SOCIAL MEDIA

Newsletter

PARTNER SITES
Select Language Select State

ಪರಿಷತ್ ಚುನಾವಣೆ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಜಂಟಿ ತಂತ್ರ : ಮೈತ್ರಿ ಬಲವರ್ಧನೆಗೆ ಎನ್.ಡಿ.ಎ ನಾಯಕರ ಮಹತ್ವದ ಸಭೆ

ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಸಮನ್ವಯದ ಕೊರತೆಗೆ ಫುಲ್‌ಸ್ಟಾಪ್ ಹಾಕೊದಕ್ಕೆ ನಾಯಕರು ಮುಂದಾಗಿದ್ದಾರೆ. ಈ ಹಿಂದೆ ನಡೆದ ಹೋರಾಟಗಳು, ಪರಿಷತ್ ಚುನಾವಣೆಗಳಲ್ಲಿ ಮೈತ್ರಿ ಶಕ್ತಿ‌ ತೋರಿಸೋದಕ್ಕೆ ವಿಫಲವಾಗಿದ್ರು ಎನ್ ಡಿ ಎ ನಾಯಕರು. ಸದ್ಯ ಇದ್ರಿಂದ ಎಚ್ಚೆತ್ತುಕೊಳ್ಳೊ ಅನಿವಾರ್ಯತೆ ಎರಡು ಪಕ್ಷದ ನಾಯಕರಿಗಿದೆ. ಅದು ಪರಿಷತ್ ಚುನಾವಣೆ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸೋದಕ್ಕೆ ಮುಂದಾಗಿದ್ದಾರೆ.. ಹಾಗಾದ್ರೆ ಇವತ್ತಿನ ಸಭೆಯಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು ಅನ್ನೋದ್ರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..

Reported By Krishna NK Written By Krishna NK
Published: Sep 26, 2026, 07:17 PM IST | Updated: Sep 26, 2026, 07:20 PM IST
Image Credit: jds bjp meeting
Join

ಬೆಂಗಳೂರು : ರಾಜ್ಯದಲ್ಲಿ ಮೈತ್ರಿಯನ್ನ‌ ಗಟ್ಟಿಗಳಿಸೋದಕ್ಕೆ ಬಿಜೆಪಿ‌ ಜೆಡಿಎಸ್ ನಾಯಕರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಹೋರಾಟಕ್ಕೆ ಕಮಲ ದಳ ಒಂದಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಇದು ಕೆಲವೇ ಕೆಲವು ಹೋರಾಟಗಳಿಗೆ ಮಾತ್ರನಾ ಅನ್ನೋದು ಚರ್ಚೆಯಾಗುತ್ತಲೇ ಇದೆ.. ಈ ಪ್ರಶ್ನೆಗಳು ಕಾರ್ಯಕರ್ತರಲ್ಲು ಗೊಂದಲು ಹುಟ್ಟಿಹಾಕಿದೆ. ಈ ಎಲ್ಲಾ ಗೊಂದಲ‌ ಪ್ರಶ್ನೆಗಳಿಗೆ ಉತ್ತರ ಹುಡುಕಿ ಸ್ಪಷ್ಟನೆ ಕೊಡೊದಕ್ಕೆ ಮುಂದಾಗಿದ್ದಾರೆ ಬಿಜೆಪಿ ಜೆಡಿಎಸ್ ನಾಯಕರು..

ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿದ್ದು,  ಆಢಳಿತ ಪಕ್ಷ ಕಾಂಗ್ರೆಸ್ ಎಲ್ಲಾ ರೀತಿಯ ತಯಾರಿ ನಡೆಸಿದೆ‌.. ಸಿಎಂ ಸೇರಿದಂತೆ ಕೈ ಪಡೆಗೆ ಟಕ್ಕರ್ ಕೊಡೊದಕ್ಕೆ ಬಿಜೆಪಿ ಜೆಡಿಎಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಾಲ್ಕು ಕ್ಷೇತ್ರಗಳಿಗೂ ಎನ್ ಡಿ ಎ ಅಭ್ಯರ್ಥಿಗಳ ಘೋಷಣೆ ಆಗಿದೆ. ಪಶ್ಚಿಮ ಪದವೀಧರಕ್ಕೆ ಎಸ್.ವಿ. ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶೀಲ್ ನಮೋಶಿ, ಆಗ್ನೇಯ ಪದವೀಧರ ಕ್ಷೇತ್ರದಿಂದ ಕೆ.ಎಂ. ಸುರೇಶ್ ಇನ್ನೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ JDS ಅಭ್ಯರ್ಥಿ ರಂಗನಾಥ್ ಅವರನ್ನ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ..

ಪರಿಷತ್ ಚುನಾವಣೆಯಲ್ಲಿ ಆಢಳಿತ ಪಕ್ಷದ ಅಭ್ಯರ್ಥಿಗಳ ವಿರುದ್ದ ಗೆಲ್ಲಿಸಿಕೊಳ್ಳೊದು ಹೇಗೆ ಎಂಬುದರ ಬಗ್ಗೆ ಮಹತ್ವದ ಸಭೆಯನ್ನ ಎನ್ ಡಿ ಎ ನಾಯಕರು ನಡೆಸಿದ್ರು‌.. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ , ಛಲವಾದಿ ನಾರಾಯಣಸ್ವಾಮಿ, ಸೇರಿದಂತೆ ಜೆಡಿ ಎಲ್ ನಾಯಕ ಸುರೇಶ್ ಬಾಬು, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ರು..

ಜೊತೆಗೆ ಮೈತ್ರಿಯಲ್ಲಿರುವ ಒಂದಿಷ್ಟು ಗೊಂದಲ ಅಸಮಧಾನಕ್ಕೆ ಬ್ರೇಕ್ ಹಾಕಬೇಕಂತ ಮೈತ್ರಿ ನಾಯಕರಲ್ಲಿ ಚರ್ಚೆ ಆಗಿದೆ.. 2028 ರ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಎರಡು ಪಕ್ಷದಲ್ಲಿ ಅಸಮಧಾನಕ್ಕೆ ಕಾರಣವಾಗುತ್ತೆ, ಕಾರ್ಯಕರ್ತರು, ನಾಯಕರು ಇಂತಹ ಹೇಳಿಕೆ ನೀಡಬಾರದುಮ ವಿಜಯೇಂದ್ರ, ಕುಮಾರಸ್ವಾಮಿ ಪರವಾಗಿ ಸಿಎಂ ರೇಸ್ ಸೃಷ್ಟಿಸಬಾರದು. ಎಲ್ಲದನ್ನ  ಹೈಕಮಾಂಡ್ ತಿರ್ಮಾನ ಮಾಡುತ್ತೆ ಎಂಬ ಹೆಚ್ ಡಿ ಕುಮಾರಸ್ವಾಮಿ ಪ್ರಸ್ತಾಪಕ್ಕೆ ಸಹಮತ ವ್ಯಕ್ತವಾಯ್ತು.. ಇನ್ನು  ನಾಲ್ಕು ಸ್ಥಾನಗಳ ಚುನಾವಣೆ ನಡೆಸುವ ಕುರಿತು ಪ್ರಸ್ತಾಪಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ನಮ್ಮ ಸಾಂಪ್ರದಾಯಿಕ ಮತಗಳು ಚದುರದಂತೆ ಟಾಸ್ಕ್ ತಗೋಬೇಕು.

ಸರ್ಕಾರದ ಮೇಲೆ ಮುನಿಸಿಕೊಂಡಿರುವ ಮತಗಳನ್ನು ಟಾರ್ಗೆಟ್ ಮಾಡಿ,ಮಾಜಿ ಶಾಸಕರು, ಹಾರ್ಡ್ ಕೋರ್ ಲೀಡರ್ ಗಳಿಗೆ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕು. ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆಲ್ಲಲೇಬೇಕು ಅಂತ ಟಾಸ್ಕ್ ನೀಡಿದ್ರು ಕೇಂದ್ರ ಸಚಿವ  ಪ್ರಲ್ಹಾದ್ ಜೋಶಿ.

ಒಟ್ನಲ್ಲಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಜೆಡಿಎಸ್ ನಾಯಕರು ಮತ್ತೆ ಸಮನ್ವಯ ಒಗಟ್ಟಿನ ಮಂತ್ರ ಜಪಿಸಿದ್ದಾರೆ. 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಬೇಕು ಒಮ್ಮತವಾಗಿ ಹೋದ್ರೆ ಗೆಲುವು ನಮ್ಮದಾಗುತ್ತೆ ಎಂಬ ಸಂದೇಶವನ್ನ ರವಾನಿಸಿದ್ದಾರೆ ಮೈತ್ರಿ ನಾಯಕರು. ಪರಿಷತ್ ಚುನಾವಣೆಯಲ್ಲಿ ಹಿಂದೆ ಆದಂತಹ ತಪ್ಪುಗಳಾಗಬಾರದು ನಾಲ್ಕು ಕ್ಷೇತ್ರಗಳನ್ನ ಗೆಲ್ಲುವ ಟಾಸ್ಕ್ ಇಗ ಮೈತ್ರಿ ನಾಯಕರ ಮುಂದಿದೆ.. ಸಿಎಂ ಡಿಕೆ ಟೀಮ್ ವಿರುದ್ದ ಮೈತ್ರಿ ನಾಯಕರ‌ ರಣತಂತ್ರ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES