• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದೀಪಾವಳಿಗೆ ಜನರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಡಿ.ಕೆ‌ ಶಿವಕುಮಾರ್

ದೀಪಾವಳಿಗೆ ಜನರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಡಿ.ಕೆ‌ ಶಿವಕುಮಾರ್

CM DK Shivakumar: ಜನರಿಗೆ ಅನುಕೂಲ ಕಲ್ಪಿಸುವ ಜೊತೆ ಸರ್ಕಾರದ ಖಜಾನೆ ತುಂಬಲು ಸಿಎಂ ಡಿ.ಕೆ‌ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಬಿಡಿಎ ಅಧಿಕಾರಿಗಳ ಜೊತೆ ಮಹತ್ವದ ಪ್ರಗತಿ ಪರಿಶೀಲನೆ ಸಭೆ ಬಳಿಕ ಹಲವು ಮಹತ್ವದ ನಿರ್ಧಾರಗಳನ್ನು ಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದ್ರು. ಈ ಕುರಿತು ಇಲ್ಲಿದೆ ಫುಲ್ ಡಿಟೇಲ್ಸ್.....

Written ByChetana Devarmani
Published: Nov 09, 2026, 17:59 IST|Updated: Nov 09, 2026, 18:09 IST
joinshare
ದೀಪಾವಳಿಗೆ ಜನರಿಗೆ ಗುಡ್ ನ್ಯೂಸ್ ಕೊಟ್ಟ  ಸಿಎಂ ಡಿ.ಕೆ‌ ಶಿವಕುಮಾರ್

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಜನರಿಗೆ ಅನುಕೂಲ ಕಲ್ಪಿಸುವ ಜೊತೆ ಸರ್ಕಾರದ ಖಜಾನೆ ತುಂಬಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. 38 D  ಯೋಜನೆಯಿಂದ 1 ಲಕ್ಷ ನಿವೇಶನದಾರರಿಗೆ ಅನುಕೂಲ ಆಗಲಿದೆ ಎಂದು ಸಿಎಮ್ ತಿಳಿಸಿದ್ದಾರೆ. 2008 ರ ಮುಂಚೆ ಮನೆ ಕಟ್ಟಿದ್ರೆ ಅಂಥವ್ರಿಗೆ ಇದೀಗ ಸಿಎಮ್ವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಿಡಿಎ ನೊಟಿಫಿಕೇಷನ್ ಆದ ಜಾಗದಲ್ಲಿ ಮನೆ ಕಟ್ಟಿದ್ರೆ ಮಾತ್ರ ಸಕ್ರಮಕ್ಕೆ ಅವಕಾಶ ಸಿಗಲಿದ್ದು, ಇಷ್ಟು ದಿನ ಇಂತಹವಮನೆ ಮಾರಾಟ ಮಾಡಲೂ ಆಗ್ತಾ ಇರ್ಲಿಲ್ಲ..ಕ್ಯಾಬಿನೇಟ್ ನಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಇದೀಗ 38 D ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ.‌ಈ ಹಿಂದೆ 2011 ರಲ್ಲಿ ಬಿಜೆಪಿ ಸರ್ಕಾರ ಮಾಡಿದ್ದ ದಂಡದ ಪ್ರಮಾಣ ಶೇ. 50 ರಷ್ಟು ಕಡಿತ ಮಾಡಲಾಗಿದೆ. ಹೊಸ ದಂಡದ ಪ್ರಮಾಣ ಲ್ಯಾಂಡ್ ಗೈಡ್ ಲೆನ್ಸ್ ಅಡಿ ದರ ಅನ್ವಯವಾಗಲಿದೆ. ಡಿಸೆಂಬರ್ 17 ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದು ಕೊನೆಯ ಅವಕಾಶವಾಗಿದ್ದು ಸಕ್ರಮ ಮಾಡಿಕೊಳ್ಳದೇ ಹೋದರೆ ಬಿಡಿಎ ಕಾರ್ಯಾಚರಣೆ ನಡೆಸಿ ತನ್ನ ಜಾಗವನ್ನು ಹಿಂಪಡೆಯಲಿದೆ .ಈ ಅವಕಾಶ ಮತ್ತೆ ಸಿಗಲ್ಲ ಎಂದು ಸಿಎಮ್ ಡಿಕೆಶಿ ಸ್ಪಷ್ಟಪಡಿಸಿದ್ರು. 

ಇನ್ನೂ ಇದೇ ವೇಳೆ ರೈತರಿಗೆ ಬಿಡಿಎ ಮೂಲಕ ಸಿಎಮ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೆಂಪೇಗೌಡ ಲೇಔಟ್ ನಿರ್ಮಾಣಕ್ಕೆ ಯಾವುದೇ ತಕರಾರು ಇಲ್ಲದೇ ಭೂಮಿ ನೀಡಿದ ರೈತರಿಗೆ ನಿವೇಶನ ಭಾಗ್ಯ ನೀಡಲಾಗವುದು ಎಂದು ಡಿಕೆಶಿ ತಿಳಿಸಿದ್ದಾರೆ..ಬಿಡಿಎ ಒಂದು ದರ ನಿಗದಿ ಮಾಡುತ್ತೆ, ಅದರ ಪ್ರಕಾರ ಹಣ ಕಟ್ಟಿ ಸೈಟ್ ಪಡೆದುಕೊಳ್ಳಬಹುದು. ಒಂದು ಎಕರೆಗೆ ಒಂದು ಸೈಟ್ ನೀಡುವ ಕುರಿತಂತೆ ಕಾನೂನು ಇದೆ. ಡಿಸೆಂಬರ್ 17 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಸಿಎಮ್ ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ ಬಿಡಿಎ ಲೇ ಔಟ್ ನಿರ್ಮಾಣಕ್ಕೆ ಭೂಮಿ ಕಲೇದುಕೊಂಡ ರೈತರಿಗೆ ವಾಲ್ ಆಫ್ ಗ್ರಾಟಿಟ್ಯೂಡ್ ಅಂತ ಗೌರವನೂ ನೀಡಲಾಗಿದೆ.
ಸ್ವಯಂ ಪ್ರೇರಿತರಾಗಿ ಭೂಮಿ ನೀಡಿದ ರೈತರಿಗೆ ಮಾತ್ರ ಅವಕಾಶ ನಿವೇಶನ ದೊರೆಯಲಿದೆ ಎಂದು ಸಿಎಮ್ ತಿಳಿಸಿದ್ದಾರೆ

ಇನ್ನೂ ಬಿಡಿಎ ಕಡೆಯಿಂದ ಸೈಟ್ ಪಡೆದ ಮಾಲೀಕರಿಗೆ  ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ..ನಿಮ್ ಮನೆ ಪಕ್ಕದಲ್ಲಿ ಬಿಡಿಎ ಮಾರ್ಜಿನ್ ಲ್ಯಾಂಡ್ ಇದ್ರೆ ಮಾಲೀಕರು ತಮ್ಮದಾಗಿಸಿಕೊಳ್ಳಬಹುದಾಗಿದೆ ..600 ಅಡಿ ವರೆಗೂ ಮಾರ್ಜಿನ್ ಲ್ಯಾಂಡ್ ಇದ್ರೆ ಸ್ವಂತ ಮಾಡಿಕೊಳ್ಳಬಹುದು..ಲ್ಯಾಂಡ್ ಗೈಡೆನ್ಸ್ ವ್ಯಾಲ್ಯು ಪ್ರಕಾರ ಬಿಡಿಎಗೆ ಹಣ ಕಟ್ಟಬೇಕು. ಬಿಡಿಎ ಜಾಗದಲ್ಲಿ ಸ್ವಂತ ಮನೆ ಪಕ್ಕದಲ್ಲಿ ಇದ್ದ ಮಾರ್ಜಿನ್ ಲ್ಯಾಂಡ್ ಗೆ ಮಾತ್ರ ಅವಕಾಶವಿದ್ದು,ಡಿಸೆಂಬರ್ 17 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಿಎಮ್ ತಿಳಿಸಿದ್ದಾರೆ. ಇನ್ನೂ ಇದೇ ವೇಳೆ ಬಿಡಿಎ ಕಡೆಯಿಂದ ಭೂಮಿ ಪಡೆದ ಬಹುತೇಕರು ಆಬ್ಯೂಲೇಟ್ ಸೇಲ್ ಡೀಡ್ ಮಾಡಿಸಿಕೊಂಡಿರೋದಿಲ್ಲ. ಕೆಲ ಕಡೆಗಳಲ್ಲಿ ಲೀಸ್ ಕಂ ಸೇಲ್ ಡೀಡ್ ನಿವೇಶನಗಳಿವೆ. ಬಿಡಿಎ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಸೈಟ್  ಗಳಿವೆ.ಬಿಡಿಎಗೆ ನಿಗದಿತ ಶುಲ್ಕ ಪಾವತಿಸಿ ಬಿಡಿಎ ಕಡೆಯಿಂದ ಶುದ್ಧ ಕ್ರಮಪತ್ರ ಮಾಡಿಸಿಕೊಳ್ಳುವಂತೆ  ಸಿಎಮ್ ಮನವಿ ಮಾಡಿದ್ದಾರೆ.ಇದಕ್ಕಾಗಿ ನಮ್ಮ ಪ್ರಜಾಸೇವೆಯ ವಿಶೇಷ ಕಾರ್ಯಕ್ರಮ ಅನುಕೂಲ ಕಲ್ಪಿಸಲಿದೆ ಎಂದು ಸಿಎಮ್ ತಿಳಿಸಿದ್ದಾರೆ. 
 

Add Zee News as a Preferred Source
TAGS:
Govt Schemes