• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸಿಎಂ ಡಿಕೆಶಿ ವಿರುದ್ಧ ಮತ್ತೆ ಗುಡುಗಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಸಿಎಂ ಡಿಕೆಶಿ ವಿರುದ್ಧ ಮತ್ತೆ ಗುಡುಗಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಕೆಡುಕನ್ನೇ ಮಾಡಲ್ಲ ಎನ್ನುವ ಸಿಎಂ ನನ್ನ ಮನೆ ಮುಂದೆ ಪೋಸ್ಟರ್ ಅಂಟಿಸಲು ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಗುಡುಗಿದ್ದು, ಸುಳ್ಳು ಯಾರ ಮನೆ ದೇವರು ಎಂದು ಸಿಎಂಗೆ ಕುಟುಕಿದ್ದಾರೆ.

Written ByYashaswini V
Published: Nov 14, 2026, 08:19 IST|Updated: Nov 14, 2026, 08:21 IST
joinshare
ಸಿಎಂ ಡಿಕೆಶಿ ವಿರುದ್ಧ ಮತ್ತೆ ಗುಡುಗಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ತುಮಕೂರಿನ ಸಿ.ಎಸ್‌ಪುರದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ದೊಡ್ಡ ಆಲಹಳ್ಳಿಯಲ್ಲಿ ಟೆಂಟ್ ನಡೆಸುತ್ತಿದ್ದ ಕಾಲದಿಂದಲೂ ಪೋಸ್ಟರ್ ಅಂಟಿಸುವ ಚಾಳಿ ಹೊಂದಿದ್ದಾರೆ. ಮುಖ್ಯಮಂತ್ರಿಯಾದ ಮೇಲೆಯೂ ಅದನ್ನು ಬಿಟ್ಟಿಲ್ಲ. ನಿನ್ನೆ ರಾತ್ರಿ ಸಹ ಬೆಂಗಳೂರಿನಲ್ಲಿ ನಮ್ಮ ಮನೆ ಹತ್ತಿರ ಪೋಸ್ಟರ್ ಅಂಟಿಸುವ ಮೂಲಕ ಕೀಳುಮಟ್ಟದ ರಾಜಕಾರಣವನ್ನ ಮಾಡಿದ್ದಾರೆ. ಸಿಡಿ ಮಾಡಿಸುವುದು, ಪೋಸ್ಟರ್ ಅಂಟಿಸುವುದು ಯಾವುದೇ ರಾಜ್ಯದ ಒಬ್ಬ ಸಿಎಂ ಮಾಡುವ ಕೆಲ್ಸಾನಾ ಅಂತ ಪ್ರಶ್ನಿಸಿದ್ದಾರೆ.

ಸಿಎಂ ಮೇಲೆ ಖಂಡಿತಾ ನನಗೆ ಅಸೂಯೆ ಇಲ್ಲ!
ನಿಮ್ಮ ಸಮುದಾಯದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಕೆಲಸ ಮಾಡೋಕೆ ಬಿಡಿ ಅಂತ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ನಂಗೆ ಮುಖ್ಯಮಂತ್ರಿಗಳ ಬಗ್ಗೆ ಖಂಡಿತಾ ಅಸೂಯೆ ಇಲ್ಲ. ಆದರೆ, ಅವರು ಲೂಟಿ ಮಾಡೋದನ್ನೇ ಕೆಲಸ ಅಂತ ಅನ್ಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್‌ ಅಲ್ಲ:
ಮಾತೆತ್ತಿದರೆ ನಾವು ಹೆಚ್‌ಡಿಕೆ ನ ಮುಖ್ಯಮಂತ್ರಿ ಮಾಡಿದ್ವಿ ಅಂತಾರೆ. ಅದರೆ, ನನ್ನನ್ನ ಸಿಎಂ ಆಗಿ ಮಾಡಿದ್ದು ಕಾಂಗ್ರೆಸ್‌ನವರಲ್ಲ. ಅವರಿಗೆ ನಮ್ಮ ಪಕ್ಷದವರನ್ನೇ ಸಿಎಂ ಆಗಿ ಮಾಡುವ ಅನಿವಾರ್ಯತೆ ತ್ತು. ಹಾಗಾಗಿಯೇ, ಬಿಜೆಪಿ ಮತ್ತು ಜೆಡಿಎಸ್ ಎಲ್ಲಿ ಒಂದಾಗಿ ಬಿಡುತ್ತವೋ ಎಂದು ದೇವೇಗೌಡರ ಮನೆಗೆ ಓಡೋಡಿ ಬಂದಿದ್ದರು ಎಂದು ಹೇಳಿದರು.

ಹೆಚ್‌ಡಿಡಿ ಪ್ರಧಾನಿ ಆಗಿದ್ದು ಕಾಂಗ್ರೆಸ್‌ನಿಂದಲ್ಲ:
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನಾವೇ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಆದ್ರೆ ಅದೆಲ್ಲಾ ಸಂಪೂರ್ಣ ಸುಳ್ಳು ಎಂದರು. 7 ದಶಕಗಳ ರಾಜಕೀಯ ಜೀವನ ಹೊಂದಿರುವ ದೇವೇಗೌಡರು ಮಂತ್ರಿ ಆಗೋಕೆ ಸುಮಾರು 28 ವರ್ಷಗಳವರೆಗೆ ಕಾಯ್ಬೇಕಾಯಿತು. ಆದ್ರೆ, ಪ್ರಸ್ತುತ ರಾಜಕಾರಣದಲ್ಲಿ ಗೆದ್ದ ಕೂಡಲೇ ಸಚಿವ, ಮುಖ್ಯಮಂತ್ರಿ ಆಗಬೇಕು ಎನ್ನುವ ಸಂಸ್ಕೃತಿ ಬೆಳೆದಿದೆ. ಈ ಹಿಂದೆ ಸುದೀರ್ಘ ಅಧಿಕಾರದಲ್ಲಿದ್ದು ಕೇವಲ 140-142 ಸ್ಥಾನಗಳಿಗೆ ಕುಸಿದಿದ್ದ ಕಾಂಗ್ರೆಸ್ ಪಕ್ಷಕ್ಕೆ ದೆಹಲಿ ರಾಜಕಾರಣದಲ್ಲಿ ಬೆಲೆಯೇ ಇರ್ಲಿಲ್ಲ. ಈ ಹಿನ್ನಲೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳು, ಇತರ ಪ್ರಾದೇಶಿಕ ಪಕ್ಷಗಳು ಒತ್ತಾಯದಿಂದ ದೇವೇಗೌಡರು ಪ್ರಧಾನಿ ಆದರೇ ಹೊರತು, ದೇವೇಗೌಡರು ಪಿಎಂ ಆಗಿದ್ದು ಕಾಂಗ್ರೆಸ್‌ನವರ ಭಿಕ್ಷೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೇವಲ 11 ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ:
ದೇಶದ ಹಿತಕ್ಕಾಗಿ ಹಾಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇವಲ 11 ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ದೇವೇಗೌಡರು ರಿಸೈನ್ ಮಾಡಿದ್ರು ಎಂದು ಹೆಚ್‌ಡಿಕೆ ಉಲ್ಲೇಖಿಸಿದರು.

ದೇವೇಗೌಡರನ್ನು ಕಾಡಿಬೇಡಿ ಮೈತ್ರಿ ಸರ್ಕಾರ:
ಇದೇ ಸಂದರ್ಭದಲ್ಲಿ ಸುಳ್ಳೇ ಹೆಚ್‌.ಡಿ. ಕುಮಾರಸ್ವಾಮಿ ʼಮನೆ ದೇವ್ರುʼ ಎನ್ನುವ ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದ ಹೆಚ್‌ಡಿಕೆ, ಅವರ ಮನೆ ದೇವ್ರು ಯಾರು ಅಂತಾ ಎಲ್ಲಾರ್ಗೂ ಗೊತ್ತಿದೆ. ಈ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದಾಗಿನಿಂದ ಹೇಳಿದ್ದೆಲ್ಲವೂ ಬರೀ ಸುಳ್ಳೇ ಎಂದು ಚಾಟಿ ಬೀಸಿದರಲ್ಲದೆ, ಇವರೊಂದಿಗೆ ಸರ್ಕಾರ ಮಾಡುವ ಉದ್ದೇಶ ಅಥವಾ ಆಕಾಂಕ್ಷೆ ನನಗೆ ಇರಲಿಲ್ಲ. 2018ರ ಚುನಾವಣೆಯಲ್ಲಿ ಜೆಡಿಎಸ್ 38 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 79 ಸ್ಥಾನಗಳಿಗೆ ಕುಸಿದಿತ್ತು. ಅಂದು ದೆಹಲಿಯಿಂದ ಓಡಿಬಂದ ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಕಾಡಿಬೇಡಿ ಮೈತ್ರಿ ಸರ್ಕಾರ ರಚಿಸಿದರು. ಮಲ್ಲಿಕಾರ್ಜುನ ಖರ್ಗೆಯವರನ್ನೇ ಮುಖ್ಯಮಂತ್ರಿ ಮಾಡಿ ಎಂದು ದೇವೇಗೌಡರು ಹೇಳಿದರೂ, ಕಾಂಗ್ರೆಸ್ ನಾಯಕರು ಬಲವಂತವಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿದರು ಎಂದರು.

ಗುತ್ತಿಗೆದಾರರ ಮನೆ ಬಾಗಿಲಿಗೆ ಬಿಲ್ ಪಾವತಿ:
ನಾನು ಸಿಎಂ ಆಗಿದ್ದ ಅವಧಿಯಲ್ಲಿ ಯಾವುದೇ ಗುತ್ತಿಗೆದಾರರಿಂದ ಪರ್ಸೆಂಟೇಜ್ ಕೇಳದೆ, ಪ್ರತಿ ತಿಂಗಳ 3ನೇ ತಾರೀಖಿನಂದು ಮನೆ ಬಾಗಿಲಿಗೆ ಬಿಲ್ ಪಾವತಿಯಾಗುತ್ತಿತ್ತು. ಆದರೆ ಈಗ 39,000 ಕೋಟಿ ಗುತ್ತಿಗೆದಾರರ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿದೆ. ಗುತ್ತಿಗೆದಾರರು ಬೀದಿಯಲ್ಲಿ ನಿಂತು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 90 ದಿನಗಳ ಕಾಲ ತಾವು ಮನೆಗೆ ಹೋಗದೆ, ಬಸ್ಸಿನಲ್ಲೇ ಮಲಗಿ, ಸ್ನಾನ ಮಾಡಿ ಇಡೀ ರಾಜ್ಯ ಪ್ರವಾಸ ಮಾಡಿದ್ದೆ. ಆದರೆ ರಾಜ್ಯದ ಜನತೆ ಕೇವಲ 17 ಸ್ಥಾನಗಳನ್ನು ನೀಡಿ ಆಶೀರ್ವದಿಸಿದರು ಎಂದು ಹಿಂದಿನ ವಿಧಾನಸಭಾ ಚುನಾವಣೆ ಬಗ್ಗೆಯೂ ಬೇಸರ ಹೊರಹಾಕಿದರು.

ಬಲಿತ ದಲಿತ ಒಂದೇ ಅಲ್ಲ ಹಲವಾರು ಪೋಸ್ಟರ್ ಡಿಸೈನ್ ಮಾಡಿದ್ದಾರೆ.ಹಿಂದೆ ಸಿನಿಮಾ ಮಾಡಿದಾಗ ಎಲ್ಲಾ ಕಡೆ ಸಿನಿಮಾ ಪೋಸ್ಟರ್ ಹಾಕುತ್ತಿದ್ದರು. ಅದು ಜ್ಞಾಪಕಕ್ಕೆ ಬಂದಿರ ಬೇಕು ಮುಖ್ಯಮಂತ್ರಿಗಳಿಗೆ, ಅವರೇನು ಕೆಲಸ ಮಾಡ್ತಿದ್ರಲ್ಲ ಅದನ್ನು ಕಾರ್ಯಕರ್ತರಿಗೆ ಕೊಟ್ಟಿರಬೇಕು.

ನಮ್ಮನೆ ಸುತ್ತಾಮುತ್ತಾ ಪೋಸ್ಟರ್ ಹಾಕೋದಕ್ಕಿಂತ ಕಾಂಗ್ರೇಸ್ ಮುಖಂಡರುಗಳ ಮನೆ, ಕಾರ್ಯಕರ್ತರ ಮನೆ ಮತ್ತು ಅವರ ಕಚೇರಿ ಮುಂದೆ ಹಾಕಿದ್ರೆ ಜನರಿಗೆ ಅರ್ಥ ಆಗುತ್ತೆ.. ನಮ್ಮನೆ ಮುಂದೆ ಹಾಕಿದ್ರೆ ಇನ್ನು ಆಕ್ರೋಶ ಆಗಲ್ವಾ ಜನಕ್ಕೆ,? ಏನು ಅನುಕೂಲ ಆಗುತ್ತೆ ಅವರಿಗೆ. ನಮ್ಮನೆ ಮುಂದೆ ಪೋಸ್ಟರ್ ಹಾಕಿದ್ರೆ ಜನರ ಆಕ್ರೋಶ ಜಾಸ್ತಿಯಾಗಿ ಅವರು ಪಾತಾಳಕ್ಕೆ ಹೋಗುವ ಪರಿಸ್ಥಿತಿ ಬರುತ್ತೆ ಎಂದು ಎಚ್ಚರಿಕೆ ನೀಡಿದರು.

ಬಲಿತ ದಲಿತ ಅದ್ರಲ್ಲಿ ತಪ್ಪೇನಿದೆ..?
ಇದೇ ಸಂದರ್ಭದಲ್ಲಿ ಬಲಿತ ದಲಿತ ಪೊಸ್ಟರ್ ಅಂಟಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಮೊನ್ನೆ ಚಿ.ನಾ.ರಾಮು ಒಂದು ಬುಕ್ ಬರೆದವರೆ ಬಲಿತ ದಲಿತ ತುಳಿತ;  ನನ್ನ ಜನ ಅನಾಥ ಪುಸ್ತಕ ಓದಿ ಎಂದು ಕಾಂಗ್ರೆಸ್ ನಾಯಕರಿಗೆ ಹೊಸ ಸಲಹೆ ಕೊಟ್ಟರು.

78 ವರ್ಷಗಳಲ್ಲಿ ದುರ್ಬಲ ದಲಿತರ ಮೀಸಲು ಸೌಲಭ್ಯ ನುಂಗಿದ್ದು ಯಾರು ಎಂದು ಕಿಡಿಕಾರಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಲಿತವರು ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿಯೇ ಇಟ್ಟಿದ್ದಾರೆ. ಬಲಿತ ದಲಿತ ಎನ್ನುವ ಪದ ಪ್ರಯೋಗ ಮಾಡಿದ್ದು ನಾನಲ್ಲ. ಚಿ.ನಾ.ರಾಮು ಅವರು ಬರೆದಿರುವ ಬಲಿತ ದಲಿತ ತುಳಿತ; ನನ್ನ ಜನ ಅನಾಥ' ಎನ್ನುವ ಪುಸ್ತಕವನ್ನು ಮೊದಲು ಓದಲಿ. ಇದರಲ್ಲಿ ಕಳೆದ 78 ವರ್ಷಗಳಿಂದಲೂ ಯಾರು ಯಾರನ್ನು ತುಳಿದಿದ್ದಾರೆ ಎಂಬ ಬಗ್ಗೆ ವಿವರವಾದ ಉಲ್ಲೇಖಗಳಿವೆ ಎಂದರು.  

ನಾನು ಏನು ಅವಮಾನ ಮಾಡಿದ್ದೀನಿ?
ಏನು ಗತಿ ಇಲ್ಲದ, ಧ್ವನಿ ಇಲ್ಲದ ದಲಿತರನ್ನು ಮೇಲೆತ್ತಿ ಎಂದು ಹೇಳಿದ್ದೇನೆ. ಅದು ತಪ್ಪಾ,, ಅವರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿ ಇಟ್ಟಿದ್ದೀರಲ್ಲ ಎಂದು ವಾಗ್ದಾಳಿ ನಡೆಸಿದ ಹೆಚ್‌ಡಿಕೆ,, ದಲಿತರ ಹೆಸರನ್ನು ಹೇಳಿ ಕೊಂಡು,  ನೀವೇನೇನು ಮಾಡ್ಕೊಂಡ್ರಿ..?  ಎಂದು ಪ್ರಶ್ನಿಸಿದರು.

ರಿಯಲ್ ಎಸ್ಟೇಟ್ ಆರೋಪಗಳಿಗೆ ಕುಮಾರಸ್ವಾಮಿ ಸವಾಲು ಮತ್ತು ತಿರುಗೇಟು:
ಅದೇನೋ ರಿಯಲ್ ಎಸ್ಟೇಟ್ ಬಗ್ಗೆ ನನ್ನ ಮೇಲೆ ದೂರಿದ್ರಿ, ಎಲ್ಲಿ ಮಾಡಿದಿನಿ ರಿಯಲ್ ಎಸ್ಟೇಟ್..? ನೀವೇನ್ ಮಾಡ್ತಿದ್ರಿ..? ನಾನು ಎಲ್ಲಾದರೂ ರಿಯಲ್ ಎಸ್ಟೇಟ್ ಮಾಡಿದ್ದೀನಾ..? ಬಾಂಬೆ ನಲ್ಲಿ ಏನಿದೆ,  ಹೈದರಾಬಾದ್‌ನಲ್ಲಿ  ಏನಿದೆ ಬಿಚ್ಬೇಕಾ ಎಲ್ಲಾ....? ನನ್ನದೇನಿದೆ ತೆಗಿರಪ್ಪಾ ಎಂದು ಹೆಚ್‌ಡಿಕೆ ಸವಾಲೆಸೆದರು.

1983ರಲ್ಲಿ ನಾನು ಸಿನಿಮಾ ರಂಗದಲ್ಲಿದ್ದಾಗ ಖರೀದಿಸಿದ ಜಮೀನು ಬಿಟ್ಟರೆ, ಇನ್ಯಾವ ರಿಯಲ್ ಎಸ್ಟೇಟ್ ಮಾಡಿದಿನಿ ನಾನು,,? ಯಾವ ರೈತರ ಭೂಮಿಗೆ ಧೋಖಾ ಹಾಕಿ ತಗೊಳೊಕೊಗಿದಿನಿ. ನಿಮ್ಮದೇನೆನಿದೆ ಬಂಡವಾಳಗಳು,,? ನನ್ನ ಬಗ್ಗರ ಚರ್ಚೆ ಮಾಡುವ ನೈತಿಕತೆ ಏನಿದೆ..? ಎಂದು ಕಾಂಗ್ರೆಸ್‌ ನಾಯಕರಿಗೆ ನೈತಿಕತೆ ಪ್ರಶ್ನೆ ಮಾಡಿದ ಕುಮಾರಸ್ವಾಮಿ.

ನಾನು ಹೇಳಿರುವ ಹಾಗೂ ಕೇಳಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಿ, ಆಮೇಲೆ ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡೋಣ. ನಿಮ್ಮಿಂದಾಗಿರುವ ಹಲವಾರು ಕಾನೂನು ಬಾಹಿರ ತೀರ್ಮಾಗಳಿದೆಯಲ್ಲ, ಅದರ ಬಗ್ಗೆ ಪ್ರಶ್ನೆ ಮಾಡಿದಿನಲ್ಲ ಅದಕ್ಕೆ ಮೊದಲು ಉತ್ತರ ಕೊಡಿ ಆಮೇಲೆ ವೈಯಕ್ತಿಕ ವಿಚಾರ ಚರ್ಚರ ಮಾಡೊಣ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. 
 

Add Zee News as a Preferred Source
TAGS:
HD Kumarswamy
HD Devegowda
D K Shivakumar
Karnataka Politics