• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ನಕಲಿ ಮೆಡಿಸನ್ ಕಿಂಗ್ ಪಿನ್ ಪ್ರಶಾಂತನ ಕಳ್ಳಾಟ ಬಯಲು : ಟರ್ಕಿ ಭೇಟಿ ಸಿಕ್ರೇಟ್‌ ರಿವೀಲ್‌

ನಕಲಿ ಮೆಡಿಸನ್ ಕಿಂಗ್ ಪಿನ್ ಪ್ರಶಾಂತನ ಕಳ್ಳಾಟ ಬಯಲು : ಟರ್ಕಿ ಭೇಟಿ ಸಿಕ್ರೇಟ್‌ ರಿವೀಲ್‌

SITಯಿಂದ ಫೇಕ್ ಮೆಡಿಸಿನ್ ಜಾಲದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ಕಿಂಗ್‌ಪಿನ್‌ ಪ್ರಶಾಂತ್‌ನನ್ನು ಕಸ್ಟಡಿಗೆ ಪಡೆದಿರುವ ಎಸ್.ಐ.ಟಿ ವಿಚಾರಣೆ ನಡೆಸುತ್ತಿದೆ. ಈ ವೇಳೆ ಪ್ರಶಾಂತ್‌ನ ಟರ್ಕಿ ಟೂರ್‌ ರಹಸ್ಯ ಜೊತೆ ಮೆಡಿಸಿನ್ ಲೇಬಲ್ ಕಳ್ಳಾಟದ ಸ್ಪೋಟಕ ಮಾಹಿತಿಗಳು ಹೊರಬಂದಿವೆ.

Reported ByKrishna NKEdited ByKrishna NK
Published: Oct 04, 2026, 05:52 PM IST|Updated: Oct 04, 2026, 05:53 PM IST
joinshare
ನಕಲಿ ಮೆಡಿಸನ್ ಕಿಂಗ್ ಪಿನ್ ಪ್ರಶಾಂತನ ಕಳ್ಳಾಟ ಬಯಲು : ಟರ್ಕಿ ಭೇಟಿ ಸಿಕ್ರೇಟ್‌ ರಿವೀಲ್‌
Image Credit: Fake medicine racket prashanth

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ : ಭಾರತೀಯ ಪೈಲಟ್‌‌ಗೆ ಇಸ್ರೇಲ್‌ನಿಂದ ಅತ್ಯುನ್ನತ ಗೌರವ!

ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ : ಭಾರತೀಯ ಪೈಲಟ್‌‌ಗೆ ಇಸ್ರೇಲ್‌ನಿಂದ ಅತ್ಯುನ್ನತ ಗೌರವ!

2

6,6,6,6,6,6 ಆರು ಸಿಕ್ಸರ್​ ಸಿಡಿಸಿ ಅಬ್ಬರಿಸಿದ ಭಾರತೀಯ ಸ್ಟಾರ್‌ ಕ್ರಿಕೆಟರ್!

3

ಸಂಜು, ಶ್ರೇಯಸ್‌ ಅಯ್ಯರ್‌ ಅಲ್ಲ.. ವಿರಾಟ್‌ ಕೊಹ್ಲಿ 3ನೇ ಬ್ಯಾಟಿಂಗ್‌ ಸ್ಲಾಟ್‌ಗೆ ಬೆಸ್ಟ್ ಬ್ಯಾಟ್ಸ್‌ಮನ್‌‌ ಆಯ್ಕೆ

4

ನಕಲಿ ಮೆಡಿಸನ್ ಕಿಂಗ್ ಪಿನ್ ಪ್ರಶಾಂತನ ಕಳ್ಳಾಟ ಬಯಲು : ಟರ್ಕಿ ಭೇಟಿ ಸಿಕ್ರೇಟ್‌ ರಿವೀಲ್‌

5

ಎಚ್ಚರ.. ರಾಜ್ಯದ 12 ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ : ಮುಂದಿನ 3 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಫೇಕ್ ಮೆಡಿಸಿನ್ ಜಾಲದ ಕಿಂಗ್‌ಪಿನ್‌ ಪ್ರಶಾಂತ್‌ ಗೆ ಫಾರಿನ್‌ ಕನೆಕ್ಷನ್‌ ಸ್ಟ್ರಾಂಗ್ ಆಗ್ತಿತ್ತು. ಪದೇ ಪದೇ ವಿದೇಶಿ ಯಾತ್ರೆ ಮಾಡ್ತಿದ್ದ ಪ್ರಶಾಂತ ಹಲವು ವರ್ಷಗಳಿಂದ ವಿದೇಶಗಳಿಗೆ ಓಡಾಟ ನಡೆಸಿದ್ದ. ಮೆಡಿಸಿನ್ ದಂಧೆಯ ಸಲುವಾಗ ದೇಶದಿಂದ ದೇಶಕ್ಕೆ ಅಲೆದಾಡುತ್ತಿದ್ದ.  ದುಬೈ, ಟರ್ಕಿ, ಅಜರ್ಬೈಜಾನ್ ಸೇರಿದಂತೆ ಹಲವು ದೇಶಗಳಿಗೆ ತೆರಳಿದ್ದ ಬಗ್ಗೆ SIT ದಾಖಲೆ ಸಿಕ್ಜಿದೆ.‌

ಹೀಗೆ ಪ್ರಶಾಂತ್ ಫಾರಿನ್ ಟೂರ್ ಹಿಸ್ಟರಿ ಕೆದಕಿದ್ದ ಎಸ್.ಐ.ಟಿಗೆ,  ಟರ್ಕಿ ದೇಶದಲ್ಲಿ ಪ್ರಶಾಂತ್ ನಡೆಸಿದ್ದ ವ್ಯವಹಾರದ ಬಗ್ಗೆ ಮಾಹಿತಿ ಸಿಕ್ಕಿದೆ. ಟರ್ಕಿ ದೇಶ ಒಂದಕ್ಕೆ ವರ್ಷದಲ್ಲಿ ಹತ್ತಾರು ಬಾರಿ ಹೋಗಿ ಬರ್ತಿದ್ದ ಈ ಪ್ರಶಾಂತ್,  ಈ ಟ್ರವೆಲ್ ಹಿಸ್ಟರಿ ಬಗ್ಗೆ ಕೇಳಿದಾಗ ಒರಿಜಿನಲ್ ಮೆಡಿಸನ್ ಲೇಬಲ್ ಕಹಾನಿ ಬಯಲಾಗಿದೆ. ಫೈಜರ್ ಕಂಪನಿ ಒರಿಜಿನಲ್‌ ಲೇಬಲ್ ತರಲು ಪ್ರಶಾಂತ್ ಟರ್ಕಿಗೆ ಹೋಗ್ತಾ ಇದ್ನಂತೆ, ಅಲ್ಲಿಂದ ತಂದ ಲೇಬಲ್ ಬಳಸಿ ನಕಲಿ ಮೆಡಿಸನ್ ಮಾರಾಟ ಮಾಡ್ತಿದ್ದನಂತೆ. ಹೀಗೆ ಟರ್ಕಿ ಗೆ ಹೋದಾಗ ಅಲ್ಲಿನ ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದನಂತೆ, ಆ ಬಳಿಕ ಆತನ ಮೀಸಾವೂ ಕ್ಯಾನ್ಸಲ್ ಆಗಿತ್ತು.

ಟರ್ಕಿ ದೇಶದ ವೀಸಾ ಕ್ಯಾನ್ಸಲ್ ಆಯ್ತು ಅಂತ ತನ್ನ ಕಳ್ಳಾಟವನ್ನ ಪ್ರಶಾಂತ ನಿಲ್ಲಿಸಲಿಲ್ಲ. ಟರ್ಕಿ ದೇಶದ ಅಕ್ಕಪಕ್ಕದ ದೇಶಗಳಿಗೆ ಹೋಗ್ತಿದ್ದನಂತೆ. ಅಲ್ಲಿಂದ ಟರ್ಕಿ ದೇಶಕ್ಕೆ ಹೋಗಲು ಟ್ರೈ ಮಾಡಿದ್ದಾನೆ. ಆದರೆ ಆದು ಆಗಾದ ಮದ್ಯವರ್ತಿಗಳ ಬಳಿ ಟರ್ಕಿಯಿಂದ ಪೈಜರ್ ಕಂಪನಿ ಲೇಬಲ್ ತರಿಸಿಕೊಳ್ಳುತ್ತಿದ್ದ. ಟರ್ಕಿಯಿಂದ ತಂದ ಆ ಒರಿಜಿನಲ್ ಲೇಬಲ್ ಬಳಸಿ ಅದರೊಳಗೆ ನಕಲಿ ಮೆಡಿಸನ್ ಹಾಕಿ ಪ್ಯಾಕ್ ಮಾಡ್ತಾ ಇದ್ದನಂತೆ.

ಅಲ್ಲದೆ ನಕಲಿ ಮೆಡಿಸನ್ ದಂಧೆ ಬಯಲಾಗಬಾರದು ಅಂತ ಆರೋಪಿಗಳು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದು ಗೊತ್ತಾಗಿದೆ.ಒರಿಜಿನಲ್ ಮೆಡಿಸನ್ ಗಳ ಜೊತೆಗೆ ನಕಲಿ ಮೆಡಿಸಿನ್ ಗಳನ್ನು ಜೋಡಿಸಿ ಸರಬರಾಜು ಮಾಡ್ತಿದ್ರಂತೆ. ಅರ್ಧದಷ್ಟು ನಕಲಿ ಇದ್ರೆ ಇನ್ನಾದ್ರಾ ಒರಿಜಿನಲ್ ಮೆಡಿಸನ್ ಇರ್ತಾ ಇತಂತೆ ಒಂದ್ವೇಳೆ ಚೆಕ್ ಮಾಡಿ ಸಿಕ್ಕಿ ಬಿದ್ರೆ ಎಲ್ಲೋ ತಪ್ಪಾಗಿರಬೇಕು ಅಂತ ಅಂದುಕೊಳ್ತಾರೆ ಅನ್ನೋದು ಆರೋಪಿಗಳ ಲೆಕ್ಕಚಾರವಾಗಿತ್ತು.

ಪ್ರಶಾಂತ ಸಹಚಾರ ಹೇಳಿಕೆ ದಾಖಲಿಸಿರುವ ಎಸ್.ಐ.ಟಿ,‌ ಕೆಲವು ಸಾಕ್ಷ್ಯಗಳನ್ನೂ ಕಲೆ ಹಾಕಿದೆ. ಅವುಗಳ ಆಧಾರದ ಮೇಲೆ ಪ್ರಶಾಂತ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿದೆ. ವಿದೇಶಿ ಸಂಪರ್ಕದಿಂದ ಹಿಡಿದು ಫೇಕ್ ಮೆಡಿಸಿನ್ ಜಾಲದ ಸಂಪೂರ್ಣ ನೆಟ್‌ವರ್ಕ್‌ವರೆಗೆ SIT ತನಿಖೆ ಸಾಗಿದೆ.

Add Zee News as a Preferred Source
TAGS:
Kannada News