ದೀಪಾವಳಿಗೆ ಜನರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಡಿ.ಕೆ ಶಿವಕುಮಾರ್
CM DK Shivakumar: ಜನರಿಗೆ ಅನುಕೂಲ ಕಲ್ಪಿಸುವ ಜೊತೆ ಸರ್ಕಾರದ ಖಜಾನೆ ತುಂಬಲು ಸಿಎಂ ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಬಿಡಿಎ ಅಧಿಕಾರಿಗಳ ಜೊತೆ ಮಹತ್ವದ ಪ್ರಗತಿ ಪರಿಶೀಲನೆ ಸಭೆ ಬಳಿಕ ಹಲವು ಮಹತ್ವದ ನಿರ್ಧಾರಗಳನ್ನು ಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದ್ರು. ಈ ಕುರಿತು ಇಲ್ಲಿದೆ ಫುಲ್ ಡಿಟೇಲ್ಸ್.....
ಬೆಂಗಳೂರು: ಜನರಿಗೆ ಅನುಕೂಲ ಕಲ್ಪಿಸುವ ಜೊತೆ ಸರ್ಕಾರದ ಖಜಾನೆ ತುಂಬಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. 38 D ಯೋಜನೆಯಿಂದ 1 ಲಕ್ಷ ನಿವೇಶನದಾರರಿಗೆ ಅನುಕೂಲ ಆಗಲಿದೆ ಎಂದು ಸಿಎಮ್ ತಿಳಿಸಿದ್ದಾರೆ. 2008 ರ ಮುಂಚೆ ಮನೆ ಕಟ್ಟಿದ್ರೆ ಅಂಥವ್ರಿಗೆ ಇದೀಗ ಸಿಎಮ್ವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಿಡಿಎ ನೊಟಿಫಿಕೇಷನ್ ಆದ ಜಾಗದಲ್ಲಿ ಮನೆ ಕಟ್ಟಿದ್ರೆ ಮಾತ್ರ ಸಕ್ರಮಕ್ಕೆ ಅವಕಾಶ ಸಿಗಲಿದ್ದು, ಇಷ್ಟು ದಿನ ಇಂತಹವಮನೆ ಮಾರಾಟ ಮಾಡಲೂ ಆಗ್ತಾ ಇರ್ಲಿಲ್ಲ..ಕ್ಯಾಬಿನೇಟ್ ನಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಇದೀಗ 38 D ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ.ಈ ಹಿಂದೆ 2011 ರಲ್ಲಿ ಬಿಜೆಪಿ ಸರ್ಕಾರ ಮಾಡಿದ್ದ ದಂಡದ ಪ್ರಮಾಣ ಶೇ. 50 ರಷ್ಟು ಕಡಿತ ಮಾಡಲಾಗಿದೆ. ಹೊಸ ದಂಡದ ಪ್ರಮಾಣ ಲ್ಯಾಂಡ್ ಗೈಡ್ ಲೆನ್ಸ್ ಅಡಿ ದರ ಅನ್ವಯವಾಗಲಿದೆ. ಡಿಸೆಂಬರ್ 17 ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದು ಕೊನೆಯ ಅವಕಾಶವಾಗಿದ್ದು ಸಕ್ರಮ ಮಾಡಿಕೊಳ್ಳದೇ ಹೋದರೆ ಬಿಡಿಎ ಕಾರ್ಯಾಚರಣೆ ನಡೆಸಿ ತನ್ನ ಜಾಗವನ್ನು ಹಿಂಪಡೆಯಲಿದೆ .ಈ ಅವಕಾಶ ಮತ್ತೆ ಸಿಗಲ್ಲ ಎಂದು ಸಿಎಮ್ ಡಿಕೆಶಿ ಸ್ಪಷ್ಟಪಡಿಸಿದ್ರು.
ಇನ್ನೂ ಇದೇ ವೇಳೆ ರೈತರಿಗೆ ಬಿಡಿಎ ಮೂಲಕ ಸಿಎಮ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೆಂಪೇಗೌಡ ಲೇಔಟ್ ನಿರ್ಮಾಣಕ್ಕೆ ಯಾವುದೇ ತಕರಾರು ಇಲ್ಲದೇ ಭೂಮಿ ನೀಡಿದ ರೈತರಿಗೆ ನಿವೇಶನ ಭಾಗ್ಯ ನೀಡಲಾಗವುದು ಎಂದು ಡಿಕೆಶಿ ತಿಳಿಸಿದ್ದಾರೆ..ಬಿಡಿಎ ಒಂದು ದರ ನಿಗದಿ ಮಾಡುತ್ತೆ, ಅದರ ಪ್ರಕಾರ ಹಣ ಕಟ್ಟಿ ಸೈಟ್ ಪಡೆದುಕೊಳ್ಳಬಹುದು. ಒಂದು ಎಕರೆಗೆ ಒಂದು ಸೈಟ್ ನೀಡುವ ಕುರಿತಂತೆ ಕಾನೂನು ಇದೆ. ಡಿಸೆಂಬರ್ 17 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಸಿಎಮ್ ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ಬಿಡಿಎ ಲೇ ಔಟ್ ನಿರ್ಮಾಣಕ್ಕೆ ಭೂಮಿ ಕಲೇದುಕೊಂಡ ರೈತರಿಗೆ ವಾಲ್ ಆಫ್ ಗ್ರಾಟಿಟ್ಯೂಡ್ ಅಂತ ಗೌರವನೂ ನೀಡಲಾಗಿದೆ.
ಸ್ವಯಂ ಪ್ರೇರಿತರಾಗಿ ಭೂಮಿ ನೀಡಿದ ರೈತರಿಗೆ ಮಾತ್ರ ಅವಕಾಶ ನಿವೇಶನ ದೊರೆಯಲಿದೆ ಎಂದು ಸಿಎಮ್ ತಿಳಿಸಿದ್ದಾರೆ
ಇನ್ನೂ ಬಿಡಿಎ ಕಡೆಯಿಂದ ಸೈಟ್ ಪಡೆದ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ..ನಿಮ್ ಮನೆ ಪಕ್ಕದಲ್ಲಿ ಬಿಡಿಎ ಮಾರ್ಜಿನ್ ಲ್ಯಾಂಡ್ ಇದ್ರೆ ಮಾಲೀಕರು ತಮ್ಮದಾಗಿಸಿಕೊಳ್ಳಬಹುದಾಗಿದೆ ..600 ಅಡಿ ವರೆಗೂ ಮಾರ್ಜಿನ್ ಲ್ಯಾಂಡ್ ಇದ್ರೆ ಸ್ವಂತ ಮಾಡಿಕೊಳ್ಳಬಹುದು..ಲ್ಯಾಂಡ್ ಗೈಡೆನ್ಸ್ ವ್ಯಾಲ್ಯು ಪ್ರಕಾರ ಬಿಡಿಎಗೆ ಹಣ ಕಟ್ಟಬೇಕು. ಬಿಡಿಎ ಜಾಗದಲ್ಲಿ ಸ್ವಂತ ಮನೆ ಪಕ್ಕದಲ್ಲಿ ಇದ್ದ ಮಾರ್ಜಿನ್ ಲ್ಯಾಂಡ್ ಗೆ ಮಾತ್ರ ಅವಕಾಶವಿದ್ದು,ಡಿಸೆಂಬರ್ 17 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಿಎಮ್ ತಿಳಿಸಿದ್ದಾರೆ. ಇನ್ನೂ ಇದೇ ವೇಳೆ ಬಿಡಿಎ ಕಡೆಯಿಂದ ಭೂಮಿ ಪಡೆದ ಬಹುತೇಕರು ಆಬ್ಯೂಲೇಟ್ ಸೇಲ್ ಡೀಡ್ ಮಾಡಿಸಿಕೊಂಡಿರೋದಿಲ್ಲ. ಕೆಲ ಕಡೆಗಳಲ್ಲಿ ಲೀಸ್ ಕಂ ಸೇಲ್ ಡೀಡ್ ನಿವೇಶನಗಳಿವೆ. ಬಿಡಿಎ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಸೈಟ್ ಗಳಿವೆ.ಬಿಡಿಎಗೆ ನಿಗದಿತ ಶುಲ್ಕ ಪಾವತಿಸಿ ಬಿಡಿಎ ಕಡೆಯಿಂದ ಶುದ್ಧ ಕ್ರಮಪತ್ರ ಮಾಡಿಸಿಕೊಳ್ಳುವಂತೆ ಸಿಎಮ್ ಮನವಿ ಮಾಡಿದ್ದಾರೆ.ಇದಕ್ಕಾಗಿ ನಮ್ಮ ಪ್ರಜಾಸೇವೆಯ ವಿಶೇಷ ಕಾರ್ಯಕ್ರಮ ಅನುಕೂಲ ಕಲ್ಪಿಸಲಿದೆ ಎಂದು ಸಿಎಮ್ ತಿಳಿಸಿದ್ದಾರೆ.