SOCIAL MEDIA

Newsletter

PARTNER SITES
Select Language Select State

ದೀಪಾವಳಿ ಪಟಾಕಿ ಅವಘಡ.. ಬೆಂಗಳೂರಿನಲ್ಲಿ 90ಕ್ಕೂ ಹೆಚ್ಚು ಮಂದಿಗೆ ಗಾಯ!

Diwali firecracker accident: ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಆತಂಕ ಸೃಷ್ಟಿಸಿವೆ. ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ವಿವಿಧ ಅಪಘಾತಗಳಲ್ಲಿ ಬರೋಬ್ಬರಿ 90ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಗರ್ಭಿಣಿ ಮಹಿಳೆ ಸೇರಿದಂತೆ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ

Written By Ramya. R. Gowda
Published: Nov 11, 2026, 13:24 IST | Updated: Nov 11, 2026, 14:19 IST
Join

Diwali firecracker accident : ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಆತಂಕ ಸೃಷ್ಟಿಸಿವೆ. ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ವಿವಿಧ ಅಪಘಾತಗಳಲ್ಲಿ ಬರೋಬ್ಬರಿ 90ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಗರ್ಭಿಣಿ ಮಹಿಳೆ ಸೇರಿದಂತೆ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನು ಇಬ್ಬರು ಮಕ್ಕಳ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ನಡೆದ ಪಟಾಕಿ ಅವಘಡಗಳ ವಿವರ ಇಲ್ಲಿದೆ ನೋಡಿ.

ದೀಪಾವಳಿ ಹಬ್ಬ ಅಂದ್ರೆ ಬೆಳಕಿನ ಹಬ್ಬ.. ಸಂಭ್ರಮದ ಹಬ್ಬ.. ಆದ್ರೆ ಇದೇ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಹಲವರ ಬದುಕಿನಲ್ಲಿ ಕತ್ತಲು ಮೂಡಿಸಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತಕ್ಕೆ ಬರೋಬ್ಬರಿ 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಪಟಾಕಿ ಅವಘಡದಲ್ಲಿ  ಗರ್ಭಿಣಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟಾಕಿಗಳ ಪೆಟ್ಟಿಗೆಯನ್ನು ಹಿಡಿದು ಕುಳಿತಿದ್ದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದ್ದು, ಮಹಿಳೆಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಪಟಾಕಿ ಸಿಡಿತದಿಂದ ಗಾಯಗೊಂಡಿರುವ ಇಬ್ಬರು ಮಹಿಳೆಯರ ಸ್ಥಿತಿಯೂ ಗಂಭೀರವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಆರು ಮಂದಿ ಗಂಭೀರ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪಟಾಕಿ ಸಂಬಂಧಿತ ಅಪಘಾತಗಳಲ್ಲಿ ಕನಿಷ್ಠ 90 ಜನರು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ಒಂದು ಘಟನೆಯಲ್ಲಿ, 21 ವರ್ಷದ ಗರ್ಭಿಣಿ ಮಹಿಳೆಯೊಬ್ಬರು ಪಟಾಕಿಗಳ ಪೆಟ್ಟಿಗೆಯನ್ನು ಹಿಡಿದು ಕುಳಿತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಗಂಭೀರ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪಟಾಕಿ ಸಿಡಿತದಲ್ಲಿ ಗಾಯಗೊಂಡಿರುವ ಇತರ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ರೋಗಿಗಳು ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಮಕ್ಕಳ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಅವರು ದೃಷ್ಟಿ ಕಳೆದುಕೊಳ್ಳುವ ಭಯ ಹೆಚ್ಚಿದೆ.ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದು, ಇತರರು ಪಟಾಕಿ ಸಿಡಿಸುತ್ತಿರುವುದು ಕಳವಳ ಮೂಡಿಸಿದೆ. ರಾತ್ರಿ 10 ಗಂಟೆಯ ನಂತರವೂ ಪಟಾಕಿ ಸಿಡಿಸುವುದು ಮುಂದುವರೆದಿದ್ದು, ವಾಯು ಮಾಲಿನ್ಯದ ಮಟ್ಟವೂ ತೀವ್ರವಾಗಿ ಏರಿಕೆಯಾಗಿದೆ. ಕೇವಲ ಮೂರು ದಿನಗಳಲ್ಲಿ ವಾಯು ಮಾಲಿನ್ಯವು ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತವೆ.

ಇನ್ನು ಈ ಪಟಾಕಿ ಅವಘಡದಲ್ಲಿ ಇಬ್ಬರು ಪುಟಾಣಿ ಮಕ್ಕಳ ಕಣ್ಣಿಗೂ ಗಂಭೀರ ಗಾಯಗಳಾಗಿವೆ. ಮಕ್ಕಳ ದೃಷ್ಟಿಗೆ ಹಾನಿಯಾಗುವ ಆತಂಕ ಎದುರಾಗಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರು ಮತ್ತು ಮಕ್ಕಳು ಕೂಡ ಪಟಾಕಿ ಸಿಡಿತಕ್ಕೆ ಬಲಿಯಾಗಿದ್ದಾರೆ. ಬೇರೆಯವರು ಸಿಡಿಸುವ ಪಟಾಕಿಯಿಂದ ಅಮಾಯಕರು ಗಾಯಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಇಷ್ಟೆಲ್ಲಾ ಅವಘಡಗಳು ಸಂಭವಿಸಿದರೂ ಪಟಾಕಿ ಸಿಡಿಸುವ ಹುಚ್ಚಾಟ ಮಾತ್ರ ನಿಂತಿಲ್ಲ. ರಾತ್ರಿ 10 ಗಂಟೆಯ ಗಡುವು ಮೀರಿದರೂ ಪಟಾಕಿ ಸಿಡಿಸುವುದು ಮುಂದುವರಿದಿದೆ. ಇದರ ನಡುವೆ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣವೂ ಹೆಚ್ಚಳವಾಗಿದೆ. ಕೇವಲ ಮೂರು ದಿನಗಳಲ್ಲಿ ವಾಯುಮಾಲಿನ್ಯ ಶೇಕಡಾ 30ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ದೀಪಾವಳಿ ಸಂಭ್ರಮದ ಹೆಸರಿನಲ್ಲಿ ನಡೆಯುವ ಅಜಾಗರೂಕ ಪಟಾಕಿ ಸಿಡಿತ ಅಮಾಯಕರ ಜೀವಕ್ಕೆ ಕಂಟಕವಾಗುತ್ತಿದೆ. ಹಬ್ಬದ ಸಂಭ್ರಮ ಇನ್ನೊಬ್ಬರ ಪಾಲಿಗೆ ಸಂಕಟವಾಗದಿರಲಿ ಎಂಬ ಎಚ್ಚರಿಕೆ ಅಗತ್ಯ.

 

ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗ ಬೆಂಗಳೂರಲ್ಲಿ 96 ಮಂದಿ ಕಣ್ಣಿಗೆ ಹಾನಿ ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಅವಘಡದಲ್ಲಿ ಕಳೆದ ಮೂರು ದಿನಗಳಲ್ಲಿ 91 ಮಂದಿ ಕಣ್ಣ ಹಾಗೂ ದೇಹದ ಇತರ ಭಾಗಗಳಿಗೆ ಹಾನಿಯಾಗಿದೆ. ಗಾಯಗೊಂಡವರಲ್ಲಿ ಬಹುತೇಕರು ಮಕ್ಕಳು ಹಾಗೂ ವಯಸ್ಸಾದವರೇ ಹೆಚ್ಚು.20 ಮಂದಿ ವಯಸ್ಕರು, 18 ವರ್ಷದೊಳಗಿನ 40 ಮಕ್ಕಳು, 30 ಮಂದಿ ಪುರುಷರು, 6 ಮಂದಿ ಮಹಿಳೆಯರಿದ್ದಾರೆ. ಪಟಾಕಿ ಹೊಡೆಯುತ್ತಿದ್ದುದನ್ನು ನಿಂತು ನೋಡುತ್ತಿದ್ದ 34 ಮಂದಿ ಕೂಡ ಗಾಯಗೊಂಡಿದ್ದಾರೆ.ಧಾರವಾಡ, ಗದಗ, ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆತಾ ಇದ್ದಾರೆ.

ಬಿಜಿಲಿ– 36 ಪ್ರಕರಣಗಳು, ಪ್ಲಾಸ್ಟಿಕ್ ಪೈಪ್ ನಲ್ಲಿ ಪಟಾಕಿ ಇರಿಸಿದ್ದು, ಕ್ರ್ಯಾಕರ್‌ಗಳು– 5 ಪ್ರಕರಣಗಳು, ಹೂವಿನ ಕುಂಡ– 80 ಪ್ರಕರಣ, ಬಾಂಬ್– 3 ಪ್ರಕರಣ, ಲಕ್ಷ್ಮಿ ಕ್ರ್ಯಾಕರ್–6 ಪ್ರಕರಣ, ರಾಕೆಟ್– 18ಪ್ರಕರಣ ನಡೆದಿವರ ಎಂಬ ಮಾಹಿತಿಯಿಂದ ತಿಳಿದು ಬಂದಿದೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿಯ ಡಾ.ಎಂ‌.ಎಂ.ಜೋಶಿ ಆಸ್ಪತ್ರೆ ನಿರ್ದೇಶಕ ಹಾಗೂ ನೇತ್ರ ತಜ್ಞ ಡಾ.ಶ್ರೀನಿವಾಸ ಜೋಶಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಬಹಳ ಎಚ್ಚರಿಕೆಯಿಂದ ವಹಿಸಬೇಕು, ಪಟಾಕಿ ಹಚ್ಚುವ ಮುನ್ನ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ದೀಪಾವಳಿ ಹಬ್ಬ ಬೆಳಕಿನ ಹಬ್ಬ ನಾವು ಸಾಕಷ್ಟು ಈ ಕುರಿತು ನಮ್ಮ ಆಸ್ಪತ್ರೆಯಿಂದ ಪಟಾಕಿ ಹೊಡೆಯುವುದರಿಂದ ಆಗುವ ಹಾನಿ ಕುರಿತು ಜಾಗೃತಿ ಮೂಡಿಸಲಾಗಿದೆ.ಆದರು ಜನರು ಪ್ಲಾಸ್ಟಿಕ್ ಪೈಪ್, ಎಳೆ ನೀರು ಕಾಯಿ ಒಳಗೆ, ತಗಡು ಡಬ್ಬಾ ಮುಂತಾದ ವಸ್ತುಗಳಲ್ಲಿ ಇರಿಸಿ ಪಟಾಕಿ ಹೊಡೆವುದರಿಂದ ದೊಡ್ಡ ಅನಾಹುತಕ್ಕೆ ಕಾರಣ ಆಗತಾ ಇವೆ. ಹುಬ್ಬಳ್ಳಿಯಲ್ಲಿ 10 ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಪಟಾಕಿ ಯಿಂದ ಹಾನಿಯಾಗಿವೆ ಎಂದರು. ಈ ಕುರಿತು ಪಾಲಕರು ಸಹ ಸಾಕಷ್ಟು ಆತಂಕ ವ್ಯಕ್ತಪಡಿಸಿದ್ದಾರೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES