SOCIAL MEDIA

Newsletter

PARTNER SITES
Select Language Select State

ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಸ್ಟಿಂಗ್ ಆಪರೇಶನ್! ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಸ್ಟಿಂಗ್ ಮಾಡಿ ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯ ಅವರನ್ನು ಇಳಿಸಿದರು. ಕಾಂಗ್ರೆಸ್ ಹೈಕಮಾಂಡ್, ಸಿಎಂ ಡಿಕೆಶಿ, ಒಂದು ಸುದ್ದಿವಾಹಿನಿ ಸೇರಿ ಸಿದ್ದರಾಮಯ್ಯ ವಿರುದ್ಧ ಸಂಚು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Written By Yashaswini V
Published: Oct 07, 2026, 05:07 PM IST | Updated: Oct 07, 2026, 05:10 PM IST
Join

ಬೆಂಗಳೂರು: ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಡೆಸಿದ 'ಸ್ಟಿಂಗ್ ಆಪರೇಷನ್'ನಿಂದಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ; ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜು ಅವರಿಗಿಂತ ಹೆಚ್ಚಿನ ಅವಧಿಗೆ ರಾಜ್ಯವನ್ನು ಆಳಿದವರು. ಅಹಿಂದಾ ವರ್ಗಕ್ಕೆ ದೊಡ್ಡ ನಾಯಕರು. ಸಿದ್ದರಾಮಯ್ಯ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ಅವರ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅಂತಹ ವ್ಯಕ್ತಿ ಡಿಕೆಶಿ ಸ್ಟಿಂಗ್ ಆಪರೇಷನ್ ಗೆ ಬಲಿಯಾದರು ಎಂದು ಆರೋಪಿಸಿದರು.

ಸಂಪುಟದ ಸಚಿವರ ವಿರುದ್ಧ ಸ್ಟಿಂಗ್ ಆಪರೇಶನ್:
ತನ್ನ ಸಂಪುಟದ ಸಚಿವರ ವಿರುದ್ಧ ಸ್ಟಿಂಗ್ ಆಪರೇಶನ್ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ಸಂಪುಟ ಸಭೆಯಲ್ಲಿ ಹೇಳಿರುವುದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಆಗುತ್ತಿದ್ದಂತೆಯೇ  ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿಕೆಶಿ ಮಾಡಿದ ಸ್ಟಿಂಗ್ ಆಪರೇಷನ್ ನಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಅಪಮಾನಕಾರಿಯಾಗಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿತು. ಡಿಕೆಶಿ ಜತೆ ಒಂದು ಸುದ್ದಿವಾಹಿನಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಶಾಮೀಲಾದ ಪರಿಣಾಮ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿತು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಕರೆದಿದ್ದಾರೆ ಎಂದು ನಂಬಿ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ವಿಷಯ ತಿಳಿಸಿ ರಾಜೀನಾಮೆ ಪಡೆದುಕೊಳ್ಳಲಾಯಿತು ಎಂದು ಕುಮಾರಸ್ವಾಮಿ ಅವರು ದೂರಿದರು.

ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ... ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಯಿತು ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ಅವರ ರಾಜಿನಾಮೆ ಪಡೆದ ರೀತಿ ಸರಿಯಲ್ಲ. ಅಂತಹ ಹಿರಿಯ ನಾಯಕನನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೆಲ್ಲವನ್ನೂ ಯಾರು ಮಾಡಿದ್ದಾರೆ? ಇದರ ಹಿಂದೆ ಯಾರು ಯಾರು ಇದ್ದಾರೆ? ಇದರ ಹಿಂದಿರುವ ಮಾಧ್ಯಮ ಸಂಸ್ಥೆ ಯಾವುದು ಎಲ್ಲಾ ಮಾಹಿತಿಯೂ ಗೊತ್ತು ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನನ್ನೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ತಮಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂದು ಭಾವಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರಿಗೆ ಈಗ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದ ಸಚಿವರು; ಸ್ಟಿಂಗ್ ಮಾಡಿರುವುದು ಅವರು, ರಮೇಶ್ ಜಾರಕಿಹೊಳಿ, ರಾಜಣ್ಣ ಅವರ ಕತೆ ಮುಗಿಸಿದ್ದು ಇವರೇ ಅಲ್ಲವೇ? ಇಂತಹ ವಿಷಯದಲ್ಲಿ ಅವರು ದೊಡ್ಡ ಅನುಭವಸ್ತರು. ಅವರೇ ಎಲ್ಲವನ್ನೂ ಮಾಡಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದ ವ್ಯಕ್ತಿಯೇ ನಮ್ಮ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಆರೋಪಿಸಿದರು.

ಸ್ಟಿಂಗ್ ಮಾಡುವುದರಲ್ಲಿ ಅವರು ನಿಪುಣರು (ಮಾಸ್ಟರ್). ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಅವರು ಎಲ್ಲಾ ಸಚಿವರ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ದೇವೇಗೌಡರ ಕುಟುಂಬವನ್ನು ಮುಗಿಸಲು ಮುಖ್ಯಮಂತ್ರಿ ಇಂಥದ್ದೇ ಸಂಚು ರೂಪಿಸಿದ್ದರು. 'ತಡಿಯಪ್ಪಾ ಒಬ್ಬರನ್ನು ಕರೆಸಿ ಮಾಡೋಷ್ಟೊತ್ಟಿಗೆ ಸಾಕಾಗಿದೆ' ಎಂದು ಹೇಳಿದವರು ಯಾರಪ್ಪಾ? ಈಗ ತಮ್ಮ ಸಂಪುಟದ ಸಚಿವರನ್ನು ನಿಯಂತ್ರಿಸಲು ಈ ಮುಖ್ಯಮಂತ್ರಿ ಅದೇ ಕುತಂತ ಬಳಸುತ್ತಿದ್ದಾರೆ ಎಂದು ಸಚಿವರು ದೂರಿದರು.

ಹಿಂದೆ ಸಂಪುಟ ಸಭೆಯಲ್ಲಿ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಡಿಕೆಶಿ ಕಾಲದಲ್ಲಿ ಹನಿಟ್ರಾಪ್, ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಆಗುತ್ತಿದೆ. ಇದು ಈ ರಾಜ್ಯಕ್ಕೆ ಬಂದು ಒದಗಿಸಿರುವ ದುಸ್ಥಿತಿ ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಜನಪರ ಕೆಲಸಗಳನ್ನು ಬಿಟ್ಟು ಸ್ಟಿಂಗ್ ಆಪರೇಷನ್ ಮಾಡಿಕೊಂಡು ಕೂತಿದ್ದಾರೆ!
ಅಂತೂ ಇಂತೂ ಮುಖ್ಯಮಂತ್ರಿ ಆಗಿರುವ ಈ ವ್ಯಕ್ತಿ ಜನರ ಕೆಲಸ ಮಾಡುತ್ತಿಲ್ಲ. ಬದಲಿಗೆ ಬೆಳಗ್ಗೆಯಿಂದ ಸಂಜೆವರೆಗೂ ಸ್ಟಿಂಗ್ ಆಪರೇಷನ್ ಮಾಡಿಕೊಂಡು ಕೂತಿರುತ್ತಾರೆ. ಅವರ ಪಕ್ಷದ ಶಾಸಕರೇ ಬಂದು ಹೇಳುತ್ತಾರೆ ನನಗೆ. ಈಗ ಅದೇ ವಿಷಯ ಮೀಡಿಯಾದಲ್ಲಿ ಬರುತ್ತಿದೆ. ಒಂದ್ವೇಳೆ ಅವರು ಹೇಳುವಂತೆ ನಾವೇ ಈ ಕೆಲಸ ಮಾಡಿದ್ದರೆ ಕ್ರಮ ಕೈಗೊಳ್ಳಲಿ. ಇವರ ಬಳಿ ಎಸ್ ಐಟಿ ಇದೆಯಲ್ಲವೇ? ಅದಕ್ಕೆ ₹35 ಲಕ್ಷ ಬಹುಮಾನ ಬೇರೆ ಕೊಟ್ಟಿದ್ದಾರೆ! ತನಿಖೆ ಮಾಡಿಸಲಿ. ಬೇಡ ಅಂದವರು ಯಾರು? ವಿಧಾನಸಭೆಯಲ್ಲಿ ರಾಜಣ್ಣ ಏನು ಹೇಳಿದ್ದರು. ನನ್ನದಷ್ಟೇ ಅಲ್ಲ, ಇನ್ನೂ ನಲವತ್ತು ಜನರ ಸ್ಟಿಂಗ್ ಮಾಡಿಸಿದ್ದಾರೆ ಎಂದು ಹೇಳಿರಲ್ಲವೇ? ಅವರ ಹೇಳಿಕೆ ಏನಾಯಿತು? ನಂತರ ಅವರ ಬಾಯಿ ಮುಚ್ಚಿಸಿದರು ಎಂದು ಸಚಿವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನ ಸ್ನೇಹಿತರೇ ನನಗೆ ಡಿಕೆಶಿ ಸ್ಟಿಂಗ್ ಆಪರೇಷನ್ ಮೂಲಕ  ಸಿಎಂ ಆಗಿದ್ದಾರೆ ‌ಎಂದು ನನಗೆ ಹೇಳಿದ್ದಾರೆ. ಹಿಂದೆಯೂ ಕೆಲವು ಸಚಿವರು ಸ್ಟೇ ತೆಗೆದುಕೊಂಡರು. ಆ ರೀತಿ ಕೋರ್ಟಿನಿಂದ ಸ್ಟೇ ತೆಗೆದುಕೊಂಡಿರುವ ವೃತ್ತಿ ಅಯೋಧ್ಯೆ, ನೇಪಾಳ ಮತ್ತು ಕೆನಡಾಗೆ ಹೋಗಿ ಏನೋ ಷಡ್ಯಂತ್ರ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಎಂದು ಸಚಿವರು ಹೇಳಿದರು.

ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ರಾಜ್ಯ ವಕ್ತಾರ ಹೆಚ್.ಎನ್. ದೇವರಾಜು ಮುಂತಾದವರು ಸಚಿವರ ಜತೆಯಲ್ಲಿದ್ದರು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES