SOCIAL MEDIA

Newsletter

PARTNER SITES
Select Language Select State

'ಮಾತನಾಡುವ ಮುನ್ನ ಎಚ್ಚರ'..! ಆ ರೀತಿ ಕರೆದ ಅಂತ ಗೆಳೆಯನನ್ನೇ ಹ*ತ್ಯೆ ಮಾಡಿದ ಯುವಕ

ಆತನದ್ದು ಕಟ್ಟುಮಸ್ತಾದ ದೇಹ. ಜಿಮ್ ಟ್ರೈನರ್ ಬೇರೆ. ಫ್ರೆಂಡ್ಸ್ ಗಳು ಸಹ ಹೆಚ್ಚಾಗಿದ್ರು. ಕ್ಲೋಸ್ ಸರ್ಕಲ್ ಅಂದಮೇಲೆ ಶಿಷ್ಯ, ಮಚ್ಚ, ಮಗ, ಮಾಮ್ಸ್ ಅನ್ನೋದು ಕಾಮನ್. ಆದರೆ ಶಿಷ್ಯ ಅಂತಾ ಕರೆದಿದ್ದಕ್ಕೆ ಆ ಜಿಮ್ ಟ್ರೈನರ್ ಕಥೆಯನ್ನೇ ಜೊತೆಗಿದ್ದವರು ಮುಗಿಸಿಬಿಟ್ಟಿದ್ದಾರೆ. ಹಾಗಾದ್ರೆ ಅಲ್ಲಿ ಆಗಿದ್ದೇನೂ ಅಂತೀರಾ.. ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ..

Reported By Krishna NK Written By Krishna NK
Published: Oct 05, 2026, 07:32 PM IST | Updated: Oct 05, 2026, 08:05 PM IST
Image Credit: gym trainer
Join

ಬೆಂಗಳೂರು : ಈ ಮೇಲೆ ಫೋಟೋದಲ್ಲಿ ಕಾಣ್ತಿರುವ ಯುವಕನ ಹೆಸರು ನಂದನ್ ಅಂತಾ. ವಯಸ್ಸಿನ್ನು 25 ವರ್ಷ. ಆದರೆ ಈತ ಈಗ ಮಸಣ ಸೇರಿಬಿಟ್ಟಿದ್ದಾನೆ. ಇಷ್ಟು ಫಿಟ್ ಆಗಿದ್ದವನಿಗೆ ಏನಾಯ್ತಪ್ಪ ಅಂತಾ ನಿಮಗೆ ಡೌಟ್‌ ಬಂದಿರಬಹುದು. ಬೆಂಗಳೂರಿನ ಹೆಬ್ಬಾಳ ಕೆಂಪಾಪುರದಲ್ಲಿ ನಿನ್ನೆ ಸಹ ಸಹಕಾರ ನಗರದಲ್ಲಿರುವ ನಂದನ್ ಕೆಲಸ ಮಾಡ್ತಿದ್ದ ಜಿಮ್ ನ ವಾರ್ಷಿಕೋತ್ಸವ ಇತ್ತು. ಕಾರ್ಯಕ್ರಮ ಮುಗಿದ ಬಳಿಕ ಇತರೆ  ಸಿಬ್ಬಂದಿಯೊಂದಿಗೆ ಪರಿಚಿತರಾಗಿದ್ದ ಅನುಷ್ ಎಂಬಾತನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದ. ‌ಈ ವೇಳೆ ಮತ್ತೊಬ್ಬ ಜಿಮ್ ಸಿಬ್ಬಂದಿ ವಿಶ್ವನಾಥ್‌ನನ್ನು ಇದೇ ನಂದನ್ ಶಿಷ್ಯ ಎಂದು ಕರೆದಿದ್ದ. ಇಲ್ಲೇ ನೋಡಿ ಕಿರಿಕ್ ಶುರುವಾಗಿದ್ದು.

ಇದರಿಂದ ಕೆರಳಿ ಕೆಂಡವಾಗಿದ್ದ ವಿಶ್ವ ಶಿಷ್ಯ ಎಂದು ಕರೆಯಬೇಡ, ತಮ್ಮ ಅಥವಾ ಹೆಸರಿನಿಂದ ಕರೆಯುವಂತೆ ನಂದನ್‌ಗೆ ಹೇಳಿದ್ದಾನೆ. ಮತ್ತೆ ಇದೇ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇದೇ ವಿಚಾರಕ್ಕೆ ಗುಂಪಿನ ನಡುವೆ ಗಲಾಟೆ ನಡೆದು, ಅಪಾರ್ಟ್‌ಮೆಂಟ್‌ನ ವಾಶ್‌ರೂಮ್‌ನಲ್ಲೇ ನಂದನ್ ಮೇಲೆ ವಿಶ್ವನಾಥ್ ಸೇರಿ ನಾಲ್ವರಿಂದ ಹಲ್ಲೆ ನಡೆಸಲಾಗಿದೆ.

ಹಲ್ಲೆ ನಡೆಸಿದ ವೇಳೆ ವಾಶ್‌ರೂಮ್‌ನಲ್ಲಿದ್ದ ಗಾಜಿನ ವಸ್ತು ಒಡೆದಿದೆ. ಈ ವೇಳೆ ಗಾಜಿನ ತುಂಡು ನಂದನ್ ತಲೆಗೆ ಚುಚ್ಚಿ ತೀವ್ರ ರಕ್ತಸ್ರಾವವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ನಂದನ್‌ನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂದನ್ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದ ನಂದನ್ ತಾಯಿ ಮಂಜುಳಾ, ಮಗನ ದೇಹದ ಮೇಲೆ ಕಚ್ಚಿದ ಹಾಗೂ ಇತರೆ ಗಾಯದ ಗುರುತುಗಳನ್ನು ಕಂಡು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ವಿಶ್ವನಾಥ್, ವಿಜಯ್, ಶರತ್ ಮತ್ತು ನಿಶಾಂತ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ನಂದನ್ ಸಾವಿಗೆ ನಿಖರವಾಗಿ ಕಾರಣವೇನು.. ಗಲಾಟೆ ಯಾವ ಹಂತದಲ್ಲಿ ಹಲ್ಲೆಯಾಗಿ ಕೊಲೆಯಲ್ಲಿ ಅಂತ್ಯವಾಯ್ತು.. ಹಲ್ಲೆ ನಡೆಸಿದವರ ಪಾತ್ರವೇನು..? ಎಂಬ ಎಲ್ಲಾ ಆಯಾಮಗಳಲ್ಲೂ ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅದೆನೇ ಹೇಳಿ.. ಶಿಷ್ಯ ಎಂದ ಸಣ್ಣ ಕಾರಣಕ್ಕೆ ಕೊಲೆ‌ ಮಾಡುವ ಹಂತಕ್ಕೆ ಹೋಗ್ತಾರೆ ಅಂದ್ರೆ ನಿಜವಾಗಿಯೂ ಯಾರನ್ನು ಹೇಗೆ ಮಾತನಾಡಸಬೇಕು ಎಂಬ ಭಯ ಕಾಡುವುದಂತೂ ಸುಳ್ಳಲ್ಲ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES