• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ತಂತ್ರಜ್ಞಾನ ಮಾನವನ ಸಾಮರ್ಥ್ಯ ಹೆಚ್ಚಿಸಬೇಕೇ ಹೊರತು ಬದಲಿಸಬಾರದು: ಡಾ. ಸೌಮ್ಯ ಸ್ವಾಮಿನಾಥನ್

ತಂತ್ರಜ್ಞಾನ ಮಾನವನ ಸಾಮರ್ಥ್ಯ ಹೆಚ್ಚಿಸಬೇಕೇ ಹೊರತು ಬದಲಿಸಬಾರದು: ಡಾ. ಸೌಮ್ಯ ಸ್ವಾಮಿನಾಥನ್

ಚಾಣಕ್ಯ ವಿಶ್ವವಿದ್ಯಾಲಯದ ಮೂರನೇ ವಾರ್ಷಿಕ ಘಟಿಕೋತ್ಸವವು ಬೆಂಗಳೂರು ಸಮೀಪದ ಕೆಐಎಡಿಬಿ ಏರೋಸ್ಪೇಸ್ ಕೈಗಾರಿಕಾ ವಲಯದ ಗ್ಲೋಬಲ್ ಕ್ಯಾಂಪಸ್‌ನಲ್ಲಿ ಅದ್ದೂರಿಯಾಗಿ ಜರುಗಿತು. ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಇಸ್ರೊ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಒಟ್ಟು 371 ವಿದ್ಯಾರ್ಥಿಗಳಿಗೆ ಪದವಿ ಮತ್ತು ಡಿಪ್ಲೊಮಾ ಪ್ರದಾನ ಮಾಡಲಾಯಿತು. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 12, 2026, 18:55 IST|Updated: Nov 12, 2026, 19:00 IST
joinshare
ತಂತ್ರಜ್ಞಾನ ಮಾನವನ ಸಾಮರ್ಥ್ಯ ಹೆಚ್ಚಿಸಬೇಕೇ ಹೊರತು ಬದಲಿಸಬಾರದು: ಡಾ. ಸೌಮ್ಯ ಸ್ವಾಮಿನಾಥನ್
Image Credit: Dr Soumya Swaminathan

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಮಾನವನ ಸಾಮರ್ಥ್ಯವನ್ನು ಹೆಚ್ಚಿಸಬೇಕೇ ಹೊರತು, ಮಾನವನ ವಿವೇಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬದಲಿಸಬಾರದು. ತಂತ್ರಜ್ಞಾನದ ಆವಿಷ್ಕಾರಗಳು ಮಾನವ ಕಲ್ಯಾಣ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಾನತೆಯನ್ನು ಕೇಂದ್ರವಾಗಿಟ್ಟುಕೊಂಡಿರಬೇಕು ಎಂದು ಡಬ್ಲ್ಯುಎಚ್‌ಒ ಮಾಜಿ ಮುಖ್ಯ ವಿಜ್ಞಾನಿ ಹಾಗೂ ಐಸಿಎಂಆರ್ ಮಾಜಿ ಮಹಾನಿರ್ದೇಶಕಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದರು.

ಚಾಣಕ್ಯ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಳನ್ನು ಶ್ಲಾಘಿಸಿದರು. ಅಭಿವೃದ್ಧಿಯನ್ನು ಕೇವಲ ಆರ್ಥಿಕ ಬೆಳವಣಿಗೆ ಅಥವಾ ತಾಂತ್ರಿಕ ಪ್ರಗತಿಯಿಂದ ಅಳೆಯದೆ, ಜನರ ಜೀವನಮಟ್ಟ, ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸಮಾನ ಅವಕಾಶಗಳ ಆಧಾರದಲ್ಲಿ ಅಳೆಯಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿ ಹಾಗೂ ಕೈಗೆಟುಕುವ ದರದಲ್ಲಿ ಔಷಧಗಳನ್ನು ಒದಗಿಸುವಲ್ಲಿ ಭಾರತದ ಕೊಡುಗೆ ಮಹತ್ವದ್ದಾಗಿದೆ. ಆದರೆ ವಿಜ್ಞಾನದ ಮೇಲಿನ ಜನರ ವಿಶ್ವಾಸ ಕುಸಿಯುತ್ತಿರುವುದು ಆತಂಕಕಾರಿ. ವೈಜ್ಞಾನಿಕ ಸಂಶೋಧನೆಯಲ್ಲಿ ಪಾರದರ್ಶಕತೆ ಕಾಪಾಡುವುದರ ಜತೆಗೆ, ಆವಿಷ್ಕಾರಗಳ ಪ್ರಯೋಜನ ಎಲ್ಲ ವರ್ಗಗಳಿಗೂ ತಲುಪುವಂತಾಗಬೇಕು ಎಂದು ಪ್ರತಿಪಾದಿಸಿದರು.

ಸಾಂಪ್ರದಾಯಿಕ ಜ್ಞಾನವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಪರಿಣಾಮಕಾರಿಯಾದ ಅಂಶಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು. ಹವಾಮಾನ ಬದಲಾವಣೆ, ಜೀವವೈವಿಧ್ಯದ ನಾಶ, ಸಾಂಕ್ರಾಮಿಕ ರೋಗಗಳು ಮತ್ತು ಆಹಾರ ಭದ್ರತೆಯಂತಹ ಸವಾಲುಗಳಿಗೆ ಅಂತರಶಿಸ್ತೀಯ ಸಂಶೋಧನೆ ಹಾಗೂ ಸಮನ್ವಯದ ಪ್ರಯತ್ನ ಅಗತ್ಯ ಎಂದರು.

ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯಿಂದ ಮಾತ್ರ ಅಳೆಯದೆ, ಮಣ್ಣಿನ ಆರೋಗ್ಯ, ನೀರಿನ ಗುಣಮಟ್ಟ, ಅರಣ್ಯ ಮತ್ತು ಜೀವವೈವಿಧ್ಯಕ್ಕೂ ಆದ್ಯತೆ ನೀಡಬೇಕು. ಗ್ರೀನ್ ಜಿಡಿಪಿ ಹಾಗೂ ಪರಿಸರ ಆರ್ಥಿಕ ಲೆಕ್ಕಪತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಮಾನವ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರದ ನಡುವಿನ ಸಂಬಂಧವನ್ನು ಗುರುತಿಸುವ 'ಒನ್ ಹೆಲ್ತ್' ಪರಿಕಲ್ಪನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಕೃಷಿಯಲ್ಲಿ ಮಹಿಳೆಯರ ಕೊಡುಗೆಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ. ಮಹಿಳಾ ರೈತರಿಗೆ ಭೂಮಿಯ ಹಕ್ಕು, ಆರ್ಥಿಕ ಸಬಲೀಕರಣ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯ ಅವಕಾಶ ಕಲ್ಪಿಸಬೇಕು ಎಂದರು.

ಎಐ ಬಳಕೆಯಲ್ಲಿ ದತ್ತಾಂಶದ ಗೌಪ್ಯತೆ, ಅಲ್ಗಾರಿದಮ್‌ಗಳಲ್ಲಿನ ಪೂರ್ವಗ್ರಹ, ಉದ್ಯೋಗಾವಕಾಶ ಮತ್ತು ತಂತ್ರಜ್ಞಾನದ ಪ್ರಯೋಜನಗಳ ಸಮಾನ ಹಂಚಿಕೆಗೆ ಸಂಬಂಧಿಸಿದಂತೆ ನೈತಿಕ ನಿಯಂತ್ರಣ ಅಗತ್ಯವಿದೆ. ಇದರ ಜವಾಬ್ದಾರಿ ತಂತ್ರಜ್ಞಾನ ತಜ್ಞರಿಗೆ ಮಾತ್ರ ಸೀಮಿತವಾಗದೆ, ವಿವಿಧ ಕ್ಷೇತ್ರಗಳ ತಜ್ಞರು ಮತ್ತು ನೀತಿ ನಿರೂಪಕರ ಸಹಭಾಗಿತ್ವದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ಪದವೀಧರರು ಬೌದ್ಧಿಕ ಕುತೂಹಲ, ಪ್ರಶ್ನಿಸುವ ಮನೋಭಾವ ಮತ್ತು ನಿರಂತರ ಕಲಿಕೆಯನ್ನು ಬೆಳೆಸಿಕೊಳ್ಳಬೇಕು. ಮಹತ್ವಾಕಾಂಕ್ಷೆಯ ಜತೆಗೆ ಮಾನವೀಯತೆ ಮತ್ತು ಸಹಾನುಭೂತಿಯನ್ನೂ ಹೊಂದಿರಬೇಕು. 2047ರ ವಿಕಸಿತ ಭಾರತ ಎಂದರೆ ಕೇವಲ ಬಲಿಷ್ಠ ಆರ್ಥಿಕತೆಯಲ್ಲ; ಆರೋಗ್ಯವಂತ, ಸಮೃದ್ಧ, ಜ್ಞಾನಾಧಾರಿತ, ಒಳಗೊಳ್ಳುವ ಮತ್ತು ಪರಿಸರ ಸುಸ್ಥಿರತೆಯನ್ನು ಕಾಪಾಡುವ ರಾಷ್ಟ್ರ ನಿರ್ಮಾಣವಾಗಿದೆ ಎಂದು ಹೇಳಿದರು.

371 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಎಸ್. ಸೋಮನಾಥ್
ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಇಸ್ರೊ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಮಾತನಾಡಿ, ಮೂರನೇ ಘಟಿಕೋತ್ಸವದಲ್ಲಿ ಆರು ಶೈಕ್ಷಣಿಕ ಶ್ರೇಷ್ಠತಾ ಶಾಲೆಗಳ ಒಟ್ಟು 371 ವಿದ್ಯಾರ್ಥಿಗಳಿಗೆ ಪದವಿ ಮತ್ತು ಡಿಪ್ಲೊಮಾ ಪ್ರದಾನ ಮಾಡಲಾಗಿದೆ. 19 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠತಾ ಪದಕ ಮತ್ತು ಪ್ರಶಸ್ತಿಗಳನ್ನು ನೀಡಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 3,000ಕ್ಕೆ ತಲುಪಿದ್ದು, ಸುಮಾರು 28 ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ವಿದ್ಯಾರ್ಥಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿವೇತನ ಮತ್ತು ಆರ್ಥಿಕ ನೆರವು ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಗ್ರೌಂಡ್ ಸ್ಟೇಷನ್ ಸ್ಥಾಪಿಸಲಾಗಿದ್ದು, ಏರೋಸ್ಪೇಸ್ ಉದ್ಯಮಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕಾ ಮತ್ತು ಉದ್ಯೋಗಾವಕಾಶ ಕಲ್ಪಿಸಲಾಗುವುದು. ಕಲಿಕೆ ಮತ್ತು ಬೋಧನೆಯನ್ನು ಉನ್ನತೀಕರಿಸಲು ವಿಶ್ವವಿದ್ಯಾಲಯ ತನ್ನದೇ ಆದ ಎಐ ನೀತಿಯನ್ನೂ ರೂಪಿಸಿದೆ ಎಂದು ತಿಳಿಸಿದರು.

ಯುವ ನಾಯಕತ್ವ ಬೆಳೆಸುವುದು ವಿವಿಯ ಧ್ಯೇಯ: ಯಶವಂತ ಡೊಂಗ್ರೆ
ಉಪಕುಲಪತಿ ಪ್ರೊ. ಯಶವಂತ ಡೊಂಗ್ರೆ ಮಾತನಾಡಿ, ಯುವ ನಾಯಕತ್ವ ಬೆಳೆಸುವುದು ಚಾಣಕ್ಯ ವಿಶ್ವವಿದ್ಯಾಲಯದ ಪ್ರಮುಖ ಧ್ಯೇಯವಾಗಿದೆ. ಸಮಾಜ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಅಂತರಶಿಸ್ತೀಯ ಶಿಕ್ಷಣ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಕೃತಕ ಬುದ್ಧಿಮತ್ತೆ, ಏರೋಸ್ಪೇಸ್ ಮತ್ತು ಸೈಬರ್ ಭದ್ರತೆ ಸೇರಿದಂತೆ ಸಮಕಾಲೀನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಉದ್ಯಮಗಳ ಸಹಯೋಗದಲ್ಲಿ ಇಂಟರ್ನ್‌ಶಿಪ್ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 10,000ರಿಂದ 15,000ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಸಹ-ಕುಲಾಧಿಪತಿ ಎಂ.ಪಿ. ಕುಮಾರ್, ಆರಿನ್ ಕ್ಯಾಪಿಟಲ್ ಪಾರ್ಟ್ನರ್ಸ್ ಅಧ್ಯಕ್ಷ ಟಿ.ವಿ. ಮೋಹನದಾಸ್ ಪೈ, ಸಿಇಎಸ್‌ಎಸ್ ಅಧ್ಯಕ್ಷ ಪ್ರೊ. ಎಂ.ಕೆ. ಶ್ರೀಧರ್, ಐಐಎಂ ಬೆಂಗಳೂರಿನ ಪ್ರೊ. ಬಿ. ಮಹಾದೇವನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬೆಂಗಳೂರು ಸಮೀಪದ ಕೆಐಎಡಿಬಿ ಏರೋಸ್ಪೇಸ್ ಕೈಗಾರಿಕಾ ವಲಯದಲ್ಲಿರುವ ಚಾಣಕ್ಯ ವಿಶ್ವವಿದ್ಯಾಲಯದ ಗ್ಲೋಬಲ್ ಕ್ಯಾಂಪಸ್‌ನಲ್ಲಿ ಘಟಿಕೋತ್ಸವ ನಡೆಯಿತು. 'ಜ್ಞಾನ ಪರಂಪರೆಯಲ್ಲಿ ಬೇರೂರಿ, ವಿಜ್ಞಾನದ ಮಾರ್ಗದರ್ಶನದಲ್ಲಿ ಮುನ್ನಡೆದು, ಮಾನವೀಯತೆಗೆ ಬದ್ಧರಾಗಿ' ಎಂಬ ಸಂದೇಶದೊಂದಿಗೆ ಘಟಿಕೋತ್ಸವದ ಆಶಯವನ್ನು ಸಾರಲಾಯಿತು.

Add Zee News as a Preferred Source
TAGS:
Kannada News