• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದಾವಣಗೆರೆ ರೇವ್ ಪಾರ್ಟಿ ಆರೋಪ – ಜಗಳೂರು ಹಾಲಿ-ಮಾಜಿ ಶಾಸಕರ ನಡುವೆ ತಾರಕಕ್ಕೇರಿದ ಟಾಕ್ ಫೈಟ್!

ದಾವಣಗೆರೆ ರೇವ್ ಪಾರ್ಟಿ ಆರೋಪ – ಜಗಳೂರು ಹಾಲಿ-ಮಾಜಿ ಶಾಸಕರ ನಡುವೆ ತಾರಕಕ್ಕೇರಿದ ಟಾಕ್ ಫೈಟ್!

ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು, ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಜಗಳೂರಿನಿಂದ ಅಪಾರ ಸಂಖ್ಯೆಯ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು.

Reported ByManjunath NaragundEdited ByManjunath Naragund
Published: Sep 25, 2026, 12:46 PM IST|Updated: Sep 25, 2026, 01:02 PM IST
joinshare
ದಾವಣಗೆರೆ ರೇವ್ ಪಾರ್ಟಿ ಆರೋಪ – ಜಗಳೂರು ಹಾಲಿ-ಮಾಜಿ ಶಾಸಕರ ನಡುವೆ ತಾರಕಕ್ಕೇರಿದ ಟಾಕ್ ಫೈಟ್!
Image Credit: Davanagere

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದಾವಣಗೆರೆ: ಜಗಳೂರು ಕ್ಷೇತ್ರದ ರಾಜಕೀಯ ಅಖಾಡದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಾಸಕ B. ದೇವೇಂದ್ರಪ್ಪ ಹಾಗೂ ಮಾಜಿ ಶಾಸಕ H.P. ರಾಜೇಶ್ ನಡುವೆ 'ರೇವ್ ಪಾರ್ಟಿ' ಆರೋಪದ ವಿಷಯವಾಗಿ ಮಾತಿನ ಚಕಮಕಿ ಮುಗಿಲು ಮುಟ್ಟಿದ್ದು, ಕ್ಷೇತ್ರದ ರಾಜಕೀಯ ಬಿಸಿಯನ್ನು ಮತ್ತಷ್ಟು ಏರಿಸಿದೆ.

ಇತ್ತೀಚೆಗೆ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿದ್ದ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು, ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಜಗಳೂರಿನಿಂದ ಅಪಾರ ಸಂಖ್ಯೆಯ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು. ಬೆಂಬಲಿಗರು ದಾಬಸ್‌ಪೇಟೆ ಮಾರ್ಗವಾಗಿ ಬೆಂಗಳೂರಿಗೆ ತಲುಪಿ ಶಾಸಕರನ್ನು ಬರಮಾಡಿಕೊಂಡಿದ್ದರು.

ಆದರೆ, ಈ ಸ್ವಾಗತ ಕಾರ್ಯಕ್ರಮದ ಬೆನ್ನಲ್ಲೇ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಗಂಭೀರ ಆರೋಪ ಒಂದನ್ನು ಮಾಡಿದ್ದರು. ಶಾಸಕ ದೇವೇಂದ್ರಪ್ಪ ಅವರು ತಮ್ಮ ಬೆಂಬಲಿಗರಿಗಾಗಿ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ 'ರೇವ್ ಪಾರ್ಟಿ' ಆಯೋಜಿಸಿದ್ದರು ಎಂದು ಹೆಚ್.ಪಿ. ರಾಜೇಶ್ ಆರೋಪಿಸಿದ್ದರು. "ಕ್ಷೇತ್ರದಲ್ಲಿ ಜನರು ಭೀಕರ ಬರದ ಬೇಗೆಯಿಂದ ಬಳಲುತ್ತಿರುವಾಗ, ಈ ರೀತಿಯ ದುಬಾರಿ ಪಾರ್ಟಿಯ ಅಗತ್ಯವಿತ್ತೇ?" ಎಂದು ಅವರು ಪ್ರಶ್ನಿಸಿದ್ದರು.

ರಕ್ತ ಪರೀಕ್ಷೆಗೆ ಸವಾಲು ಹಾಕಿದ ಶಾಸಕ ದೇವೇಂದ್ರಪ್ಪ

ಮಾಜಿ ಶಾಸಕರ ಈ ಆರೋಪಕ್ಕೆ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅತ್ಯಂತ ಖಾರವಾಗಿ ಹಾಗೂ ವಿಶಿಷ್ಟ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಹೆಚ್.ಪಿ. ರಾಜೇಶ್ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ.

"ನಾನು ಮದ್ಯಪಾನ ತೊರೆದು ಈಗಾಗಲೇ ನಾಲ್ಕು ವರ್ಷಗಳಾಗಿವೆ. ಪೊಲೀಸರು ರಸ್ತೆಯಲ್ಲಿ 'ಡ್ರಂಕ್ ಅಂಡ್ ಡ್ರೈವ್' ತಪಾಸಣೆ ಮಾಡುವಂತೆ, ನಮ್ಮ ರಕ್ತ ಪರೀಕ್ಷೆ ಮಾಡಿಸೋಣ ಬನ್ನಿ. ನಾನು, ಹೆಚ್.ಪಿ. ರಾಜೇಶ್ ಹಾಗೂ ಎಸ್.ವಿ. ರಾಮಚಂದ್ರ ಮೂವರೂ ಸೇರಿ ರಕ್ತ ಪರೀಕ್ಷೆಗೆ ಒಳಗಾಗೋಣ. ಯಾರು ಮದ್ಯ ಸೇವಿಸುತ್ತಾರೆ, ಯಾರು ಇಲ್ಲ ಎಂಬುದು ಆಗ ಸ್ಪಷ್ಟವಾಗುತ್ತದೆ. ಇದಕ್ಕೆ ನೀವು ರೆಡಿ ಇದ್ದೀರಾ?" ಎಂದು ಶಾಸಕ ದೇವೇಂದ್ರಪ್ಪ ನೇರ ಸವಾಲು ಹಾಕಿದ್ದಾರೆ.

"ನನ್ನ ದುಡ್ಡು, ನನ್ನ ಜನ - ಕೇಳಲು ನೀವ್ಯಾರು?

ತಮ್ಮ ಬೆಂಬಲಿಗರ ಪರ ಗಟ್ಟಿಯಾಗಿ ನಿಂತ ಶಾಸಕ ದೇವೇಂದ್ರಪ್ಪ, "ನನ್ನ ಕ್ಷೇತ್ರದ ಜನ ಅತ್ಯಂತ ಸ್ವಾಭಿಮಾನಿಗಳು. ಅವರು ತಮ್ಮ ಸ್ವಂತ ಇಷ್ಟದಿಂದ, ಪ್ರೀತಿಯಿಂದ ನನ್ನನ್ನು ಸ್ವಾಗತಿಸಲು ಬೆಂಗಳೂರಿಗೆ ಬಂದಿದ್ದರು. ನನ್ನ ದುಡ್ಡು, ನನ್ನ ಜನ - ಅವರಿಗೆ ಏನು ಬೇಕಾದರೂ ಕೊಡುವ ಹಕ್ಕು ನನಗಿದೆ. ಹಾಗೆಯೇ ಅವರು ನನಗೆ ನೀಡುತ್ತಾರೆ. ಇದರಲ್ಲಿ ಮೂಗು ತೂರಿಸಲು ಮತ್ತು ನನ್ನ ಖಾಸಗಿ ಬದುಕಿನ ಬಗ್ಗೆ ಮಾತನಾಡಲು ನಿಮಗ್ಯಾರು ಹಕ್ಕು ಕೊಟ್ಟವರು?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, "ಸ್ವಾಭಿಮಾನದಿಂದ ಬಂದಿರುವ ಕ್ಷೇತ್ರದ ಜನರನ್ನು ನಿಂದಿಸಿದರೆ, ನಾಳೆ ಅವರೇ ನಿಮ್ಮನ್ನು ಪ್ರಶ್ನಿಸಿದರೆ ಏನು ಉತ್ತರ ನೀಡುತ್ತೀರಿ? ಒಬ್ಬ ಡಿ-ದರ್ಜೆ ನೌಕರನಾಗಿದ್ದವನು ಶಾಸಕನಾಗಬಾರದಾ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ನೀವು ಪ್ರತಿಯೊಂದಕ್ಕೂ ಅತ್ತೆ ಸೊಸೆಗೆ ಕಾಟ ಕೊಟ್ಟಂತೆ ಪೀಡಿಸುತ್ತಿದ್ದೀರಿ," ಎಂದು ತಮ್ಮ ಕಟು ನುಡಿಗಳಿಂದ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಸ್ತುತ ಜಗಳೂರು ಕ್ಷೇತ್ರದಲ್ಲಿ ಈ 'ರೇವ್ ಪಾರ್ಟಿ' ವಿವಾದ ಮತ್ತು ಹಾಲಿ-ಮಾಜಿ ಶಾಸಕರ ಸವಾಲು-ಪ್ರತಿಸವಾಲುಗಳ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Add Zee News as a Preferred Source
TAGS:
Kannada News