ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ʼಸ್ಟಿಂಗ್ ಆಪರೇಷನ್ʼ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ (ನ. 9) ಕೃಪಾ ಆಳ್ವಾ ಸಿಸಿಬಿ ಸೈಬರ್ ಕ್ರೈಂ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ಅತ್ತ ಆಳ್ವಾ ಸಿಸಿಬಿಗೆ ಎಂಟ್ರಿ ಕೊಡ್ತಿದ್ದಂತೆ ಇತ್ತ ಸಿಎಂ ಡಿಕೆಶಿ ಸಿದ್ದು ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸ್ಟಿಂಗ್ ಆಪರೇಷನ್ ಪ್ರಕರಣದ ಬಳಿಕ ಸಿದ್ದರಾಮಯ್ಯ ಫುಲ್ ಡಿಸ್ಟರ್ಬ್ ಆಗಿದ್ದಾರೆ. ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿರುವ ಸಿದ್ದರಾಮಯ್ಯ ನಮ್ಮದಲ್ಲ ಸರ್ಕಾರ ಎಂದಿದ್ದರು. ಈ ಹಿನ್ನಲೆಯಲ್ಲಿ ತಿಂಗಳ ಬಳಿಕ ಸಿಎಂ ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಆಗಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯ ಕೋರಲು ಭೇಟಿ ಆಗಿದ್ದೆ ಎಂದವರು ತಿಳಿಸಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದೆ. https://t.co/ceWDuVvzvm
— DK Shivakumar (@DKShivakumar) November 9, 2026
ಆದರೆ, ಸೋಮವಾರ (ನವೆಂಬರ್ 9) ಕೃಪಾ ಆಳ್ವಾ ಸಿಸಿಬಿ ವಿಚಾರಣೆಗೆ ಹಾಜರಾಗ್ತಿದ್ದಂತೆ ಇತ್ತ ಸಿಎಂ ಡಿ.ಕೆ. ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಆಗಿದ್ದು, ಸ್ಟಿಂಗ್ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ರಾ..? ಎಂಬ ಕುತೂಹಲವನ್ನು ಹೆಚ್ಚಿಸಿದೆ.
ಸಿದ್ದು - ಡಿಕೆಶಿ ನಡುವಿನ ಹೈಲೆವೆಲ್ ಟಾಕ್ ಬಗ್ಗೆ ಜೀ ಕನ್ನಡ ನ್ಯೂಸ್‌ನಲ್ಲಿದೆ ಮಾಹಿತಿ.
ಸ್ಟಿಂಗ್ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ರಾ..?
ಸಿದ್ದರಾಮಯ್ಯ ಭೇಟಿ ಮಾಡಿದ ಡಿಕೆ ಶಿವಕುಮಾರ್ ಭೇಟಿ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಮಾತುಕತೆ ಈ ರೀತಿ ಇರಬಹುದು ಎನ್ನಲಾಗುತ್ತಿದೆ.
ಡಿಕೆಶಿ :- ಸರ್ ಹಬ್ಬದ ಶುಭಾಶಯಗಳು.. ನಿಮ್ಮನ್ನ ಭೇಟಿ ಮಾಡಿ ಚರ್ಚೆ ಮಾಡಲು ಬಂದೆ
ಸಿದ್ದರಾಮಯ್ಯ :- ನನ್ನ ಬಳಿ ಚರ್ಚೆ ಮಾಡುವುದೇನಿದೆ?
ಡಿಕೆಶಿ :- ಮುಂದೆ ಸ್ಥಳೀಯ ಹಾಗೂ ಜಿಬಿಎ ಚುನಾವಣೆ ಬರ್ತಿದೆ.ಅದಕ್ಕೂ ಮೊದಲು ಹಿರಿಯೂರು ಬೈ ಎಲೆಕ್ಷನ್ ಬರ್ತಿದೆ
ಸಿದ್ದರಾಮಯ್ಯ :- ದೆಹಲಿಗೆ ಹೋದಾಗ ಹೈಕಮಾಂಡ್ ಹೇಳಿ ಕಳಿಸ್ತಾ..
ಡಿಕೆಶಿ :- ಇಲ್ಲ ಸರ್ ನಾನೇ ಖುದ್ದು ಬಂದೆ
ಸಿದ್ದರಾಮಯ್ಯ :- ಇಂತಹ ವಿಚಾರಗಳು ಚರ್ಚೆ ಆಗುವಾಗ ಎಲೆಕ್ಷನ್ ಪಾಲಿಟಿಕ್ಸ್ ಲ್ಲಿ ಹೇಗೆ ತೊಡಗಿಕೊಳ್ಳುವುದು.ಎಲ್ಲ ನೀವೇ ಮಾಡಿಕೊಳ್ಳಿ.
ಡಿಕೆಶಿ :- ಅದಕ್ಕೆ ನಾವು ತನಿಖೆ ಮಾಡಿಸುತ್ತಿದ್ದೇವೆ. ಕುಮಾರಸ್ವಾಮಿ ಬೇಕಾಬಿಟ್ಟಿ ಮಾತನಾಡುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
ಸಿದ್ದರಾಮಯ್ಯ :- ಕುಮಾರಸ್ವಾಮಿ ಗೆ ಅಸ್ತ್ರ ಕೊಟ್ಟಿದ್ದು ಯಾರು.. ಅದು ಹೊರ ತಂದವನನ್ನ ಇವತ್ತಿಗೂ ಒಳಗೆ ಹಾಕಲಿಲ್ಲ.. ಅದರ ಅರ್ಥ ಏನು..?
ಡಿಕೆಶಿ :- ಆಳ್ವಾ ಕೆಲಸ ಪಕ್ಷದಿಂದ ಹೊರಗೆ ಹಾಕಿದ್ದೇವೆ. ಸಿಸಿಬಿ ಮುಂದೆ ಸಹ ಹಾಜರಾಗಿದ್ದಾಳೆ. ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗ್ತಿದೆ. ಯಾವುದೇ ಸಮಸ್ಯೆಯೂ ಆಗಲ್ಲ. ನಿಮ್ಮ ಗೌರವ ರಕ್ಷಣೆ ನಮ್ಮ ಜವಾಬ್ದಾರಿ ಎಂದ ಡಿಕೆಶಿ.
ಸಿದ್ದರಾಮಯ್ಯ :- ಆಯಿತು ಅವಶ್ಯಕತೆ ಇದ್ದಾಗ ನಾನು ಬರ್ತಿನಿ. ಆದ್ರೆ ಸರ್ಕಾರದ ಬಗ್ಗೆ ನಿಮ್ಮ ಸಂಪುಟದಲ್ಲಿ ಇರೋರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಸ್ತಿ ಬೇರೆಯವರ ಕೆಲಸದಲ್ಲಿ ಇಂಟರ್ ಫಿಯರ್ ಆಗಬೇಡಿ.
ಡಿಕೆಶಿ :- ಇಲ್ಲ ಸರ್ ನಾನು ಮುಕ್ತ ಸ್ವತಂತ್ರ ಕೊಟ್ಟಿದ್ದೇನೆ. ಸ್ವಲ್ಪ ಟಾರ್ಗೆಟ್ ಕೊಡ್ತಿದ್ದೇನೆ ಅಷ್ಟೇ.. ಮುಂದೆ ಎಲೆಕ್ಷನ್ ಬರ್ತಿವೆ ಹೀಗಾಗಿ ಪಕ್ಷದ ಸಂಘಟನೆ ವಿಚಾರದಲ್ಲಿ ಟಾಸ್ಕ್ ಕೊಟ್ಟಿದ್ದೇನೆ.