SOCIAL MEDIA

Newsletter

PARTNER SITES
Select Language Select State

ಆಶಾ ಕಾರ್ಯಕರ್ತರ 13 ದಿನಗಳ ಹೋರಾಟಕ್ಕೆ ಜಯ : ಕೊನೆಗೂ ಸಿಕ್ತು ಸರ್ಕಾರದ ಲಿಖಿತ ಭರವಸೆ

ಕಳೆದ 13 ದಿನಗಳಿಂದ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಇಂದು (ಮಧ್ಯಾಹ್ನ) ಅಧಿಕೃತವಾಗಿ ಅಂತ್ಯಗೊಂಡಿದೆ. ರಾಜ್ಯ ಸರ್ಕಾರವು 2,000 ರೂಪಾಯಿ ಗೌರವಧನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 29, 2026, 17:43 IST | Updated: Nov 29, 2026, 17:46 IST
Image Credit: ASHA workers
Join

ಬೆಂಗಳೂರು : ಕೊರೆಯುವ ಚಳಿ ಜೊತೆಗೆ ಮಳೆಯನ್ನು ಲೆಕ್ಕಿಸದೇ ಆಶಾ ಕಾರ್ಯಕರ್ತರು ಕಳೆದ 13 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಇಂದು ಮುಕ್ತಾಯಗೊಂಡಿದೆ ..ಸರ್ಕಾರ ಇಂದು ಲಿಖಿತ ಭರವಸೆ ನೀಡಿದ ಹಿನ್ನಲೆ ಆಶಾ ಕಾರ್ಯಕರ್ತರ ದಿಟ್ಟ ಹೋರಾಟಕ್ಕೆ ಜಯ ಸಿಕ್ಕಿದೆ.. ಈ ಕುರಿತು ಇಲ್ಲಿದೆ ಸಂಪೂರ್ಣ ವರದಿ..

ಹೌದು.. ಆಶಾ ಕಾರ್ಯಕರ್ತರ ಪ್ರತಿಭಟನೆ ಇಂದು ಸಖಾಂತ್ಯಗೊಂಡಿದೆ. ಕೊನೆಗೂ ತಮ್ನ ಹೋರಾಟದಲ್ಲಿ ಜಯಪಡೆದ ಆಶಾ ಕಾರ್ಯಕರ್ತಯರು ಸರ್ಕಾರವನ್ನು ಬಗ್ಗಿಸುವಲ್ಲಿ ಸಫಲವಾಗಿದೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಲಿಖಿತ ಭರವಸೆ ನೀಡಿದ್ದಾರೆ.

ಕೊನೆಗೂ ಲಿಖಿತ ಸ್ವರೂಪದ ಬೇಡಿಕೆ ಈಡೇರಿಕೆ ಆದೇಶ ಪ್ರಕಟಿಸಿದ ಸರ್ಕಾರ, 2 ಸಾವಿರ ರೂಪಾಯಿ ಗೌರವಧನ ಹೆಚ್ಚಿಸಿ ಆದೇಶ ನೀಡಿದೆ.. 2027 ರ ಜನವರಿ 1 ರಿಂದ ಜಾರಿಗೆ ಬರುವಂತೆ ಸಿಎಂ ಕಾರ್ಯದರ್ಶಿ ಎಸ್ ಎಸ್ ನಕುಲ್ ಆದೇಶಿಸಿದ್ದಾರೆ..

ಇಂದು ಮಧ್ಯಾಹ್ನ ವೇಳಗೆ ಸರ್ಕಾರದ ಲಿಖಿತಾ ಆದೇಶ ಸಿಕ್ಕ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.. ಇದೇ ವೇಳೆ ಮಾತನಾಡಿದ ಆಶಾ ಸಂಯುಕ್ತಾ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ್ ಯಾದಗಿರಿ, ಈ ತಿಂಗಳು ಆಶಾ ಗಳ ಗೌರವಧನ ಕಟ್ ಮಾಡಬಾರದು ಎಂದು ಆರೋಗ್ಯ ಸಚಿವರಿಗೆ ತಿಳಿಸಿದ್ದೇವೆ ಜೊತೆಗೆ ಎನ್ ಐಓಎಸ್ ಪರೀಕ್ಷೆ ಮತ್ತೆ ನಡೆಸಲು ಆರೋಗ್ಯ ಸಚಿವರು ತಿಳಿಸಿದ್ದೇವೆ.
ಹೋರಾಟದ ಹಿನ್ನಲೆಯಲ್ಲಿ ಈ ಪರೀಕ್ಷೆಗಳು ನಡೆದಿರಲಿಲ್ಲ ಜೊತೆಗೆ ಕೇಂದ್ರ ಸರ್ಕಾರ 1500 ಹೆಚ್ಚಳ ಮಾಡಿರುವುದಾಗಿ ಹೇಳಿ ಒಂದು ವರೆ ವರ್ಷವಾಗಿದೆ.. ನಾವು ಸಂಸದರ ಮೇಲೆ ಒತ್ತಡ ಹಾಕುತ್ತೇವೆ ಎಂದರು. ರಾಜ್ಯ ಸರ್ಕಾರ ತಮ್ನ ಬೇಡಿಕೆ ಈಡೇಡಿಕೆ ಕುರಿತು ಲಿಖಿತ ಆದೇಶ ನೀಡಿರುವ ಹಿನ್ನಲೆ ಇವತ್ತು ನಾವು ಪ್ರತಿಭಟನೆಯನ್ನು ನಿಲ್ಲಿಸುತ್ತೇವೆ ಎಂದು ತಿಳಿಸಿದರು..

ಇದೇ ವೇಳೆ ಮಾತನಾಡಿದ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ, ಇವತ್ತ ಸಿಎಂ ಅವರು ಕೊಟ್ಟ ಮಾತಿನಂತೆ ಲೆಟರ್ ಕಳಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಇದುವರೆಗಿನ ಹೋರಾಟಕ್ಕೆ ಸಿಕ್ಕ ಪ್ರಥಮ ದಾಖಲೆಯಾಗಿದೆ. ಮುಂದಿನ ಸೆಷನ್ ನಲ್ಲಿ ಅತಿಥಿ ಶಿಕ್ಷಕರ ರೀತಿಯಲ್ಲಿ ಇನ್ನೂ ಒಂದು ಸಾವಿರ ಹೆಚ್ಚಳದ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ ಈಗ ಸರ್ಕಾರ ಹೇಳಿದಂತೆ ನಮಗೆ ಜನವರಿ 1 ರಿಂದ ಎರಡು ಸಾವಿರ ಸೇರ್ಪಡೆಯಾಗಲಿದೆ. ಮಾರ್ಚ್ ನಲ್ಲಿ ನಂತರ ಮತ್ತೆ ಒಂದು ಸಾವಿರ ಹೆಚ್ಚಳ ಆಗುವ ಭರವಸೆ ಕೊಟ್ಟಿದ್ದಾರೆ. ಒಟ್ಟಾರೆ ಆಶಾ ಕಾರ್ಯಕರ್ತೆಯರಿಗೆ 11,500 ರೂಪಾಯಿ ದೊರೆಯಿದ್ದು, ಅಧಿವೇಶನದಲ್ಲಿ ಒಂದು ಸಾವಿರ ಟೀಮ್ ಇನ್ ಸೆಂಟೀವ್ ರಿಲೀಸ್ ಮಾಡಿದ್ರೆ 12,500 ರೂಪಾಯಿ ಗೌರವಧನ ಸಿಗಲಿದೆ ಎಂದರು.

ಒಟ್ಟಾರೆ ಕಳೆದ 13 ದಿನಗಳಿಂದ ನಡಯುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇಡೀ ರಾಜ್ಯವೇ ಬೆಂಬಲ ನೀಡಿತ್ತು.. ತಮ್ಮ ಪ್ರಮುಖ ಬೇಡಿಕೆಗಳು ಇಂದು ಈಡೇರಿಕೆಯ ಸರ್ಕಾರದ ಲಿಖಿತ ಆದೇಶ ಸಿಕ್ಕ ಹಿನ್ನಲೆ ಹರ್ಷಗೊಂಡ ಆಶಾಗಳು ಇಂದು ತಮ್ಮ ಮನೆಗಳತ್ತ ಹೊರಟಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES