SOCIAL MEDIA

Newsletter

PARTNER SITES
Select Language Select State

ಹುಬ್ಬಳ್ಳಿಯಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ: ರಸ್ತೆಗಳು ಜಲಾವೃತ, ರೈತರ ಮೊಗದಲ್ಲಿ ಮಂದಹಾಸ!

ಕಳೆದ ಎರಡು ದಿನಗಳಿಂದ ನಗರದಾದ್ಯಂತ ಕೇವಲ ಮೋಡಕವಿದ ವಾತಾವರಣವಿತ್ತು. ಆದರೆ ಇಂದು ಮಧ್ಯಾಹ್ನ ನಂತರ ವಾತಾವರಣ ಸಂಪೂರ್ಣ ಬದಲಾಗಿ ಒಮ್ಮೆಲೇ ಮುಂಗಾರು ಮಳೆ ಧೋ ಎಂದು ಸುರಿಯಲು ಆರಂಭಿಸಿತು.

Reported By Manjunath Naragund Written By Manjunath Naragund
Published: Sep 30, 2026, 07:05 PM IST | Updated: Sep 30, 2026, 07:11 PM IST
Image Credit: Rain
Join

ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆಗೆ ಕೊನೆಗೂ ವರುಣದೇವ ತಂಪೆರೆದಿದ್ದಾನೆ. ಇಂದು ನಗರದಲ್ಲಿ ದಿಢೀರ್ ಆಗಿ ಗುಡುಗು, ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ.

ಕಳೆದ ಎರಡು ದಿನಗಳಿಂದ ನಗರದಾದ್ಯಂತ ಕೇವಲ ಮೋಡಕವಿದ ವಾತಾವರಣವಿತ್ತು. ಆದರೆ ಇಂದು ಮಧ್ಯಾಹ್ನ ನಂತರ ವಾತಾವರಣ ಸಂಪೂರ್ಣ ಬದಲಾಗಿ ಒಮ್ಮೆಲೇ ಮುಂಗಾರು ಮಳೆ ಧೋ ಎಂದು ಸುರಿಯಲು ಆರಂಭಿಸಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡವು. ರಸ್ತೆಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ವಾಹನ ಸವಾರರು ಹಾಗೂ ಹಾದಿಹೋಕರು ತೀವ್ರ ಪರದಾಟ ನಡೆಸಬೇಕಾಯಿತು.

ಇದ್ದಕ್ಕಿದ್ದಂತೆ ಸುರಿದ ಜೋರು ಮಳೆಗೆ ದ್ವಿಚಕ್ರ ವಾಹನ ಸವಾರರು ಮತ್ತು ಸಾರ್ವಜನಿಕರು ಆಶ್ರಯಕ್ಕಾಗಿ ರಸ್ತೆ ಬದಿಯ ಅಂಗಡಿ-ಮುಂಗಟ್ಟುಗಳತ್ತ ಧಾವಿಸಿದರು. ಹಲವು ಕಡೆ ರಸ್ತೆ ಮೇಲೆ ನೀರು ನಿಂತ ಕಾರಣ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿ, ಸಣ್ಣ ಪ್ರಮಾಣದ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು.

ಇನ್ನು ಮಳೆಯಿಲ್ಲದೆ ಕೃಷಿ ಭೂಮಿಯಲ್ಲಿ ಬೆಳೆಗಳು ಒಣಗಿ ಹೋಗುತ್ತಿದ್ದುದನ್ನು ಕಂಡು ಆತಂಕದಲ್ಲಿದ್ದ ಭಾಗದ ರೈತರಿಗೆ ಈ ಮಳೆ ಹೊಸ ಭರವಸೆ ನೀಡಿದೆ. ಜೋರು ಮಳೆಯಿಂದಾಗಿ ಒಣಗುತ್ತಿದ್ದ ಪೈರುಗಳಿಗೆ ಜೀವಕಳೆ ಬಂದಂತಾಗಿದ್ದು, ರೈತರ ಮೊಗದಲ್ಲಿ ಕೊಂಚ ನಿರಾಳತೆ ಹಾಗೂ ಮಂದಹಾಸ ಮೂಡಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಸಾರ್ವಜನಿಕರಿಗೂ ಈ ಮಳೆ ವಾತಾವರಣವನ್ನು ತಂಪಾಗಿಸಿ ರಿಲೀಫ್ ನೀಡಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES