SOCIAL MEDIA

Newsletter

PARTNER SITES
Select Language Select State

ಸರ್ಕಾರದಲ್ಲಿ ಹಣವಿಲ್ಲ ಅಂತೆ! ಬಳ್ಳಾರಿಯಲ್ಲಿ ರಸ್ತೆಗಿಳಿದು ಜಿ.ಪಂ. ಮುತ್ತಿಗೆ ಹಾಕಿದ ಬಿಸಿಯೂಟ ಸಿಬ್ಬಂದಿ

ಇನ್ನು ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಾಗರತ್ನಮ್ಮ ಮಗ ಹಾಗೂ ಕುಟುಂಬಸ್ಥರು ನಿರಾಕರಿಸಿದ್ದಾರೆ. ಅದೇನೇ ಜಗಳ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಈ ರೀತಿ ಒಂಟಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಆರೋಪಿ ವಿರುದ್ಧ ಕಠಿಣ ಶಿಕ್ಷೆ ಆಗಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Reported By Manjunath Naragund Written By Manjunath Naragund
Published: Sep 19, 2026, 07:56 PM IST | Updated: Sep 19, 2026, 08:21 PM IST
Image Credit: Strike
Join

ಅವರೆಲ್ಲ ಲಕ್ಷಾಂತರ ಶಾಲಾ ಮಕ್ಕಳ ಹಸು ನೀಗಿಸುವ ಕೆಲಸ ಮಾಡುವ ಬಿಸಿಯೂಟ ಕಾರ್ಯಕರ್ತೆಯರು.. ಅವರಿಗೆ ಕಳೆದ ಎರಡು ತಿಂಗಳಿನಿಂದ ಸಂಬಳವೇ ಬಂದಿಲ್ಲ.. ಸಂಬಳವಿಲ್ಲದೆ ಅವರೆಲ್ಲ ಪರದಾಡುತ್ತಿದ್ದಾರೆ.. ಸಂಬಳ ಕೇಳಿದ್ರೆ ಸರ್ಕಾರದಲ್ಲಿ ಹಣವಿಲ್ಲ ಅಂತಾ ಮೇಲಾಧಿಕಾರಿಗಳು ಸಬೂಬು ನೀಡುತ್ತಾರಂತೆ.. ಹೀಗಾಗಿ ಸಂಬಳಕ್ಕಾಗಿ ಇಂದು ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿದ್ದಾರೆ.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....

ಹೌದು,ಅವರೆಲ್ಲಾ ಲಕ್ಷಾಂತರ ಶಾಲಾ ಮಕ್ಕಳ ಹಸುವನ್ನ ನೀಗಿಸುವ ತಾಯಂದಿರ ಕೆಲಸವನ್ನ ಮಾಡುತ್ತಿದ್ದಾರೆ..ಇಷ್ಟು ಪವಿತ್ರವಾದ ಕೆಲಸವನ್ನ ಮಾಡುವ ಬಿಸಿಯೂಟ ಕಾರ್ಯಕರ್ತೆಯರಿಗೆ ಕಳೆದ ಎರಡು ತಿಂಗಳಿನಿಂದ ಸರ್ಕಾರ ಸಂಬಳವೇ ನೀಡಿಲ್ಲ..ಸಂಬಳವಿಲ್ಲದ ಬಿಸಿಯೂಟ ಕಾರ್ಮಿಕರು ಪರದಾಟ ನಡೆಸುತ್ತಿದ್ದಾರೆ.. ಹೀಗಾಗಿ ಸಂಬಳಕ್ಕಾಗಿ ಇಂದು ಬಳ್ಳಾರಿಯ ಜಿಲ್ಲಾ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಎಸ್, ಬಳ್ಳಾರಿ ಜಿಲ್ಲೆಯಾದ್ಯಂತ ಸರಿಸುಮಾರು 4500ಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತಯರಿದ್ದಾರೆ..ಇವರಲ್ಲಿ ಬಹುತೇಕರು ವಿಧವೆಯರು, ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿದ್ದಾರೆ.. ಹೀಗಿದ್ದಾಗ ಇವರಲ್ಲಾ ಬರುವ ಸಂಬಳದಲ್ಲಿಯೇ ಜೀವನ ಮಾಡೋದು..ತಿಂಗಳಿಗೆ 4600 ರೂ ವೇತನವಿದೆ. ಇಷ್ಟು ಕಡಿಮೆ ಸಂಬಳವನ್ನ ಸಮಯಕ್ಕೆ ಸರಿಯಾಗಿ ಸರ್ಕಾರ ನೀಡುತ್ತಿಲ್ಲ..ಜೊತೆಗೆ ಮೊಟ್ಟೆ ಸುಲಿಯೋದಕ್ಕೆ,ಕಾಳು ನೀಡೋದಕ್ಕೆ ಹೆಚ್ಚುವರಿಯಾಗಿ 500 ರೂ ನೀಡಲು ಸರ್ಕಾರ ಹೇಳಿದೆ ಆ ಹಣವನ್ನು ಎರಡು ವರ್ಷದಿಂದ ನೀಡಿಲ್ಲ.ಹೀಗಾಗಿ ಸಂಬಳ ಕೊಡಿ ಅಂತಾ ಇಂದು ಪ್ರತಿಭಟನೆ ಮಾಡಿದ್ದಾರೆ..

ಅಂದ್ಹಾಗೆ, ಬಳ್ಳಾರಿ ಜಿಲ್ಲೆಯ ಬಿಸಿಯೂಟ ಕಾರ್ಯಕರ್ತರಿಗೆ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಇರುವ ಬಿಸಿಯೂಟ ಕಾರ್ಯಕರ್ತೆಯರಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ ಅನ್ನೊದು ಇವರ ಹೇಳಿಕೆಯಾಗಿದೆ.. ಇನ್ನು ಇವರಿಗೆ ಬರುವ ಸಂಬಳವೇ ಅತೀ ಕಡಿಮೆ ಸಂಬಳ ಹೀಗಿದ್ದಾಗ ಅಡುಗೆ ತಯಾರಿಗೆ, ಅಡುಗೆ ಬಡಿಸೋದು ಮಾತ್ರವಲ್ಲ ಇವರ ಕಡೆಯಿಂದ‌ ಶಾಲಾ ಕೊಠಡಿಗಳನ್ನ, ಶೌಚಾಲಯಗಳನ್ನ ಸ್ವಚ್ಚಗೊಳಿಸುವ ಕೆಲಸ ಮಾಡಿಸುತ್ತಾರೆ ಅನ್ನೊ ಆರೋಪವನ್ನ ಕಾರ್ಯಕರ್ತೆಯರೆ ಮಾಡುತ್ತಾರೆ.. ಹೀಗಿದ್ದಾಗ ದಿನಕ್ಕೆ ಎಂಟು ಗಂಟೆ ಕೆಲಸ ಮಾಡುವ ಇವರಿಗೆ ಸರ್ಕಾರ ಕನಿಷ್ಠ 15,000 ರೂ ಸಂಬಳ ನೀಡಬೇಕು, ಸೇವಾ ಕಾಯಂಗೊಳಿಸಬೇಕು ಅಂತಾ ಒತ್ತಾಯ ಮಾಡಿದ್ದಾರೆ.. ಇನ್ನೂ ಎರಡು ತಿಂಗಳ ಸಂಬಳವನ್ನ ಶೀಘ್ರದಲ್ಲೇ ಪಾವತಿ ಮಾಡಬೇಕು.. ಜೊತೆಗೆ ಅಡುಗೆ ಜವಾಬ್ದಾರಿ ಹೊರತು ಪಡಿಸಿ ಹೆಚ್ಚುವರಿ ಕೆಲಸವನ್ನ ಶಾಲಾ ಆಡಳಿತ ಮಂಡಳಿ‌ ಮಾಡಿಸಬಾರದು ಅಂತಾ ಒತ್ತಾಯ ಮಾಡಿದ್ದಾರೆ..ಒಂದುವೇಳ ಶೀಘ್ರದಲ್ಲೇ ವೇತನ ಸಿಗದಿದ್ದರೆ ಉಗ್ರಹೋರಾಟದ ಎಚ್ಚರಿಕೆ ನೀಡಿದ್ದಾರೆ..

ಒಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಯನ್ನ ಕೊಟ್ಟಿದ್ದೇವೆ ಅಂತಾ ಬಡಾಯಿ ಕೊಚ್ಚಿಕೊಳ್ಳುತ್ತೆ..ಆದ್ರೆ ನಿತ್ಯ ಲಕ್ಷಾಂತರ ಶಾಲಾ ಮಕ್ಕಳ ಹಸುನೀಗಿಸುವ ಬಿಸಿಯೂಟ ಕಾರ್ಯಕರ್ತೆರಿಗೆ ಸಂಬಳ ನೀಡಿಲ್ಲ ಅನ್ನೊದೆ ವಿಪರ್ಯಾಸ.ಇನ್ನಾದರು ಇವರ ಸಮಸ್ಯೆಗೆ ಸ್ಪಂದಿಸಿ ವೇತನ ನೀಡುತ್ತಾ ಸರ್ಕಾರ ಅನ್ನೊದನ್ನ ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES