SOCIAL MEDIA

Newsletter

PARTNER SITES
Select Language Select State

ಸ್ಟಿಂಗ್‌ ಹಿಂದೆ "ಜಾನ್ ದೇಂಗೇ ಸಾಬ್" ಎನ್ನುತ್ತಿದ್ದವರ ಕೈವಾಡ ಇದೆ : ಯತ್ನಾಳ್‌ ಸಂಚಲನ ಹೇಳಿಕೆ

ರಾಜ್ಯ ರಾಜಕಾರಣದಲ್ಲಿ 'ಸ್ಟಿಂಗ್' ಸದ್ದು ಜೋರಾಗಿ ಕೇಳಿ ಬರುತ್ತಿದೆ. ಇದರ ನಡುವೆ ಪ್ರಸ್ತುತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಸ್ಟಿಂಗ್ ಆಪರೇಷನ್ ಜಾಲ ಸಕ್ರಿಯವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಇದರ ಹಿಂದೆ ಸಮುದಾಯವೊಂದರ ಕೆಲ ಜನರ ಕೈವಾಡ ಇದೆ ಎಂದಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 15, 2026, 03:21 PM IST | Updated: Oct 15, 2026, 03:24 PM IST
Image Credit: Basanagouda patil Yatnal
Join

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸ್ಟಿಂಗ್‌ ಆಪರೇಷನ್‌ ಸಂಚಲನ ಸೃಷ್ಟಿಸಿದೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದು, ರಾಜ್ಯದಲ್ಲಿ ರಹಸ್ಯ ಕಾರ್ಯಾಚರಣೆ ಜಾಲ ಸಕ್ರಿಯವಾಗಿದೆ ಎಂದು ಕಿಡಿಕಾರಿದ್ದಾರೆ..

ವರ್ಷಗಳಿಂದ ನಡೆಯುತ್ತಿದೆ ಸ್ಟಿಂಗ್ ಜಾಲ
ರಾಜ್ಯದಲ್ಲಿ ಬ್ಲಾಕ್ ಮೇಲ್ ಮಾಡಲು ಮತ್ತು ಪ್ರತಿಸ್ಪರ್ಧಿಗಳನ್ನು ಮುಗಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಸ್ಟಿಂಗ್ ಮಾಡುವ ಪ್ರತ್ಯೇಕ ತಂಡಗಳಿವೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಯವರೇ ಸ್ಟಿಂಗ್ ಆಪರೇಷನ್‌ಗೆ ಒಳಗಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸಿಎಂ ಬಳಿ ದಾಖಲೆಗಳಿದ್ದರೆ ಅದನ್ನು ಕೇವಲ ಹೇಳಿಕೆಗಳಿಗೆ ಸೀಮಿತಗೊಳಿಸದೆ, ಯಾರಾರೆಲ್ಲ ಇದರಲ್ಲಿದ್ದಾರೆ ಮತ್ತು ಎಷ್ಟು ಹಣ ವಸೂಲಿ ಮಾಡಿದ್ದಾರೆ ಎಂಬುದರ ಕುರಿತು ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಕೂಡ ಟ್ರಾಪ್
ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಕೂಡ ಇಂತಹದೇ ಬಲೆಗೆ ಬಿದ್ದು, ಕಾರು ಹಾಗೂ ಹಣ ನೀಡಿ ಬಚಾವಾಗಿದ್ದರು ಎಂಬ ಸುದ್ದಿ ಇದೆ ಎಂದು ಯತ್ನಾಳ್ ಗಂಭೀರ ವಿಷಯ ಹೊರಹಾಕಿದ್ದಾರೆ. ಈ ಎಲ್ಲ ಪ್ರಕರಣಗಳ ಹಿಂದೆ ದೊಡ್ಡ ಮಟ್ಟದ ಸಂಚಿದ್ದು, ಇವುಗಳ ಬಗ್ಗೆ ಉನ್ನತ ಮಟ್ಟದ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ರಮೇಶ್ ಜಾರಕಿಹೊಳಿ ಸಂಬಂಧ
ರಮೇಶ್ ಜಾರಕಿಹೊಳಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಉತ್ತಮ ಒಡನಾಟವಿತ್ತು. ಸಿದ್ದರಾಮಯ್ಯ ಅವರಿಗೆ ಆಗಾಗ್ಗೆ ಅವರು ಸಲಹೆಗಳನ್ನು ನೀಡುತ್ತಿದ್ದರು. "ನಿಮ್ಮನ್ನೂ ನನ್ನಂತೆ ಸಿಕ್ಕಿಹಾಕಿಸುತ್ತಾರೆ" ಎಂದು  ಸಿದ್ದರಾಮಯ್ಯ ಅವರಿಗೆ ಹಿಂದೆಯೇ ಎಚ್ಚರಿಕೆ ನೀಡಿದ್ದರು ಎಂದು ಯತ್ನಾಳ್ ಹೇಳಿದರು..

ಪ್ರೀತಿಯ ಸಮುದಾಯದಿಂದಲೇ ಟ್ರಾಪ್
ಸಿದ್ದರಾಮಯ್ಯ ಅವರ ಅಚ್ಚುಮೆಚ್ಚಿನ ಸಮುದಾಯದಿಂದಲೇ ಅವರು ಟ್ರಾಪ್ ಆಗಿರುವುದು ಅಚ್ಚರಿಯ ಸಂಗತಿಯಾಗಿದೆ. ಇದರ ಹಿಂದೆ "ಜಾನ್ ದೇಂಗೇ ಸಾಬ್" ಎನ್ನುತ್ತಿರುವವರ ಕೈವಾಡವಿದೆಯೇ ಎಂಬ ಶಂಕೆ ವ್ಯಕ್ತಪಡಿಸಿದ ಅವರು, ಸಮುದಾಯಕ್ಕೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿ ನಮಾಜ್ ಮಾಡಿದ್ದ ಅದೇ ಸಮುದಾಯದ ಹೆಣ್ಣುಮಗಳೊಬ್ಬಳು ಈಗ ಟ್ರಾಪ್ ಮಾಡಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ..

ಚೇಲಾಗಳನ್ನು ಬಂಧಿಸಿ, ಸತ್ಯ ಹೊರಬರಲಿ
ವಿಜಯೇಂದ್ರ ಹಾಗೂ ಡಿ.ಕೆ. ಶಿವಕುಮಾರ್ ಅವರ ಹಿಂದೆ ಇರುವ ಹಿಂಬಾಲಕರನ್ನು (ಚೇಲಾಗಳನ್ನು) ಮೊದಲು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಆಗ ಈ ಎಲ್ಲಾ ಅಕ್ರಮ ಹಾಗೂ ಸ್ಟಿಂಗ್ ಆಪರೇಷನ್ ಜಾಲದ ಅಸಲಿ ಸತ್ಯ ಹೊರಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES