2028 ಕ್ಕೂ ನಮ್ಮದೇ ಸರ್ಕಾರ ಎಂದು ಸಿಎಂ ಡಿಕೆ ಶಿವಕುಮಾರ್ ಗುಡುಗು
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಗೆ ಭರ್ಜರಿ ವೆಲ್ ಕಂ ಸಿಕ್ಕಿತ್ತು. ಖಜಾನೆ ಖಾಲಿ ಎಂಬ ವಿಪಕ್ಷಗಳ ಟೀಕೆಗೆ ಠಕ್ಕರ್ ಕೊಡಲು 1300 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಚಾಮರಾಜನಗರ: ಸಿಎಂ ಆದ ಬಳಿಕ ಮೊದಲ ಬಾರಿ ಚಾಮರಾಜನಗರ ಜಿಲ್ಲೆ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಭರ್ಜರಿ ಸ್ವಾಗತ ಸಿಕ್ಕಿತು. ನೆಚ್ಚಿನ ನಾಯಕನನ್ನು ನೋಡಲು ಜನಸಾಗರವೇ ಹೆಲಿಪ್ಯಾಡ್ ಬಳಿ ನೆರೆದಿತ್ತು. ಬರೋಬ್ಬರಿ 1300 ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದರು. ಸಿಎಂ ಡಿಕೆ ಟೂರ್ ಹೇಗಿತ್ತು..? ಈ ಸ್ಟೋರಿ ನೋಡಿ.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಗೆ ಭರ್ಜರಿ ವೆಲ್ ಕಂ ಸಿಕ್ಕಿತ್ತು. ಖಜಾನೆ ಖಾಲಿ ಎಂಬ ವಿಪಕ್ಷಗಳ ಟೀಕೆಗೆ ಠಕ್ಕರ್ ಕೊಡಲು 1300 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು.ಕೊಳ್ಳೇಗಾಲ ಎಂಜಿಎಸ್ವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಸಿಎಂ ಡಿಕೆಗೆ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಚೆಲುವರಾಯಸ್ವಾಮಿ, ಯು.ಟಿ.ಖಾದರ್, ಅಜಯ್ ಧರ್ಮಸಿಂಗ್, ಕೆ.ಎಚ್. ಮುನಿಯಪ್ಪ ಸಾಥ ಕೊಟ್ಟರು.
ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಸಿಎಂ ಗಡಿಜಿಲ್ಲೆ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲೆ ನನ್ನ ಪ್ರೀತಿಯ ಜಿಲ್ಲೆ, ಎಲ್ಲಾ ವರ್ಗದವರು ವಾಸಿಸುವ ರೈತರು- ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಾಗಿದ್ದು ಬಹಳ ಪ್ರೀತಿಯಿಂದ ಈ ಜಿಲ್ಲೆಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಮೊಟಕು ಮಾಡಿದ ಘಟನೆಯೂ ನಡೆಯಿತು. ಎರಡು ಚರಣಗಳ ಬಳಿಕ ಮೂರನೇ ಚರಣವನ್ನೂ ಹಾಡುಗಾರರು ಗಾಯನ ಮಾಡಲು ಆರಂಭಿಸಿದಾಗ ಗೀತೆ ನಿಲ್ಲಿಸುವಂತೆ ಸಿಎಂ ಸೂಚಿಸಿ ವಂದೇ ಮಾತರಂ ಗಾಯನವನ್ನು ಸಮಾಪ್ತಿ ಮಾಡಿದರು. ವೇದಿಕೆ ಕಾರ್ಯಕ್ರಮದಲ್ಲಿ 2028 ಕ್ಕೂ ನಮ್ಮದೇ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ ಎಂದು ಭರವಸೆ ನೀಡಿದರು.
ಜನರಿಗೆ ಅನೇಕ ಕಾರ್ಯಕ್ರಮ ರೂಪಿಸುವ ಜೊತೆಗೆ ಗ್ಯಾರಂಟಿ ನೀಡಲಾಗಿದೆ, ಟೀಕೆಗಳನ್ನು ಹೆದರಿಸಿ ಗೆದ್ದರೆ ನಾಯಕ, ಸೋತರೆ ಮಾರ್ಗದರ್ಶಕನಾಗಲಿದ್ದು ಶಿವ ತಲೆ ಮೇಲೆ ಗಂಗೆಗೆ ಸ್ಥಾನ ನೀಡಿದಂತೆ ಕಾಂಗ್ರೆಸ್ ಪಕ್ಷವು ತನ್ನ ಹೃದಯದಲ್ಲಿ ಜನರಿಗೆ ಸ್ಥಾನ ನೀಡಿದೆ, ಕೊಳ್ಳೇಗಾಲ, ಹನೂರು ಈಗ ಅಭಿವೃದ್ಧಿಗೆ ಕಾಲಿಟ್ಟಿದೆ, ರೇಷ್ಮೆಗೆ ಉದ್ಯಮದ ಸ್ಥಾನ ಇಲ್ಲಾ, ಹೊಸ ಕೈಮಗ್ಗ ನೀತಿ ರೂಪಿಸಲಾಗಿದೆ, ಕೈಗಾರಿಕಾ ಸ್ಥಾನವನ್ನು ನೀಡಲಾಗಿದೆ, ರೇಷ್ಮೆ ಬೆಳೆಗಾರರು- ನೇಕಾರರ ಬದುಕಿಗೆ ಹೊಸ ರೂಪ ಸಿಗಲಿದೆ ಎಂದರು.
ಸಿಎಂ ಭೇಟಿ ವೇಳೆ ಸಾಥ್ ನೀಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಕ್ಯಾನ್ಸರ್ ಔಷಧಗಳ ದರಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುತ್ತೇನೆ ಎಂದರು. ಜೊತೆಗೆ, ಹೋಟೆಲ್ ಗಳಿಗೆ ಅಡುಗೆ ಎಣ್ಣೆ ಮರು ಬಳಕೆ ಬಗ್ಗೆ ಮಾರ್ಗಸೂಚಿ ಹೊರಡಿಸುವುದಾಗಿ ಹೇಳಿದರು. ಇನ್ನು , ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ಆ ವರಣದಲ್ಲಿ ಭೀಕರ ಸ್ಫೋಟಕ್ಕೆ ಸಂಬಂಧಿಸಿದತೆ ಜಿಲ್ಲಾಧಿಕಾರಿಗೆ ಮೇಲುಸ್ತುವಾರಿ ವಹಿಸುವಂತೆ ಸೂಚಿಸಿದ್ದು ಘಟನೆ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಿದ್ದು ಕೇಂದ್ರಕ್ಕೂ ತನಿಖೆ ನಡೆಸುವಂತೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ಭವನ, ಯಳಂದೂರು 100 ಹಾಸಿಗೆಗಳ ಆಸ್ಪತ್ರೆ ಲೋಕಾರ್ಪಣೆಗೊಂಡವು.ಹನೂರಿನ ಪ್ರಜಾಸೌಧ ಕಟ್ಟಡ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.