SOCIAL MEDIA

Newsletter

PARTNER SITES
Select Language Select State

ಗಣೇಶನ ಡಾಲರ್‌ನಿಂದ ಬಯಲಾಯ್ತು ಪಾಪಿ ಪತಿಯ ಕೊಲೆ ರಹಸ್ಯ: ಸಂಪಿಗೆಹಳ್ಳಿ ಕೇಸ್ ಭೇದಿಸಿದ್ದು ಹೇಗೆ?

ಬರೋಬ್ಬರಿ ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಎಂ.ಎಸ್ ನಗರ ಸುತ್ತಮುತ್ತ 8 ಮಂದಿ ಮಹಿಳೆಯರ ಮೊಬೈಲ್ ನಂಬರ್‌ಗಳು ಸಿಕ್ಕಿದ್ದವು.

Reported By Manjunath Naragund Written By Manjunath Naragund
Published: Sep 26, 2026, 03:54 PM IST | Updated: Sep 26, 2026, 04:15 PM IST
Image Credit: Bengaluru
Join

ಬೆಂಗಳೂರು: ಸಂಪಿಗೆಹಳ್ಳಿ ಮರ್ಡರ್ ಕೇಸ್ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಹಂತಕ ಗಂಡ ಸಹ ಲಾಕ್ ಆಗಿದ್ದಾನೆ. ಆದರೆ ಈ ಕೊಲೆ ಕೇಸ್ ಭೇದಿಸೋದು ಪೊಲೀಸರಿಗೆ ಅಷ್ಟು ಸುಲಭವಾಗಿರಲಿಲ್ಲ. ಮಹಿಳೆಯ ಕಳೇಬರದಲ್ಲಿ ಸಿಕ್ಕ ಅದೊಂದು ಡಾಲರ್ ಕೊಲೆಗಡುಕ ಗಂಡ ಲಾಕ್ ಆಗಲು ಸಹಾಯ ಮಾಡಿತ್ತು. ಹಾಗಾದ್ರೆ ಪೊಲೀಸರಿಗೆ ಸುಳಿವು ಏನೂ.? ಪಾಪಿ ಪತಿ ಅರೆಸ್ಟ್ ಆಗಿದ್ದು ಹೇಗೆ ಎಂಬುದನ್ನು ಹೇಳ್ತಿವಿ ನೋಡಿ.

ಯೆಸ್,ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎಸ್. ನಗರದಲ್ಲಿ ಸೈಟ್ ಕ್ಲೀನಿಂಗ್ ವೇಳೆ ಮಹಿಳೆಯ ಶವ ಪತ್ತೆಯಾಗಿತ್ತು. ಶವ ಸಂಪೂರ್ಣ ಕೊಳೆತು ಅಸ್ಥಿಪಂಜರದ ಸ್ಥಿತಿಯಲ್ಲಿದ್ದರಿಂದ ಮೃತಳ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಶವದ ಮೇಲೆ ಸಿಕ್ಕಿದ್ದು ಒಂದು ಬಟ್ಟೆಯ ಟ್ಯಾಗ್, ಗಣೇಶನ ಡಾಲರ್ ಹಾಗೂ ಕೆಲವು ಬಳೆಗಳು ಮಾತ್ರ. ಹೀಗಾಗಿ ಗುರುತು ಪತ್ತೆಯಾಗದ ಹಿನ್ನೆಲೆ ಸಂಪಿಗೆಹಳ್ಳಿ ಪೊಲೀಸರು ಶವದ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು.

ಆದ್ರೆ ಶವದ ಮೇಲಿದ್ದ ಒಂದು ಟ್ಯಾಗ್ ಪೊಲೀಸರ ತನಿಖೆಗೆ ಮಹತ್ವದ ಸುಳಿವು ನೀಡಿತ್ತು. ಬಟ್ಟೆಯ ಟ್ಯಾಗ್ ಮೂಲಕ ಮಾರ್ಟ್‌ನಿಂದ ಮಾಹಿತಿ ಕಲೆ ಹಾಕಿದ ಪೊಲೀಸರು, ಅದರಲ್ಲಿದ್ದ ಕಾಂಟ್ಯಾಕ್ಟ್ ನಂಬರ್‌ನ್ನೂ ಪರಿಶೀಲಿಸಿದ್ದರು. ಆದರೆ ಆ ನಂಬರ್‌ಗೆ ಕರೆ ಮಾಡಿದಾಗ ಪೊಲೀಸರಿಗೆ ಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೇ ವೇಳೆ ಶವದ ಮೇಲಿದ್ದ ಗಣೇಶನ ಪೆಂಡೆಂಟ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದಾಗ, ಇಂತಹ ಡಾಲರ್‌ಗಳನ್ನು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಭಾಗದ ಜನರು ಹೆಚ್ಚಾಗಿ ಬಳಸುತ್ತಾರೆ ಅನ್ನೋ ಮಾಹಿತಿ ಸಿಕ್ಕಿತ್ತು.ಹೀಗಾಗಿ ಪೊಲೀಸರು ತನಿಖೆಯ ದಿಕ್ಕನ್ನೇ ಬದಲಿಸಿದ್ರು. ಶವ ಸಿಕ್ಕ ಸ್ಥಳದ ಸುತ್ತಮುತ್ತ ಒಡಿಶಾ ಭಾಗದವರು ಯಾರೆಲ್ಲಾ ವಾಸ ಮಾಡ್ತಿದ್ದಾರೆ ಅನ್ನೋದನ್ನ ಪರಿಶೀಲನೆ ಮಾಡಿದ್ರು.

ಬರೋಬ್ಬರಿ ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಎಂ.ಎಸ್ ನಗರ ಸುತ್ತಮುತ್ತ 8 ಮಂದಿ ಮಹಿಳೆಯರ ಮೊಬೈಲ್ ನಂಬರ್‌ಗಳು ಸಿಕ್ಕಿದ್ದವು. ಎಲ್ಲರಿಗೂ ಕರೆ ಮಾಡಿ ವಿಚಾರಣೆ ನಡೆಸಿದಾಗ, ಅನುಸೂಯ ಅನ್ನೋ ಮಹಿಳೆಯ ನಂಬರ್‌ನಿಂದ ಮಾತ್ರ ಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ, ಮಾರ್ಟ್‌ನಲ್ಲಿ ಸಿಕ್ಕಿದ್ದ ನಂಬರ್‌ನಲ್ಲೂ ಒಂದು ಸಂಖ್ಯೆ ವ್ಯತ್ಯಾಸವಾಗಿತ್ತು. ಇದೇ ಅನುಮಾನ ಪೊಲೀಸರ ತನಿಖೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು.

ಇದಾದ ಬಳಿಕ ಪೊಲೀಸರು ಟವರ್ ಡಂಪ್ ಮೂಲಕ ಅನುಸೂಯಗೆ ಸಂಬಂಧಿಸಿದ ಮತ್ತೊಂದು ನಂಬರ್ ಪತ್ತೆಹಚ್ಚಿದ್ದರು.ಆ ನಂಬರ್‌ಗೆ ಕರೆ ಮಾಡಿದಾಗ ಪತಿಯೇ ಕರೆ ಸ್ವೀಕರಿಸಿದ್ದ. ಬಳಿಕ ಆತನ ಮನೆ ಬಳಿ ತೆರಳಿ ಪೊಲೀಸರು ವಿಚಾರಣೆ ನಡೆಸಿದ್ದರು. ಪೊಲೀಸರ ಸಂಪರ್ಕವಾಗುತ್ತಿದ್ದಂತೆ ಮನೆ ಬದಲಾಯಿಸಲು ಸಾಗರ್ ಮುಂದಾಗಿದ್ದ.ಪತ್ನಿ ಕಾಣೆಯಾಗಿದ್ದಾಳೆ, ಊರಿಗೆ ಹೋಗಿ ಹುಡುಕಿಕೊಂಡು ಬರುತ್ತೇನೆ ಎಂದು ಮನೆ ಮಾಲೀಕರ ಬಳಿ ಹೇಳಿದ್ದ.  ಅನುಮಾನಗೊಂಡ ಪೊಲೀಸರು ಸಾಗರ್ ಕೆಲಸ ಮಾಡುತ್ತಿದ್ದ ಹೋಟೆಲ್ ಬಳಿ ತೆರಳಿ ವಿಚಾರಣೆ ನಡೆಸಿದಾಗ, ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಸಾಗರ್ ಒಪ್ಪಿಕೊಂಡಿದ್ದಾನೆ.

ಒಟ್ಟಿನಲ್ಲಿ, ಗುರುತೇ ಸಿಗದ ಅಸ್ಥಿಪಂಜರವಾಗಿದ್ದ ಶವದ ಮೇಲಿದ್ದ ಒಂದು ಟ್ಯಾಗ್, ಗಣೇಶನ ಡಾಲರ್ ಮತ್ತು ಟವರ್ ಡಂಪ್ ಮಾಹಿತಿ ಪೊಲೀಸರಿಗೆ ಕೊಲೆ ಪ್ರಕರಣದ ಬೆನ್ನುಹತ್ತಲು ಪ್ರಮುಖ ಸುಳಿವು ನೀಡಿವೆ. ಅದೆನೇ ಹೇಳಿ ಜಿಬಿಎ ಟಫ್ ರೂಲ್ಸ್ ಜಾರಿಗೆ ತಂದು ಸೈಟ್ ಕ್ಲೀನ್ ಮಾಡಲು ಸೂಚಿಸಿದ್ದು, ಮುಚ್ಚಿ ಹೋಗುತ್ತಿದ್ದ ಕೊಲೆ ಕೇಸ್ ನಲ್ಲಿ ಕೊಲೆಗಡುಕ ಗಂಡ ಜೈಲು ಸೇರುವಂತೆ ಮಾಡಿದೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES