SOCIAL MEDIA

Newsletter

PARTNER SITES
Select Language Select State

ಲಕ್ಷ್ಮೇಶ್ವರ ರೌಡಿಶೀಟರ್ ಇರ್ಫಾನ್ ಹ*ತ್ಯೆ : 3 ಆರೋಪಿಗಳನ್ನು ಬಂಧನ, ರೋಚಕ ಟ್ವಿಸ್ಟ್‌ ಬಟಾಬಯಲು

ಲಕ್ಷ್ಮೇಶ್ವರದಲ್ಲಿ ಇರ್ಫಾನ್ ಎಂಬ ವ್ಯಕ್ತಿಯನ್ನು ಹಾಡುಹಗಲೇ ಅಟ್ಟಾಡಿಸಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ (ಚಾಕು ಮತ್ತು ಕೊಡಲಿ) ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಚಕ ಟ್ವಿಸ್ಟ್‌ ಬಟಾಬಯಲಾಗಿದೆ.. ಅಸಲಿಗೆ ಈ ಘಟನೆಗೆ ಮೂಲ ಕಾರಣವೇನು..? ಸಂಪೂರ್ಣ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Sep 24, 2026, 03:42 PM IST | Updated: Sep 24, 2026, 03:44 PM IST
Image Credit: Today Gadag News
Join

ಗದಗ : ಹಾಡುಹಗಲೇ ಅಟ್ಟಾಡಿಸಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ ಈ ಭೀಕರ ಹತ್ಯೆ ಇಡೀ ಪಟ್ಟಣವನ್ನೇ ಬೆಚ್ಚಿಬೀಳಿಸಿದೆ. ಆದ್ರೆ... ಕೊಲೆಯಾದ ಇರ್ಫಾನ್ ಅಲಿಯಾಸ್ ಗೊರಿಲ್ಲಾ ಕುಟುಂಬದಲ್ಲಿ ಈಗ ಉಳಿದಿರೋದು ಬರೀ ಆಕ್ರಂದನ... ಕಣ್ಣೀರು... ಮತ್ತು ಉತ್ತರ ಸಿಗದ ಪ್ರಶ್ನೆಗಳು! ಒಂದೆಡೆ ಪೊಲೀಸರ ತನಿಖೆಯಲ್ಲಿ ಹಳೆ ದ್ವೇಷ, ವೈಯಕ್ತಿಕ ವೈಷಮ್ಯ, ಹಣಕಾಸಿನ ವ್ಯವಹಾರದ ವಿಚಾರಗಳು ಹೊರಬರುತ್ತಿವೆ. ಮತ್ತೊಂದೆಡೆ ಮನೆಯ ಆಧಾರವಾಗಿದ್ದ ವ್ಯಕ್ತಿಯನ್ನೇ ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲು ಮುಟ್ಟಿದೆ. ಮನೆಯವರ ಕಣ್ಣೀರಿನ ನಡುವೆ... ಪೊಲೀಸರ ತನಿಖೆಯಲ್ಲಿ ಬಯಲಾಗ್ತಿರೋ ಸ್ಫೋಟಕ ಮಾಹಿತಿಗಳೇನು? ನೋಡೋಣ ಈ ಸ್ಪೆಷಲ್ ಸ್ಟೋರಿಯಲ್ಲಿ...

ಮಧ್ಯಾಹ್ನ ಹಾಡುಹಗಲೇ ಅಟ್ಟಾಡಿಸಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊನೆಗೆ ಜೀವವನ್ನೇ ತೆಗೆದಿದ್ದಾರೆ. ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮವನನ್ನು ಹೀಗೆ ಕೊಲ್ಲಬೇಕಿತ್ತಾ?’ ‘ಅವನ ಜೀವಕ್ಕೆ ಬೆಲೆ ಇಲ್ಲವಾ?’ ಎನ್ನುವ ಪ್ರಶ್ನೆಗಳ ನಡುವೆ ಕುಟುಂಬಸ್ಥರು ಕಣ್ಣೀರಾಗಿದ್ದಾರೆ. ಮಾತನಾಡಲು ಹಾಗೂ ಆದ ನೋವನ್ನು ಕೂಡ ಹೇಳಿಕೊಳ್ಳದಷ್ಟು ದುಃಖದಲ್ಲಿದ್ದಾರೆ.

ಇದು ಬರೀ ಒಂದು ಕೊಲೆಯಲ್ಲ. ಒಂದು ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡ ಘಟನೆ. ನಿನ್ನೆ ಮನೆಯಲ್ಲಿದ್ದವನು... ಇವತ್ತು ಹೆಣವಾಗಿ ಮನೆಗೆ ಬಂದಿದ್ದಾನೆ. ಒಬ್ಬ ಸಹೋದರನನ್ನು ಕಳೆದುಕೊಂಡ ನೋವು. ಒಬ್ಬ ಸಂಬಂಧಿಯನ್ನು ಕಳೆದುಕೊಂಡ ಆಘಾತ. ಕಣ್ಣೆದುರೇ ನಡೆದ ಬರ್ಬರತೆಯ ನೆನಪು. ಕುಟುಂಬಸ್ಥರನ್ನು ಕಾಡ್ತಿದೆ.

ಇತ್ತ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದರೆ. ಅತ್ತ ಪೊಲೀಸರು ಕೊಲೆ ಹಿಂದಿನ ಕಾರಣ ಹುಡುಕುತ್ತಿದ್ದಾರೆ. ಈಗಾಗಲೇ ಮೂವರು ಆರೋಪಿಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆಯಾಜ್ ಮುಲ್ಲಾ. ಮೊಹಮ್ಮದ್ ವಸೀಮ್. ಮೊಹಮ್ಮದ್ ಸೂಫಿಯಾನ್ ರನ್ನ ಅರೆಸ್ಟ್ ಮಾಡಲಾಗಿದೆ. ಚಾಕು ಹಾಗೂ ಕೊಡಲಿಯಿಂದ ಹಲ್ಲೆ ನಡೆಸಿ ಇರ್ಫಾನ್‌ನನ್ನು ಕೊಲೆ ಮಾಡಿರುವ ಆರೋಪ ಇವರ ಮೇಲಿದೆ. ಹಾಗಾದ್ರೆ, ಈ ಕೊಲೆಗೆ ಕಾರಣವೇನು? ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ. ಹಳೆಯ ವೈಷಮ್ಯ... ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವ್ಯವಹಾರದ ವಿಚಾರಗಳು ಕೊಲೆಗೆ ಕಾರಣವಾಗಿರುವ ಶಂಕೆ ಇದೆ. ಸುಮಾರು 30 ಸಾವಿರ ರೂಪಾಯಿ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು ಎನ್ನಲಾಗಿದೆ. 2023ರಲ್ಲೂ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಪೊಲೀಸರ ಪ್ರಕಾರ ಪ್ರಕರಣದಲ್ಲಿ ಇರ್ಫಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಸಾಕ್ಷಿಯಾಗಿದ್ದ ಆಯಾಜ್‌ಗೆ ಬೆದರಿಕೆ ಹಾಕಿದ ಆರೋಪವೂ ಇತ್ತು ಎನ್ನಲಾಗ್ತಿದೆ. ಇನ್ನು ಇರ್ಫಾನ್ ವಿರುದ್ಧವೂ ಹಲವು ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಏಳು ಪ್ರಕರಣಗಳು ಅಂದ್ರೆ ರೌಡಿಶೀಟರ್ ಕೊಲೆ ಯತ್ನ ಪ್ರಕರಣ ಹೀಗೆ ಗೂಂಡಾ ಕಾಯ್ದೆಯಡಿ ಬಂಧನವಾಗಿದ್ದ ಇರ್ಫಾನ್‌ನನ್ನು ಈ ಹಿಂದೆ ಗಡಿಪಾರು ಕೂಡ ಮಾಡಲಾಗಿತ್ತು ಅಂತಾರೆ ಪೊಲೀಸರು.

ಹಳೆ ದ್ವೇಷವೊ, ಹಣಕಾಸಿನ ವಿಚಾರವೊ, ಇವೆಲ್ಲದರ ನಡುವೆ ಒಂದು ಕುಟುಂಬ ಮಾತ್ರ ಇಂದು ತನ್ನವನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿದೆ. ಕೊಲೆಗೆ ನಿಜವಾದ ಕಾರಣ ಏನು? ಯಾರು ಈ ಕೃತ್ಯದ ಹಿಂದೆ ಇದ್ದರು? ಇನ್ನೂ ಯಾರ್ಯಾರು ಪರೋಕ್ಷವಾಗಿ ಸಹಾಯ ಮಾಡಿದ್ದಾರೆ‌ ಎಲ್ಲ ಪ್ರಶ್ನೆಗಳಿಗೂ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.

ಮೂರು ಆರೋಪಿಗಳು ಮಾತ್ರ ಪೊಲೀಸರ ವಶದಲ್ಲಿದ್ದಾರೆ. ಇನ್ನಷ್ಟು ಆರೋಪಿಗಳ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಆದ್ರೆ, ಆರೋಪಿಗಳು ಸಿಕ್ಕಿಬಿದ್ದರೂ ಕುಟುಂಬ ಕಳೆದುಕೊಂಡ ಜೀವ ಮರಳಿ ಬರಲ್ಲ. ಮನೆಯ ಬಾಗಿಲು ಅದೇ ಇದೆ. ಮನೆಯವರು ಅದೇ ಇದ್ದಾರೆ. ಆದ್ರೆ. ಮನೆಯ ಒಬ್ಬ ವ್ಯಕ್ತಿ ಮಾತ್ರ ಇಲ್ಲ. ನಿನ್ನೆವರೆಗೂ ಕುಟುಂಬದ ಜೊತೆಗಿದ್ದ ಇರ್ಫಾನ್, ಇವತ್ತು ನೆನಪು ಮಾತ್ರ. ಹಳೆ ದ್ವೇಷವಾಗಲಿ.. ಹಣದ ವ್ಯವಹಾರವಾಗಲಿ.. ಕಾರಣ ಏನೇ ಇರಲಿ.. ಒಂದು ಜೀವ ಹೋಯ್ತು.. ಒಂದು ಕುಟುಂಬದ ನೆಮ್ಮದಿ ಹೋಯ್ತು.. ಈಗ ನ್ಯಾಯಕ್ಕಾಗಿ ಕುಟುಂಬಸ್ಥರ ಕಣ್ಣುಗಳು ಪೊಲೀಸರತ್ತ ನೆಟ್ಟಿವೆ. ಕೊಲೆಯ ಹಿಂದೆ ಎಂತಹ ಪ್ರಭಾವಿನೇ ಇರ್ಲಿ ಪೊಲೀಸರ ನೈಜ ತನಿಖೆಯಿಂದ ಇರ್ಫಾನ್ ಸಾವಿಗೆ ನ್ಯಾಯ ಸಿಗಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES