ್ರಾಮಕ್ಕೆ ಕಾರಣ ಕಿಡ್ನಾಒ್ ಆಗಿದ್ದ ಪೂಜ ಮತ್ತು ಓಂ ಪ್ರಕಾಶ್ ನಡುವಿನ ಪ್ರೀತಿ.. 21 ವರ್ಷದ ಈ ಪೂಜಾ ಮತ್ತು 23 ವರ್ಷದ ಓಂ ಪ್ರಕಾಶ್ ಯಾರು ಇಬ್ಬರೂ ರಾಜಸ್ಥಾನ ಮೂಲದವ್ರು.. ಸ್ಕೂಲ್ ಟೈಮಿಂದಲೇ ಪ್ರೀತಿಗೆ ಬಿದ್ದಿದ್ದವರು.. ಇವ್ರ ಪ್ರೀತಿಗೆ ಪೂಜಾ ಕುಟುಂಬಸ್ಥರ ವಿರೋಧವಿತ್ತು.. ವಿರೋಧದ ನಡುವೆ ಕೂಡ ಇಬ್ಬರು ಒಂಭತ್ತು ತಿಂಗಳ ಹಿಂದೆ ವಿವಾಹವಾಗಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು.. ಆದ್ರೆ ಒಂಭತ್ತು ತಿಂಗಳಿಂದಲೂ ಕೂಡ ಪೂಜಾಗಾಗಿ ಕುಟುಂಬಸ್ಥರು ಹುಡಕಾಡದ ಜಾಗವಿಲ್ಲ.. ಎಲ್ಲಾ ರಾಜ್ಯಗಳಲ್ಲೂ ಸುತ್ತಾಡಿದ ಕುಟುಂಬಸ್ಥರಿಗೆ ಬೆಂಗಳೂರಲ್ಲಿರೋದು ಗೊತ್ತಾಗಿದೆ.. ಅಲ್ಲದೇ ಪೂಜಾ ಗರ್ಭಿಣಿ ಕೂಡ ಆಗಿದ್ದು.. ಹೀಗಾಗಿ ಹೇಗಾದ್ರು ಮಾಡಿ ಆಕೆಯನ್ನ ಊರಿಗೆ ಕರೆತರಲು ಪ್ಲಾನ್ ಮಾಡಿದ್ದಾರೆ..
ಅದ್ರಂತೆ ಪೂಜಾಳ ಅತ್ತೆ ಪಾಣಿದೇವಿ ಸದ್ದಾಂ, ರಾಕೇಶ್, ಕರಣ್, ಆಯನ್, ಎಂಬ ಯುವಕರನ್ನು ಪೂಜಾಳನ್ನು ಕರೆತರುವ ಟಾಸ್ಕ್ ಕೊಟ್ಟು ಕಳಿಸಿದ್ದಾರೆ.. ರಾಜಸ್ಥಾನ ರಿಜಿಸ್ಟ್ರೇಷನ್ ನ RJ 22 CC 9691 ನಂಬರ್ ನ ವೆನ್ಯೂ ಕಾರಿನಲ್ಲಿ ಬಂದ ಕ್ರಿಮಿಗಳು ಮಾರಕಾಸ್ತ್ರವನ್ನು ತಂದಿದ್ರು..ಹೀಗೆ ಬಂದವರು.. ಎಲೆಕ್ಟ್ರಿಷಿಯನ್ ಆಗಿದ್ದ ಪತಿ ಓಂ ಪ್ರಕಾಶ್ ಕೆಲಸಕ್ಕೆ ತೆರಳಿದ್ದಾಗ.. ಅಗ್ರಹಾರ ದಾಸರಹಳ್ಳಿಯ ಎರಡನೇ ಮಹಡಿಯ ಇದೆ ಮನೆಗೆ ಬಂದವ್ರು.. ಒಬ್ಬಳೆ ಇದ್ದ ಪೂಜಾಳನ್ನು ತಮ್ಮ ಜೊತೆಗೆ ಬರುವಂತೆ ಕರೆದಿದ್ದಾರೆ.. ಒಪ್ಪದ ಪೂಜಾಳನ್ನ ಬಲವಂತವಾಗಿ 16 ರಂದು ಸಂಜೆ 7.30 ಕ್ಕೆ, 2.30 ರಂದು ಎಳೆದು ತಂದಿದ್ದಾರೆ.. ಒಪ್ಪದ ಆಕೆ ಜೋರಾಗಿ ಚೀರಿಕೊಂಡಿದ್ದಾಳೆ..
ಇನ್ನು ಪೂಜಾ ಕಿರುಚಾಡುತ್ತಿದ್ದಂತೆ ಅಕ್ಕಪಕ್ಕದ ಜನರೆಲ್ಲ ಸಹಾಯಕ್ಕೆಂದು ಧಾವಿಸಿದ್ದಾರೆ.. ಚಲಿಸುತ್ತಿದ್ದ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಕಾರಿನ ಮುಂಭಾಗ ಬಂದು ನಿಂತಾಗ ಅವರ ಮೇಲೆಯೇ ಕಾರು ಹತ್ತಿಸಲು ಹೋಗಿದ್ದು, ರಸ್ತೆ ಬಳಿಯಲ್ಲಿ ನಿಂತಿದ್ದ ಹತ್ತಾರು ವಾಹನಗಳನ್ನು ಗುದ್ದಿಕೊಂಡು ಎರಡೂವರೆ ಕಿ.ಮೀ ನಷ್ಟು ದೂರ ಹೋಗಿದ್ದರೆ.. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಮೇಲೆಯೇ ಕಾರು ಹರಿಸಿದ್ದು, ಆಕೆ ವಿಲ ವಿಲ ಅಂತಾ ಒದ್ದಾಡ ತೊಡಗಿದ್ದಳು.. ಒಟ್ಟಾರೆಯಾಗಿ 12 ವರ್ಷದ ಪೃಥ್ವಿರಾಜ್, 9 ವರ್ಷದ ಯಶಿಕಾ, 25 ವರ್ಷದ ಅಮುಲ್, ಮಣಿ 64 ವರ್ಷ ಸೇರಿದಂತೆ, 57 ವರ್ಷ ಜಯಲಕ್ಷ್ಮಿ ಮೇಲೆ ಕಾರು ಹರಿದಿದ್ದು ಗಂಭೀರ ಗಾಯ ಗೊಂಡು ಜಯಲಕ್ಷ್ಮಿ ಗೆ ಖಾಸಗಿ ಆಸ್ಪತ್ರೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ..
ಇನ್ನು ಇಷ್ಟಾದರು ಸುಮ್ಮನಿರದ ಕಿಡಿಗೇಡಿಗಳು, ವಿಜಯನಗರ ವರೆಗೂ ಹೊರಟಿದ್ದಾರೆ.. ಕಾರಿನಲ್ಲಿ ಓರ್ವ ಆರೋಪಿ ಸಂತ್ರಸ್ಥೆಯ ಖಾಸಗಿ ಅಂಗಾಂಗಳನ್ನು ಮುಟ್ಟಿ ಕಿರುಕುಳ ಕೊಟ್ಟಿದ್ದಾನೆ.. ಎಸ್ಕೇಪ್ ಆಗಲು ಯತ್ನಿಸ್ತಿದ್ದ ಕಾರು ಫಾಲೋ ಮಾಡಿದ್ದ ಸ್ಥಳೀಯರು ಮೂವರನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರೆ.. ಕಾರು ಚಾಲಕ ಸದ್ದಾಂ ಪರಾರಿಯಾಗಿದ್ದಾನೆ.. ಘಟನೆ ಸಂಬಂಧ ಪಟ್ಟಂತೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್, ಲೈಂಗಿಕ ದೌರ್ಜನ್ಯ, ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತಂದ ಆರೋಪದಡಿ ಎಫ್ಐಆರ್ ದಾಖಲಾಗಿದೆ..
ಸದ್ಯ ಇಷ್ಟೆಲ್ಲಾ ಹೈಡ್ರಾಮಾಕ್ಕೆ ಪೂಜಾ ಕುಟುಂಬಸ್ಥರೇ ಕಾರಣ ಅಂತಾ ಹೇಳಲಾಗ್ತಿದ್ದು, ಅವರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.. ಅದೇನೆ ಹೇಳಿ ಪ್ರೀತಿ ಮಾಡಿದ ಜೋಡಿಗೆ ಕುಟುಂಬಸ್ಥರ ವಿರೋಧ ವ್ಯಕ್ತವಾಗಿದ್ದು, ಮದುವೆ ಕೂಡ ಮಾಡಿಕೊಂಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಮತ್ಯಾವ ಬೆಳವಣಿಗೆಗಳಾಗುತ್ತೆ ಅನ್ನೋದನ್ನ ನೋಡಬೇಕಿದೆ.